ನಟ ವಿಶಾಲ್ (Actor Vishal) ಹಲವಾರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಭಾಗವಾಗಿ ನಟ ಇತ್ತೀಚೆಗೆ 11 ಜೋಡಿಗಳ (Couple) ವಿವಾಹವನ್ನು ತಿರುವಳ್ಳೂರಿನಲ್ಲಿ ನಡೆಸಿಕೊಟ್ಟಿದ್ದಾರೆ. ನಟನು ಸಂಪೂರ್ಣ ಸಮಾರಂಭವನ್ನು ನೋಡಿಕೊಂಡಿದ್ದಾರೆ. ಅವರ ಸ್ನೇಹಿತರೂ ಅವರಿಗೆ ಈ ಕಾರ್ಯದಲ್ಲಿ ನೆರವಾಗಿದ್ದಾರೆ. ವಧು ಹಾಗೂ ವರನ (Groom) ಮದುವೆಯ ಉಡುಪುಗಳನ್ನು ಖರೀದಿಸುವುದರಿಂದ ಹಿಡಿದು ಅವರ ಹೊಸ ಜೀವನವನ್ನು ಪ್ರಾರಂಭಿಸಲು ಎಲ್ಲಾ ಸೌಲಭ್ಯಗಳನ್ನು ನಟ ಒದಗಿಸಿಕೊಟ್ಟಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ವಿಶಾಲ್, ನನಗೆ ರೇಷ್ಮೆ ವೇಷಭೂಷಣ ಮತ್ತು ಶರ್ಟ್ ಧರಿಸುವುದು ತುಂಬಾ ಇಷ್ಟ. ಆದರೆ ಆಗಾಗ ಧರಿಸುವ ಅವಕಾಶ ಸಿಗುತ್ತಿಲ್ಲ. ಕಾರ್ಯಕ್ರಮವನ್ನು ಇಷ್ಟು ಸುಸೂತ್ರವಾಗಿ ಆಯೋಜಿಸಲು ಕಾರಣಕರ್ತರಾದ ಕಣ್ಣನ್ ಮತ್ತು ಹರಿ ಹಾಗೂ ಇತರರಿಗೆ ನನ್ನ ಧನ್ಯವಾದ (Thanks) ಎಂದಿದ್ದಾರೆ.
ಒಂದು ದಿನ, ಕಣ್ಣನ್ ಜೋಡಿಗಳ ವಿವಾಹ ಸಮಾರಂಭಗಳನ್ನು ಪ್ರಾಯೋಜಿಸಲು ನನಗೆ ಐಡಿಯಾ ನೀಡಿದರು. ಆದರೆ ಆ ಸಮಯದಲ್ಲಿ ನನ್ನ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದೆ. ನಾವು ಅಂತಿಮವಾಗಿ ಈ ದಿನಾಂಕವನ್ನು ಫೈನಲ್ ಮಾಡಿದೆವು. ಇಂದು ನನ್ನ ಕುಟುಂಬವು ದೊಡ್ಡದಾಗಿದೆ. ನನಗೆ 11 ಸಹೋದರಿಯರಿದ್ದಾರೆ ಎಂದಿದ್ದಾರೆ.
ಈ ಸಹೋದರಿಯರು ನನ್ನ ಸ್ವಂತದವರಂತೆ. ಅವರ ಯೋಗಕ್ಷೇಮವೇ ನನ್ನ ಆದ್ಯತೆ. ನಾನು ಕೇವಲ ಈ ಸಮಾರಂಭಗಳಲ್ಲಿ ಭಾಗವಹಿಸುವವನಲ್ಲ. ನಾನು ಯಾವಾಗಲೂ ನನ್ನ ಸಹೋದರಿಯರನ್ನು ನೋಡಿಕೊಳ್ಳುತ್ತೇನೆ. ಅವರ ಸಂತೋಷಕ್ಕೆ ನನ್ನ ಭಾವಂದಿರನ್ನು ಜವಾಬ್ದಾರಿಯಾಗಿಸುತ್ತೇನೆ. ಅವರು ನನ್ನ ಸಹೋದರಿಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ನನಗೆ ಖಾತ್ರಿಯಿದೆ. ನಮ್ಮ ಫೌಂಡೇಶನ್ ಅವರ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ನೋಡಿಕೊಳ್ಳುತ್ತದೆ ಎಂದಿದ್ದಾರೆ.
Delighted to be part of this Grand Wedding Occasion of 11 Couples https://t.co/kTPRTeItk2
An wonderful initiative by - #Vishal_Makkal_Nala_Iyakkam#மக்கள்பணியில்#மக்கள்நலஇயக்கம் pic.twitter.com/hb4a128FsI
— Vishal (@VishalKOfficial) November 26, 2022
ಇದನ್ನೂ ಓದಿ: ಕೊಟ್ಟ ಮಾತಿನಂತೆ ಮೈಸೂರಿನ ಶಕ್ತಿಧಾಮಕ್ಕೆ ನಟ ವಿಶಾಲ್ ಭೇಟಿ, ಪುನೀತ್ ಓದಿಸುತ್ತಿದ್ದ ಮಕ್ಕಳ ಜೊತೆ ಮಾತು, ಆಟ!
ಮುಂದಿನ ವರ್ಷ ನಾಡಿಗರ ಸಂಗಮ ನಿರ್ಮಾಣ ಪ್ರಕರಣದಲ್ಲಿ ಅನುಕೂಲಕರವಾದ ತೀರ್ಪು ಬರುವ ಭರವಸೆ ಇದೆ ಎಂದು ಪುನರುಚ್ಚರಿಸಿದರು. ಅದರ ನಂತರ ತನ್ನ ಮದುವೆಯನ್ನು ಘೋಷಿಸುತ್ತೇನೆ ಎಂದು ಹೇಳಿದ್ದಾರೆ. ಏಕೆಂದರೆ ಕಟ್ಟಡದ ನಿರ್ಮಾಣ ಪೂರ್ಣಗೊಂಡ ನಂತರವೇ ಮದುವೆಯಾಗುವುದಾಗಿ ನಟ ಹೇಳಿದ್ದರು.
ಪುನೀತ್ ಅವರ ದೊಡ್ಡ ಅಭಿಮಾನಿ
ವಿಶಾಲ್ ಅವರು ನಟ ಪುನೀತ್ ಅವರ ದೊಡ್ಡ ಅಭಿಮಾನಿ. ಅವರ ಮೃತಪಟ್ಟ ಸಂದರ್ಭ ವಿಶಾಲ್ ಚೆನ್ನೈನಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಗೌರವ ಸಲ್ಲಿಸಿದ್ದರು. ಆ ನಂತರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿ ಮಾತನಾಡಿದ್ದಾರೆ. ಪುನೀತ್ ಅವರ ಸಮಾಜಿಕ ಕಾರ್ಯಕ್ರಗಳಿಂದಲೂ ಇವರು ಬಹಳಷ್ಟು ಪ್ರಭಾವಿತರಾಗಿದ್ದಾರೆ.
ಶಕ್ತಿಧಾಮದಕ್ಕೂ ಬೇಟಿಕೊಟ್ಟಿದ್ದ ನಟ ವಿಶಾಲ್ ಭೇಟಿ ಬಳಿಕ ಮಾತನಾಡಿ, ನಾನು ಯಾವಾಗಲು ಶಕ್ತಿಧಾಮದ ಸ್ವಯಂ ಸೇವಕನಾಗಿರುತ್ತೇನೆ. ಅದಕ್ಕೆ ರಾಜ್ ಕುಟುಂಬದವರು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು.
ಇದೇ ವೇಳೆ ಶಕ್ತಿಧಾಮ ನನಗೆ ದೇವಸ್ಥಾನದ ಅನುಭವ ನೀಡಿತ್ತು. ದೇವಸ್ಥಾನಕ್ಕೆ ಹೋದರೆ ಒಂದು ದೇವರ ದರ್ಶನ ಪಡೆಯಬಹುದು. ಇಲ್ಲಿ ಒಂದೊಂದು ಮಕ್ಕಳಲ್ಲೂ ದೇವರನ್ನು ನೋಡಿದೆ. ಮಕ್ಕಳು ತುಂಬಾ ಲವ ಲವಿಕೆಯಿಂದ ಇದ್ದಾರೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ