Oscar ಅಂಗಳದಲ್ಲಿ ‘ಜೈ ಭೀಮ್’, ರೇಸ್’ನಲ್ಲಿದೆ ಮಲಯಾಳಂನ ‘ಮರಕ್ಕರ್’

Oscar Nominated Films: ಆಸ್ಕರ್ ನಾಮನಿರ್ದೇಶನ ಮತದಾನವು ಜನವರಿ 27ರಂದು ಪ್ರಾರಂಭವಾಗಲಿದೆ. ಅದಾದ ಬಳಿಕ ಅಂತಿಮ ನಾಮನಿರ್ದೇಶನದ ಪಟ್ಟಿಯನ್ನು ಫೆಬ್ರವರಿ 8ರಂದು ಪ್ರಕಟವಾಗಲಿದೆ. ನಂತರ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 27ರಂದು ಅಮೆರಿಕಾದಲ್ಲಿ ನಡೆಯಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ತಮಿಳು ಚಿತ್ರರಂಗದ ಸ್ಟಾರ್ ನಟ (Tamil Star Actor) ಸೂರ್ಯ (Suriya Shivakumar) ಅಭಿನಯದ ‘ಜೈ ಭೀಮ್’ (Jai Bhim) ಸಿನಿಮಾದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಜಸ್ಟೀಸ್ ಚಂದ್ರು (Justice Chandru) ಎಂಬುವರ ಜೀವನದ ನೈಜ ಘಟನೆ ಆದರಿಸಿದ ಈ ಸಿನಿಮಾ, ಅಮೆಜಾನ್ ಪ್ರೈಮ್ (Amazon Prime) ನಲ್ಲಿ ವರ್ಲ್ಡ್ ವೈಲ್ಡ್ ರಿಲೀಸ್ ಆಗಿ, ಅಪಾರ ಜನಮನ್ನಣೆ ಗಳಿಸಿತ್ತು. ಜೊತೆಗೆ ಕೆಲವೊಂದು ವಿವಾದಗಳನ್ನೂ ಹುಟ್ಟುಹಾಕಿತ್ತು. ಮತ್ತೊಂದೆಡೆ ನಟ ಸೂರ್ಯ ಸಿನಿ ಕರಿಯರ್ ನಲ್ಲಿ ಮತ್ತೊಂದು ದಾಖಲೆ ಬರೆದಿತ್ತು ‘ಜೈ ಭೀಮ್’. ಇದೀಗ ‘ಜೈ ಭೀಮ್’ನಿಂದ ಮತ್ತೊಂದು ಸುದ್ದಿ ಬಂದಿದೆ. ಆಸ್ಕರ್ (Oscar) ಅಂಗಳದಲ್ಲಿ ‘ಜೈ ಭೀಮ್’ ಸದ್ದು ಮಾಡುತ್ತಿದೆ. ಈ ಸುದ್ದಿ ಕೇಳಿ ಬರೀ ತಮಿಳು ಚಿತ್ರರಂಗವೊಂದೇ ಅಲ್ಲದೇ ಇಡೀ ಭಾರತೀಯ ಚಿತ್ರರಂಗವೇ ಹೆಮ್ಮೆ ಪಡುತ್ತಿದೆ.
  ‘ಆಸ್ಕರ್’ ಎಂದೇ ಕರೆಯಲ್ಪಡುವ ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ and ಸೈನ್ಸಸ್’ ಸಂಸ್ಥೆ ಈ ವರ್ಷದ ಆಸ್ಕರ್ ಪ್ರಶಸ್ತಿಗೆ ಅರ್ಹವಾಗಿರುವ 276 ಚಲನಚಿತ್ರಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಆ ಪಟ್ಟಿಯಲ್ಲಿ ‘ಜೈ ಭೀಮ್’ ಚಿತ್ರ ಸ್ಥಾನ ಪಡೆದುಕೊಂಡಿದೆ.

  ಶೋಷಿತರ ಪರ ದನಿಯಾದ ‘ಜೈ ಭೀಮ್’

  ತಮಿಳುನಾಡಿನ ಇರುಲರ್ ಬುಡಕಟ್ಟು ಜನರಿಗಾಗುವ ಅನ್ಯಾಯ ಮತ್ತು ಪೊಲೀಸ್ ದೌರ್ಜನ್ಯದ ಬಗ್ಗೆ ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ಜ್ಯೋತಿಕಾ-ಸೂರ್ಯ ಮಾಲೀಕತ್ವದ 2ಡಿ ಎಂಟರ್‌ಟೈನ್‌ಮೆಂಟ್‌ ಪ್ರೊಡಕ್ಷನ್’ನಲ್ಲಿ ತಯಾರಾದ ಈ ಸಿನಿಮಾ, ತಮಿಳಿನಲ್ಲಷ್ಟೇ ಅಲ್ಲದೇ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಡಬ್ ಆಗಿತ್ತು. ಇದೀಗ 94ನೇ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿರುವ ಏಕೈಕ ತಮಿಳು ಸಿನಿಮಾ ಎನಿಸಿಕೊಂಡಿದೆ.

  ಆಸ್ಕರ್ ಪ್ರಶಸ್ತಿ ರೇಸ್’ನಲ್ಲಿದೆ ‘ಮರಕ್ಕರ್’

  ಇದನ್ನೂ ಓದಿ: Priyanka Chopra ತಾಯಿಯಾಗುತ್ತಿದ್ದಂತೆ “surrogacy” ಪದದ ಹುಡುಕಾಟ ನಡೆಸಿದ ನೆಟ್ಟಿಗರು

  ತಮಿಳಿನ ‘ಜೈ ಭೀಮ್’ ಸಿನಿಮಾದ ಜೊತೆಗೆ ಮತ್ತೊಂದು ಸಿನಿಮಾ ಕೂಡ ಆಸ್ಕರ್ ಪ್ರಶಸ್ತಿಯ ರೇಸ್ ನಲ್ಲಿ ಇದೆ. ಅದುವೇ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ‘ಮರಕ್ಕರ್’ ಸಿನಿಮಾ. ಐತಿಹಾಸಿಕ ಕಥೆ ಆಧಾರಿತ ಈ ಸಿನಿಮಾದಲ್ಲಿ ಮೋಹನ್ ಲಾಲ್ ಅರಬ್ಬಿ ಸಮುದ್ರದ ಹುಲಿಯಂತೆ ಘರ್ಜಿಸಿ, ಜನಮನ್ನಣೆ ಗಳಿಸಿದ್ದರು. ಕೇರಳದ ಕ್ಯಾಲಿಕಟ್ ನಲ್ಲಿ 16ನೇ ಶತಮಾನದಲ್ಲಿ ನಡೆಯುವ ಕಥಾಹಂದರದ ಈ ಸಿನಿಮಾ, ಝಮೋರಿನ್ ನೌಕಾಪಡೆಯ ಅಡ್ಮಿರಲ್ ಕುಂಜಾಲಿ ಮರಕ್ಕರ್ ಅವರ ಜೀವನದ ಬಗ್ಗೆ ಬೆಳಕು ಚೆಲ್ಲಿತ್ತು.
  ಮೋಹನ್ ಲಾಲ್ ಅಭಿನಯದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಸಿನಿಮಾ ಈಗಾಗಲೇ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡಿದೆ. ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಪರಿಕಲ್ಪನೆಯಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಕೀರ್ತಿ ಸುರೇಶ್, ಅರ್ಜುನ್ ಸರ್ಜಾ, ಸುನೀಲ್ ಶೆಟ್ಟಿ ಸೇರಿದಂತೆ ಪ್ರತಿಭಾನ್ವಿತ ನಟ-ನಟಿಯರ ದಂಡೇ ನಟಿಸಿತ್ತು. ಇದೀಗ ಈ ಚಿತ್ರ ಕೂಡ ಆಸ್ಕರ್ ಪ್ರಶಸ್ತಿಯ ಅಂಗಳದಲ್ಲಿದೆ.

  ಆಸ್ಕರ್ ನಾಮನಿರ್ದೇಶನ ಮತದಾನವು ಜನವರಿ 27ರಂದು ಪ್ರಾರಂಭವಾಗಲಿದೆ. ಅದಾದ ಬಳಿಕ ಅಂತಿಮ ನಾಮನಿರ್ದೇಶನದ ಪಟ್ಟಿಯನ್ನು ಫೆಬ್ರವರಿ 8ರಂದು ಪ್ರಕಟವಾಗಲಿದೆ. ನಂತರ ಪ್ರಶಸ್ತಿ ಪ್ರಧಾನ ಸಮಾರಂಭವು ಮಾರ್ಚ್ 27ರಂದು ಅಮೆರಿಕಾದಲ್ಲಿ ನಡೆಯಲಿದೆ.

  ಭಾರತೀಯರ ಮನಗೆದ್ದ ‘ಜೈ ಭೀಮ್’ ಹಾಗೂ ‘ಮರಕ್ಕರ್’ ಸಿನಿಮಾ ಆಸ್ಕರ್ ತೀರ್ಪುಗಾರರ ಮನಸ್ಸನ್ನೂ ಗೆಲ್ಲಲಿ, ಎರಡೂ ಸಿನಿಮಾ ಪ್ರಶಸ್ತಿ ಗೆದ್ದು ಬರಲಿ ಅಂತ ಸಿನಿ ಪ್ರಿಯರು ಹಾರೈಸಿದ್ದಾರೆ.

  ವರದಿ: ಅಣ್ಣಪ್ಪ ಆಚಾರ್
  Published by:Sandhya M
  First published: