• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Upendra-Shivanna: ಅಪ್ಪುಗೆ ನಾನು ಸಿನಿಮಾ ಮಾಡಲು ಆಗಿಲ್ಲ, ಶಿವಣ್ಣನಿಗಾಗಿ ಮತ್ತೆ ಡೈರೆಕ್ಟರ್ ಆಗ್ತೀನಿ ಎಂದ ಉಪ್ಪಿ; ಮತ್ತೆ ಮರುಕಳಿಸುತ್ತಾ 'ಓಂ' ಇತಿಹಾಸ

Upendra-Shivanna: ಅಪ್ಪುಗೆ ನಾನು ಸಿನಿಮಾ ಮಾಡಲು ಆಗಿಲ್ಲ, ಶಿವಣ್ಣನಿಗಾಗಿ ಮತ್ತೆ ಡೈರೆಕ್ಟರ್ ಆಗ್ತೀನಿ ಎಂದ ಉಪ್ಪಿ; ಮತ್ತೆ ಮರುಕಳಿಸುತ್ತಾ 'ಓಂ' ಇತಿಹಾಸ

ಶಿವಣ್ಣನಿಗಾಗಿ ಮತ್ತೆ ಡೈರೆಕ್ಟರ್ ಆಗ್ತಿದ್ದಾರೆ ಉಪೇಂದ್ರ

ಶಿವಣ್ಣನಿಗಾಗಿ ಮತ್ತೆ ಡೈರೆಕ್ಟರ್ ಆಗ್ತಿದ್ದಾರೆ ಉಪೇಂದ್ರ

ಕಬ್ಜ ಸಿನಿಮಾ ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಮಾತಾಡಿದ ಉಪೇಂದ್ರ, ಶಿವರಾಜ್ ಕುಮಾರ್ ಅವರನ್ನು ಕೊಂಡಾಡಿದ್ದಾರೆ. ಶಿವಣ್ಣನಿಗಾಗಿ ಮತ್ತೆ ಒಂದು ಸಿನಿಮಾ ಮಾಡೇ ಮಾಡ್ತೀನಿ ಎಂದು ಉಪೇಂದ್ರ ಅನೌನ್ಸ್​ ಮಾಡಿದ್ದಾರೆ.

  • News18 Kannada
  • 2-MIN READ
  • Last Updated :
  • Karnataka, India
  • Share this:

ಸ್ಯಾಂಡಲ್‌ವುಡ್‌ನಲ್ಲಿ (Sandalwood) ಸಂಚಲನ ಮೂಡಿಸಿದ 'ಓಂ' ಸಿನಿಮಾವನ್ನು ಸಿನಿ ರಸಿಕರು ಮರೆಯೋಕೆ ಸಾಧ್ಯವೇ ಇಲ್ಲ. ಉಪೇಂದ್ರ ನಿರ್ದೇಶನದ ಓಂ ಸಿನಿಮಾ (OM Movie) ಶಿವಣ್ಣ ಕೆರಿಯರ್​ನಲ್ಲೇ ದೊಡ್ಡ ಹಿಟ್​ ಆಗಿದೆ.  ಶಿವರಾಜ್ ​ಕುಮಾರ್​ (Shiva Rajkumar) ಮಾಸ್​ ಜರ್ನಿ ಶುರುವಾಗಿದ್ದೆ ಓಂ ಸಿನಿಮಾ ಮೂಲಕ ಅಂದ್ರೆ ತಪ್ಪಾಗೋದಿಲ್ಲ. ಇದೀಗ ಈ ಜೋಡಿ ಮತ್ತೆ ಒಂದಾಗ್ತಿದ್ದು, ಶಿವಣ್ಣನಿಗಾಗಿ ಮತ್ತೆ ಉಪ್ಪಿ ಆಕ್ಷನ್ ಕಟ್ ಹೇಳೋದು ಪಕ್ಕಾ ಆಗಿದೆ. ಉಪೇಂದ್ರ (Upendra) ಅಭಿನಯದ ಬಹುನಿರೀಕ್ಷಿತ ಸಿನಿಮಾ ಕಬ್ಜ ಆಡಿಯೋ ರಿಲೀಸ್​ ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತಾಡಿದ ಉಪೇಂದ್ರ ಮತ್ತೆ ಶಿವಣ್ಣನಿಗಾಗಿ ಸಿನಿಮಾ ನಿರ್ದೇಶನ ಮಾಡೋದಾಗಿ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ.


ಶಿವಣ್ಣನಿಗೆ ಮತ್ತೆ ಒಂದು ಸಿನಿಮಾ ಮಾಡೇ ಮಾಡ್ತೀನಿ


ಕಬ್ಜ ಸಿನಿಮಾ ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಮಾತಾಡಿದ ಉಪೇಂದ್ರ, ಶಿವರಾಜ್ ಕುಮಾರ್ ಅವರನ್ನು ಕೊಂಡಾಡಿದ್ದಾರೆ. ಶಿವಣ್ಣನಿಗಾಗಿ ಮತ್ತೆ ಒಂದು ಸಿನಿಮಾ ಮಾಡೇ ಮಾಡ್ತೀನಿ ಎಂದು ಉಪೇಂದ್ರ ಅನೌನ್ಸ್​ ಮಾಡಿದ್ದಾರೆ. ನಿರ್ಮಾಪಕರು ಗೀತಕ್ಕ ಕೂಡ ಇಲ್ಲೆ ಇದ್ದಾರೆ.  ಗೀತಕ್ಕ ಕೂಡ ನಮ್ಮ ನಿರ್ಮಾಣ ಸಂಸ್ಥೆಯಲ್ಲೇ ಸಿನಿಮಾ ಮಾಡಿ ಅಂತ ಹೇಳಿದ್ದಾರೆ. ಮತ್ತೆ ಶಿವಣ್ಣಿನಿಗೆ ಶೀಘ್ರವೇ ಆ್ಯಕ್ಷನ್ ಕಟ್ ಹೇಳೋದಾಗಿ ಉಪೇಂದ್ರ ಹೇಳಿದ್ದಾರೆ.




ಅಪ್ಪು ಸರ್​ಗೆ ಸಿನಿಮಾ ಡೈರೆಕ್ಷನ್ ಮಾಡಲು ಅಗಲಿಲ್ಲ


ಶಿವಣ್ಣನ ಸಿನಿಮಾ ಬಗ್ಗೆ ಮಾತಾಡುತ್ತಾ ಉಪೇಂದ್ರ ಪುನೀತ್ ರಾಜ್​ ಕುಮಾರ್​ ನೆನಪು ಮಾಡಿಕೊಂಡಿದ್ದಾರೆ. ಪುನೀತ್​ ಜೊತೆ ಸಿನಿಮಾ ಮಾಡುವ ಆಸೆ ತನ್ನಗಿತ್ತು ಎನ್ನುವ ವಿಷಯವನ್ನು ನಟ ಉಪೇಂದ್ರ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ನಾನು ಈಗಾಗಲೇ ಒಂದು ಅವಕಾಶ ಕಳ್ಕೊಂಡಿದ್ದೀನಿ. ನಾನು ಅಪ್ಪು ಸರ್ ಗೆ ಸಿನಿಮಾ ಡೈರೆಕ್ಷನ್ ಮಾಡೋಕೆ ಆಗಲಿಲ್ಲ ಎಂದು ಬೇಸರ ಕೂಡ ಹೊರಹಾಕಿದ್ದಾರೆ. ನಟ ಶಿವಣ್ಣ ಅವರಲ್ಲಿ ಅಪ್ಪು ಅವರ ಎಲ್ಲಾ ಹೋಲಿಕೆ ಇದೆ. ಅದಷ್ಟು ಬೇಗ ಶಿವಣ್ಣನ ಸಿನಿಮಾ ಡೈರೆಕ್ಷನ್ ಮಾಡ್ತಿನಿ ಎಂದು ಉಪೇಂದ್ರ ಹೇಳಿದ್ದಾರೆ.


Actor Upendra has announced that he will again direct a movie for actor Shiva Kumar pvn
ಶಿವಣ್ಣನಿಗಾಗಿ ಮತ್ತೆ ಡೈರೆಕ್ಟರ್ ಆಗ್ತಿದ್ದಾರೆ ಉಪೇಂದ್ರ


ಓಂ ಸಿನಿಮಾ ಸೀಕ್ವೆಲ್​ ಬರೋದು ಪಕ್ಕಾನಾ?


ಉಪೇಂದ್ರ ಹಾಗೂ ಶಿವಣ್ಣ ಕಾಂಬಿನೇಷ್​ನಲ್ಲಿ ತಯಾರಾದ ಓಂ ಸಿನಿಮಾ ಕನ್ನಡ ಸಿನಿ ದುನಿಯಾದಲ್ಲಿ ಹೊಸ ದಾಖಲೆಯನ್ನೇ ಬರೆದಿತ್ತು. ಇತ್ತೀಚಿಗಷ್ಟೇ ಈ ಚಿತ್ರದ ಸೀಕ್ವೆಲ್ ಬಗ್ಗೆ ನಟ ಶಿವರಾಜ್‌ಕುಮಾರ್ ರಿವೀಲ್ ಮಾಡಿದ್ದರು. ಉಪೇಂದ್ರ ಅವರ ಮಾತು ಕೇಳಿದ್ರೆ ಇಬ್ಬರ ಜೋಡಿಯಲ್ಲಿ ಓಂ 2 ಬರೋದು ಪಕ್ಕಾ ಎನ್ನುವ ಮಾತುಗಳು ಕೇಳಿ ಬರ್ತಿದೆ.


1995ರಲ್ಲಿ ಇತಿಹಾಸ ನಿರ್ಮಿಸಿ ಓಂ ಸಿನಿಮಾ


ಉಪೇಂದ್ರ ನಿರ್ದೇಶನದ `ಓಂ’ ಸಿನಿಮಾ 1995ರಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. ಈ ಚಿತ್ರದ ಮೂಲಕ ಶಿವಣ್ಣ ಗ್ಯಾಂಗ್‌ಸ್ಟರ್ ಆಗಿ ಮಿಂಚಿದ್ದರು. ಈಗ `ಓಂ ಪಾರ್ಟ್ 2′ ಬರೋದರ ಬಗ್ಗೆ ಶಿವಣ್ಣ ಬಿಗ್ ನ್ಯೂಸ್ ಕೊಟ್ಟಿದ್ದರು. ಕನ್ನಡದ ಜನಪ್ರಿಯ ರಿಯಾಲಿಟಿ ಶೋವೊಂದರ ವೇದಿಕೆಯಲ್ಲಿ `ಓಂ 2’ಬರಲಿದೆ ಅಂತ ಶಿವರಾಜ್ ಕುಮಾರ್​ ರಿವೀಲ್ ಮಾಡಲಿದ್ದರು.




ಓಂ ಸಿನಿಮಾ ಅನೇಕ ದಾಖಲೆ ಮಾಡಿದೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಕಲಾವಿದರನ್ನು ಹಾಕಿಕೊಂಡು ಶೂಟ್​ ಮಾಡಲಾಗುತ್ತದೆ. ಆದರೆ, ನಿಜ ಜೀವನದಲ್ಲಿ ಭೂಗತ ಜಗತ್ತಿನಲ್ಲಿದ್ದವರೇ ಈ ಸಿನಿಮಾದಲ್ಲಿ ರೌಡಿಯಾಗಿ ನಟಿಸಿದ್ದರು. 20 ವರ್ಷಗಳಲ್ಲಿ 550ಕ್ಕೂ ಹೆಚ್ಚು ಬಾರಿ ಈ ಸಿನಿಮಾ ರೀ-ರಿಲೀಸ್‌ ಆಗಿದೆ.




ಈ ಮೂಲಕ ಸಿನಿಮಾ ಲಿಮ್ಕಾ ದಾಖಲೆಯಲ್ಲಿ ಹೆಸರು ದಾಖಲಿಸಿಕೊಂಡಿದೆ. ಮರುಬಿಡುಗಡೆ ಆದಾಗಲೂ ಕೆಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾ ನೂರು ದಿನ ಪ್ರದರ್ಶನ ಕಂಡಿದ್ದು ವಿಶೇಷವಾಗಿದೆ.

Published by:ಪಾವನ ಎಚ್ ಎಸ್
First published: