ರೋರಿಂಗ್ ಸ್ಟಾರ್ ಶ್ರೀಮುರುಳಿ (Roaring Star Sri Murali) ಮದಗಜ ಚಿತ್ರದ ನಂತ್ರ ಸ್ವಲ್ಪ ಸೈಲೆಂಟ್ ಆಗಿದ್ದಾರೆ. ಅಗಸ್ತ್ಯ ಸೈಲೆಂಟ್ ಆಗಿದ್ದಾನೆ ಅಂದ್ರೆ ಅದಕ್ಕೆ ಒಂದು ರೀಸನ್ ಇರಲೇ ಬೇಕು. ಆ ರೀಸನ್ ಏನಪ್ಪ ಅಂದ್ರೆ 'ಬಘೀರ" . ಹೌದು, ಶ್ರೀಮುರುಳಿ ಮದಗಜ ನಂತ್ರ " ಬಘೀರ" (Bagheera) ಚಿತ್ರಕ್ಕೆ ತಮ್ಮನ್ನ ಸಂಪೂರ್ಣ ಅರ್ಪಿಸಿಕೊಂಡಿದ್ಧಾರೆ. ಆದ್ರೆ ಮದಗಜ ಮುಗಿದು 6 ತಿಂಗಳಾದ್ರು ಬಘೀರ ತಂಡದಿಂದ ಏನು ಮ್ಯಾಟರ್ ಇಲ್ವಲ್ಲ ಯಾಕೆ ಅಂತ ರೋರಿಂಗ್ ಸ್ಟಾರ್ ಫ್ಯಾನ್ಸ್ ಗಳು ಸ್ವಲ್ಪ ಕನ್ಪ್ಯೂಸ್ ಆಗಿದ್ರು. ಆದ್ರೆ ಈಗ ಬಘೀರ ಬಳಗದಿಂದ ಚಿತ್ರಪ್ರೇಮಿಗಳಿಗೆ ಕಲರ್ ಪುಲ್ ಆದ ಸಮಾಚಾರವೊಂದು ಬಂದಿದೆ. ಅದೇನಪ್ಪ ಅಂತೀರಾ ? ಈ ಸ್ಟೋರಿ ಓದಿ.
ರೋರಿಂಗ್ ಸ್ಟಾರ್ ಶ್ರೀಮುರುಳಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಲಕ್ಕಿ ಡೈರೆಕ್ಟರ್ ಡಾ.ಸೂರಿ ಆಕ್ಷನ್ ಕಟ್ ಹೇಳಲಿರುವ " ಬಘೀರ" ಚಿತ್ರ ನಾಳೆ ಸಿಂಪಲ್ ಆಗಿ ಸೆಟ್ಟೇರಲಿದೆ. ಹೊಂಬಾಳೆ ಫಿಲಂಸ್ ನ ಬಹುತೇಕ ಎಲ್ಲಾ ಚಿತ್ರಗಳು ಸರಳವಾಗಿ ಸೆಟ್ಟೇರುತ್ತವೆ. ಆದ್ರೆ ಚಿತ್ರ ಮಾತ್ರ ಯಾರು ನಿರೀಕ್ಷೆ ಮಾಡದ ರೀತಿ ರಿಚ್ ಆಗಿ ಮೂಡಿ ಬರ್ತವೆ.
ಅದೇ ರೀತಿ ಈಗ ಬಘೀರ ಚಿತ್ರ ಸೆಟ್ಟರಲಿದ್ದು. ನಾಳೆ ಮಹಾಲಕ್ಷ್ಮಿ ಲೇಔಟ್ ನ ವಜ್ರಗಿರಿ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಮಾಡಲು ಹೊಂಬಾಳೆ ಬಳಗ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದಾರೆ. ಇನ್ನು ಚಿತ್ರದ ಮೂಹೂರ್ತದಲ್ಲಿ ಚಿತ್ರತಂಡ ಮಾತ್ರ ಭಾಗಿಯಾಗಲಿದೆ ಎಂದು ನಿರ್ದೇಶಕ ಡಾ.ಸೂರಿ ನ್ಯೂಸ್ 18 ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಬಡ ಬಾಲಕನ ಶಿಕ್ಷಣಕ್ಕೆ ಸಹಾಯಹಸ್ತ ಚಾಚಿದ ನಟಿ, ಟ್ವಿಟ್ಟರ್ನಲ್ಲಿ ವಿದ್ಯಾರ್ಥಿ ನಂಬರ್ಗಾಗಿ ಹುಡುಕಾಟ
ಹೊಂಬಾಳೆ ಫಿಲಂಸ್ ನಲ್ಲಿ ಬಘೀರ ಚಿತ್ರ ಅನೌನ್ಸ್ ಆದಾಗಿನಿಂದ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟು ಕೊಂಡಿದ್ದಾರೆ ರೋರಿಂಗ್ ಸ್ಟಾರ್ ಅಭಿಮಾನಿಗಳು. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಕತೆ ಬರೆದಿದ್ರೆ ಯಶ್ ಗೆ" ಲಕ್ಕಿ" ಯಂತ ಸೂಪರ್ ಹಿಟ್ ಚಿತ್ರ ಕೊಟ್ಟ ಡಾ.ಸೂರಿ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಬಘೀರ ಹೊಂಬಾಳೆ ಫಿಲಂಸ್ 8 ನೇ ಚಿತ್ರವಾಗಿದ್ದು ಪಕ್ಕಾ ಮಾಸ್ ಸಿನಿಮಾ ಅನ್ನೋದು ಈಗಾಗಲೇ ಟೈಟಲ್ ಹಾಗೂ ಪೋಸ್ಟರ್ ನಿಂದಲೇ ಕನ್ಪರ್ಮ್ ಆಗಿದೆ.
ಚಿತ್ರದಲ್ಲಿ ರೋರಿಂಗ್ ಸ್ಟಾರ್ ಪೊಲೀಸ್ ಪಾತ್ರದಲ್ಲಿ ಕಾಣ್ತಿರುವ ಕಾರಣ ಕಳೆದ ಆರು ತಿಂಗಳಿನಿಂದ ಶ್ರೀಮುರುಳಿ ಬಘೀರ ಚಿತ್ರಕ್ಕಾಗಿ ದೇಹವನ್ನು ದಂಡಿಸುತ್ತಿದ್ದಾರೆ. ಇನ್ನು ನಿರ್ದೆಶನಕ ಡಾ.ಸೂರಿ ಕಳೆದ ಮೂರು ವರ್ಷಗಳಿಂದ ಬಘೀರ ಚಿತ್ರದ ಚಿತ್ರಕತೆಯಲ್ಲಿ ಕಳೆದು ಹೋಗಿದ್ದು, ಸದ್ಯ ಪ್ರೀ ಪ್ರೊಡಕ್ಷನ್ ವರ್ಕ್ ಅನ್ನು ಕಂಪ್ಲೀಟ್ ಮಾಡಿಕೊಂಡಿದ್ದಾರೆ. ನಾಳೆ ಸರಳವಾಗಿ ಮುಹೂರ್ತ ನೇವೇರಿಸುವ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯೋಕು ಮುನ್ನ ಒಂದಷ್ಟು ಹೋಮ್ ವರ್ಕ್ ಮಾಡಿ ಶೂಟಿಂಗ್ ಶುರು ಮಾಡಲು ಪ್ಲಾನ್ ಮಾಡಿದೆ.
ಇದನ್ನೂ ಓದಿ: ಫ್ಯಾಮಿಲಿ ಫೋಟೋ ಶೇರ್ ಮಾಡಿದ ರಶ್ಮಿಕಾ - ನಿಮ್ಮಿಂದಲೇ ನಮ್ಮ ಮುಖದಲ್ಲಿ ನಗು ಅಂದಿದ್ದು ಯಾರಿಗೆ?
ಸದ್ಯ ಚಿತ್ರದ ನಾಯಕ ಮಾತ್ರ ಫೈನಲ್ ಆಗಿದ್ದು, ನಾಯಕಿ ಹಾಗೂ ಪೋಷಕ ಪಾತ್ರಗಳು ವಿಲನ್ ಹೀಗೆ ಪ್ರಮುಖ ಪಾತ್ರಗಳ ಫೈನಲ್ ಆಗ್ತಿದಂತೆ ಶೂಟಿಂಗ್ ಶುರು ಮಾಡುವ ಅಲೋಚನೆಯಲ್ಲಿದ್ದಾರೆ ಡಾ.ಸೂರಿ. ಇನ್ನು ಬಘೀರ ಪ್ಯಾನ್ ಇಂಡಿಯಾ ಚಿತ್ರ ವಾಗಿದ್ರು ಈ ಚಿತ್ರಕ್ಕೆ ಕನ್ನಡದ ಹುಡುಗಿಯನ್ನೆ ನಾಯಕಿಯಾಗಿ ಕರೆತರಲು ಯೋಜನೆ ಹಾಕಿಕೊಂಡಿದ್ದಾರೆ ಡೈರೆಕ್ಟರ್ ಡಾ. ಸೂರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ