ಯಶ್​ ಅವರನ್ನು ಕೊಂಡಾಡಿದ ರಿಯಲ್​ ಸ್ಟಾರ್​ ಉಪ್ಪಿ!

news18
Updated:July 9, 2018, 4:39 PM IST
ಯಶ್​ ಅವರನ್ನು ಕೊಂಡಾಡಿದ ರಿಯಲ್​ ಸ್ಟಾರ್​ ಉಪ್ಪಿ!
news18
Updated: July 9, 2018, 4:39 PM IST
ಆನಂದ್ ಸಾಲುಂಡಿ, ನ್ಯೂಸ್ 18 ಕನ್ನಡ

ಒಂದು ಚಿತ್ರಕ್ಕಾಗಿ, ಒಂದು ಪಾತ್ರಕ್ಕಾಗಿ ತಮ್ಮನ್ನ ತಾವು ಅರ್ಪಿಸಿಕೊಂಡು ಕೆಲಸ ಮಾಡೋ ನಟರು ನಮ್ಮಲ್ಲೂ ಇದ್ದಾರೆ. ಅದಕ್ಕೆ ಉದಾಹರಣೆ ಎಂದರೆ ರಾಕಿಂಗ್ ಸ್ಟಾರ್ ಯಶ್. ಸುಮಾರು ಎರಡು ವರ್ಷಗಳಿಂದ ರಾಕಿಂಗ್ ಸ್ಟಾರ್ ಯಶ್ 'ಕೆ.ಜಿ.ಎಫ್' ಚಿತ್ರಕ್ಕಾಗಿಯೇ ತನು ಮನ ಅರ್ಪಿಸಿಕೊಂಡು ಕೆಲಸ ಮಾಡುತ್ತಿದ್ದಾರೆ.

ಉಗ್ರಂ ಪ್ರಶಾಂತ್ ನೀಲ್, ನಿರ್ದೇಶನದಲ್ಲಿ ಬರುತ್ತಿರೋ 'ಕೆ.ಜಿಎ.ಫ್' ಚಿತ್ರವನ್ನ ರಾಕಿಂಗ್ ಸ್ಟಾರ್ ಯಶ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿನೇ ಹಗಲು ರಾತ್ರಿ ಎನ್ನದೆ ಯಶ್ ಈ ಚಿತ್ರವನ್ನೇ ಉಸಿರಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಲುಕ್ಕು - ಗೆಟಪ್ಪು ಎಲ್ಲವನ್ನೂ ಬದಲಾಯಿಸಿಕೊಂಡಿರೋ ಯಶ್, ಉದ್ದ ಗಡ್ಡ ಬಿಟ್ಟು ಸಖತ್ ರಗಡ್ ಆಗಿ ಕಾಣಿಸುತ್ತಿದ್ದಾರೆ.

ಅವರು ಪಾತ್ರದೊಳಗೆ ಎಷ್ಟು ಮುಳುಗಿ ಹೋಗಿದ್ದಾರೆ ಅಂದರೆ ಶೂಟಿಂಗ್ ಮುಗಿದು ಎರಡು ತಿಂಗಳಾದರೂ ಇನ್ನೂ ಗಡ್ಡವನ್ನೇ ತೆಗೆಸಿಲ್ಲ. ಅವರು ಸಿಕ್ಕ ಕಡೆಯೆಲ್ಲ ಮಾಧ್ಯಮದವರು ಗಡ್ಡ ಯಾವಾಗ ತೆಗೆಸುತ್ತಿರಿ ಅಂತ ಕೇಳೋದಿದೆ. ಇನ್ನು ಸಿನಿಮಾರಂಗದ ಮಂದಿ ಗಡ್ಡ ತೆಗೆಸು ಅಂತ ಗದರಿದ್ದಾರೆ. ವಿಶೇಷವಾಗಿ ರೆಬೆಲ್‍ಸ್ಟಾರ್ ಅಂಬಿ ಗಡ್ಡ ತೆಗೆಯೋ ವರೆಗೆ ನನ್ ಮುಂದೆ ಮುಖ ತೋರಿಸಬೇಡ ಅಂದಿದ್ದರಂತೆ! ಅದೂ ಸಹ ಅಂಬರೀಷ ಅವರ ಹುಟ್ಟುಹಬ್ಬಕ್ಕೆಂದು ಕಲಾವಿದರ ಸಂಘದಲ್ಲಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಈ ಘಟನೆ ನಡೆದದ್ದು.

ಸಿನಿಮಾದ ಪಾತ್ರಕ್ಕಾಗಿ ಯಶ್​ ಅವರಿಗೆ ಇರುವ  ಅರ್ಪಣಾ ಮನೋಭಾವ ಕಂಡು ರಿಯಲ್ ಸ್ಟಾರ್ ಉಪ್ಪಿ ಕೂಡ ಮೂಕವಿಸ್ಮಿತರಾಗಿದ್ದಾರೆ. ಇದನ್ನ ಸ್ವತಃ ಉಪ್ಪಿ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

'ಕನ್ನಡ ಚಿತ್ರರಂಗದ ಅಚ್ಚುಮೆಚ್ಚಿನ ನಟ ಯಶ್ ಎರಡು ವರ್ಷಗಳಿಂದ ಕೆ.ಜಿ.ಎಫ್ ಚಿತ್ರಕ್ಕಾಗಿ ತಮ್ಮನ್ನ ಸಮರ್ಪಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಎರಡು ವರ್ಷದ ಪರಿಶ್ರನ ಹಾಗೂ ಸಮರ್ಪಣೆ ಕಲ್ಪನೆಗೂ ಮೀರಿದ್ದು. ನಿಮ್ಮಿಂದ ಕಲಿಯೋದು ಸಾಕಷ್ಟಿದೆ..!' ಎಂದು ಬರೆದುಕೊಂಡಿದ್ದಾರೆ ಉಪ್ಪಿ
Most wanted hero of KFI working for a movie with a rugged look for nearly 2 years is something unimaginable. Great dedication Yash. Learning lot from you. 👏👏👏👌😊👍
Loading...
ಒಟ್ಟಾರೆ ಯಶ್ ಕನ್ನಡ ಚಿತ್ರರಂಗದಲ್ಲಿ ಚಿಕ್ಕವಯಸ್ಸಿಗೆ ಸೂಪರ್ ಸ್ಟಾರ್ ಆದ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೆ, ಅದು ಅವರ ಶ್ರಮದ ಪ್ರತಿಫಲವಷ್ಟೇ ಎನ್ನಬಹುದು.
First published:July 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...