Actor Surya Movie Jai Bhim| ಸೂರ್ಯ ಅಭಿನಯದ ಬಹು ನಿರೀಕ್ಷಿತ ಚಿತ್ರ ಜೈಭೀಮ್ ಓಟಿಟಿಯಲ್ಲಿ ಬಿಡುಗಡೆ; ದಿನಾಂಕ ಫಿಕ್ಸ್

ತಮಿಳುನಾಡಿನಲ್ಲಿ ನಿರ್ದೇಶಕ ಪಾ. ರಂಜಿತ್​ ದೆಶೆಯಿಂದ ಸಿನಿಮಾ ಮೂಲಕ ದಲಿತ ರಾಜಕಾರಣದ ಬಗ್ಗೆ ಮಾತನಾಡುವ ಹೊಸ ನಿರೂಪಣಾ ಶೈಲಿ ಹಲವರ ಮನಗೆದ್ದಿದ್ದು, ಈ ಚಿತ್ರವೂ ಸಹ ಸಂತಹದ್ದೇ ಒಂದು ನಿರೀಕ್ಷೆಯನ್ನು ಮೂಡಿಸಿದೆ.

ಜೈ ಭೀಮ್ ಚಿತ್ರದ ಪೋಸ್ಟರ್.

ಜೈ ಭೀಮ್ ಚಿತ್ರದ ಪೋಸ್ಟರ್.

 • Share this:
  ತಮಿಳಿನ ಖ್ಯಾತ ನಟ ಸೂರ್ಯ (Actor Surya) ನಿರ್ಮಿಸಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ 'ಜೈ ಭೀಮ್‌' (Jai Bhim) ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಕೋರ್ಟ್ ರೂಮ್‌ ಡ್ರಾಮಾ (Court Room Drama) ಎಂದೇ ಗುರುತಿಸಲಾಗಿರುವ ‘ಜೈ ಭೀಮ್‌’ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯವಾಗಿದ್ದು, ಪೋಸ್ಟ್​ ಪ್ರೊಡಕ್ಷನ್ (Post Production) ಕೆಲಸ ಚಾಲ್ತಿಯಲ್ಲಿದೆ. ಆದರೆ, ಓಟಿಟಿ ಪ್ಲಾರ್ಟ್​ಫಾರ್ಮ್ ಅಮೆಜಾನ್‌ ಪ್ರೈಮ್‌ (Amazon Prime) ವಿಡಿಯೋದಲ್ಲಿ ನವೆಂಬರ್‌ 2ರಂದು ಸಿನಿಮಾ ಬಿಡುಗಡೆ ಯಾಗಲಿದೆ ಎಂದು ನಟ ಸೂರ್ಯ ತಮ್ಮ ಟ್ವಿಟರ್‌ (Twitter) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಈ ಟ್ವೀಟ್​ನಲ್ಲಿ ಗರ್ಭಿಣಿ ಮಹಿಳೆಯೊಂದಿಗೆ ಮಗು ಹಾಗೂ ವಕೀಲರಾಗಿ ಸೂರ್ಯ ಕಾಣಿಸಿಕೊಂಡಿರುವ ಪೋಸ್ಟರ್‌ಅನ್ನು ಹಂಚಿಕೊಳ್ಳಲಾಗಿದೆ. ಜೈ ಭೀಮ್‌ ಸಿನಿಮಾವನ್ನು ಜ್ಞಾನವೇಲ್‌ ನಿರ್ದೇಶಿಸಿದ್ದು, 2ಡಿ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ ಅಡಿಯಲ್ಲಿ ಸೂರಿಯಾ ಹಾಗೂ ಜ್ಯೋತಿಕ ನಿರ್ಮಾಣ ಮಾಡಿದ್ದಾರೆ. ಬುಡಕಟ್ಟು ಸಮುದಾಯಗಳ ಪರವಾಗಿ ಹೋರಾಟ ಮಾಡುವ ವಕೀಲನಾಗಿ ಸೂರಿಯಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.  "ನ್ಯಾಯದ ಅನ್ವೇಷಣೆಯಲ್ಲಿನ ಧೈರ್ಯ ಮತ್ತು ನಂಬಿಕೆಯ ಈ ಕಥೆಯನ್ನು ತೆರೆಗೆ ತರಲು ಹೆಮ್ಮೆಯಾಗುತ್ತಿದೆ" ಎಂದು ಸೂರಿಯಾ ತಮ್ಮ ಟ್ವೀಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 'ಸೂರರೈ ಪೋಟ್ರು' ಯಶಸ್ಸಿನ ಬಳಿಕ ಬಿಡುಗಡೆಯಾಗುತ್ತಿರುವ ನಟ ಸೂರ್ಯ ಅಭಿನಯದ ಸಿನಿಮಾ ಇದಾಗಿದೆ. ತಮಿಳುನಾಡಿನಲ್ಲಿ ನಿರ್ದೇಶಕ ಪಾ. ರಂಜಿತ್​ ದೆಶೆಯಿಂದ ಸಿನಿಮಾ ಮೂಲಕ ದಲಿತ ರಾಜಕಾರಣದ ಬಗ್ಗೆ ಮಾತನಾಡುವ ಹೊಸ ನಿರೂಪಣಾ ಶೈಲಿ ಹಲವರ ಮನಗೆದ್ದಿದ್ದು, ಈ ಚಿತ್ರವೂ ಸಹ ಸಂತಹದ್ದೇ ಒಂದು ನಿರೀಕ್ಷೆಯನ್ನು ಮೂಡಿಸಿದೆ.

  ಜೈ ಭೀಮ್ ಚಿತ್ರದ ಪೋಸ್ಟರ್.


  'ಕರ್ಣನ್‌' ಖ್ಯಾತಿಯ ರಜಿಶಾ ವಿಜಯನ್‌ ಪ್ರಧಾನ ಮಹಿಳಾ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರಕಾಶ್‌ ರಾಜ್‌, ರಾವ್‌ ರಮೇಶ್‌ ಮತ್ತು ಲಿಜೋ ಮೋಲ್‌ ಜೋಸ್‌ ಥರದ ಪ್ರಮುಖ ಕಲಾವಿದರು ಈ ಚಿತ್ರದಲ್ಲಿದ್ದಾರೆ. 'ಜೈ ಭೀಮ್‌' ಸಿನಿಮಾ ತಮಿಳು ಸೇರಿದಂತೆ ದಕ್ಷಿಣ ಭಾರತದ ಇತರ ಭಾಷೆಗಳಿಗೂ ಡಬ್‌ ಆಗಲಿದೆ ಎನ್ನಲಾಗಿದೆ. ಸೀನ್‌ ರೋಲ್ಡನ್‌ ಅವರ ಸಂಗೀತ, ಎಸ್‌.ಆರ್‌.ಖದೀರ್‌ ಅವರ ಸಿನಿಮಾಟೋಗ್ರಫಿ, ಪಿಲೋಮಿನ್‌ ರಾಜ್‌ ಅವರ ಸಂಕಲನ ಈ ಸಿನಿಮಾಕ್ಕಿದೆ.

  'ಜೈ ಭೀಮ್‌' ಹೊರತುಪಡಿಸಿ, ಸೂರಿಯಾ ಹಾಗೂ ಜ್ಯೋತಿಕ ಅವರ 2ಡಿ ಎಂಟರ್‌‌ಟೈನ್‌ಮೆಂಟ್‌ ನಿರ್ಮಾಣ ಸಂಸ್ಥೆಯು ಹಲವು ಸಿನಿಮಾಗಳ ಮೂಲಕ ಸಕ್ರಿಯವಾಗಿರುವುದನ್ನು ಕಾಣಬಹುದು. ರಾಜಕೀಯ ವಿಡಂಬನೆಯ ‘ರಾಮೇ ಆನ್ದಾಲುಮ್‌ ರಾವಣೇ ಆನ್ದಾಲುಮ್‌’ ಸಿನಿಮಾ ಕಳೆದ ವಾರ ಅಮೇಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗಿತ್ತು. ಮತ್ತೊಂದು ಸಿನಿಮಾ 'ಉಡನ್ ಪಿರಪ್ಪು' ಇದೇ ತಿಂಗಳು (ಅಕ್ಟೋಬರ್‌ 14) ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿದ್ದು, ಜ್ಯೋತಿಕ ಅಭಿನಯದ 50ನೇ ಸಿನಿಮಾ ಇದಾಗಿದೆ.

  ಇದನ್ನೂ ಓದಿ: ಮಗನ 3ನೇ ವರ್ಷದ ಹುಟ್ಟುಹಬ್ಬದ ಸಂಭ್ರದಲ್ಲಿ ನಟಿ Rambha Indrakumar: ಇಲ್ಲಿವೆ ಕುಟುಂಬದ ಕ್ಯೂಟ್​ ಚಿತ್ರಗಳು..!

  ಶಶಿಕುಮಾರ್‌, ಸಮುದ್ರಕಣಿ, ಸೂರಿ, ನಿವೇದಿತಾ ಸತೀಶ್‌, ಸಿದ್ದು ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಓಟಿಟಿ ವೇದಿಕೆಯೊಂದಿಗೆ ಗಮನ ಸೆಳೆಯುತ್ತಿರುವ ಮಲಯಾಳಂನ 'ಫಹಾದ್‌ ಫಾಸಿಲ್‌‌ ಹಾದಿಯಲ್ಲೇ ಸೂರ್ಯ ಅವರು ಹೆಜ್ಜೆ ಇಟ್ಟಿರುವುದು ಇದರಿಂದ ಸ್ಪಷ್ಟವಾಗುತ್ತದೆ.
  Published by:MAshok Kumar
  First published: