ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಅವರ ಅಭಿಮಾನಿಗಳಿಗೆ (Fans) ಗುಡ್ ನ್ಯೂಸ್ (Good News). ಮೈಸೂರಿನ ಸ್ಮಾರಕ ಲೋಕಾರ್ಪಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ಇಷ್ಟು ದಿನ ನಿವೆಲ್ಲಾ ಕಾಯ್ತಾ ಇದ್ದ ಸುದಿನ ಬರುತ್ತಿದೆ. ಮೈಸೂರಿನಲ್ಲಿ ಸುಮಾರು ಎರಡೂವರೆ ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣ ಆಗಿದೆ. ವಿಷ್ಣು ವರ್ಧನ್ ಅವರಿಗೆ ಸಂಬಂಧಿಸಿದ ಗ್ಯಾಲರಿ, ಆಡಿಟೋರಿಯಂ, ವಿಷ್ಣು ಪುತ್ಥಳಿ, ಕ್ಲಾಸ್ ರೂಮ್, ಕ್ಯಾಂಟೀನ್ ಏರಿಯಾ, ಹೀಗೆ ಈ ಸ್ಮಾರಕದಲ್ಲಿ ಹತ್ತು ಹಲವು ವಿಶೇಷತೆಗಳಿವೆ. ಎಲ್ಲಾ ಸರಿ ಇದ್ದಿದ್ರೆ ಡಿಸೆಂಬರ್ 18ಕ್ಕೆ ವಿಷ್ಣವರ್ಧನ್ ಅವರ ಸ್ಮಾರಕ ಲೋಕಾರ್ಪಣೆ ಆಗಬೇಕಿತ್ತು. ಅದನ್ನು ಮುಖ್ಯಮಂತ್ರಿಗಳ (CM) ಸಹ ತಿಳಿಸಿದ್ದರು. ಆದ್ರೆ ಮತ್ತೆ ಕಾರಣಾಂತರಗಳಿಂದ ಸ್ಮಾರಕ ಉದ್ಘಾಟನೆಯನ್ನು ಮುಂದೂಡಲಾಗಿತ್ತು. ಈಗ ಜನವರಿ 29ಕ್ಕೆ (January 29th) ವಿಷ್ಣು ಸ್ಮಾರಕ ಉದ್ಘಾಟನೆ ಆಗಲಿದೆ.
ಜನವರಿ 29ಕ್ಕೆ ವಿಷ್ಣು ಸ್ಮಾರಕ ಉದ್ಘಾಟನೆ
'ನಮಸ್ಕಾರ ಎಲ್ಲರಿಗೂ, ತಮ್ಮೆಲ್ಲರ ಜೊತೆ ಇವತ್ತು ಸಂತೋಷದ ಸುದ್ದಿಯನ್ನು ಹಂಚಿಕೊಳ್ತಾ ಇದ್ದೇನೆ. ಇದೇ ತಿಂಗಳು 29 ನೇ ದಿನಾಂಕ, ಭಾನುವಾರ ಅಪ್ಪವರ ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ, ಮೈಸೂರಿನಲ್ಲಿ ನಿರ್ಮಾಣಗೊಂಡಿರುವ ಸ್ಮಾರಕದ ಉದ್ಘಾಟನೆ ನಡೆಯಲಿದೆ. ಈಗಷ್ಟೇ ಮುಖ್ಯಮಂತ್ರಿಗಳು ಈ ಸಮಾರಂಭಕ್ಕೆ ಬರ್ತಿನಿ ಎಂದು ಒಪ್ಪಿಕೊಂಡಿದ್ದಾರೆ.
ತಾವೆಲ್ಲರೂ, ಅಭಿಮಾನಿಗಳು ಇಷ್ಟು ವರ್ಷ ಕಾದಿದ್ದೀರಿ. ಇವತ್ತು ಈ ಒಂದು ಸಂತೋಷದ ಸುದ್ದಿಯನ್ನು ತಾವೆಲ್ಲರೂ ಕೇಳ್ತಾ ಇದ್ದೀರಿ. ತಾವೆಲ್ಲರೂ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸಮಾರಂಭದಲ್ಲಿ ಭಾಗವಹಿಸುವ ಮುಖಾಂತರ ಅಪ್ಪವರಿಗೆ ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ ತಮ್ಮ ನಮನಗಳನ್ನು, ಶ್ರದ್ಧಾಂಜಲಿಯನ್ನು ಸಲ್ಲಿಸಿ ಎಂದು ತಮ್ಮಲ್ಲಿ ಕಳಕಳೆಯಿಂದ ಕೇಳಿಕೊಳ್ತಾ ಇದ್ದೇನೆ. ಧನ್ಯವಾದಗಳು' ಎಂದು ಅನಿರುದ್ಧ್ ಹೇಳಿದ್ದಾರೆ.
View this post on Instagram
ಕಳೆದ ಬಾರಿ ಬೇಸದ ವ್ಯಕ್ತಪಡಿಸಿದ್ದ ಅನಿರುದ್ಧ್
ಮೈಸೂರಿನಲ್ಲಿ ವಿಷ್ಣು ಸ್ಮಾರಕ ಉದ್ಘಾಟನೆ ಮುಂದೂಡಿದ್ದಕ್ಕೆ ಅನಿರುದ್ಧ್ ಕಳೆದ ಬಾರಿ ಬೇಸರ ವ್ಯಕ್ತ ಪಡಿಸಿದ್ದರೊ. ಸ್ಮಾರಕ ಉದ್ಘಾಟನೆಗೆ ಭಾನುವಾರವೇ ಬೇಕು ಎಂದಿದ್ದರು.
ಇದನ್ನೂ ಓದಿ: Gattimela: ಸಾವಿರ ಸಂಚಿಕೆಗಳ ಸಂಭ್ರಮದಲ್ಲಿ ಗಟ್ಟಿಮೇಳ, ಸಂಕ್ರಾಂತಿ ಸಡಗರದಲ್ಲಿ ಧಾರಾವಾಹಿ ತಂಡ!
'ಭಾನುವಾರ ಆಗಿರಲಿ ಎಂದು ನಾವು ಕೇಳಿಕೊಂಡಿದ್ದೇವೆ. ಅಂದ್ರೆ ಅಭಿಮಾನಿಗಳಿಗೆ ಬರುಲು ಅನುಕೂಲವಾಗಲಿ ಎನ್ನುವ ದೃಷ್ಟಿಯಲ್ಲಿ. ಜೊತೆಗೆ 2 ವಾರ ಮುಂಚಿತವಾಗಿ ಹೇಳಿ ಅನ್ನೋದನ್ನೂ ಕೇಳಿಕೊಂಡಿದ್ದೀವಿ. ಅಭಿಮಾನಿಗಳಿಗೆ ಎಲ್ಲಾ ರೀತಿಯ ಅನುಕೂಲ ಆಗಲಿ ಎನ್ನುವ ದೃಷ್ಟಿಯಲ್ಲಿ. ಆದಷ್ಟು ಬೇಗ ಆ ದಿನ, ದಿನಾಂಕ ಗೊತ್ತಾಗುತ್ತೆ ಅನ್ನೋ ನಿರೀಕ್ಷೆಯಲ್ಲಿ ನಾವಿದೀವಿ' ಎಂದು ಅನಿರುದ್ಧ್ ಹೇಳಿದ್ರು.
ವಿಷ್ಣು ಸ್ಮಾರಕದ ಮಾಹಿತಿ
-ಮೈಸೂರಿನಲ್ಲಿರೋ ವಿಷ್ಣು ಸ್ಮಾರಕದ ಕೆಲಸ ಶೇಕಡ 90 ರಿಂದ 95 ರಷ್ಟು ಕಂಪ್ಲೀಟ್ ಆಗಿದೆ.
-ಅಪ್ಪಾಜಿ ಅವರ 600 ಫೋಟೋಗಳ ಗ್ಯಾಲರಿಯನ್ನ ಕೂಡ ಇಲ್ಲಿ ಮಾಡಲಾಗಿದೆ.
-ವಿಷ್ಣುವರ್ಧನ್ ಅವರ ವಿಭೂತಿಯನ್ನ ಹಾಕಿ ಅಪ್ಪಾಜಿ ಅವರ ಪುತ್ಥಳಿಯನ್ನ ಸ್ಥಾಪಿಸಲಾಗುತ್ತದೆ
- ವಿಷ್ಣು ಸ್ಮಾರಕದಲ್ಲಿ ಎರಡು ಕ್ಲಾಸ್ ರೂಮ್ ಕೂಡ ನಿರ್ಮಾಣ ಮಾಡಲಾಗಿದೆ.
- ಆಡಿಟೋರಿಯಂ ಅನ್ನ ಕೂಡ ಇಲ್ಲಿ ನಿರ್ಮಿಸಲಾಗಿದೆ. ಸಿನಿಮಾ ಮತ್ತು ನಾಟಕಗಳ ಚಟುವಟಿಕೆಗೆ ಇದು ಅನುಕೂಲವಾಗಲಿದೆ.
- ಸ್ಮಾರಕದಲ್ಲಿ ಕ್ಯಾಂಟಿನ್ ವ್ಯವಸ್ಥೆ ಮಾಡಲಾಗಿದೆ.
- ಎರಡು ಮುಕ್ಕಾಲು ಎಕರೆಯಲ್ಲಿ ಇಡೀ ಸ್ಮಾರಕ ನಿರ್ಮಾಣಗೊಂಡಿದೆ.
ಇದನ್ನೂ ಓದಿ: Kendasampige: ಅಪ್ಪನ ಮೇಲಿನ ಕೋಪಕ್ಕೆ ಮನೆ ಬಿಟ್ಟು ಹೋದ ತೀರ್ಥಂಕರ್, ಸುಮನಾಗೆ ಟೆನ್ಶನ್!
ಜನವರಿ 29ಕ್ಕೆ ಸ್ಮಾರಕ ಉದ್ಘಾಟನೆ ಆಗಲಿದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾಗಿಯಾಗಲಿದ್ದಾರೆ. ನೀವೂ ಭಾಗವಹಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ