ಸಾಮಾನ್ಯವಾಗಿ ಈ ಸಿನಿಮಾ(Cinema), ಸೀರಿಯಲ್ ನಟರು (Serial Actors) ಮತ್ತು ನಟಿಯರು ಯಾವಾಗ? ಯಾರ ಜೊತೆಯಲ್ಲಿ ಮದುವೆ (Marriage) ಆಗುತ್ತಾರೆ ಅಂತ ಯಾರಿಂದಲೂ ಸಹ ಊಹಿಸುವುದಕ್ಕೂ ಸಹ ಸಾಧ್ಯವಾಗುವುದಿಲ್ಲ ನೋಡಿ. ಕೆಲವರಂತೂ ರಹಸ್ಯವಾಗಿ ಮದುವೆಯಾಗಿ ಬಿಟ್ಟಿರುತ್ತಾರೆ, ಆದರೆ ರಹಸ್ಯವಾಗಿಟ್ಟ (Secret) ಆ ಸುದ್ದಿ ಕೆಲವು ವರ್ಷಗಳ ನಂತರದಲ್ಲಿ ಹೊರಬರುತ್ತದೆ. ಇಲ್ಲಿಯೂ ಸಹ ಹಾಗೆಯೇ ಆಗಿದೆ ನೋಡಿ.
ಈಜಿಪ್ಟ್ ಗೆಳತಿಯನ್ನೇ ರಹಸ್ಯವಾಗಿ ಮದುವೆಯಾದ್ರಂತೆ ವಿವಿಯನ್
ಝಲಕ್ ದಿಖ್ಲಾ ಜಾ 8 ಮತ್ತು ಫಿಯರ್ ಫ್ಯಾಕ್ಟರ್ ಎಂಬ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ್ದ ನಟ ವಿವಿಯನ್ ಡಿಸೇನಾ ತನ್ನ ಈಜಿಪ್ಟ್ ಗೆಳತಿಯನ್ನು ಮದುವೆಯಾಗಿ ಒಂದು ವರ್ಷವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ವರದಿಯ ಪ್ರಕಾರ, ವಿವಿಯನ್ ಈಜಿಪ್ಟ್ ಪ್ರಜೆಯಾಗಿರುವ ತನ್ನ ದೀರ್ಘಕಾಲದ ಸಂಗಾತಿ ನೌರಾನ್ ಅಲಿಯನ್ನು ವಿವಾಹವಾಗಿದ್ದಾರಂತೆ, ಆದರೆ ಅದನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಯಾರಿಗೂ ಗೊತ್ತಾಗದೆ ರಹಸ್ಯವಾಗಿಯೇ ಇಟ್ಟಿದ್ದಾರೆ.
ಮದುವೆಯ ರಹಸ್ಯ
ಮಾಧ್ಯಮಗಳ ಪ್ರಕಾರ, ನಟ ತನ್ನ ಮದುವೆಯನ್ನು ರಹಸ್ಯವಾಗಿಟ್ಟಿದ್ದರು. ಆದರೆ ಈಗ ಅದರ ಬಗ್ಗೆ ಕೇಳಿದರೆ ಮುಕ್ತವಾಗಿ ಮಾತನಾಡಿದ್ದಾರೆ. ಮೂಲವೊಂದು ಹಿಂದೂಸ್ತಾನ್ ಟೈಮ್ಸ್ ಗೆ "ವಿವಿಯನ್ ಈಜಿಪ್ಟ್ ನಲ್ಲಿಯೇ ನೌರನ್ ಅವರನ್ನು ವಿವಾಹವಾಗಿದ್ದಾರೆ. ಅವರಿಬ್ಬರು ಒಂದು ಆತ್ಮೀಯರ ವಿವಾಹ ಸಮಾರಂಭದಲ್ಲಿ ಮದುವೆಯಾಗಿದ್ದಾರೆ" ಎಂದು ಹೇಳಿದ್ದಾರೆ.
ರಹಸ್ಯ ಮದುವೆ ಬಗ್ಗೆ ಕೇಳಿದ್ದಕ್ಕೆ ಏನಂದ್ರು ನಟ ವಿವಿಯನ್?
ಇದರ ಬಗ್ಗೆ ವಿವರಗಳನ್ನು ಇನ್ನಷ್ಟು ಆಳವಾಗಿ ಪರಿಶೀಲಿಸಿದ ಮತ್ತೊಂದು ಮೂಲವು ಹಿಂದೂಸ್ತಾನ್ ಟೈಮ್ಸ್ ಗೆ "ವಿವಿಯನ್ ಮತ್ತು ಅವನ ಗೆಳತಿ ಇಬ್ಬರೂ ಒಂದು ವರ್ಷದಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ” ಎಂದು ಹೇಳಿದೆ.
ಇದರ ಬಗ್ಗೆ ಕೇಳಲು ಮಾಧ್ಯಮ ಸಂಸ್ಥೆ ನಟನನ್ನು ಸಂಪರ್ಕಿಸಿದಾಗ ವಿವಿಯನ್ ಅವರು "ದಯವಿಟ್ಟು ನನ್ನ ಪಿಆರ್ ಅನ್ನು ಸಂಪರ್ಕಿಸಿ" ಎಂದು ಹೇಳುವ ಮೂಲಕ ಅವರು ತಮ್ಮ ಪಿಆರ್ ತಂಡಕ್ಕೆ ನಿರ್ದೇಶನ ನೀಡಿದರು.
ಇದು ವಿವಿಯನ್ ಅವರ ಎರಡನೇ ಮದುವೆಯಂತೆ
ಈ ಹಿಂದೆ ನಟ ವಿವಿಯನ್ ಅವರು ವಹ್ಬಿಜ್ ದೊರಾಬ್ಜಿ ಅವರನ್ನು ವಿವಾಹವಾಗಿದ್ದರು. ಇಬ್ಬರೂ ಡಿಸೆಂಬರ್ 18, 2021 ರಂದು ಕಾನೂನುಬದ್ಧವಾಗಿ ವಿಚ್ಛೇದನ ಪಡೆದರು.
ನಟ ದಂಪತಿಗಳಾದ ವಿವಿಯನ್ ಮತ್ತು ವಹ್ಬಿಜ್ ದೊರಾಬ್ಜಿ 2016 ರಲ್ಲಿ ಬೇರ್ಪಟ್ಟರು. ವಿಭಜನೆಯ ಬಗ್ಗೆ ವಿವಿಯನ್ ಹಿಂದೂಸ್ತಾನ್ ಟೈಮ್ಸ್ ನೊಂದಿಗೆ ಮಾತನಾಡುತ್ತಾ, "ಇದು ತನ್ನ ಮತ್ತು ವಹ್ಬಿಜ್ ಅವರ ವೈಯುಕ್ತಿಕ ವಿಚಾರವಾಗಿದ್ದು, ಇದು ಬೇರೆಯವರು ತಲೆ ಹಾಕುವ ವಿಚಾರವಲ್ಲ” ಎಂದು ಹೇಳಿದರು.
ಇದನ್ನೂ ಓದಿ: Chetan Chandra: ಕನ್ನಡದ 8 ಪ್ಯಾಕ್ ಹೀರೋ ಚೇತನ್ ಚಂದ್ರ ರಾಜಕೀಯಕ್ಕೆ ಬರ್ತಾರಾ?
‘ಪ್ಯಾರ್ ಕಿ ಯೆ ಏಕ್ ಕಹಾನಿ’ ಸಹ ನಟರು, ಹೊಂದಾಣಿಕೆಯಾಗದ ಕಾರಣ ನೀಡಿ ತಮ್ಮ ಮೂರು ವರ್ಷಗಳ ವೈವಾಹಿಕ ಜೀವನವನ್ನು ಕೊನೆಗೊಳಿಸಿದ್ದಾರೆ ಎಂದು ವರದಿಯಾಗಿತ್ತು.
ವಿವಿಯನ್ ಹಿಂದೂಸ್ತಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ "ಇದು ವೈಯಕ್ತಿಕ ವಿಚಾರ ಮತ್ತು ನಾನು ಅದನ್ನು ವೈಯಕ್ತಿಕವಾಗಿಡಲು ಬಯಸುತ್ತೇನೆ. ನಾವು ವಯಸ್ಕರು, ನಾವು ಪ್ರಬುದ್ಧರಾಗಿದ್ದಾರೆ ಮತ್ತು ಮದುವೆಯಾಗಿ ಮೂರು ವರ್ಷಗಳಿಗಿಂತ ಹೆಚ್ಚು ಸಮಯವಾಗಿದೆ.
ನಮ್ಮ ನಡುವೆ ಏನು ನಡೆಯುತ್ತಿದೆ ಅಂತ ನಿರ್ಧರಿಸಲು ನಮ್ಮಿಬ್ಬರಿಗೂ ತಿಳುವಳಿಕೆ ಇದೆ. ಮಾಧ್ಯಮಗಳು ಊಹೆ ಮಾಡಿ ವರದಿಗಳನ್ನು ಪ್ರಕಟಿಸುತ್ತವೆ. ಆದರೆ ಯಾವುದು ನಮಗೆ ಉತ್ತಮ ಎಂಬುದನ್ನು ನಾವು ನಿರ್ಧರಿಸುತ್ತೇವೆ" ಎಂದು ನಟ ಹೇಳಿದರು.
ರಾಬರ್ಟ್ ಪ್ಯಾಟಿನ್ಸನ್ ಮತ್ತು ಕರ್ಸ್ಟನ್ ಸ್ಟೀವರ್ಟ್ ಅವರ ಟ್ವಿಲೈಟ್ ಸರಣಿಯಿಂದ ಸ್ಫೂರ್ತಿ ಪಡೆದ 2010 ರ ಟಿವಿ ಸೀರಿಯಲ್ ‘ಪ್ಯಾರ್ ಕಿ ಯೆ ಏಕ್ ಕಹಾನಿ’ ಸೆಟ್ ಗಳಲ್ಲಿ ವಿವಿಯನ್ ಮತ್ತು ವಹ್ಬಿಜ್ ಭೇಟಿಯಾದರು. ಮೂರು ವರ್ಷಗಳ ಡೇಟಿಂಗ್ ನಂತರ, ಅವರು 2013 ರಲ್ಲಿ ವಿವಾಹವಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ