Yash Movie Poster: ರಾಕಿಂಗ್ ಸ್ಟಾರ್ ಯಶ್ 19ನೇ ಚಿತ್ರದ ಪೋಸ್ಟರ್ ಲೀಕ್; ರಾಕಿ ಭಾಯ್ ಹೊಸ ಲುಕ್​ ಫ್ಯಾನ್ಸ್​ ಫಿದಾ

ಯಶ್​ 19ನೇ ಚಿತ್ರದ ಪೋಸ್ಟರ್ ಲೀಕ್ ಆಗಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಪೋಸ್ಟರ್​ನಲ್ಲಿ ಯಶ್​ ತುಂಬಾ ಡಿಫರೆಂಟ್​ ಆಗಿಯೇ ಕಾಣ್ತಿದ್ದಾರೆ. ರಾಕಿ ಭಾಯ್ ಹೊಸ ಅವತಾರಕ್ಕೆ ಅಭಿಮಾನಿಗಳು ಸಹ ಸಖತ್ ಕಾಮೆಂಟ್ ಮಾಡ್ತಿದ್ದಾರೆ.

ಯಶ್​ ಹೊಸ ಚಿತ್ರ ಪೋಸ್ಟರ್ ಲೀಕ್

ಯಶ್​ ಹೊಸ ಚಿತ್ರ ಪೋಸ್ಟರ್ ಲೀಕ್

  • Share this:
ಸ್ಯಾಂಡಲ್​ವುಡ್​ನ (Sandalwood) ರಾಕಿಂಗ್ ಸ್ಟಾರ್​ ಯಶ್ (Rocking Star Yash)​ ಅವರು ಕೆಜಿಎಫ್  2 ಚಿತ್ರದ ಮೂಲಕ ನ್ಯಾಷನಲ್​ ಸ್ಟಾರ್ ಆಗಿದ್ದಾರೆ. ಕೆಜಿಎಫ್ (KGF) ಚಿತ್ರ ಸೂಪರ್​ ಡೂಪರ್ ಹಿಟ್​ ಆದ್ಮೇಲೆ, ರಾಕಿ ಭಾಯ್ ಅವರ ಮುಂದಿನ ಚಿತ್ರ ಯಾವುದು ಅನ್ನೋ ಕುತೂಹಲ ಹೆಚ್ಚಾಗಿತ್ತು. ಅಭಿಮಾನಿಗಳು ಸಹ ಯಶ್​, ಮುಂದೆ ಯಾವ ರೀತಿ ಚಿತ್ರ ಮಾಡ್ತಾರೆ ಎಂದು ಕಾಯುತ್ತಿದ್ದಾರೆ. ಆದ್ರೆ ಮಾಧ್ಯಮಗಳು ಹಲವು ಬಾರಿ ಪ್ರಶ್ನೆ ಮಾಡಿದ್ರು ಯಶ್ ಮಾತ್ರ ಯಾವುದೇ ಸುಳಿವು ನೀಡಿಲ್ಲ, ಇದೀಗ ಯಶ್​ 19ನೇ ಚಿತ್ರದ ಪೋಸ್ಟರ್ ಲೀಕ್ (Poster Leak)​ ಆಗಿದ್ದು, ರಾಕಿ ಭಾಯ್​ ಹೊಸ ಸ್ಟೈಲ್​ಗೆ (New Style) ಪ್ರೇಕ್ಷಕರು ಫಿದಾ ಆಗಿದ್ದಾರೆ.

ರಾಕಿ ಭಾಯ್​ 19ನೇ ಚಿತ್ರದ ಪೋಸ್ಟರ್​ ಲಿಂಕ್

ಕೆಜಿಎಫ್​ 2 ಚಿತ್ರದ ಮೂಲಕ ಪ್ಯಾನ ಇಂಡಿಯಾ ಸ್ಟಾರ್ ಆಗಿರೋ ಯಶ್​ ಮುಂದಿನ ಚಿತ್ರಕ್ಕೆ ಇಡೀ ಇಂಡಿಯಾನೇ ಕಾಯುತ್ತಿದೆ. ಹೀಗಾಗಿ ಯಶ್​ ಮುಂದಿನ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇದೀಗ ಅವರ 19ನೇ ಚಿತ್ರದ ಪೋಸ್ಟರ್ ಲೀಕ್ ಆಗಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಪೋಸ್ಟರ್​ನಲ್ಲಿ ಯಶ್​ ತುಂಬಾ ಡಿಫರೆಂಟ್​ ಆಗಿಯೇ ಕಾಣ್ತಿದ್ದಾರೆ. ರಾಕಿ ಭಾಯ್ ಹೊಸ ಅವತಾರಕ್ಕೆ ಅಭಿಮಾನಿಗಳು ಸಹ ಸಖತ್ ಕಾಮೆಂಟ್ ಮಾಡ್ತಿದ್ದಾರೆ.

ಯಶ್​ ಲುಕ್​ಗೆ ಫ್ಯಾನ್ಸ್ ಫಿದಾ!

ಇನ್ನು ಉದ್ದ ಕೂದಲು ಬಿಟ್ಟು, ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್‌ ಕಂಡು ಯಶ್ ಅಭಿಮಾನಿಗಳು  ಖುಷ್ ಆಗಿದ್ದಾರೆ, " ಬಾಸ್ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ" ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದ್ರೆ ಸಿನಿಮಾ ಪೋಸ್ಟರ್ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ

ಇದನ್ನೂ ಓದಿ: Puneeth Rajkumar: ಇದಪ್ಪಾ ಪವರ್ ಸ್ಟಾರ್ ಪವರ್; ಇವ್ರಿಂದ ‘ಲಕ್ಕಿಮ್ಯಾನ್’ಗೆ ಸಿಕ್ಕಾಪಟ್ಟೆ ಲಕ್​

ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್

ಜೊತೆಗೆ ತೆರೆ ಮರೆಯಲ್ಲೇ ರಾಕಿ ಮುಂದಿನ ಚಿತ್ರಕ್ಕೆ ಸಜ್ಜಾಗ್ತಿದ್ಧಾರೆ. ಖುಷಿಯ ವಿಚಾರ ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರವನ್ನು ಅನೌನ್ಸ್ ಮಾಡೊಕೆ ಮುಹೂರ್ತ ಫಿಕ್ಸ್ ಆಗಿದೆಯಂತೆ. ಕೆಜಿಎಫ್ ಚಾಪ್ಟರ್ 2 ಬಂದ ಮೇಲೆ ಮುಂದಿನ ಸಿನಿಮಾ ನಡೆ ಬಗ್ಗೆ ಯಶ್ ಈಗ ಅಳೆದು ತೂಗಿ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಹೇರ್​ ಸ್ಟೈಲ್​ ಬದಲಾಗುತ್ತೆ ಎಂದಿದ್ದ ಯಶ್​

ಈಗಾಗಲೇ ನಿರ್ದೇಶಕ ನರ್ತನ್ ಜೊತೆ ಸಿನಿಮಾ ಮಾಡಲು ಯಶ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ರಾಕಿ ಭಾಯ್ ಕೈಯಲ್ಲಿ ಯಾವೆಲ್ಲಾ ಸಿನಿಮಾಗಳಿವೆ ಎಂಬುದನ್ನ ಅಧಿಕೃತವಾಗಿ ತಿಳಿಸಲಿದ್ದಾರೆ. ಯಶ್ ತಮ್ಮ ಮುಂದಿನ ಚಿತ್ರದಲ್ಲಿ ಹೇರ್ ಸ್ಟೈಲ್ ಬದಲಿಸುತ್ತಾರಾ ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಿದೆ.

ಇದನ್ನೂ ಓದಿ: Gaalipata 2: ಸಾವಿರಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಹಾರಾಡ್ತಿದೆ ಗಾಳಿಪಟ-2; 3ನೇ ದಿನವೂ ಭರ್ಜರಿ ಕಲೆಕ್ಷನ್​

ಮೈಸೂರಿನ ಯುವಜನ ಮಹೋತ್ಸವ ಕಾರ್ಯಕ್ರಮಕ್ಕೆ ಯಶ್ ಭಾಗಿಯಾಗಿದ್ದರು. ಈ ವೇಳೆ ತಮ್ಮ ಹೊಸ ಹೇರ್ ಸ್ಟೈಲ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನನ್ನ ಸಿನಿಮಾ ಬಗ್ಗೆ ಕುತೂಹಲವಿರಲಿ, ಯಾವ ಸಿನಿಮಾ, ಯಾವ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತೇನೆ ಎಂಬುದನ್ನ ಕಾದುನೋಡಿ ಎಂದು ಯಶ್ ಹೇಳಿದ್ದರು. ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಾಗಿತ್ತು.
Published by:Pavana HS
First published: