• Home
  • »
  • News
  • »
  • entertainment
  • »
  • Emergency: ‘ಎಮರ್ಜೆನ್ಸಿ’ ಚಿತ್ರದಲ್ಲಿ ಸಂಜಯ್ ಗಾಂಧಿ ಪಾತ್ರ ನಿಭಾಯಿಸುವ ಆ ನಟ ಯಾರು ಗೊತ್ತಾ?

Emergency: ‘ಎಮರ್ಜೆನ್ಸಿ’ ಚಿತ್ರದಲ್ಲಿ ಸಂಜಯ್ ಗಾಂಧಿ ಪಾತ್ರ ನಿಭಾಯಿಸುವ ಆ ನಟ ಯಾರು ಗೊತ್ತಾ?

ಎಮರ್ಜೆನ್ಸಿ ಚಿತ್ರ

ಎಮರ್ಜೆನ್ಸಿ ಚಿತ್ರ

ನಟಿ ಕಂಗನಾ ರನೌತ್ ಕೆಲವೊಮ್ಮೆ ತನ್ನ ನೇರ ಮಾತುಗಳಿಗಾಗಿ ಸುದ್ದಿಯಲ್ಲಿದ್ದರೆ, ಇನ್ನೂ ಕೆಲ ಸಮಯದಲ್ಲಿ ಅವರು ಮಾಡುವ ಚಲನಚಿತ್ರಗಳಿಂದ ಸುದ್ದಿಯಲ್ಲಿರುತ್ತಾರೆ. ಈಗ ಅವರು ಸುದ್ದಿಯಲ್ಲಿರುವುದು ಅವರ ‘ಎಮರ್ಜೆನ್ಸಿ’ ಚಿತ್ರದಿಂದ.

  • Share this:

ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಬಾಲಿವುಡ್ ನಟಿಯರ ಸಾಲಿನಲ್ಲಿ ನಟಿ ಕಂಗನಾ ರನೌತ್ (Kangana Ranaut) ಸಹ ಒಬ್ಬರು. ಏಕೆಂದರೆ, ಈ ನಟಿ ಕೆಲವೊಮ್ಮೆ ತನ್ನ ನೇರ ಮಾತುಗಳಿಗಾಗಿ ಸುದ್ದಿಯಲ್ಲಿದ್ದರೆ, ಇನ್ನೂ ಕೆಲ ಸಮಯದಲ್ಲಿ ಅವರು ಮಾಡುವ ಚಲನಚಿತ್ರಗಳಿಂದ ಸುದ್ದಿಯಲ್ಲಿರುತ್ತಾರೆ.  ಈಗ ಅವರು ಸುದ್ದಿಯಲ್ಲಿರುವುದು ಅವರ ‘ಎಮರ್ಜೆನ್ಸಿ’ (Emergency) ಚಿತ್ರದಿಂದ. ಹೌದು.. ಈ ಚಿತ್ರತಂಡವು ನಟ ವಿಶಾಕ್ ನಾಯರ್ (Vishak Nair) ಅವರನ್ನು ಸಂಜಯ್ ಗಾಂಧಿ (Sanjay Gandhi) ಪಾತ್ರಕ್ಕೆ ಆಯ್ಕೆ ಮಾಡಿದೆ ಎಂದು ಚಿತ್ರ ತಯಾರಕರು ಗುರುವಾರ ಘೋಷಿಸಿದ್ದಾರೆ.  ಭಾರತದ ರಾಜಕೀಯ ಇತಿಹಾಸದಲ್ಲಿ ನಡೆದ ಒಂದು ಅಪರೂಪದ ಕ್ಷಣದ ಕಥೆ ಎಂದು ಬಿಂಬಿತವಾಗಿರುವ ತುರ್ತು ಪರಿಸ್ಥಿತಿಯನ್ನು (Emergency) ನಟಿ ಕಂಗನಾ ಅವರು ಬರೆದು ನಿರ್ದೇಶಿಸಿದ್ದಾರೆ.


ಮುಂಬರುವ ಈ ಚಿತ್ರದಲ್ಲಿ ನಟಿ ಕಂಗನಾ ಖುದ್ದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರವನ್ನು ಮಾಡಲಿದ್ದಾರೆ.


ಚಿತ್ರದಲ್ಲಿ ಯಾರ‍್ಯಾರು ನಟಿಸಿದ್ದಾರೆ 
ಆನಂದಂ, ಪುತನ್ ಪನಮ್ ಮತ್ತು ಚುಂಜ್ಜ್ ನಂತಹ ಮಲಯಾಳಂ ಚಿತ್ರಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿರುವ ನಟ ನಾಯರ್, ಬಾಲಿವುಡ್ ನಟರಾದ ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ, ಮಿಲಿಂದ್ ಸೋಮನ್ ಮತ್ತು ನಟಿ ಮಹಿಮಾ ಚೌಧರಿ ಅವರೊಡನೆ ಈ ಚಿತ್ರದಲ್ಲಿ ನಟಿಸಲಿದ್ದಾರೆ.


ಸಂಜಯ್ ಗಾಂಧಿ ಪಾತ್ರದಲ್ಲಿ ವಿಶಾಕ್ ನಾಯರ್
"ಶ್ರೀಮತಿ ಇಂದಿರಾ ಗಾಂಧಿಯವರ ಜೀವನದಲ್ಲಿ ಬರುವ ಅತ್ಯಂತ ಮುಖ್ಯವಾದ ವ್ಯಕ್ತಿಗಳಲ್ಲಿ ಸಂಜಯ್ ಗಾಂಧಿ ಸಹ ಒಬ್ಬರಾಗಿದ್ದರು. ನನಗೆ ಮುಗ್ಧತೆಯನ್ನು ಹಾಗೆಯೇ ಉಳಿಸಿಕೊಂಡಿರುವ ಆದರೆ ಅದೇ ಸಮಯದಲ್ಲಿ ಚಾಣಾಕ್ಷನಾಗಿರುವ ಒಬ್ಬ ವ್ಯಕ್ತಿಯ ಪಾತ್ರವನ್ನು ನಿರ್ವಹಿಸುವ ಯಾರಾದರೂ ನನಗೆ ಬೇಕಾಗಿದ್ದರು. ಅವನು ಅಷ್ಟೇ ಸಮರ್ಥ ಮತ್ತು ಅಷ್ಟೇ ಭಾವೋದ್ರಿಕ್ತ ವ್ಯಕ್ತಿ ಸಹ ಆಗಿದ್ದು, ಸಂಜಯ್ ಹೆಚ್ಚು ಕಡಿಮೆ ತನ್ನ ತಾಯಿಯಂತೆಯೇ" ಎಂದು ಕಂಗನಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ:  Varun Dhawan: ನಟ ವರುಣ್ ಧವನ್​ಗೆ ಈ ನಟಿಯೂ ಒಬ್ಬ ಕಾಂಪಿಟೇಟರ್‌ ಅಂತೆ! ಯಾರದು?


"ನಾನು ಆರು ತಿಂಗಳಿಗೂ ಹೆಚ್ಚು ಕಾಲ ಈ ಪಾತ್ರಕ್ಕಾಗಿ ಒಬ್ಬ ಒಳ್ಳೆಯ ನಟನನ್ನು ಹುಡುಕಿದೆ ಮತ್ತು ಅವ‌ನೀತ್ ನಂತರ ನಾನು ದೊಡ್ಡ ಪ್ರಮಾಣದ ಚಿತ್ರದಲ್ಲಿ ಹೊಸ ಮುಖವನ್ನು ಲಾಂಚ್ ಮಾಡುತ್ತಿದ್ದೇನೆ ಎಂದು ನನಗೆ ಸಂತೋಷವಾಗಿದೆ. ವಿಶಾಕ್ ಒಬ್ಬ ಅದ್ಭುತ ನಟ ಮತ್ತು ಹಲವಾರು ಮಲಯಾಳಂ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇದು ಅವರ ಮೊದಲ ಹಿಂದಿ ಚಿತ್ರವಾಗಿದೆ ಮತ್ತು ಅವರು ಸಂಜಯ್ ಗಾಂಧಿ ಅವರ ಪಾತ್ರಕ್ಕೆ ಉತ್ತಮವಾಗಿ ನ್ಯಾಯ ಒದಗಿಸುತ್ತಾರೆ ಎಂದು ನನಗೆ ಖಾತ್ರಿಯಿದೆ" ಎಂದು ಕಂಗನಾ ಹೇಳಿದರು.


ಬಹುತೇಕವಾಗಿ ಎಲ್ಲರಿಗೂ ತಿಳಿದಿರುವಂತಹ ವಿಚಾರವೆಂದರೆ ಈ ಚಿತ್ರ, ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯ ಕಥಾ ಹಂದರವನ್ನು ಹೊಂದಿದೆ. ಅದು 1975 ರಿಂದ 1977 ರವರೆಗೆ 21 ತಿಂಗಳ ಕಾಲ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ಹೇರಿದ್ದರು, ಆಗ ಜನರ ಮೂಲಭೂತ ಹಕ್ಕುಗಳನ್ನು ಕಟ್ಟುನಿಟ್ಟಾದ ನಿರ್ಬಂಧಗಳಿಗೆ ಒಳಪಡಿಸಲಾಗಿತ್ತು.


ಚಿತ್ರದಲ್ಲಿ ನಟಿಸುವ ಬಗ್ಗೆ ಏನ್ ಹೇಳಿದ್ದಾರೆ 
ಇನ್ನು ಈ ಪಾತ್ರದ ಕುರಿತು ಮಾತನಾಡಿರುವ ನಾಯರ್, “ತಮ್ಮ ಮೊದಲ ಹಿಂದಿ ಚಿತ್ರದಲ್ಲಿ ಅದರಲ್ಲೂ ಐತಿಹಾಸಿಕವಾಗಿ ಮಹತ್ವದ ಮತ್ತು ನಿಗೂಢ ವ್ಯಕ್ತಿಯಾಗಿ ನಟಿಸಲು ನಾನು ತುಂಬಾನೇ ಉತ್ಸುಕನಾಗಿದ್ದೇನೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.


"ಇಂತಹ ಅದ್ಭುತ ಚಿತ್ರದ ಭಾಗವಾಗಲು ಅವಕಾಶ ಸಿಕ್ಕಿದ್ದಕ್ಕಾಗಿ ನಾನು ನಿಜವಾಗಿಯೂ ಆಭಾರಿಯಾಗಿದ್ದೇನೆ. ಕಂಗನಾ ಅವರೊಂದಿಗೆ ಕೆಲಸ ಮಾಡುವುದು ಸಂತೋಷ ಪಡುವ ವಿಷಯವಾಗಿದ್ದು, ಇದೊಂದು ಅದ್ಭುತ ಕಲಿಕೆಯ ಅನುಭವ ಸಹ ನನಗೆ. ಅಂತಹ ನುರಿತ ಕಲಾವಿದರೊಂದಿಗೆ ಕೆಲಸ ಮಾಡುವುದು ಸಾಕಷ್ಟು ವಿಷಯಗಳನ್ನು ನನಗೆ ಕಲಿಯಲು ಅವಕಾಶ ಮಾಡಿಕೊಡುತ್ತದೆ. ಇಲ್ಲಿ ನನ್ನ ನಟನೆಯನ್ನು ಇನ್ನಷ್ಟು ತೋರಿಸುವ ಅವಕಾಶ ನನಗೆ ಸಿಗುತ್ತದೆ, ಇದುವರೆಗೂ ಇಂತಹ ಪಾತ್ರಗಳಲ್ಲಿ ನಟಿಸುವ ಅವಕಾಶಗಳು ನನಗೆ ಅಷ್ಟಾಗಿ ಸಿಕ್ಕಿಲ್ಲ" ಎಂದು ನಾಯರ್ ಹೇಳಿದರು.


ಇದನ್ನೂ ಓದಿ:  Abhishek Bachchan: ಅಪ್ಪನ ಶೂಟಿಂಗ್​​ ಸೆಟ್​​ಗೆ ಸರ್​ಪ್ರೈಸ್ ವಿಸಿಟ್ ಕೊಟ್ಟ ಅಭಿಷೇಕ್ ಬಚ್ಚನ್


‘ಎಮರ್ಜೆನ್ಸಿ’ ಚಿತ್ರವು ಮಣಿಕರ್ಣಿಕಾ ಫಿಲ್ಮ್ಸ್ ಪ್ರೆಸೆಂಟೇಶನ್ ಬ್ಯಾನರ್ ಅಡಿಯಲ್ಲಿ ಮೂಡಿ ಬರಲಿದ್ದು, ಚಿತ್ರವನ್ನು ರೇಣು ಪಿಟ್ಟಿ ಮತ್ತು ರನೌತ್ ಅವರು ನಿರ್ಮಿಸಿದ್ದಾರೆ. ಚಿತ್ರಕತೆ ಮತ್ತು ಸಂಭಾಷಣೆಯನ್ನು ರಿತೇಶ್ ಷಾ ಅವರು ಬರೆದಿದ್ದಾರೆ.

Published by:Ashwini Prabhu
First published: