Anupama Parameswaran: ‘ರೌಡಿ ಬಾಯ್ಸ್’ ಸಿನಿಮಾದಲ್ಲಿ ನಟಿ ಅನುಪಮಾ ಕಿಸ್ಸಿಂಗ್ ಸೀನ್ ಬಗ್ಗೆಯೇ ಚರ್ಚೆ, ವಿಡಿಯೋ ನೋಡಿ
ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕರದ ದಿಲ್ ರಾಜು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಆಶಿಶ್ ರೆಡ್ಡಿ ದಿಲ್ ರಾಜು ಸಹೋದರನ ಮಗನಾಗಿದ್ದು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ
ಸಾಮಾನ್ಯವಾಗಿ ಚಿತ್ರಗಳಲ್ಲಿ ಯಾವಾಗಲೂ ಬೋಲ್ಡ್ ದೃಶ್ಯಗಳಲ್ಲಿ ನಟಿಯರು (Actresses ) ನಟಿಸುತ್ತಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ(Social Media) ನೆಟ್ಟಿಗರು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ, ಆದರೆ ಕೆಲವೊಬ್ಬ ನಟಿಯರನ್ನು ಬೇರೆ ಚಿತ್ರಗಳಲ್ಲಿ ತುಂಬಾನೇ ವಿಭಿನ್ನವಾದ ಪಾತ್ರಗಳಲ್ಲಿ ನೋಡಿದ್ದು, ಆ ನಟಿ ದಿಢೀರನೆ ಹಸಿ ಬಿಸಿ ಕಿಸ್ಸಿಂಗ್ ದೃಶ್ಯಗಳನ್ನು ಮಾಡಿದರೆ ನೆಟ್ಟಿಗರು ಸಿಕ್ಕಾಪಟ್ಟೆ ತಲೆ ಕೆಡೆಸಿಕೊಂಡು ಟ್ರೋಲ್ ಮಾಡುವುದನ್ನು ನಾವೆಲ್ಲರೂ ನೋಡಿರುತ್ತೇವೆ.ಅಂತಹದೇ ಒಂದು ಘಟನೆ ಇಲ್ಲಿ ಒಬ್ಬ ನಟಿಯ ಜೊತೆಗೆ ನಡೆದಿದೆ ಎಂದು ಹೇಳಬಹುದು. ಮೂಲತಃ ಮಲಯಾಳಂ (Malayalam film industry) ಚಲನ ಚಿತ್ರೋದ್ಯಮದ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಎಂದು ಹೇಳಿದರೆ ತಕ್ಷಣಕ್ಕೆ ಅವರ ಮುಖವನ್ನು ನೀವು ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ದೊಡ್ಡ ಅಭಿಮಾನಿ ಬಳಗ
ದಕ್ಷಿಣ ಭಾರತದಲ್ಲಿ ತಮ್ಮ ಮುಗ್ದ ಮುಖ ಮತ್ತು ಸುಂದರವಾದ ನಗುವಿಗೆ ಮತ್ತು ನಟನೆಗೆ ಪ್ರಸಿದ್ಧರಾದ ಇವರು ಮಲಯಾಳಂ ಅಲ್ಲದೆ ತೆಲುಗು, ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿಯೂ ಸಹ ನಟಿಸಿದ್ದಾರೆ. ನಟ ಸಾರ್ವಭೌಮ’ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಅಭಿನಯಿಸುವುದರೊಂದಿಗೆ ಕನ್ನಡ ಚಿತ್ರರಂಗಕ್ಕೆ ಇವರು ಪರಿಚಯವಾದರು ಎಂದು ಹೇಳಬಹುದು. ಈಗಾದರೂ ನಿಮಗೆ ಅವರ ನೆನಪು ಆಗಿರಬೇಕಲ್ಲವೇ? ಅವರನ್ನು ಇಷ್ಟಪಡುವ ದೊಡ್ಡ ಅಭಿಮಾನಿ ಬಳಗವಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
'ರೌಡಿ ಬಾಯ್ಸ್' ಸಿನಿಮಾ
ಆದರೆ ಈಕೆ ನಟಿಸಿದ ಹೊಸ ಚಿತ್ರದಲ್ಲಿ ಕಿಸ್ಸಿಂಗ್ ದೃಶ್ಯಗಳಿಗೆ ಈಗ ಅದೇ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ, ಏಕೆಂದರೆ ಈ ಚಿತ್ರದಲ್ಲಿ ಇವರು ಮಾಡಿದ್ದು ಲಿಪ್ ಕಿಸ್. ಹೌದು.. ಇವರು ಅಭಿನಯಿಸಿದ 'ರೌಡಿ ಬಾಯ್ಸ್' ಸಿನಿಮಾದಲ್ಲಿ ನಟಿ ಅನುಪಮ ಅವರು ಚಿತ್ರದ ನಾಯಕನ ತುಟಿಗೆ ಮುತ್ತನ್ನು ನೀಡಿದ ದೃಶ್ಯವಿರುವ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
ಈ 'ರೌಡಿ ಬಾಯ್ಸ್' ಚಿತ್ರದಲ್ಲಿ ಹೊಸ ನಟ ಆಶಿಶ್ ರೆಡ್ಡಿ ಜೊತೆ ನಟಿ ಅನುಪಮಾ ಪರಮೇಶ್ವರನ್ ನಟಿಸಿದ್ದು, ಟ್ರೈಲರ್ನಲ್ಲಿ ಇವರಿಬ್ಬರು ಲಿಪ್ ಕಿಸ್ ಮಾಡಿರುವ ದೃಶ್ಯವಿದೆ ಮತ್ತು ಅದನ್ನು ನೋಡಿ ನೆಟ್ಟಿಗರು ಮತ್ತು ನಟಿಯ ಅಭಿಮಾನಿಗಳು ತುಂಬಾನೇ ಗರಂ ಆಗಿದ್ದಾರೆ ಮತ್ತು ಟ್ರೋಲ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಡಿಯೋ ನೋಡಿ:
ಲಿಪ್ ಕಿಸ್ ದೃಶ್ಯ
ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕರದ ದಿಲ್ ರಾಜು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಆಶಿಶ್ ರೆಡ್ಡಿ ದಿಲ್ ರಾಜು ಸಹೋದರನ ಮಗನಾಗಿದ್ದು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಕೆಲವು ನೆಟ್ಟಿಗರು ಈ ದೃಶ್ಯಗಳನ್ನು ನೋಡಿ ಕೆಲ ನಟಿಯರು ಸ್ಟಾರ್-ಮೇಕರ್ನ ಸ್ವದೇಶಿ ಸಿನೆಮಾದಲ್ಲಿ ಲಿಪ್ ಕಿಸ್ ದೃಶ್ಯಗಳನ್ನು ಮಾಡಲು ಸಿದ್ಧರಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ನಟಿ ಅನುಪಮಾ ಪರಮೇಶ್ವರನ್ ಈ ರೀತಿಯ ಲಿಪ್ ಕಿಸ್ಸಿಂಗ್ ದೃಶ್ಯಗಳನ್ನು ಮಾಡಿದ್ದು, ತಮ್ಮ ಚಿತ್ರರಂಗದ ನಟನೆಯ ವೃತ್ತಿಯಲ್ಲಿ ಮೊದಲ ಬಾರಿಗೆ ಈ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರ ಟ್ರೋಲ್ಗೆ ಗುರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಟ್ರೋಲ್ ಆದ ನಟಿ
ಈ ಲಿಪ್ ಕಿಸ್ ದೃಶ್ಯವಿರುವ 'ರೌಡಿ ಬಾಯ್ಸ್' ಸಿನಿಮಾದ ಟ್ರೈಲರ್ ಇಷ್ಟೊಂದು ಸದ್ದು ಮಾಡುತ್ತಿದೆ. ಟ್ರೈಲರ್ನಲ್ಲಿರುವುದು ಬರೀ ಒಂದೇ ಲಿಪ್ ಕಿಸ್, ಅದನ್ನೇ ನೋಡಿ ನಟಿಯನ್ನು ಟ್ರೋಲ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸುಮಾರು 3 ರಿಂದ 4 ಚುಂಬನ ದೃಶ್ಯಗಳಿವೆ ಎಂದು ವರದಿಗಳು ತಿಳಿಸಿವೆ. ಬರೀ ಟ್ರೈಲರ್ನಿಂದಲೇ ಹವಾ ಎಬ್ಬಿಸಿದ ಈ ಸಿನೆಮಾ ಇದೇ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಅಂದರೆ ಜನವರಿ 14 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡದವರು ತಿಳಿಸಿದ್ದಾರೆ.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ