Kichcha Sudeep: ಕಾಣೆಯಾಗಿದ್ದ ಬಾಲಕನನ್ನು ಹುಡುಕುವ ಯತ್ನ: ಅವರೊಂದಿಗೆ ಕಿಚ್ಚನೂ ಮಾಡಿದ್ರು ಹುಡುಕೋ ಪ್ರಯತ್ನ !

Kichhca Sudeep Tweet: ಇತ್ತೀಚೆಗಷ್ಟೇ ಲಗ್ಗೆರೆಯಲ್ಲಿ ಕಾಣೆಯಾಗಿದ್ದ ಚೇತನ್ ಎಂಬ ಬಾಲಕನ ಕುರಿತು ಕಿಚ್ಚ ಸುದೀಪ್ ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದರು. ಆ ಟ್ವೀಟ್‍ ಅನ್ನು ನೋಡಿದ ಸುದೀಪ್ ತಕ್ಷಣ ರೀಟ್ವೀಟ್ ಮಾಡಿ ಸಹಾಯ ಮಾಡಿ ಎಂದು ಕೈಮುಗಿದು ಕೇಳಿಕೊಂಡಿದ್ದರು.

Anitha E | news18-kannada
Updated:November 8, 2019, 11:47 AM IST
Kichcha Sudeep: ಕಾಣೆಯಾಗಿದ್ದ ಬಾಲಕನನ್ನು ಹುಡುಕುವ ಯತ್ನ: ಅವರೊಂದಿಗೆ ಕಿಚ್ಚನೂ ಮಾಡಿದ್ರು ಹುಡುಕೋ ಪ್ರಯತ್ನ !
ಕಿಚ್ಚ ಸುದೀಪ್​
  • Share this:
ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮಿಡಿಯುವ ಸೂಪರ್ ಸ್ಟಾರ್​. ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವ, ಅವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವ ಕನ್ನಡದ ಮಾದರಿ ಸ್ಟಾರ್.

ಸುದೀಪ್ ಉತ್ತಮ ನಟನಾಗುವುದರ ಜತೆಗೆ ಒಳ್ಳೆ ಮನಸ್ಸಿರುವ ವ್ಯಕ್ತಿ ಕೂಡ. ಕಾರಣ ಕಷ್ಟದಲ್ಲಿರುವವರಿಗೆ ನೆರವಾಗುವ ಅವರ ಗುಣ. ಅವರ ಮನೆಗೆ ಬಂದು ಸಮಸ್ಯೆ ಹೇಳಿಕೊಳ್ಳಬೇಕು ಅಂತೇನಿಲ್ಲ. ಟ್ವಿಟರ್​ನಲ್ಲಿ ಗೊತ್ತಾದರೂ ತಕ್ಷಣ ತಮ್ಮ ಅಭಿಮಾನಿಗಳ ಸಮಸ್ಯೆ ಬಗೆಹರಿಸಲು ಮುಂದಾಗ್ತಾರೆ ಕಿಚ್ಚ.

Kiccha sudeep
ಕಿಚ್ಚ ಸುದೀಪ್


ಉತ್ತರ ಕರ್ನಾಟಕದಲ್ಲಿ ನೆರೆ ಉಂಟಾಗುತ್ತಲೇ ಅವರ ನೆರವಿಗೆ ಧಾವಿಸಿದ ಮೊದಲ ಸೂಪರ್​ಸ್ಟಾರ್ ಕಿಚ್ಚ. ಮಾತ್ರವಲ್ಲ ರಾಜ್ಯಾದ್ಯಂತ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ದಿನವನ್ನು ನಾನಾ ರೀತಿಯಲ್ಲಿ ಆಚರಿಸ್ತಾರೆ. ಕೆಲವರು ಬಾಲಾಶ್ರಮಗಳಲ್ಲಿ ಮಕ್ಕಳಿಗೆ ಸಹಾಯ ಮಾಡಿದರೆ, ಕೆಲವರು ವೃದ್ಧಾಶ್ರಮಗಳಲ್ಲಿ, ಇನ್ನೂ ಕೆಲವರು ರಕ್ತದಾನ ಶಿಬಿರಗಳ ಮೂಲಕ ಆಚರಿಸ್ತಾರೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಗೆ ಖುದ್ದು ಕಿಚ್ಚ ಕೂಡ ಸಹಾಯ ಮಾಡ್ತಾರೆ.

ಇದನ್ನೂ ಓದಿ: Odeya Hey Odeya Song: ದೇಹಿ ಅನ್ನೋರ ಕಾಯುವವನೇ ಈ ಒಡೆಯ: ಟೈಟಲ್​ ಟ್ರ್ಯಾಕ್​​ ಸಿಕ್ಕಿದೆ ಭರ್ಜರಿ ರೆಸ್ಪಾನ್ಸ್​..!

ಇತ್ತೀಚೆಗಷ್ಟೇ ಲಗ್ಗೆರೆಯಲ್ಲಿ ಕಾಣೆಯಾಗಿದ್ದ ಚೇತನ್ ಎಂಬ ಬಾಲಕನ ಕುರಿತು ಕಿಚ್ಚ ಸುದೀಪ್ ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದರು. ಆ ಟ್ವೀಟ್‍ ಅನ್ನು ನೋಡಿದ ಸುದೀಪ್ ತಕ್ಷಣ ರೀಟ್ವೀಟ್ ಮಾಡಿ ಸಹಾಯ ಮಾಡಿ ಎಂದು ಕೈಮುಗಿದು ಕೇಳಿಕೊಂಡಿದ್ದರು.

Sudeep asked help to find out the Missing boy Chethan
ಕಾಣೆಯಾಗಿದ್ದ ಬಾಲಕನ ಕುರಿತು ಟ್ವೀಟ್​ ಮಾಡಿದ ಸುದೀಪ್​
ಟ್ವಿಟರ್​ನಲ್ಲಿ ಬರೋಬ್ಬರಿ 22 ಲಕ್ಷ ಹಿಂಬಾಲಕರನ್ನು ಹೊಂದಿರುವ ಸುದೀಪ್ ಅವರು ತಮ್ಮ ಟ್ವಿಟರ್​ ಮೂಲಕ  ಬಾಲಕನ ಕುರಿತ ಸುದ್ದಿ ಹೆಚ್ಚು ಜನರಿಗೆ ಹರಡಿ, ಬೇಗ ಹುಡುಕುವಲ್ಲಿ ಸಹಕಾರಿಯಾಗುವ ಉದ್ಧೇಶದಿಂದ ರೀಟ್ವೀಟ್ ಮಾಡಿದ್ದರು. ವಿಶೇಷ ಅಂದ್ರೆ ಈ ಟ್ವೀಟ್ ಮಾಡಿದ ಕೇವಲ 6 ತಾಸುಗಳಲ್ಲೇ ಕಾಣೆಯಾಗಿದ್ದ ಬಾಲಕ ಚೇತನ್ ಸಿಕ್ಕಿದ್ದಾನೆ. ಈ ವಿಷಯವನ್ನು ಸುದೀಪ್​ ಅವರ ಅಭಿಮಾನಿ ಮತ್ತೆ ಟ್ವಿಟರ್​ ಮೂಲಕ ಸುದೀಪ್​ ಅವರಿಗೆ ಮುಟ್ಟಿಸಿ, ಧನ್ಯವಾದ ತಿಳಿಸಿದ್ದಾರೆ.

Hi Boss.ಹೌದು, ಕಿಚ್ಚ ಸುದೀಪ್ ಟ್ವೀಟ್ ಮಾಡಿದ ಕೇವಲ 6 ತಾಸುಗಳಲ್ಲೇ ಪೊಲೀಸರು ಕಾಣೆಯಾಗಿದ್ದ ಚೇತನ್‍ಅನ್ನು ಹುಡುಕಿ, ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ. ಈ ವಿಷಯ ತಿಳಿದ ಬಳಿಕವೂ ಅಭಿಮಾನಿಗಳೊಂದಿಗೆ ಖುದ್ದು ಕಿಚ್ಚ ಕೂಡ ಸಂಭ್ರಮಿಸಿದ್ದಾರೆ. ಇದೊಂದು ಅದ್ಭುತ ಸುದ್ದಿ. ಈ ಅಪ್‍ಡೇಟ್ ನೀಡಿದ್ದಕ್ಕೆ ಧನ್ಯವಾದಗಳು. ಎಲ್ಲವೂ ಸರಿಯಾಗಿದೆ, ಎಲ್ಲರಿಗೂ ಥ್ಯಾಂಕ್ಸ್ ಎಂದು ಟ್ವೀಟಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಹೀಗೆ ಕಿಚ್ಚ ಸುದೀಪ್ ತಮ್ಮದೇ ರೀತಿಯಲ್ಲಿ ತಮ್ಮ ಅಭಿಮಾನಿಗಳ ಕಷ್ಟಗಳಿಗೆ ಮಿಡಿಯುತ್ತಿರುವುದು ವಿಶೇಷವೇ ಸರಿ.

Katrina Kaif: ಮೊದಲ ಬಾರಿಗೆ ಸಿಕ್ಕಾಪಟ್ಟೆ ಹಾಟ್​ ಆಗಿ ಫೋಟೋಶೂಟ್​ಗೆ ಪೋಸ್ ಕೊಟ್ಟ ರಿಸ್ಕ್​ ಟೇಕರ್​ ಕತ್ರಿನಾ ಕೈಫ್ ​​..! 
First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ