ಮಾನವೀಯತೆ ಮೆರೆದ ಉಪ್ಪಿ-ಶ್ರೀಮುರಳಿ: ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ

ನೆರೆ ಪ್ರವಾಹದ ಹಿನ್ನೆಲೆಯಲ್ಲಿ  ಆಗಸ್ಟ್​ 9 ರಂದು ಚಿತ್ರದುರ್ಗದಲ್ಲಿ ನಡೆಯಬೇಕಿದ್ದ ಪೈಲ್ವಾನ್ ಚಿತ್ರದ ಆಡಿಯೋ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು  ಕಿಚ್ಚ ಸುದೀಪ್ ಸಹ ತಿಳಿಸಿದ್ದಾರೆ.

zahir | news18-kannada
Updated:August 8, 2019, 7:40 PM IST
ಮಾನವೀಯತೆ ಮೆರೆದ ಉಪ್ಪಿ-ಶ್ರೀಮುರಳಿ: ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ
ನೆರೆ ಪ್ರವಾಹದ ಹಿನ್ನೆಲೆಯಲ್ಲಿ  ಆಗಸ್ಟ್​ 9 ರಂದು ಚಿತ್ರದುರ್ಗದಲ್ಲಿ ನಡೆಯಬೇಕಿದ್ದ ಪೈಲ್ವಾನ್ ಚಿತ್ರದ ಆಡಿಯೋ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು  ಕಿಚ್ಚ ಸುದೀಪ್ ಸಹ ತಿಳಿಸಿದ್ದಾರೆ.
  • Share this:
ಸತತ ಮಳೆಯಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಜನರಿಗೆ ಸ್ಯಾಂಡಲ್​ವುಡ್ ನಟರು ಸಹಾಯ ಹಸ್ತ ಚಾಚುತ್ತಿದ್ದಾರೆ. ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿ ಜನರ ನೆರವಿಗೆ ನಿಲ್ಲುವುದಾಗಿ ಘೋಷಿಸಿಕೊಂಡಿದ್ದಾರೆ.

ಉತ್ತರ ಕರ್ನಾಟಕದ ನೆರೆ ಸಂತ್ರಸ್ಥರಿಗೆ 5 ಲಕ್ಷ ಹಣ ನೀಡುವುದಾಗಿ ರಿಯಲ್ ಸ್ಟಾರ್ ಘೋಷಿಸಿಕೊಂಡರೆ, ಅತ್ತ 'ಉಗ್ರಂ' ನಟ 'ಭರಾಟೆ' ಚಿತ್ರದ ಆಡಿಯೋ ಮಾರಾಟದಲ್ಲಿ ಬರುವಂತಹ ಹಣವನ್ನು ಪ್ರವಾಹ ಪೀಡಿತರಿಗೆ ನೀಡುವುದಾಗಿ ತಿಳಿಸಿದ್ದಾರೆ.

ನೆರೆ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ/-ರೂ ಗಳನ್ನು ದೇಣಿಗೆಯಾಗಿ ನೀಡುತ್ತಿದ್ದೇನೆ. ತಾವುಗಳೂ ಪ್ರವಾಹಕ್ಕೆ ಸಿಲುಕಿರುವ ನಮ್ಮವರಿಗೆ ನಿಮ್ಮ ಇಚ್ಛಾನುಸಾರ ನೆರವಾಗಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ನಟ ಉಪೇಂದ್ರ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.


ಇನ್ನು ಚೇತನ್ ನಿರ್ದೇಶನದ 'ಭರಾಟೆ' ಚಿತ್ರತಂಡವು ಹಾಡುಗಳ ಚಿತ್ರೀಕರಣಕ್ಕಾಗಿ ಸ್ವಿಟ್ಜಲ್ಯಾಂಡ್​ನಲ್ಲಿ ಬೀಡು ಬಿಟ್ಟಿದೆ. ಅಲ್ಲಿಂದಲೇ ವಿಡಿಯೋ ಮಾಡಿ ಕಳಿಸಿರುವ ಶ್ರೀಮುರಳಿ, 'ಭರಾಟೆ' ಚಿತ್ರದ ಆಡಿಯೋ ಮಾರಾಟದಲ್ಲಿ ಬಂದ ಹಣವನ್ನು ಉತ್ತರ ಕರ್ನಾಟಕದ ನೆರೆ ಸಂತ್ರಸ್ತ್ರರಿಗೆ ನೀಡಲಾಗವುದು ಎಂದು ತಿಳಿಸಿದ್ದಾರೆ. ಅಲ್ಲದೆ ಉತ್ತರ ಕರ್ನಾಟಕದಲ್ಲಿ ನೆರೆ ಪ್ರವಾಹದಿಂದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ನಮ್ಮ ಕೈಲಾದ ಸಣ್ಣ ಕರ್ತವ್ಯವನ್ನು ಮಾಡುತ್ತಿದ್ದೇವೆ. ಎಲ್ಲರೂ ಪ್ರವಾಹ ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಮನವಿ ಮಾಡಿಕೊಂಡಿದ್ದಾರೆ.



ನೆರೆ ಪ್ರವಾಹದ ಹಿನ್ನೆಲೆಯಲ್ಲಿ  ಆಗಸ್ಟ್​ 9 ರಂದು ಚಿತ್ರದುರ್ಗದಲ್ಲಿ ನಡೆಯಬೇಕಿದ್ದ 'ಪೈಲ್ವಾನ್' ಚಿತ್ರದ ಆಡಿಯೋ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು  ಕಿಚ್ಚ ಸುದೀಪ್ ಸಹ ತಿಳಿಸಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಮಾತನಾಡಿದ ಅಭಿನಯ ಚಕ್ರವರ್ತಿ, ಎಲ್ಲರೂ ನನ್ನ ಕ್ಷಮಿಸಬೇಕು. ಆಡಿಯೋ ಬಿಡುಗಡೆಯನ್ನು ನಾವು ಮುಂದೂಡಲು ತೀರ್ಮಾನಿಸಿದ್ದೇವೆ. ಈ ಕಾರ್ಯಕ್ರಮಕ್ಕಾಗಿ ನೀವು ಹಾಕಬೇಕಿದ್ದ ಎನರ್ಜಿಯನ್ನು ನೆರೆ ಸಂತ್ರಸ್ತರ ನೆರವಿಗೆ ಬಳಸಬೇಕೆಂದು ಮನವಿ ಮಾಡಿದ್ದಾರೆ.



ಇನ್ನು ಚಾಲೆಂಜಿಂಗ್‍ಸ್ಟಾರ್ ದರ್ಶ ನ್, ಶಿವಣ್ಣ, ಜಗ್ಗೇಶ್, ಗಣೇಶ್, ಪ್ರಜ್ವಲ್ ದೇವರಾಜ್, ರಶ್ಮಿಕಾ ಮಂದಣ್ಣ, ಅಕುಲ್ ಬಾಲಾಜಿ, ಶ್ರೀಮುರಳಿ ಸೇರಿದಂತೆ ಹಲವು ನಟರು ಟ್ವಿಟ್ಟರ್ ಮೂಲಕ ಸಂತ್ರಸ್ತರಿಗಾಗಿ ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದ್ದಾರೆ.
First published:August 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading