Vijay Devarakonda: ಅಭಿಮಾನಿಗಳಿಗೆ ಏನೋ ಹೇಳಿದ್ದಾರೆ ವಿಜಯ್ ದೇವರಕೊಂಡ, ನೋಡಿ ಇಲ್ಲಿ

ಹುಟ್ಟುಹಬ್ಬದ ದಿನದ ನಂತರ ನಟ ವಿಜಯ್ ದೇವರಕೊಂಡ ಅವರು ವಿಶೇಷ ಪೋಸ್ಟ್ ನಲ್ಲಿ ತಮ್ಮ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದವನ್ನು ಅರ್ಪಿಸಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ಒಂದು ಕೃತಜ್ಞತಾ ಪತ್ರವನ್ನು ಸಹ ಪೋಸ್ಟ್ ಮಾಡಿದ್ದಾರೆ

ವಿಜಯ ದೇವರಕೊಂಡ

ವಿಜಯ ದೇವರಕೊಂಡ

  • Share this:
ಕೆಲವು ವಾರಗಳ ಹಿಂದಷ್ಟೇ ತೆಲುಗು ನಟಿ ಸಮಂತಾ (Telugu actress Samantha) ಅವರ ಹುಟ್ಟುಹಬ್ಬಕ್ಕೆ (Birthday) ತಮ್ಮ ಚಿತ್ರದ ಚಿತ್ರೀಕರಣ ನಡೆಯುವ ಸ್ಥಳದಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಸರ್‌ಪ್ರೈಸ್ (Surprise) ನೀಡಿದ್ದ ತೆಲುಗು ನಟ ವಿಜಯ್ ದೇವರಕೊಂಡ (Vijay Devokonda) ಅವರು ಮೊನ್ನೆ ಎಂದರೆ ಮೇ 9ನೇ ತಾರೀಖಿನಂದು ತಮ್ಮ ಹುಟ್ಟುಹಬ್ಬವನ್ನು ಸಹ ಆಚರಿಸಿಕೊಂಡರು. ನಟ ವಿಜಯ್ ದೇವರಕೊಂಡ ತಮ್ಮ ಬಹು ನಿರೀಕ್ಷಿತ ಚಿತ್ರ ‘ಲಿಗರ್’ (Liger) ಮತ್ತು ನಟಿ ಸಮಂತಾ ರುತ್ ಪ್ರಭು ಅವರೊಂದಿಗೆ ತಾತ್ಕಾಲಿಕವಾಗಿ ವಿಡಿ11 ಎಂದು ಹೆಸರಿಸಲಾದ ಅವರ ಮುಂದಿನ ಚಿತ್ರಗಳ ಚಿತ್ರೀಕರಣ ಮುಗಿದು ಬಿಡುಗಡೆಯ ದಿನಾಂಕ ಯಾವಾಗ ಬರುತ್ತೋ ಅಂತ ಅಭಿಮಾನಿಗಳು ತುಂಬಾನೇ ಕಾತುರತೆಯಿಂದ ಕಾಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ ಹರಿಸಿದ ಅಭಿಮಾನಿಗಳು
ಸೋಮವಾರ ಎಂದರೆ ಮೇ 9ನೇ ತಾರೀಖಿನಂದು ನಟ ವಿಜಯ್ ಅವರು ವಿಡಿ11 ಚಿತ್ರದ ಸೆಟ್ ನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ನೆಚ್ಚಿನ ನಟನಿಗೆ ಅಭಿಮಾನಿಗಳು ಅವರ ಪ್ರೀತಿ ಮತ್ತು ಶುಭಾಶಯಗಳ ಮಹಾಪೂರವನ್ನೇ ಹರಿಸಿದರು ಎಂದು ಹೇಳಬಹುದು.

ವಿಶೇಷ ಪೋಸ್ಟ್ ನಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ನಟ
ಅವರ ಹುಟ್ಟುಹಬ್ಬದ ದಿನದ ನಂತರ ನಟ ವಿಜಯ್ ದೇವರಕೊಂಡ ಅವರು ವಿಶೇಷ ಪೋಸ್ಟ್ ನಲ್ಲಿ ತಮ್ಮ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದವನ್ನು ಅರ್ಪಿಸಿದ್ದಾರೆ. ಮಂಗಳವಾರ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ನಟ ತನ್ನ ತಾಯಿ ಮಾಧವಿ ದೇವರಕೊಂಡ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡು ಅದಕ್ಕೆ ಒಂದು ಕೃತಜ್ಞತಾ ಪತ್ರವನ್ನು ಸಹ ಪೋಸ್ಟ್ ನಲ್ಲಿ ಲಗತ್ತಿಸಿದ್ದಾರೆ.

ಇದನ್ನೂ ಓದಿ: Mahesh Babu - Rajamouli ಮುಂದಿನ ಸಿನಿಮಾದ ಬಿಗ್​ ಅಪ್​ಡೇಟ್​!​ ಅಂಡ್ವೆಂಚರ್​ ಥ್ರಿಲ್ಲರ್​ ಕಥೆ ರೆಡಿಯಾಗ್ತಿದ್ಯಂತೆ

ಪೋಸ್ಟ್ ನ ಶೀರ್ಷಿಕೆಯಲ್ಲಿ ಇದ್ದಿದ್ದೆನು?
ಈ ಪೋಸ್ಟ್ ನ ಶೀರ್ಷಿಕೆಯಲ್ಲಿ, ನಟ ವಿಜಯ್ ದೇವರಕೊಂಡ ಅವರು ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಾ "ಇದು ಯಾರು 15 ವರ್ಷದವರಾಗಿದ್ದಾಗ ತಮ್ಮ ಹುಟ್ಟುಹಬ್ಬವನ್ನು ಆಚರಿಸುವುದನ್ನು ನಿಲ್ಲಿಸಿದರೋ ಅವರಿಗಾಗಿ, ಇದು - ನಿಮ್ಮ ಪ್ರೀತಿ ನನಗೆ ಅವರ ಬಗ್ಗೆ ಕಾಳಜಿ ವಹಿಸುವಂತೆ ಮಾಡಿದೆ.




8 ವರ್ಷಗಳ ಹಿಂದೆ, ನನ್ನ ಹೆಸರು, ನನ್ನ ಅಸ್ತಿತ್ವದ ಬಗ್ಗೆ ನಿಮಗೆ ಯಾರಿಗೂ ತಿಳಿದಿರಲಿಲ್ಲ, ಇಂದು ನೀವು ನನ್ನನ್ನು ಹುರಿದುಂಬಿಸುತ್ತೀರಿ, ನನ್ನನ್ನು ಬೆಂಬಲಿಸುತ್ತೀರಿ, ನನಗಾಗಿ ಹೋರಾಡುತ್ತೀರಿ, ನನ್ನನ್ನು ನಂಬುತ್ತೀರಿ ಮತ್ತು ನಿಮ್ಮಲ್ಲಿ ಬಹಳಷ್ಟು ಜನರು ನನಗೆ ಬೇಷರತ್ತಾದ ಪ್ರೀತಿಯನ್ನು ನೀಡುತ್ತೀರಿ. ಅದನ್ನು ಹಿಂತಿರುಗಿಸಲಾಗುವುದು ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಒಂದಲ್ಲ ಒಂದು ರೀತಿಯಲ್ಲಿ, ನಾನು ನಿಮ್ಮಿಂದ ಅನುಭವಿಸುವ ಪ್ರೀತಿಯನ್ನು ನೀವು ನನ್ನಿಂದ ಅನುಭವಿಸುವಿರಿ. ಆರೋಗ್ಯವಾಗಿರಿ ಮತ್ತು ಸಂತೋಷವಾಗಿರಿ” ಎಂದು ಬರೆದಿದ್ದಾರೆ.

ಲಿಗರ್ ಚಿತ್ರದ ಮೊದಲ ಹಾಡು ಬಿಡುಗಡೆ
ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಲೈಗರ್ ಹಂಟ್ ಎಂಬ ಹೆಸರಿನ ಲಿಗರ್ ಚಿತ್ರದ ಮೊದಲ ಹಾಡನ್ನು ಸಹ ಬಿಡುಗಡೆ ಮಾಡಲಾಯಿತು. ವಿಜಯ್ ದೇವರಕೊಂಡ ಈ ಹಾಡನ್ನು ತಮ್ಮ ಅಭಿಮಾನಿಗಳಿಗೆ ಅರ್ಪಿಸುವ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಕ್ಲಿಪ್ ನಲ್ಲಿ ನಟ ಮಾತನಾಡುತ್ತಾ "ನೀವು ಚಿಕ್ಕ ವಯಸ್ಸಿನಿಂದಲೇ ನಿಮ್ಮ ಆಹಾರಕ್ಕಾಗಿ ಹೋರಾಡಬೇಕಾದಾಗ, ನೀವು ಅದನ್ನು ಪಡೆಯಲು ಕಲಿಯುತ್ತೀರಿ. ನಾನು ಜಗತ್ತಿನಲ್ಲಿ ನನ್ನ ಸ್ಥಾನ, ಭದ್ರತೆ ಮತ್ತು ಗೌರವದ ಪ್ರತಿಯೊಂದು ಅಂಶಕ್ಕಾಗಿ ಹೋರಾಡಬೇಕಾಯಿತು. ಮಾರಾಟವಾದ ಪ್ರತಿಯೊಂದು ಟಿಕೆಟ್ ಗಾಗಿ ನಾನು ಹೋರಾಡಬೇಕಾಯಿತು. ನಾನು ನಿಮ್ಮೆಲ್ಲರಿಗಾಗಿ, ನಿಮ್ಮ ಪ್ರೀತಿಗಾಗಿ, ನಿಮ್ಮ ನಂಬಿಕೆಗಾಗಿ, ನಿಮ್ಮ ಬೆಂಬಲಕ್ಕಾಗಿ ಹೋರಾಡಬೇಕಾಯಿತು.

ಇದನ್ನೂ ಓದಿ:  Namita: 41ನೇ ವಯಸ್ಸಿಗೆ ತಾಯಿಯಾಗ್ತಿದ್ದಾರೆ ಕನ್ನಡದ ಖ್ಯಾತ ನಟಿ! ಹುಟ್ಟುಹಬ್ಬದಂದೇ ಗುಡ್​ ನ್ಯೂಸ್​ ಕೊಟ್ಟ ನಮಿತಾ

ನಾನು ಪ್ರತಿದಿನ ನಿಮ್ಮ ಪ್ರೀತಿಯನ್ನು ಅನುಭವಿಸುತ್ತೇನೆ. ನಾನು ಇಂದು ವಿಶೇಷವಾಗಿ ಅದನ್ನು ಅನುಭವಿಸುತ್ತೇನೆ. ನಿನಗಾಗಿ ಮತ್ತು ನಿನ್ನ ಕುಟುಂಬಗಳಿಗಾಗಿ ಹೋರಾಡುತ್ತಿರುವ ನಿಮ್ಮೆಲ್ಲರಿಗೂ ಹೇಳುವ ಮಾತು ಎಂದರೆ ನಿಮ್ಮ ಹೋರಾಟವನ್ನು ಎಂದಿಗೂ ನಿಲ್ಲಿಸಬೇಡಿ. ಇಂದು ನಾನು ಲೈಗರ್ ಹಂಟ್ ಎಂಬ ಈ ಹಾಡನ್ನು ನಿಮಗೆಲ್ಲರಿಗೂ ಸಮರ್ಪಿಸುತ್ತೇನೆ" ಎಂದು ಹೇಳಿದ್ದಾರೆ.

ಲಿಗರ್ ಚಿತ್ರದಲ್ಲಿ ವಿಜಯ್ ಜೊತೆಗೆ ನಟಿ ಅನನ್ಯಾ ಪಾಂಡೆ ಅವರು ನಟಿಸಲಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದಲ್ಲಿ ಮೈಕ್ ಟೈಸನ್, ರೋನಿತ್ ರಾಯ್ ಮತ್ತು ರಮ್ಯಾ ಕೃಷ್ಣ ಕೂಡ ನಟಿಸಲಿದ್ದಾರೆ.
Published by:Ashwini Prabhu
First published: