Bigil: ಬಿಗಿಲ್​ ಸಿನಿಮಾ ತಂಡಕ್ಕೆ ನಟ ವಿಜಯ್​ ಬಿಗ್​ ಗಿಫ್ಟ್; 400 ತಂತ್ರಜ್ಞರಿಗೆ ಈ ನಟ ಕೊಟ್ಟ ಉಡುಗೊರೆಯ ಬೆಲೆ ಲಕ್ಷಲಕ್ಷ​​!

Thalapathy Vijay: ‘ಬಿಗಿಲ್​’ ಸಿನಿಮಾಕ್ಕಾಗಿ 400ಕ್ಕೂ ಹೆಚ್ಚು ತಂತ್ರಜ್ಞರು ಕೆಲಸ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಶ್ರಮಿಸಿದ ಪ್ರತಿ ಸಿಬ್ಬಂದಿಗೂ ವಿಜಯ್ ವಿಶೇಷ ಉಡುಗೊರೆ ನೀಡಿದ್ದಾರೆ. ಅನೇಕರು ದಳಪತಿ ವಿಜಯ್​ ಸಹೃದಯಕ್ಕೆ ಮನಸೋತಿದ್ದಾರೆ.

Rajesh Duggumane | news18
Updated:August 14, 2019, 11:38 AM IST
Bigil: ಬಿಗಿಲ್​ ಸಿನಿಮಾ ತಂಡಕ್ಕೆ ನಟ ವಿಜಯ್​ ಬಿಗ್​ ಗಿಫ್ಟ್; 400 ತಂತ್ರಜ್ಞರಿಗೆ ಈ ನಟ ಕೊಟ್ಟ ಉಡುಗೊರೆಯ ಬೆಲೆ ಲಕ್ಷಲಕ್ಷ​​!
ವಿಜಯ್​ ಹಾಗೂ ಅವರು ನೀಡಿದ ಉಂಗುರ
Rajesh Duggumane | news18
Updated: August 14, 2019, 11:38 AM IST
ಅದು ತಮಿಳಿನ ‘ಬಿಗಿಲ್​​’ ಸಿನಿಮಾ ಶೂಟಿಂಗ್​ನ ಕೊನೆಯ ದಿನ. ಎಲ್ಲರೂ ಸಿನಿಮಾ ಕೆಲಸಗಳು ಪೂರ್ಣಗೊಂಡ ಖುಷಿಯಲ್ಲಿದ್ದರು. ಈ ಮಧ್ಯೆ ಈ ಚಿತ್ರದ ನಟ ದಳಪತಿ ವಿಜಯ್​ ಇಡೀ ಚಿತ್ರತಂಡಕ್ಕೆ ದೊಡ್ಡ ಉಡುಗೊರೆ ನೀಡಿದ್ದಾರೆ. ಈ ವಿಚಾರ ಈಗ ಸಖತ್​ ವೈರಲ್​ ಆಗಿದೆ.

‘ಬಿಗಿಲ್​’ ಸಿನಿಮಾಕ್ಕಾಗಿ 400ಕ್ಕೂ ಹೆಚ್ಚು ತಂತ್ರಜ್ಞರು ಕೆಲಸ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಶ್ರಮಿಸಿದ ಪ್ರತಿ ಸಿಬ್ಬಂದಿಗೂ ವಿಜಯ್ ವಿಶೇಷವಾಗಿ ಮಾಡಿಸಿದ​ ಚಿನ್ನದ ಉಂಗುರ ನೀಡಿದ್ದಾರೆ! ಈ ಉಂಗುರದ ಮೇಲೆ ‘ಬಿಗಿಲ್​’ ಎಂದು ಬರೆಯಲಾಗಿದೆ. ಈ ಸಿನಿಮಾದಲ್ಲಿ ಆಟಗಾರರಾಗಿ ಕಾಣಿಸಿಕೊಂಡ ಪ್ರತಿ ಕಲಾವಿದನಿಗೂ ಫುಟ್​ಬಾಲ್​ಮೇಲೆ ಆಟೋಗ್ರಾಫ್​ ಹಾಕಿ ಅದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಉಂಗುರವನ್ನು ಉಡುಗೊರೆಯಾಗಿ ಪಡೆದವರು ಅದರ ಫೋಟೋವನ್ನು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಅನೇಕರು ದಳಪತಿ ವಿಜಯ್​ ಸಹೃದಯಕ್ಕೆ ಮನಸೋತಿದ್ದಾರೆ. ಅವರ ಅಭಿಮಾನಿಗಳ ಸಂಭ್ರಮವಂತೂ ಮುಗಿಲುಮುಟ್ಟಿದೆ.

“ಸಿನಿಮಾ ಕೆಲಸಗಳು ಪೂರ್ಣಗೊಂಡ ನಂತರ ತಂತ್ರಜ್ಞರಿಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಅನೇಕ ನಟರು ನಡೆದುಕೊಳ್ಳುತ್ತಾರೆ. ಆದರೆ, ವಿಜಯ್​ ಮಾತ್ರ ಇದಕ್ಕೆ ಭಿನ್ನ,” ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.



ಇದನ್ನೂ ಓದಿ: Bigil: ವಿಜಯ್​ ನಟನೆಯ ‘ಸಿಂಗ ಪೆನ್ನೆ‘ ಎಂಬ ಹಾಡು ಲೀಕ್​; ಬೇಸರ ವ್ಯಕ್ತಪಡಿಸಿದ ಚಿತ್ರತಂಡ

ಅಟ್ಲಿ ಕುಮಾರ್​ ನಿರ್ದೇಶನದ ‘ಬಿಗಿಲ್​’ ಸಿನಿಮಾದಲ್ಲಿ ನಯನತಾರಾ, ಜಾಕಿ ಶ್ರಾಫ್​ ಮೊದಲಾದವರು ಬಣ್ಣ ಹಚ್ಚಿದ್ದಾರೆ. ವಿಜಯ್​ ಈ ಸಿನಿಮಾದಲ್ಲಿ ಡಬಲ್​ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಫುಟ್​ಬಾಲ್​ ಕಥೆ ಆಧರಿಸಿ ಈ ಸಿನಿಮಾ ಸಾಗಲಿದೆ. ಎಆರ್​ ರೆಹ್ಮಾನ್​ ಸಂಗೀತ ಈ ಚಿತ್ರಕ್ಕಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ ಸಿನಿಮಾ ತೆರೆಗೆ ಬರುತ್ತಿದೆ.





First published:August 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...