ಬಾಲಿವುಡ್ (Bollywood) ಪ್ರಣಯ ಪಕ್ಷಿಗಳೆಂದೇ ಗುರುತಿಸಿಕೊಂಡಿದ್ದ ನಟರಾದ ಟೈಗರ್ ಶ್ರಾಫ್ (Tiger Shroff) ಮತ್ತು ದಿಶಾ ಪಾಟ್ನಿ (Disha Patani) ಪ್ರಸ್ತುತ ಲವ್ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಗುಸು ಗುಸು ಬಾಲಿವುಡ್ ತುಂಬೆಲ್ಲಾ ಹರಿದಾಡುತ್ತಿದೆ. ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುತ್ತಿದ್ದ ಟೈಗರ್ ಶ್ರಾಫ್ ಮತ್ತು ದಿಶಾ ಪಾಟ್ನಿ ಯಾವತ್ತೂ ಡೇಟಿಂಗ್ (Dating) ವಿಚಾರವನ್ನು ಅಧಿಕೃತ ಗೊಳಿಸಿರಲಿಲ್ಲ. ಆರು ವರ್ಷಗಳಿಂದ ತಮ್ಮ ಪ್ರೀತಿಯನ್ನು ಗೌಪ್ಯವಾಗಿಟ್ಟುಕೊಂಡಿದ್ದ ಹಾಟ್ ಬೆಡಗಿ ದಿಶಾ ಮತ್ತು ನಟ ಶ್ರಾಫ್ ಪಾರ್ಟಿ, ಡಿನ್ನರ್, ಡೇಟಿಂಗ್, ಟ್ರಿಪ್ ಅಂತಾ ಅವಾಗವಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈದೀಗ ಇಬ್ಬರು ಬೇರೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ದಿಶಾ ಆಗಲಿ, ಟೈಗರ್ ಶ್ರಾಫ್ ಆಗಲಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಮದುವೆ ಆಗುವ ವಿಚಾರದಲ್ಲಿ ದೂರವಾದ ಜೋಡಿಗಳು
ಮೂಲಗಳ ಪ್ರಕಾರ, ಟೈಗರ್ ಮತ್ತು ದಿಶಾ ಈಗ ಒಟ್ಟಿಗೆ ಇಲ್ಲ. ಇಬ್ಬರು ದೂರ ಆಗಲು ಅವರ ನಡುವೆ ಏನಾಯಿತು ಎಂಬುದುರ ಬಗ್ಗೆ ಸ್ಪಷ್ಟವಾಗಿ ಕಾರಣಗಳು ತಿಳಿದಿಲ್ಲವಾದರೂ, ಹಿಂದಿನ ಒಂದು ವರದಿ ಪ್ರಕಾರ ಮದುವೆ ಆಗುವ ವಿಚಾರವಾಗಿ ಇಬ್ಬರೂ ದೂರಾಗಿದ್ದಾರೆ ಎನ್ನಲಾಗಿದೆ.
ದಿಶಾ ಬಗ್ಗೆ ಟೈಗರ್ ಶ್ರಾಫ್ ಅವರ ಸಹೋದರಿ ಕೃಷ್ಣ ಏನಂದ್ರು
ಟೈಗರ್ ಶ್ರಾಫ್ ಮತ್ತು ದಿಶಾ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲವಾದ್ದರಿಂದ ದಿನಕ್ಕೊಂದು ಊಹಾಪೋಹಗಳು ಹುಟ್ಟಿಕೊಳ್ಳುತ್ತಿವೆ. ಈ ಬಗ್ಗೆ ಟೈಗರ್ ಶ್ರಾಫ್ ಅವರ ಸಹೋದರಿ ಕೃಷ್ಣ ಅವರನ್ನು ಕೇಳಿದಾಗ ಅವರು ಈ ರೀತಿಯಾಗಿ ಹೇಳಿದ್ದಾರೆ.
ಇದನ್ನೂ ಓದಿ: Chiyaan Vikram: 3 ವರ್ಷ ಶವದಂತೆ ಒಂದೇ ಕಡೆ ಮಲಗಿದ್ದ ಸ್ಟಾರ್ ನಟ! ವಿಕ್ರಮ್ ಬದುಕೇ ಒಂದು ಹೋರಾಟ
ದಿಶಾ ಮತ್ತು ಕೃಷ್ಣ ಶ್ರಾಫ್ ಅವರ ಸಂಬಂಧ ಈಗ ಹೇಗಿದೆ? ಇತ್ತೀಚಿನ ವರದಿಗಳ ಬಗ್ಗೆ ಅವರನ್ನು ಕೇಳಿದಾಗ, ಕೃಷ್ಣಾ ದಿಶಾ ಬಗ್ಗೆ ಮೆಚ್ಚುಗೆ ಮಾತಗಳನ್ನಾಡಿದ್ದಾರೆ. “ದಿಶಾ ಮತ್ತು ನಾನು ಅಕ್ಷರಶಃ ಉತ್ತಮ ಸ್ನೇಹಿತರು. ನಾವು ನಮ್ಮ ಹಲವು ದಿನಗಳನ್ನು ಒಟ್ಟಿಗೆ ಕಳೆದಿದ್ದೇವೆ. ನಾನು ಬಾಲಿವುಡ್ ಗೆ ಬರುವ ಮುನ್ನ ದಿಶಾ ಅದಾಗಲೇ ಇಲ್ಲಿ ಹೆಸರು ಮಾಡಿದ್ದಳು. ನಾವಿಬ್ಬರು ಒಬ್ಬರನ್ನೊಬ್ಬರು ಬೆಂಬಲಿಸುತ್ತಾ ಮೇಲೆ ಬಂದಿದ್ದೇವೆ ಎಂದು ದಿಶಾಳನ್ನು ಮೆಚ್ಚಿಕೊಂಡಿದ್ದಾರೆ.
ನನ್ನ ಕಾಲ್ ಲಿಸ್ಟ್ ನಲ್ಲಿ ದಿಶಾ ಯಾವಾಗಲೂ ಮೊದಲಿರುತ್ತಾಳೆ
ನನಗೆ ಸಹಾಯದ ಅಗತ್ಯವಿದ್ದರೆ ನಾನು ಕರೆ ಮಾಡುವ ಮೊದಲ ಕೆಲವು ಜನರಲ್ಲಿ ದಿಶಾ ಕೂಡ ಒಬ್ಬಳು, ಮತ್ತು ಅವಳು ನನ್ನ ಜೀವನದಲ್ಲಿ ಉತ್ತಮ ಸ್ನೇಹಿತೆಯಾಗಿ ಇರುತ್ತಾಳೆ ಎಂದು ನನಗೆ ತಿಳಿದಿದೆ ಎಂದು ದಿಶಾ ಬಗ್ಗೆ ಕೃಷ್ಣಾ ಶ್ರಾಫ್ ಹೇಳಿದ್ದಾರೆ. ಮಹಿಳೆಯರು ನಿರಂತರವಾಗಿ ಒಬ್ಬರನ್ನೊಬ್ಬರು ಕಾಲೆಳೆಯುವ ಜಗತ್ತಿನಲ್ಲಿ, ದಿಶಾ ನಾನು ಇದಕ್ಕೆ ವಿರುದ್ಧವಾಗಿದ್ದೇವೆ ಮತ್ತು ನಮ್ಮ ಸ್ನೇಹಕ್ಕೆ ಗೌರವ ಕೊಡುತ್ತೇವೆ ಎಂದಿದ್ದಾರೆ.
ನನ್ನ ಮಗನ ಪ್ರೀತಿ- ಪ್ರೇಮ ಜೀವನದ ಬಗ್ಗೆ ನಾನು ನಿಗಾ ಇಡುವುದಿಲ್ಲ, ಏಕೆಂದರೆ ಅವರ ಗೌಪ್ಯತೆಗೆ ಧಕ್ಕೆ ತರಲು ಬಯಸುವುದಿಲ್ಲ ಎಂದು ಜಾಕಿ ಶ್ರಾಫ್ ಈ ಹಿಂದೆ ಹೇಳಿದ್ದರು. ದಿಶಾ ಮತ್ತು ನನ್ನ ಮಗ ಒಟ್ಟಿಗೆ ಇರುತ್ತಾರೋ ಇಲ್ಲವೋ, ಅವರು ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುತ್ತಾರೋ ಅಥವಾ ಇಲ್ಲವೋ ಎಂಬುದು ಅವರಿಗೆ ಬಿಟ್ಟದ್ದು. ಇದು ಅವರ ಪ್ರೇಮಕಥೆ, ನಾನು ಮತ್ತು ನನ್ನ ಹೆಂಡತಿ ಆಯೇಶಾ ಹೇಗೆ ನಮ್ಮದೇ ಲವ್ ಸ್ಟೋರಿ ಹೊಂದಿದ್ದೆವೋ, ಅವರು ಹಾಗೆ ಅಂತಾ ಅವರಿಬ್ಬರ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.
ಇದನ್ನೂ ಓದಿ: Shubman Gill-Sara Tendulkar: ಸಚಿನ್ ಪುತ್ರಿ ಜೊತೆ ಬ್ರೇಕಪ್ ಮಾಡಿಕೊಂಡ್ರಾ ಶುಭಮನ್ ಗಿಲ್, ಏನಿದು ಸಾರಾ ಕಹಾನಿ?
ಇನ್ನೂ ಕೆಲಸದ ವಿಚಾರವಾಗಿ ದಿಶಾ ಕೊನೆಯದಾಗಿ ಏಕ್ ವಿಲನ್ ರಿಟರ್ನ್ಸ್‌ನಲ್ಲಿ ಕಾಣಿಸಿಕೊಂಡರೆ, ಟೈಗರ್ ಶ್ರಾಫ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಇತ್ತೀಚಿಗಷ್ಟೆ ಟೈಗರ್, 'ಸ್ಕ್ರೂ ಢೀಲಾ' ಸಿವಿಮಾವನ್ನು ಅನೌನ್ಸ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ