ಕೆಸಿಸಿ ಪಂದ್ಯದ ಮೂಲಕ ಕೊಡಗು ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ ಕನ್ನಡ ಚಿತ್ರರಂಗ

news18
Updated:September 1, 2018, 8:11 PM IST
ಕೆಸಿಸಿ ಪಂದ್ಯದ ಮೂಲಕ ಕೊಡಗು ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ ಕನ್ನಡ ಚಿತ್ರರಂಗ
news18
Updated: September 1, 2018, 8:11 PM IST
ನ್ಯೂಸ್ 18 ಕನ್ನಡ

ಈ ವರ್ಷದ ಕೆಸಿಸಿ ಪಂದ್ಯದಿಂದ ಸಂಗ್ರಹವಾಗುವ ಹಣವನ್ನು ಕೊಡಗು ಪ್ರವಾಹ ಸಂತ್ರಸ್ತರಿಗೆ ನೀಡಲು ಕನ್ನಡ ಚಿತ್ರರಂಗದ ಕಲಾವಿದರು ಮುಂದಾಗಿರುವುದಾಗಿ ನಟ ಸುದೀಪ್​ ತಿಳಿಸಿದ್ದಾರೆ.

ಇಂದು 'ಕನ್ನಡ ಚಲನಚಿತ್ರ ಕಪ್' (ಕೆಸಿಸಿ) ಕೆಸಿಸಿ ಟೂರ್ನಮೆಂಟ್ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಕಿಚ್ಚ ಸುದೀಪ್,  ಕಲಾವಿದರೆಲ್ಲಾ ಸೇರಿ ಕೊಡಗಿನ ನೆರೆ ಸಂತ್ರಸ್ತರಿಗೆ ಹಣ ಸಂಗ್ರಹಿಸಿದ್ದು, ಪಂದ್ಯದ ಉದ್ಘಾಟನಾ ದಿನ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಲಾಗುವುದು. ಜೊತೆಗೆ ಕೆಸಿಸಿ ಟೂರ್ನಮೆಂಟ್ ಟಿಕೆಟ್ ಹಣವನ್ನು ಕೂಡ ನೀಡುತ್ತೇವೆ ಎಂದಿದ್ದಾರೆ.

ಕಳೆದ ಭಾರಿ ಕನ್ನಡ ಚಲನಚಿತ್ರ ಕಪ್ ಆರಂಭಿಸಿದಾಗ ಎಲ್ಲಾ ಕಡೆಗಳಿಂದಲು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಈ ಬಾರಿ ಎರಡನೇ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 6 ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರು ಕೆಸಿಸಿಯಲ್ಲಿ ಆಡಲಿದ್ದಾರೆ. ಇದು ನಮ್ಮ ಹೊಸ ಪ್ರಯತ್ನವಾಗಿದ್ದು, ಕನ್ನಡ ಚಿತ್ರರಂಗ ಇದಕ್ಕೆ ಸಾಕ್ಷಿಯಾಗಲಿದೆ ಎಂದಿದ್ದಾರೆ.

ಈ ಯೋಜನೆ ನನ್ನಿಂದ ಆರಂಭವಾಗಿದ್ದರೂ ಇದನ್ನು ಬೆಳೆಸಲು ಇಡೀ ಕನ್ನಡ ಚಿತ್ರರಂಗವೇ ಸಹಾಯ ಮಾಡಿದ್ದು, ಇದು ಕೆಸಿಸಿ ದೊಡ್ಡದಾಗಿ ಗುರುತಿಸಿಕೊಳ್ಳಲು ಸಹಾಯವಾಗಿದೆ. ಜೊತೆಗೆ ದೊಡ್ಡ ದೊಡ್ಡ ಸ್ಪಾನ್ಸರ್ಸ್​ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಇದೇ ತಿಂಗಳ 8 ಮತ್ತು 9ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೂರ್ನಮೆಂಟ್ ನಡೆಯಲಿದ್ದು, ಸುನಿಲ್ ಶೆಟ್ಟಿ, ತಮಿಳು ಚಿತ್ರರಂಗದ ಧನುಷ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದ ಉದ್ಘಾಟನೆಗೆ ಬರಲಿದ್ದಾರೆ ಎಂದರು. ಜೊತೆಗೆ ಸೋಮವಾರದಿಂದ ಟೆಕೆಟ್ ಕೂಡ ದೊರಯಲಿದ್ದು, ಎರಡೂ ದಿನಕ್ಕೆ ಸೇರಿ 50 ರಿಂದ 500 ರೂ. ಟಿಕೆಟ್ ನೀಡಲಾಗುವುದು. ಸೆಪ್ಟೆಂಬರ್ 5ಕ್ಕೆ ಎಲ್ಲಾ 6 ಅಂತರಾಷ್ಟ್ರೀಯ ಕ್ರಿಕಟ್ ಆಟಗಾರರು ಬೆಂಗಳೂರಿಗೆ ಬಂದಿಳಿಯಲಿದ್ದು, ಅವರೊಂದಿಗೆ ನಾವು ಅಭ್ಯಾಸ ನಡೆಸಲಿದ್ದೇವೆ ಎಂದರು.

'ಕರ್ನಾಟಕ ಚಲನಚಿತ್ರ ಕಪ್​ ಸೀಸನ್​ 2'ಗೆ ನಡೆದಿದೆ ಭರದ ಸಿದ್ಧತೆ!

ಇದೇ ವೇಳೆ ಕೆಸಿಸಿ ಕ್ರಿಕೆಟ್ ಟೂರ್ನಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಬರುವ ವಿಚಾರದ ಬಗ್ಗೆ ಮಾತನಾಡಿದ ಸುದೀಪ್, 'ಅವರು ಬರಬಾರದು ಎಂದು ಯಾರೂ ತಡೆದಿಲ್ಲ. ಸಮಸ್ಯೆ ಎಲ್ಲಿ ಆಗಿದೆಯೋ ಅಲ್ಲೇ ಪರಿಹಾರ ಆಗಬೇಕು' ಎಂದು ಹೇಳಿದ್ದಾರೆ.
Loading...

ಬಳಿಕ ಮಾತನಾಡಿದ ಶಿವರಾಜ್ ಕುಮಾರ್,  ಕ್ರಿಕೆಟ್ ಎಂದರೆ ನನಗೆ ಬಹಳ ಇಷ್ಟ. ಕ್ರಿಕೆಟ್ ಅಭಿಮಾನಿಯಾಗಿ ನಾನು ಕೆಸಿಸಿಯಲ್ಲಿ ಆಡುತ್ತಿರುವೆ ಎಂದರು. ಇದೇ ವೇಳೆ ಜಿ. ಆರ್ ವಿಶ್ವನಾಥ್ ಅವರನ್ನು ನೆನೆದು ಶಿವರಾಜ್ ಕುಮಾರ್ ಅವರು ದುಃಖಿತರಾದ ಘಟನೆಯೂ ನಡೆಯಿತು.

VIDEO: ವೈರಲ್​ ಆಗುತ್ತಿದೆ ಕಿಚ್ಚ ಹಾಗೂ ಗಣೇಶ್​ ಅವರ ಕ್ರಿಕೆಟ್ ಅಭ್ಯಾಸದ ವಿಡಿಯೋ

ನಾಳೆ (ಸೆ. 2) ಸುದೀಪ್ ಅವರ ಹುಟ್ಟು ಹಬ್ಬವಾಗಿದ್ದು, ಈ ಪ್ರಯುಕ್ತ ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿನ ಸುದೀಪ್ ಅವರ ಫಸ್ಟ್​ ಲುಕ್​ ಬಿಡುಗಡೆಗೊಳಿಸಲಾಯಿತು.'ಕೆಸಿಸಿ ಕ್ರಿಕೆಟ್ ಟೂರ್ನಿಯ ನೇರ ಪ್ರಸಾರ ಕಲರ್ಸ್​​ ಸೂಪರ್​​ನಲ್ಲಿ ಮೂಡಿಬರಲಿದೆ'
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ