• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Urfi Javed: ಅಯ್ಯಯ್ಯೋ, ಅಮ್ಮಯ್ಯೋ ಇಂಥಾ ಡ್ರೆಸ್ ನೋಡೇ ಇಲ್ಲ! ಉರ್ಫಿ ಹೊಸ ಅವತಾರ ಕಂಡು ಫ್ಯಾನ್ಸ್‌ಗೆ ಶಾಕ್

Urfi Javed: ಅಯ್ಯಯ್ಯೋ, ಅಮ್ಮಯ್ಯೋ ಇಂಥಾ ಡ್ರೆಸ್ ನೋಡೇ ಇಲ್ಲ! ಉರ್ಫಿ ಹೊಸ ಅವತಾರ ಕಂಡು ಫ್ಯಾನ್ಸ್‌ಗೆ ಶಾಕ್

ಉರ್ಫಿ ಜಾವೇದ್

ಉರ್ಫಿ ಜಾವೇದ್

ಐಸ್​ ಕ್ರೀಮ್​ ಕೋನ್​ನಂತಹ ಬಟ್ಟೆಯಲ್ಲಿ ಉರ್ಫಿ ಜಾವೇದ್​ ಮೈ ಮುಚ್ಚಿಕೊಂಡು ಬಂದಿದ್ದಾರೆ. ಉರ್ಫಿ ಹೊಸ ಅವತಾರ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

 • News18 Kannada
 • 2-MIN READ
 • Last Updated :
 • Karnataka, India
 • Share this:

ಬಿಗ್ ಬಾಸ್ ಒಟಿಟಿಯಿಂದ ಫೇಮಸ್ ಆಗಿರೋ ಉರ್ಫಿ ಜಾವೇದ್ (Urfi Javed) ಸೋಶಿಯಲ್​ ಮೀಡಿಯಾದಲ್ಲಿ (Social Media) ಸಖತ್ ಸುದ್ದಿಯಲ್ಲಿದ್ದಾರೆ. ತನ್ನ ಹೊಸ ಹೊಸ ವಿಡಿಯೋ, ಫೋಟೋಗಳ (Photo) ಮೂಲಕ ಸಂಚಲನ ಮೂಡಿಸಿದ್ದಾರೆ. ಉರ್ಫಿ ತನ್ನ ಡ್ರಸ್​ ಹಾಗೂ ಲುಕ್‌ನಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ (Fashion) ಸೆನ್ಸ್  ಇಷ್ಟಪಡುತ್ತಾರೆ. ಇನ್ನೂ ಕೆಲವೊಮ್ಮೆ ತನ್ನ ಫ್ಯಾಷನ್​ನಿಂದಲೇ ಉರ್ಫಿ ಭಾರೀ ಟ್ರೋಲ್‌ಗಳಿಗೆ ಗುರಿಯಾಗುತ್ತಾರೆ. ಈ ಬಾರಿ ಕೂಡ ವಿಚಿತ್ರ ಡ್ರೆಸ್ ಧರಿಸಿ ಜನರ ಮುಂದೆ ಬಂದಿದ್ದಾರೆ. ಉರ್ಫಿ ನೋಡಿದ ನೆಟ್ಟಿಗರು ಇದೇನಮ್ಮಾ ನಿನ್ನ ಅವತಾರ ಎನ್ನುತ್ತಿದ್ದಾರೆ.


actor urfi javed new video has gone viral on social media pvn


ಕೋನ್​ ರೀತಿ ಬಟ್ಟೆಯಲ್ಲಿ ಮೈ ಮುಚ್ಚಿಕೊಂಡು ಬಂದ ಉರ್ಫಿ


ಐಸ್​ ಕ್ರೀಮ್​ ಕೋನ್​ನಂತಹ ಬಟ್ಟೆಯಲ್ಲಿ ಉರ್ಫಿ ಜಾವೇದ್​ ಮೈ ಮುಚ್ಚಿಕೊಂಡು ಬಂದಿದ್ದಾರೆ. ಕಪ್ಪು ಹಾಗೂ ಗೋಲ್ಡ್​ ಕಲರ್​ನಿಂದ ಮಾಡಿದ ಕೋನ್​ನಂತಹ ಬಟ್ಟೆಯಲ್ಲಿ ಎದೆಯ ಭಾಗವನ್ನು ಉರ್ಫಿ ಮುಚ್ಚಿದ್ದು, ಬ್ಲ್ಯಾಕ್ ಸ್ಕರ್ಟ್​ ಧರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಉರ್ಫಿ ಈ ವಿಡಿಯೋವನ್ನು ಶೇರ್​ ಮಾಡಿದ್ದು, ಇದೀಗ ಸಖತ್ ವೈರಲ್ ಆಗಿದೆ.

View this post on Instagram


A post shared by Uorfi (@urf7i)

ನೆಟ್ಟಿಗರ ಬಗೆ ಬಗೆ ಕಮೆಂಟ್​

ಈ ವಿಡಿಯೋ, ಫೋಟೋಗಳು ಸಖತ್ ಟ್ರೋಲ್ ಆಗಿದೆ. ನೆಟ್ಟಿಗರು ಬಗೆ ಬಗೆ ಕಾಮೆಂಟ್ ಮಾಡಿದ್ದಾರೆ.  ಈ ಡ್ರೆಸ್​ ತೊಟ್ಟು ನೀನು ನನ್ನನ್ನು ಹಗ್ ಮಾಡಿಕೊಳ್ಳ ಬೇಡ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ಎದೆಂಥಾ ಡ್ರೆಸ್​ ಎಂದು ಕೆಲವರು ಟೀಕಿಸಿದ್ದಾರೆ. ಇನ್ನು ಉರ್ಫಿ ಅಭಿಮಾನಿಗಳು ಇಂಥಹ ಬಟ್ಟೆ ಧರಿಸಿ ಕ್ಯಾಮೆರಾ ಮುಂದೆ ಬರಲು ಧೈರ್ಯ ಬೇಕು ಎಂದು ಉರ್ಫಿ ಫ್ಯಾಷನ್​ನನ್ನು ಮೆಚ್ಚಿಕೊಂಡಾಡಿದ್ದಾರೆ.


ಉರ್ಫಿ ಜಾವೇದ್ ಹೊಸ ಅವತಾರ


 ಕೆಲ ದಿನಗಳ ಹಿಂದೆ ಉರ್ಫಿ ಜಾವೇದ್ ಹೊಸ ಪೋಸ್ಟ್ ಒಂದನ್ನು ಶೇರ್ ಮಾಡುವ ಮೂಲಕ ನೆಟ್ಟಿಗರಿಗೆ ಶಾಕ್ ನೀಡಿದ್ದಾರೆ. ಉರ್ಫಿ ಜಾವೇದ್ ಬಟ್ಟೆ ಹಾಕೋದೇ ಕಮ್ಮಿ ಈ ಬಾರಿ ಬಟ್ಟೆ ಹಾಕದೆ ಜಡೆಯನ್ನೇ ಬಟ್ಟೆಯಾಗಿಸಿ ವಿಡಿಯೋ ಮಾಡಿದ್ದಾರೆ. ಅಬ್ಬಾ ಏನ್​ ತಾಯಿ ನಿನ್ನ ಹೊಸ ಅವತಾರ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಜಡೆಯಲ್ಲೇ ಮೈ ಮುಚ್ಚಿಕೊಂಡ ಉರ್ಫಿ


ನಟಿ ಉರ್ಫಿ ಜಾವೇದ್​ ಜಡೆಯಲ್ಲಿ ತಮ್ಮ ಮೈ ಮುಚ್ಚಿಕೊಂಡಿದ್ದಾರೆ. ಅರೆ ಬರೆ ಬಟ್ಟೆ ತೊಟ್ಟು ವಿಡಿಯೋ ಮಾಡುತ್ತಿದ್ದ ಉರ್ಫಿ ಈ ಬಾರಿ ಬಟ್ಟೆಯನ್ನೇ ಹಾಕದೆ ಜಡೆಯಲ್ಲಿ ಮೈ ಮುಚ್ಚಿಕೊಂಡು ಜನರ ಮುಂದೆ ಬಂದು ನಿಂತಿದ್ದಾರೆ. ಉರ್ಫಿ ಹೊಸ ರೀಲ್ಸ್ ಇದೀಗ ಸಖತ್ ವೈರಲ್ ಆಗಿದೆ​.

View this post on Instagram


A post shared by Uorfi (@urf7i)

ಉರ್ಫಿ ವಿಡಿಯೋ ಸಖತ್ ಟ್ರೋಲ್​


ಉರ್ಫಿ ಜಾವೇದ್ ಅನೇಕ ವಿಡಿಯೋ ಹಾಗೂ ಫೋಟೋಗಳು ಸಖತ್ ಟ್ರೋಲ್ ಆಗಿದೆ. ಜಡೆಯಲ್ಲೇ ಮೈ ಮುಚ್ಚಿಕೊಂಡು ಬಂದ ಉರ್ಫಿ ಜಾವೇದ್​ ವಿಡಿಯೋ ಕೂಡ ಸಖತ್ ಟ್ರೋಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆ ಕಮೆಂಟ್ ಮಾಡ್ತಿದ್ದಾರೆ. ಏನ್ ತಾಯಿ ನಿನ್ನ ಅವತಾರ ಅಂತಿದ್ದಾರೆ. ಮೊದಲು ಬಟ್ಟಿ ಧರಿಸೋದು ಕಲಿ ಅಂತಿದ್ದಾರೆ. ಇನ್ನು ಕೆಲವರು ಉರ್ಫಿ  ಜಾವೇದ್​ ಬೋಲ್ಡ್​ ಅವಾತರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು