ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಎಕ್ಸ್ ಕ್ಯೂಸ್ ಮಿ' ಖ್ಯಾತಿಯ ಸುನಿಲ್ ರಾವ್

news18
Updated:June 25, 2018, 5:46 PM IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಎಕ್ಸ್ ಕ್ಯೂಸ್ ಮಿ' ಖ್ಯಾತಿಯ ಸುನಿಲ್ ರಾವ್
news18
Updated: June 25, 2018, 5:46 PM IST
ನ್ಯೂಸ್​ 18 ಕನ್ನಡ 

ಎಕ್ಸ್‍ಕ್ಯೂಸ್‍ಮಿ ಖ್ಯಾತಿಯ ನಟ ಸುನೀಲ್ ರಾವ್ ಇಂದು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ವಸ್ತ್ರ ವಿನ್ಯಾಸಕಿ ಶ್ರೇಯಾ ಅಯ್ಯರ್ ಅವರನ್ನ ಸುನೀಲ್ ರಾವ್ ಕೈ ಹಿಡಿದಿದ್ದು, ಜೆ.ಪಿ ನಗರದ ಆರ್​ಎಲ್​ಆರ್​ ಕಲ್ಯಾಣ ಮಂಟಪದಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆಯಿತು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಸುನಿಲ್​ ರಾವ್​ ಹಾಗೂ ಶ್ರೇಯಾ ಅಯ್ಯರ್​


ಪ್ರೀತಿಸಿ ಮನೆಯವರ ಮನವೊಲಿಸಿ ಮದುವೆಯಾಗಿರುವ ಈ ಜೋಡಿಗೆ, ವೆಬ್‍ಸೀರಿಸ್ ಮಾಡುವಾಗ ಪರಿಚಯವಾಗಿತ್ತಂತೆ. ಆಗಿನ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಇಂದು ದಾಂಪತ್ಯ ರೂಪ ಪಡೆದುಕೊಂಡಿದೆ. ಅಂದಗಹಾಗೆ ಈ ಮದುವೆಯಲ್ಲಿ ಸೃಜನ್ ಲೋಕೆಶ್ ಕುಟುಂಬ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಪಾಲ್ಗೊಂಡಿದ್ದರು.

ಬಿ ಕೆ ಸುಮಿತ್ರಾರವರ ಪುತ್ರ ಸುನಿಲ್ ರಾವ್ ಕೆಲ ವರ್ಷಗಳಿಂದ ಚಿತ್ರರಂಗದಿಂದ ದೂರವಾಗಿದ್ದರು. ಈಗ ಮತ್ತೆ 'ತುರ್ತು ನಿರ್ಗಮನ' ಚಿತ್ರದಿಂದ ಮತ್ತೆ ಚಂದನವನಕ್ಕೆ ಮರಳುತ್ತಿದ್ದಾರೆ.
First published:June 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...