Video: ರಾತ್ರಿವೇಳೆ ಸೈಕಲ್​ ತುಳಿಯುತ್ತಾ ವ್ಯಾಯಾಮ ಮಾಡಲು ರಸ್ತೆಗಿಳಿದ ಯಶ್​ ವಿಡಿಯೋ ವೈರಲ್​

news18
Updated:June 28, 2018, 11:18 AM IST
Video: ರಾತ್ರಿವೇಳೆ ಸೈಕಲ್​ ತುಳಿಯುತ್ತಾ ವ್ಯಾಯಾಮ ಮಾಡಲು ರಸ್ತೆಗಿಳಿದ ಯಶ್​ ವಿಡಿಯೋ ವೈರಲ್​
ರಾಕಿಂಗ್ ಸ್ಟಾರ್ ಯಶ್
news18
Updated: June 28, 2018, 11:18 AM IST
ನ್ಯೂಸ್ 18 ಕನ್ನಡ

ಸಿನಿಮಾ ಕಲಾವಿದರು, ಕ್ರೀಡಾಪಟುಗಳು ಒಮ್ಮೆ ಸ್ಟಾರ್​ ಪಟ್ಟಕ್ಕೇರುತ್ತಿದ್ದಂತೆಯೇ ಸಣ್ಣ ಸಣ್ಣ ಸಂತೋಷಗಳಿಂದ ಇವರು ದೂರಾಗುತ್ತಾರೆ. ಹೀಗಂತ ಹೇಳುತ್ತಿರೋದು ನಾವಲ್ಲ. ಖುದ್ದು ಸಿನಿಮಾ ತಾರೆಯರೇ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ರಸ್ತೆಯಲ್ಲಿ ಬಾಡಿಗಾರ್ಡ್​ ಇದ್ದರೂ ಸಾಮಾನ್ಯರಂತೆ ಓಡಾಡೋಕೆ ಆಗೋಲ್ಲ. ಮನಸ್ಸಿಗೆ ಬಂದಾಗ ರಸ್ತೆ ಬದಿಯಲ್ಲಿ ನಿಂತು ಸ್ನೇಹಿತರೊಂದಿಗೆ ಐಸ್​ಕ್ರೀಂ, ಚಾಟ್ಸ್ ತಿನ್ನೋಕೆ ಆಗೋದಿಲ್ಲ.

ಇನ್ನೂ ಸೈಕಲ್​, ಬೈಕ್​ ಅಥವಾ ಕಾರಿನಲ್ಲಿ ಹೊರಗಡೆ ಹೋದಾಗ ಅಪ್ಪಿತಪ್ಪಿ ಜನರು ಗುರುತಿಸಿದರೆ ಅಷ್ಟೆ ಮುಗಿದೇ ಹೋಯಿತು. ಆದರೆ ಸ್ಟಾರ್​ಗಳು ಎಷ್ಟೇ ಆದರೂ ಮನುಷ್ಯರೇ. ಅದಕ್ಕಾಗಿಯೇ ಅವರು ಆಗಾಗ ಮುಖಕ್ಕೆ ಬಟ್ಟೆ ಕಟ್ಟಿಕೊಂಡೋ, ಅಥವಾ ತಮ್ಮ ಗುರುತು ಕಾಣದಂತೆ ಜನರ ಮಧ್ಯೆ ಸಾಮಾನ್ಯರಂತೆ ತಿರುಗಾಡುತ್ತಾ ತಮ್ಮ ಆಸೆ ತೀರಿಸಿಕೊಳ್ಳುತ್ತಾರೆ.

ಈಗ ನಟ ಯಶ್​ ಸಹ ತಮ್ಮ ಸಿನಿಮಾ ಕೆಜಿಎಫ್​ಗಾಗಿ ವರ್ಕ್​ಔಟ್​ ಮಾಡಲು ಸೈಕಲ್ ಹೊಡೆಯುತ್ತಿದ್ದಾರೆ. ಅದು ಸಹ ರಾತ್ರಿವೇಳೆ ರಸ್ತೆಯಲ್ಲಿ ಮುಖ ಮುಚ್ಚಿಕೊಂಡು ಸೈಕಲ್​ ಹತ್ತಿ ಹೊರಟೇ ಬಿಡುತ್ತಾರೆ. ಈ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ಯಶ್​ ಅಭಿಮಾನಿಯೊಬ್ಬರು ಶೇರ್​ ಮಾಡಿದ್ದು, ಅದು ವೈರಲ್​ ಆಗುತ್ತಿದೆ.
Loading...

Yash Boss Exclusive Video Workout For KGF #kgf #cycling #Boss💛🖤 @iamradhikapandit #nimmarp #nimmayash #yashradhika


A post shared by 💛Ŕøçķîñģ☆Ýãšh🖤Fç♡ (@yash_radhika_789) on

ಈ ಹಿಂದೆ ನಟಿ ಹರಿ ಪ್ರಿಯಾ ಸಹ ತಮ್ಮ ಸಿನಿಮಾ ನೋಡಲು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಚಿತ್ರಮಂದಿರಕ್ಕೆ ಹೋಗಿದ್ದರು. ಅಲ್ಲದೆ ಹಾಗೆಯೇ ಹಗಲಿನಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸೈಕಲ್​ ಸಹ ಹೊಡೆದಿದ್ದರು. ಅದನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಫೋಟೋ ಸಹ ಶೇರ್​ ಮಾಡಿದ್ದರು. ಇನ್ನೂ ನಟ ಸುದೀಪ್ ಸಹ ಮಧ್ಯ ರಾತ್ರಿ ಬೈಕ್​ನಲ್ಲಿ ನಟ ಚಂದನ್​ ಮನೆಗೆ ಅಚಾನಕ್ಕಾಗಿ ಭೇಟಿ ನೀಡಿದ್ದರು. ಸುದೀಪ್​ ಬೈಕ್​ನಲ್ಲಿ ಹೋಗುತ್ತಿದ್ದ ವಿಡಿಯೋ ಸಹ ವೈರಲ್​ ಆಗಿತ್ತು.

ಒಟ್ಟಾರೆ ಎಷ್ಟೇ ತಾರೆಗಳೆನಿಸಿಕೊಂಡರೂ ತಮ್ಮ ಪುಟ್ಟ ಪುಟ್ಟ ಸಂತೋಷಗಳಿಗೆ ಕಷ್ಟ ಪಡೋದು ಮಾತ್ರ ತಪ್ಪೋದಿಲ್ಲ. ​
First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...