ವಾಲ್ಮೀಕಿ ಸಮುದಾಯದ ಪ್ರತಿಭಟನೆಗೆ ಸುದೀಪ್​ ಬೆಂಬಲ: ಪ್ರಸನ್ನಾನಂದ ಸ್ವಾಮೀಜಿ ಪರ ನಿಂತ ಕಿಚ್ಚ..!

ವಿದ್ಯಾರ್ಥಿಗಳ ಒಳಿತಿಗಾಗಿ ವಾಲ್ಮೀಕಿ ಸಮಾಜದ ಪ್ರಸನ್ನಾನಂದ ಸ್ವಾಮೀಜಿ ಅವರು ಪಾದಯಾತ್ರೆ ನಡೆಸುತ್ತಿದ್ದು, ಅವರ ಪರವಾಗಿ ತಾನಿದ್ದೇನೆ ಎಂದು ಕಿಚ್ಚ ಟ್ವೀಟ್​ ಮಾಡಿದ್ದಾರೆ.

ಶ್ರೀರಾಮು ಹಾಗೂ ಸುದೀಪ್​ (ಸಾಂದರ್ಭಿಕ ಚಿತ್ರ)

ಶ್ರೀರಾಮು ಹಾಗೂ ಸುದೀಪ್​ (ಸಾಂದರ್ಭಿಕ ಚಿತ್ರ)

  • News18
  • Last Updated :
  • Share this:
ಪರಿಶಿಷ್ಟ ಪಂಗಡದ 7.5ರಷ್ಟು ಮೀಸಲಾತಿಗೆ ಒತ್ತಾಯಿಸಿ ವಾಲ್ಮೀಕಿ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈಗಾಗಲೇ ಇದಕ್ಕೆ ಶಾಸಕ ಶ್ರೀರಾಮುಲು, ಕಾಂಗ್ರೆಸ್​ ಮುಖಂಡ ಉಗ್ರಪ್ಪ, ಬಿಜೆಪಿ ಮುಖಂಡ ನಾಗೇಂದ್ರ ಸೇರಿಂದಂತೆ ವಾಲ್ಮೀಕಿ ಸಮುದಾಯದ ರಾಜಕೀಯ ನಾಯಕರು ಬೆಂಬಲ ಸೂಚಿಸುತ್ತಿದ್ದಾರೆ.

ಹೀಗಿರುವಾಗಲೇ ನಟ ಕಿಚ್ಚ ಸುದೀಪ್​ ಸಹ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಹೌದು, ವಿದ್ಯಾರ್ಥಿಗಳ ಒಳಿತಿಗಾಗಿ ಸ್ವಾಮೀಜಿ ಅವರು ಪಾದಯಾತ್ರೆ ನಡೆಸುತ್ತಿದ್ದು, ಅವರ ಪರವಾಗಿ ತಾನಿದ್ದೇನೆ ಎಂದು ಕಿಚ್ಚ ಟ್ವೀಟ್​ ಮಾಡಿದ್ದಾರೆ.

Sudeep Supporting Protest by Valmiki Community
ವಾಲ್ಮೀಕಿ ಸಮುದಾಯದ ಬೆಂಬಲಕ್ಕೆ ನಿಂತ ಸುದೀಪ್​


ಶ್ರೀ ಶ್ರೀ ಶ್ರೀ ಪರಮಪೂಜ್ಯ ಪ್ರಸನ್ನಾನಂದ ಮಹಾಸ್ವಾಮಿಗಳಿಗೆ ಆ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳು. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸ್ವಾಮೀಜಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದು, ಇದಕ್ಕೆ ಕೂಡಲೇ ಸರ್ಕಾರ ಸ್ಪಂದಿಸಬೇಕೆಂದೂ ಸುದೀಪ್​ ಒತ್ತಾಯಿಸಿದ್ದಾರೆ.

ವಾಲ್ಮೀಕಿ ಸಮುದಾಯದ ಪರ ವಿಷಯ ಬಂದಾಗಲೆಲ್ಲ ಸುದೀಪ್​ ಸದಾ ಬೆಂಬಲವಾಗಿ ನಿಲ್ಲುತ್ತಾರೆ. ಈ ಹಿಂದೆ 'ವೀರ ಮದಕರಿ' ಸಿನಿಮಾ ಮಾಡುವ ವಿಷಯ ಬಂದಾಗಲೂ ಸ್ವಾಮೀಜಿ ಅವರು ಸುದೀಪ್​ ಅವರೇ ಈ ಪಾತ್ರವನ್ನು ಮಾಡಬೇಕೆಂದು ಆಗ್ರಹಿಸಿದ್ದರು. ಆಗ ಸುದೀಪ್​ ಸಹ ಅದಕ್ಕೆ ಸಮ್ಮತಿ ಸೂಚಿಸಿದ್ದರು.

ಇದನ್ನೂ ಓದಿ: Anushka Shetty: ಕಮ್​ಬ್ಯಾಕ್​ ಮಾಡಿದ ಸಿನಿಮಾದ ಚಿತ್ರೀಕರಣದ ವೇಳೆ ಗಾಯಗೊಂಡ ಅನುಷ್ಕಾ ಶೆಟ್ಟಿ..!

ಈ ವಿಷಯವಾಗಿ ನಟ ದರ್ಶನ್​ ಹಾಗೂ ಸುದೀಪ್​ ಅಭಿಮಾನಿಗಳ ನಡುವೆ ಆಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ವೀಟ್​ ವಾರ್​ ನಡೆದಿತ್ತು.  ನಂತರ ಸುದೀಪ್​ ಈ ವಿಷಯದಿಂದ ಹಿಂದೆ ಸರಿಯುವ ಮೂಲಕ ಆ ವಿವಾದಕ್ಕೆ ತೆರೆ ಎಳೆದರು.

ಇದನ್ನೂ ಓದಿ: Pailwan Kichcha: ಪೈಲ್ವಾನ್​ನಂತಿರುವ ಕಿಚ್ಚ ಈಗ ಮತ್ತಷ್ಟು ಫಿಟ್​ ಆಗಬೇಕಂತೆ: ಅದಕ್ಕೆ ಸುದೀಪ್​ರ ಮಾಸ್ಟರ್​ ಪ್ಲಾನ್​ ಏನು ಗೊತ್ತಾ..?

First published: