ಕೃಷಿ ಕೆಲಸದಲ್ಲಿ ಬ್ಯುಸಿಯಾದ ನಟ ಉಪೇಂದ್ರ ಮಗ ಆಯುಷ್​; ವಿಡಿಯೋ ವೈರಲ್

ನಟ ಉಪೇಂದ್ರ ತಮ್ಮ ಮಗ ಆಯುಷ್​ ಕೃಷಿ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಮಾಸ್ಕ್​ ಹಾಕಿಕೊಂಡು ಆಯುಷ್​ ಭೂಮಿ ಅಗೆಯುವ ಕೆಲಸದಲ್ಲಿ ತೊಡಗಿದ್ದಾರೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ.

news18-kannada
Updated:July 31, 2020, 2:43 PM IST
ಕೃಷಿ ಕೆಲಸದಲ್ಲಿ ಬ್ಯುಸಿಯಾದ ನಟ ಉಪೇಂದ್ರ ಮಗ ಆಯುಷ್​; ವಿಡಿಯೋ ವೈರಲ್
ಉಪೇಂದ್ರ / upendra
  • Share this:
ಕೊರೋನಾ ವೈರಸ್​ ಹೆಚ್ಚುತ್ತಿದ್ದಂತೆ ಅನೇಕರು ತಮ್ಮ ತಮ್ಮ ಊರುಗಳಿಗೆ ತೆರಳಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕೆ ಸೆಲೆಬ್ರಿಟಿಗಳು ಕೂಡ ಹೊರತಾಗಿಲ್ಲ. ಸಾಕಷ್ಟು ಜನ ಸೆಲೆಬ್ರಿಟಿಗಳು ಕೃಷಿ ಮಾಡುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ನಟ ಉಪೇಂದ್ರ ಮಗ ಆಯುಷ್​ ಕೂಡ ಈಗ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ನಟ ಉಪೇಂದ್ರ ತಮ್ಮ ಮಗ ಆಯುಷ್​ ಕೃಷಿ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಮಾಸ್ಕ್​ ಹಾಕಿಕೊಂಡು ಆಯುಷ್​ ಭೂಮಿ ಅಗೆಯುವ ಕೆಲಸದಲ್ಲಿ ತೊಡಗಿದ್ದಾರೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ.

ಸೆಲೆಬ್ರಿಟಿಗಳ ಮಕ್ಕಳು ಎಂದರೆ ಸಾಮಾನ್ಯವಾಗಿ ಕೆಲಸ ಮಾಡುವುದೇ ಇಲ್ಲ. ತಂದೆಯ ದುಡ್ಡನ್ನು ಖರ್ಚು ಮಾಡಿಕೊಂಡು ಹಾಯಾಗಿರುತ್ತಾರೆ ಎನ್ನುವ ಮಾತಿದೆ. ಆದರೆ,  ಇದು ಸುಳ್ಳು ಎಂಬುದನ್ನು ಉಪೇಂದ್ರ ಮಗ ಆಯುಷ್​ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಅಷ್ಟೇ ಅಲ್ಲ, ಮಕ್ಕಳನ್ನು  ತಾವು ಸಾಮಾನ್ಯರಂತೆಯೇ ಬೆಳೆಸುತ್ತಿದ್ದೇವೆ ಎನ್ನುವ ಸಂದೇಶವನ್ನು ಉಪೇಂದ್ರ ನೀಡಿದ್ದಾರೆ.

ಲಾಕ್​ಡೌನ್​ ಘೋಷಣೆ ಆಗುವುದಕ್ಕೂ ಮೊದಲು ನಟ ಉಪೇಂದ್ರ ತಮ್ಮ ಫಾರ್ಮ್​ ಹೌಸ್​ಗೆ ತೆರಳಿದ್ದರು. ಅಲ್ಲಿ ಸಾವಯವ ಕೃಷಿ ಮಾಡುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇನ್ನು ಅವರು ಬೆಳೆಯುತ್ತಿರುವ ಕೃಷಿಯಲ್ಲಿ ಯಾವುದೇ ಕ್ರಿಮಿನಾಶ ಬಳಕೆ ಮಾಡಿಲ್ಲ. ಈ ಮೂಲಕ ಅವರು ಕೃಷಿ ಸಾವಯವ ಕೃಷಿಗೆ ಒತ್ತು ನೀಡಿ ಎಂದಿದ್ದಾರೆ.


ಲಾಕ್​ಡೌನ್​ ಘೋಷಣೆ ಆದ ಬೆನ್ನಲ್ಲೇ ನಿಖಿಲ್​ ಕುಮಾರಸ್ವಾಮಿ, ದರ್ಶನ್, ಭೂಮಿ ಶೆಟ್ಟಿ ಸೇರಿ ಸಾಕಷ್ಟು ಮಂದಿ ಕೃಷಿಯಲ್ಲಿ ತೊಡಗಿದ್ದರು. ಅಷ್ಟೇ ಅಲ್ಲ ನಟ ಸಲ್ಮಾನ್​ ಖಾನ್​  ಕೂಡ ಟ್ರ್ಯಾಕ್ಟರ್​ ಓಡಿಸುತ್ತಾ, ಬತ್ತದ ನೆಟ್ಟಿ ಮಾಡುತ್ತಿದ್ದಾರೆ.

ಇದನ್ನೂ ಓದಿ: Sameera Reddy: ಮಕ್ಕಳ ಜೊತೆ ಸೇರಿ ಮನೆಯಲ್ಲೇ ರಾಖಿ ಮಾಡುವ ವಿಡಿಯೋ ಪೋಸ್ಟ್​ ಮಾಡಿದ ಸಮೀರಾ ರೆಡ್ಡಿ..!

ಸದ್ಯ, ಉಪೇಂದ್ರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಹೋಂ ಮಿನಿಸ್ಟರ್​, ಬುದ್ಧಿವಂತ, ಕಬ್ಜಾ ಸೇರಿ ಇನ್ನೂ ಕೆಲ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಕೊರೋನಾ ವೈರಸ್ ಕಡಿಮೆ ಆದ ನಂತರ​ ಈ ಸಿನಿಮಾಗಳು ತೆರೆಗೆ ಬರಲಿವೆ.
Published by: Rajesh Duggumane
First published: July 31, 2020, 2:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading