ಸ್ಯಾಂಡಲ್ವುಡ್ನ ನಟಿ ಹರಿಪ್ರಿಯಾ (Haripriya) ಹಾಗೂ ನಟ ವಸಿಷ್ಠ ಸಿಂಹ (Vasishta Simha) ಎಂಗೇಜ್ ಆಗಿದ್ದು, ಹಸೆಮಣೆ ಏರಲು ತುದಿಗಾಲಲ್ಲಿ ನಿಂತಿದ್ದಾರೆ. ಡಿಸೆಂಬರ್ 3 ರಂದು ಹರಿಪ್ರಿಯಾ ನಿವಾಸದಲ್ಲಿ ಇಬ್ಬರಿಗು ನಿಶ್ಚಿತಾರ್ಥ ನಡೆದಿದೆ. ಕುಟುಂಬಸ್ಥರು, ಸ್ನೇಹಿತರು ಮಾತ್ರ ಈ ನಿಶ್ಚಿತಾರ್ಥದಲ್ಲಿ (Engagement) ಭಾಗವಹಿಸಿದ್ದರು. ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹರಿಪ್ರಿಯಾ ಅಧಿಕೃತವಾಗಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ರು. ಇದೀಗ ವಸಿಷ್ಠ ಸಿಂಹ ತನ್ನ ಪ್ರೀತಿ ಹುಡುಗಿ ಹರಿಪ್ರಿಯಾ ಜೊತೆ ಜಾಲಿ ಮೂಡ್ನಲ್ಲಿದ್ದು, ಇಯರ್ ಎಂಡ್ಗೆ ಹಾಲಿ ಡೇ ಟ್ರಿಪ್ಹೋಗಿರುವ ಜೋಡಿ ಮಲ್ಪೆಯಲ್ಲಿ ಸನ್ ಸೆಟ್ ನೋಡಿ ಎಂಜಾಯ್ ಮಾಡಿದ್ದಾರೆ.
ಮಲ್ಪೆ ಸಮುದ್ರದ ದಡದಲ್ಲಿ ಸಿಂಹ-ಪ್ರಿಯಾ ಜೋಡಿ
ಸ್ಯಾಂಡಲ್ವುಡ್ನ ತಾರಾ ಜೋಡಿಗಳ ಲಿಸ್ಟ್ಗೆ ಹರಿಪ್ರಿಯಾ ಹಾಗೂ ವಶಿಷ್ಠ ಸಿಂಹ ಕೂಡ ಸೇರ್ಪಡೆಗೊಳ್ಳುತ್ತಿದ್ದಾರೆ. ಬ್ಯುಟಿಫುಲ್ ಜೋಡಿ ಇದೀಗ ಕರಾವಳಿಯ ಕಡಲತೀರದಲ್ಲಿ ಸನ್ ಸೆಟ್ ನೋಡಿ ಖುಷಿ ಪಟ್ಟಿದ್ದಾರೆ. ಮಲ್ಪೆ ಬೀಚ್ನಲ್ಲಿ ಕೈ ಕೈ ಹಿಡಿದು ಓಡಾಡಿದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ, ವಿಡಿಯೋ ಕೂಡ ಮಾಡಿದ್ದಾರೆ. ಈ ವಿಡಿಯೋಗೆ ಸುಂದರವಾದ ಸಾಂಗ್ ಸೆಟ್ ಮಾಡಿ ವಸಿಷ್ಠ ಸಿಂಹ ನಮ್ಮ ಇನ್ಸ್ಟಾ ಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಪ್ರೀತಿಸಿ ವಿವಾಹವಾಗುತ್ತಿದ್ದಾರೆ. ಇಬ್ಬರು ಕೂಡ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಈ ಜೋಡಿ ಒಂದಾಗ್ತಿರುವ ಸುದ್ದಿ ಕೇಳಿದ ಅಭಿಮಾನಿಗಳು ಕೂಡ ವಿಶ್ ಮಾಡಿ ಹಾರೈಸಿದ್ದಾರೆ.
ವಿಡಿಯೋ ಮೂಲಕ ಲವ್ ಸ್ಟೋರಿ ಹೇಳಿ ಹರಿಪ್ರಿಯಾ
ಕ್ರಿಸ್ಟಲ್ ನನ್ನ ಜೀವನಕ್ಕೆ ಬಂದ ನಂತರ ಒಂದು ವರ್ಷವಾಗಿದೆ. ಲಕ್ಕಿ (ನನ್ನ ಗೋಲ್ಡನ್ ರಿಟ್ರೈವರ್) ಹೋದ ಬಳಿಕ ಅವನು ವಾಪಸ್ ಬರ್ತಾನೆ ಎಂದು ಕನಸು ಕಂಡಿದ್ದೆ, ಹಾಗೇ ಕ್ರಿಸ್ಟಲ್ ಮೂಲಕ ನಮ್ಮ ಮನೆಗೆ ಬಂದ, ವಸಿಷ್ಠ ಸಿಂಹ ಅವರು ಕ್ರಿಸ್ಟಲ್ ಅನ್ನು ನನಗೆ ಉಡುಗೊರೆಯಾಗಿ ನೀಡಿದ್ರು ಎಂದು ಹರಿಪ್ರಿಯಾ ಬರೆದುಕೊಂಡಿದ್ದಾರೆ.
ಕ್ರಿಸ್ಟಲ್ ಅತ್ಯಂತ ಸ್ಪೆಷಲ್
ಮತ್ತೊಂದು ಆಶ್ಚರ್ಯ ಅಂದ್ರೆ ಕ್ರಿಸ್ಟಲ್ ಕೂಡ ಲಕ್ಕಿ ಹುಟ್ಟಿದ ದಿನವೇ ಜನಿಸಿದ್ದಾನೆ. ಹೀಗಾಗಿ ಕ್ರಿಸ್ಟಲ್ ಅತ್ಯಂತ ವಿಶೇಷವಾಗಿದೆ. ಮನೆಗೆ ಅವನ ಆಗಮನ ಕೂಡ ಸ್ಪೆಷಲ್ ಆಗಿತ್ತು ಎಂದು ಹರಿಪ್ರಿಯಾ ಹೇಳಿದ್ದಾರೆ.
ಇದನ್ನೂ ಓದಿ: Vasishta Simha: ಜೊತೆಯಾಗಿ ಒಂದೇ ಒಂದು ಸಿನಿಮಾ ಮಾಡಿಲ್ಲ! ವಸಿಷ್ಠ-ಹರಿಪ್ರಿಯಾ ಲವ್ ಸ್ಟಾರ್ಟ್ ಆಗಿದ್ದು ಹೇಗೆ?
ಕ್ರಿಸ್ಟಲ್ ಹೊತ್ತು ತಂದಿದ್ದ ಪ್ರೀತಿಯ ಸಂದೇಶ
ವಸಿಷ್ಠ ಸಿಂಹ ಕೊಟ್ಟ ಕ್ರಿಸ್ಟಲ್ನ ಎದೆಯ ಮೇಲೆ ಲವ್ ಸಿಂಬಲ್ ಹೊತ್ತು ತಂದಿದೆ. ಅದು ಕ್ರಿಸ್ಟಲ್ನ ಎದೆಯ ಮೇಲಿದ್ದ ಬರ್ತ್ ಮಾರ್ಕ್, ಆಗಾಲೇ ನನಗೆ ಸಿಂಹನ ಮೊದಲ ಗಿಫ್ಟ್ ಹಿಂದಿನ ಬಿಗ್ ಸೀಕ್ರೇಟ್ ತಿಳಿಯಿತು ಎಂದು ಹೇಳುತ್ತಾ ಹರಿಪ್ರಿಯಾ ನಾಚಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ