ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಅವರ ಮೈಸೂರು (Mysore) ಸ್ಮಾರಕ ಲೋಕಾರ್ಪಣೆಗೆ ಯಾಕೋ ಕಾಲ ಕೂಡಿ ಬರುತ್ತಿಲ್ಲ. ಈಗಾಗಲೇ ಅಲ್ಲಿ ಶೇಕಡ 90 ರಷ್ಟು ಸ್ಮಾರಕದ ಕೆಲಸ ಮುಗಿದಿದೆ. ಸುಮಾರು ಎರಡೂವರೆ ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣ ಆಗಿದೆ. ವಿಷ್ಣು ವರ್ಧನ್ ಅವರಿಗೆ ಸಂಬಂಧಿಸಿದ ಗ್ಯಾಲರಿ, ಆಡಿಟೋರಿಯಂ, ವಿಷ್ಣು ಪುತ್ಥಳಿ, ಕ್ಲಾಸ್ ರೂಮ್, ಕ್ಯಾಂಟೀನ್ ಏರಿಯಾ, ಹೀಗೆ ಈ ಸ್ಮಾರಕದಲ್ಲಿ ಹತ್ತು ಹಲವು ವಿಶೇಷತೆಗಳಿವೆ. ಎಲ್ಲಾ ಸರಿ ಇದ್ರೆ ಇದೇ ತಿಂಗಳು 18ಕ್ಕೆ ವಿಷ್ಣವರ್ಧನ್ ಅವರ ಸ್ಮಾರಕ ಲೋಕಾರ್ಪಣೆ ಆಗಬೇಕಿತ್ತು. ಅದನ್ನು ಮುಖ್ಯಮಂತ್ರಿಗಳ ಸಹ ತಿಳಿಸಿದ್ದರು. ಆದ್ರೆ ಮತ್ತೆ ಕಾರಣಾಂತರಗಳಿಂದ ಸ್ಮಾರಕ ಉದ್ಘಾಟನೆಯನ್ನು ಮುಂದೂಡಲಾಗಿದೆ (Postponed) . ಅನಿರುದ್ಧ್ (Anirudh) ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಅನಿರುದ್ಧ್ ಹೇಳಿರುವುದೇನು?
ನಮಸಾರ ಎಲ್ಲರಿಗೂ, ಅಪ್ಪ ಅವರ ಸಾಹಸಸಿಂಹ ಡಾ|| ವಿಷ್ಣುವರ್ಧನ್‍ರವರ ಸ್ಮಾರಕದ ಉದ್ಘಾಟನೆಯ ದಿನಾಂಕ ಯಾವಾಗ ಎನ್ನೋ ಪ್ರಶ್ನೆ ಎಲ್ಲರನ್ನೂ ಕಾಡ್ತಾ ಇದೆ. ತಮ್ಮೆಲ್ಲರಿಗೂ ಈಗಾಗಲೇ ಗೊತ್ತಿರುವ ಹಾಗೇ, ಡಿಸೆಂಬರ್ 18 ಕ್ಕೆ ಉದ್ಘಾಟನೆ ಮಾಡ್ತೀನಿ ಎಂದು ಮಾನ್ಯ ಮುಖ್ಯಮಂತ್ರಿಗಳು ಮೊದಲು ಒಪ್ಪಿಕೊಂಡಿದ್ರು.
ಆದ್ರೆ ಕೆಲವು ಕಾರಣಾಂತರಗಳಿಂದ ಅವತ್ತು ಮಾಡೋದಕ್ಕೆ ಆಗಲ್ಲ ಎಂದು, ಅವರೇ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದು ತಮಗೆಲ್ಲರಿಗೂ ಗೊತ್ತೇ ಇದೆ. ಅವತ್ತಿಂದ ಇವತ್ತಿನವರೆಗೆ ಸತತವಾಗಿ, ನಿರಂತರವಾಗಿ ಪ್ರಯತ್ನ ಪಡ್ತಾ ಇದೀವಿ. ಅವರನ್ನು ಭೇಟಿ ಮಾಡ್ತಾ ಇದೀವಿ. ನಮಗೆ ಒಂದು ದಿನಾಂಕ ಕೊಡಿ ಎಂದು ಕೇಳಿಕೊಳ್ಳುತ್ತಾ ಇದ್ದೇವೆ.
ಇದನ್ನೂ ಓದಿ: Vishnu Smaraka: ಮೈಸೂರಿನಲ್ಲಿ ರೆಡಿಯಾಯ್ತು ಸಾಹಸಸಿಂಹನ ಸ್ಮಾರಕ! ಲೋಕಾರ್ಪಣೆ ಬಗ್ಗೆ ಮಾಹಿತಿ ಕೊಟ್ಟ ಅನಿರುದ್ಧ್
ಅವರು ಕೂಡ ಪ್ರಯತ್ನ ಪಡ್ತಾ ಇದಾರೆ. ಆದ್ರೆ ಅವರ ಪೂರ್ವ ನಿಯೋಜಿತ ಕೆಲಸಗಳಿಂದ, ಸಾಕಷ್ಟು ಒತ್ತಡಗಳಿಂದ, ನಮಗೆ ನಿರ್ದಿಷ್ಟವಾದ ದಿನಾಂಕ, ದಿನ ಹೇಳೋದಕ್ಕೆ ಆಗ್ತಾ ಇಲ್ಲ. ನಾನು ಆಗಲೇ ಹೇಳಿದ ಹಾಗೇ, ಅವರು ಪ್ರಾಮಾಣಿಕ ಪ್ರಯತ್ನ ಪಡ್ತಾ ಇದಾರೆ. ಅದು ಗೊತ್ತು ಆಗ್ತಿದ್ದಾಗೆ, ಅವರೇ ಸ್ವತ: ಪತ್ರಿಕಾಗೋಷ್ಠಿಯಲ್ಲಿ ಆ ದಿನಾಂಕ, ಆ ದಿನ ಹೇಳ್ಕೋತಾರೆ. ನಾನು ಸಹ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಳ್ತೇನೆ.
View this post on Instagram
ಆ ದಿನ ಭಾನುವಾರ ಆಗಿರಲಿ ಎಂದು ನಾವು ಕೇಳಿಕೊಂಡಿದ್ದೇವೆ. ಅಂದ್ರೆ ಅಭಿಮಾನಿಗಳಿಗೆ ಬರುಲು ಅನುಕೂಲವಾಗಲಿ ಎನ್ನುವ ದೃಷ್ಟಿಯಲ್ಲಿ. ಜೊತೆಗೆ 2 ವಾರ ಮುಂಚಿತವಾಗಿ ಹೇಳಿ ಅನ್ನೋದನ್ನೂ ಕೇಳಿಕೊಂಡಿದ್ದೀವಿ. ಅಭಿಮಾನಿಗಳಿಗೆ ಎಲ್ಲಾ ರೀತಿಯ ಅನುಕೂಲ ಆಗಲಿ ಎನ್ನುವ ದೃಷ್ಟಿಯಲ್ಲಿ. ಆದಷ್ಟು ಬೇಗ ಆ ದಿನ, ದಿನಾಂಕ ಗೊತ್ತಾಗುತ್ತೆ ಅನ್ನೋ ನಿರೀಕ್ಷೆಯಲ್ಲಿ ನಾವಿದೀವೆ.
ಅದಕ್ಕಾಗಿ ಪ್ರಯತ್ನ ಕೂಡ ಪಡ್ತಾ ಇದೀವಿ. ತಾವೆಲ್ಲ ಆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಾಹಸಸಿಂಹ ಡಾ|| ವಿಷ್ಣುವರ್ಧನ್ ಅವರಿಗೆ ತಮ್ಮ ನಮನಗಳನ್ನು, ಶ್ರದ್ಧಾಂಜಲಿಯನ್ನು ಪ್ರೀತಿಯಿಂದ ಸಲ್ಲಿಸಿ ಎಂದು ಈ ವಿಡಿಯೋ ಮುಖಾಂತರ ತಮ್ಮಲ್ಲಿ ಕಳಕಳಿಯಿಂದ ಕೇಳಿ ಕೊಳೇನೆ' ಧನ್ಯವಾದಗಳು ಎಂದು ಅನಿರುದ್ಧ್ ಹೇಳಿದ್ದಾರೆ.
ವಿಷ್ಣು ಸ್ಮಾರಕದ ಬಗ್ಗೆ ಅನಿರುದ್ಧ ಒಂದಷ್ಟು ಮಾಹಿತಿ ಕೊಟ್ಟಿದ್ದಾರೆ.
-ಮೈಸೂರಿನಲ್ಲಿರೋ ವಿಷ್ಣು ಸ್ಮಾರಕದ ಕೆಲಸ ಶೇಕಡ 90 ರಿಂದ 95 ರಷ್ಟು ಕಂಪ್ಲೀಟ್ ಆಗಿದೆ.
-ಅಪ್ಪಾಜಿ ಅವರ 600 ಫೋಟೋಗಳ ಗ್ಯಾಲರಿ ಯನ್ನ ಕೂಡ ಇಲ್ಲಿ ಮಾಡಲಾಗಿದೆ.
-ವಿಷ್ಣುವರ್ಧನ್ ಅವರ ವಿಭೂತಿಯನ್ನ ಹಾಕಿ ಅಪ್ಪಾಜಿ ಅವರ ಪುತ್ಥಳಿಯನ್ನ ಸ್ಥಾಪಿಸಲಾಗುತ್ತದೆ
- ವಿಷ್ಣು ಸ್ಮಾರಕದಲ್ಲಿ ಎರಡು ಕ್ಲಾಸ್ ರೂಮ್ ಕೂಡ ನಿರ್ಮಾಣ ಮಾಡಲಾಗಿದೆ.
- ಆಡಿಟೋರಿಯಂ ಅನ್ನ ಕೂಡ ಇಲ್ಲಿ ನಿರ್ಮಿಸಲಾಗಿದೆ. ಸಿನಿಮಾ ಮತ್ತು ನಾಟಕಗಳ ಚಟುವಟಿಕೆಗೆ ಇದು ಅನುಕೂಲವಾಗಲಿದೆ.
- ಸ್ಮಾರಕದಲ್ಲಿ ಕ್ಯಾಂಟಿನ್ ವ್ಯವಸ್ಥೆ ಮಾಡಲಾಗಿದೆ.
- ಎರಡು ಮುಕ್ಕಾಲು ಎಕರೆಯಲ್ಲಿ ಇಡೀ ಸ್ಮಾರಕ ನಿರ್ಮಾಣಗೊಂಡಿದೆ.
ಇದನ್ನೂ ಓದಿ: Bigg Boss Kannada: ಕಳಪೆ ಕಾರಣ ಕೇಳಿ ರೊಚ್ಚಿಗೆದ್ದ ರಾಜಣ್ಣ; ದಿವ್ಯಾ ಮೇಲೆ ಸಿಡಿ ಸಿಡಿ!
ಅಭಿಮಾನಿಗಳ ಆಸೆಯೂ ಅದೆ. ಆದಷ್ಟು ಬೇಗ ಸ್ಮಾರಕ ಉದ್ಘಾಟನೆ ಆಗಲಿ ಎನ್ನುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ