ನಟ, ನಟಿಯರು ಅಂದ್ರೆ ಅಭಿಮಾನಿಗಳಿಗೆ ತುಂಬಾನೇ ಇಷ್ಟ. ತಮ್ಮ ನೆಚ್ಚಿನ ನಟಿ ಏನ್ ಮಾಡ್ತಿದ್ದಾರೆ? ಅವರ ಮುಂದಿನ ಸಿನಿಮಾ ಯಾವುದು, ಮದುವೆ ಯಾಕ್ ಆಗ್ತಾ ಇಲ್ಲ? ಹೀಗೆ ನೂರಾರು ಪ್ರಶ್ನೆಗಳು ಹುಟ್ಟಿ ಕೊಳ್ಳುತ್ತವೆ. ಸದ್ಯ ನಟಿ ಹರಿಪ್ರಿಯಾ (Haripriya) ಸುದ್ದಿಯಲ್ಲಿದ್ದಾರೆ. ಅದು ಸಿನಿಮಾದಿಂದ ಅಲ್ಲ. ಅವರ ವೈಯಕ್ತಿಕ ಜೀವನದಿಂದ. ಹೌದು ಹರಿಪ್ರಿಯಾ ಅವರು ಮೂಗು ಚುಚ್ಚಿಸಿಕೊಂಡಿದ್ದಾರೆ (Nose Ring). ಇದು ಏನ್ ದೊಡ್ಡ ಸುದ್ದಿ ಅಲ್ಲ ಎಂದು ಹಲವರು ಹೇಳಬಹುದು. ಆದ್ರೆ ಹರಿಪ್ರಿಯಾ ಅಭಿಮಾನಿಗಳಿಗೆ ಇದು ದೊಡ್ಡ ಸುದ್ದಿ ಆಗಿರಬಹುದು. ಯಾಕಂದ್ರೆ ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುವುದರ ಹಿಂದಿನ ಉದ್ದೇಶ ಏನಿರಬಹುದು ಎಂದು ಎಲ್ಲರೂ ಕೇಳ್ತಾ ಇದ್ದಾರೆ. ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದೇ ಮದುವೆಗಂತೆ (Marriage). ಅದು ನಟ ವಸಿಷ್ಠ ಸಿಂಹ (Vasishta Simha) ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರಂತೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ.
ಮೂಗು ಚುಚ್ಚಿಸಿಕೊಂಡ ಹರಿಪ್ರಿಯಾ
ಹರಿಪ್ರಿಯಾ ಅವರು ಮೂಗು ಚುಚ್ಚಿಸಿಕೊಂಡಿದ್ದಾರೆ. ಇದ್ದಕ್ಕಿದ್ದ ಹಾಗೇ ನಟಿ ಯಾಕ್ ಮೂಗು ಚುಚ್ಚಿಸಿಕೊಂಡ್ರು ಎಂದು ಎಲ್ಲರೂ ಕುತೂಹಲವಾಗಿದ್ದಾರೆ. ನಟಿ ಮೂಗು ಸೇರಿದ್ದಕ್ಕೆ ನಾನೇ ಧನ್ಯ ಎಂದು ಮೂಗುತಿ ಹೇಳುವಷ್ಟು ಸುಂದರವಾಗಿ ಕಾಣ್ತಿದ್ದಾರೆ ಹರಿಪ್ರಿಯಾ. ಇಷ್ಟು ದಿನದ ಚೆಂದಕ್ಕೆ ಮತ್ತುಷ್ಟು ಅಂದವನ್ನು ಹೆಚ್ಚಿಸಿದೆ ಮೂಗುತಿ.
ಇನ್ಸ್ಟಾಗ್ರಾಂನಲ್ಲಿ ಪೋಸ್ಟ್
ನಟಿ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೂಗು ಚುಚ್ಚುವಾಗ ಏನ್ ಅನ್ನಿಸಿತು, ಕಣ್ಣಲ್ಲಿ ನೀರು ಬಂತು ಎಂದು ವಿಡಿಯೋ ಶೇರ್ ಮಾಡಿದ್ದಾರೆ. ಅದನ್ನು ನೋಡಿದ ಅಭಿಮಾನಿಗಳು ತುಂಬಾ ಖುಷಿ ಪಟ್ಟಿದ್ದಾರೆ. ಕಾರಣ ತಿಳಿಸಿ ಎಂದು ಕೇಳಿದ್ದಾರೆ.
ಇದನ್ನೂ ಓದಿ: Kannadathi: 5 ವರ್ಷದವರೆಗೆ ಭುವಿ ಆಸ್ತಿ ವರ್ಗಾಯಿಸುವಂತಿಲ್ಲ! ರತ್ನಮಾಲಾ ಪ್ರೀತಿಯ ಹುಡುಗಿಗೆ ಇದೆಂಥಾ ಫಜೀತಿ?
ಮೂಗು ಚುಚ್ಚಿಸುವಾಗ ಜೊತೆಗಿರುವ ವಸಿಷ್ಠ ಸಿಂಹ
ನಟಿ ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುವಾಗ ವಸಿಷ್ಠ ಸಿಂಹ ಜೊತೆಗಿದ್ದಾರೆ. ಅಲ್ಲದೇ ಹರಿಪ್ರಿಯಾ ನೋವಿನಿಂದ ಕಣ್ಣಿರು ಹಾಕಿದಾಗ, ಕಣ್ಣು ಒರೆಸಿ, ತಲೆಗೆ ಪ್ರೀತಿಯಿಂದ ಮುತ್ತನ್ನು ಇಟ್ಟಿದ್ದಾರೆ. ಏನು ಆಗಲ್ಲ ಎನ್ನುವ ವಸಿಷ್ಠ ವಾಯ್ಸ್ ಕೇಳ್ತಾ ಇದೆ. ಇದು ಇವರಿಬ್ಬರು ಮದುವೆ ಆಗ್ತಿದ್ದಾರಾ ಎಂಬ ಅನುಮಾನಗಳನ್ನು ಹುಟ್ಟಿಸಿದೆ.
ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಸದ್ಯದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಂತೆ. ಅದಕ್ಕೆ ದುಬೈನಲ್ಲಿ ಶಾಪಿಂಗ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರು ಆಗಾಗ ಡ್ಯಾನ್ಸ್ ಮಾಡಿರೋ ರೀಲ್ಸ್ ಶೇರ್ ಮಾಡ್ತಾ ಇದ್ರು. ಈಗ ಮದುವೆ ಆಗುತ್ತಾರೆ ಎಂದು ಸುದ್ದಿ ಹರಡುತ್ತಿದೆ.
2007ರಲ್ಲಿ ಚಿತ್ರರಂಗಕ್ಕೆ ಎಂಟ್ರಿ
ನಟಿ ಹರಿಪ್ರಿಯಾ ಅವರು 2007ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಂದಿನಿಂದ ತಾವು ನಟಿಸಿದ ಸಿನಿಮಾಗಳಿಂದ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ನಟ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಶ್ರೀಮುರಳಿ ಮುಂತಾದ ಸ್ಟಾರ್ ನಟರೊಂದಿಗೆ ಹರಿಪ್ರಿಯಾ ನಟಿಸಿದ್ದಾರೆ.
ಸ್ಯಾಂಡಲ್ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹರಿಪ್ರಿಯಾ ನಟನೆಯ ಪೆಟ್ರೋಮ್ಯಾಕ್ಸ್ ಸಿನಿಮಾ ಈ ವರ್ಷ ಬಿಡುಗಡೆ ಆಯಿತು. ಈ ಚಿತ್ರಕ್ಕೆ ವಿಜಯ್ ಪ್ರಸಾದ್ ನಿರ್ದೇಶನ ಮಾಡಿದ್ದರು.
ಇದನ್ನೂ ಓದಿ: Lakshana: ಮೌರ್ಯನನ್ನು ಕೊಂದೇ ಬಿಟ್ನಾ ಚಂದ್ರಶೇಖರ್, ನಕ್ಷತ್ರಾಳೇ ಸಾಕ್ಷಿ ಹೇಳ್ತಾಳಾ?
ಒಟ್ಟಲ್ಲಿ ಇಬ್ಬರ ಜೋಡಿ ಸೂಪರ್ ಎಂದಿದ್ದಾರೆ ಅಭಿಮಾನಿಗಳು. ಆದ್ರೆ ಈ ಬಗ್ಗೆ ಇಬ್ಬರು ಅಧಿಕೃತ ಮಾಹಿತಿ ನೀಡಬೇಕಿದೆ. ಮೂಗುತಿ ಸುಂದರಿ ಬೇಗ ಹಸೆಮಣೆ ಏರಲಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ