news18-kannada Updated:June 6, 2020, 5:03 PM IST
ನಟ ಸೋನು ಸೂದ್
ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿ ಸಿಲುಕಿಕೊಂಡು ತಮ್ಮ ಮನೆಗೆ ಹಿಂತಿರುಗಲು ಪರದಾಡುತ್ತಿರುವ ಕಾರ್ಮಿಕರಿಗೆ ಬಾಲಿವುಡ್ ನಟ ಸೋನು ಸೂದ್ ಸಹಾಯ ಮಾಡುತ್ತಾ ಬಂದಿದ್ದಾರೆ. ಅವರ ಮನೆಗೆ ತೆರಳಲು ಬಸ್ ವ್ಯವಸ್ಥೆಯನ್ನು ಮಾಡುವ ಮೂಲಕ ಮಾನವೀಯತೆ ಕಾರ್ಯ ಮಾಡುತ್ತಿದ್ದಾರೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿರುವ ಅನೇಕ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿ ಅವರನ್ನು ಮನೆ ತಲುಪಿಸಿದ್ದಾರೆ. ಕರ್ನಾಟಕದ ವಲಸಿಗರಿಗೂ ಸಹಾಯ ಮಾಡಿದ್ದಾರೆ. ಇದೀಗ ಸೋನು ಸೂದ್ ಒರಿಸ್ಸಾ ವಲಸಿಗರಿಗೆ ನೆರವಾಗಿದ್ದಾರೆ. ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ವಿಮಾನ ವ್ಯವಸ್ಥೆ ಮಾಡುವ ಮತ್ತೊಂದು ಮಾಹತ್ಕಾರ್ಯ ಮಾಡಿದ್ದಾರೆ.
ಲಾಕ್ಡೌನ್ನಿಂದಾಗಿ ಒರಿಸ್ಸಾದ ಕೆಲ ಕಾರ್ಮಿಕರು ಕೇರಳದ ಕೊಚ್ಚಿಯಲ್ಲಿ ಸಿಲುಕಿಕೊಂಡಿದ್ದರು . ಅವರಲ್ಲಿ 147 ಮಹಿಳೆಯರು ಸೇರಿದಂತೆ ಒಟ್ಟು 167 ಕಾರ್ಮಿಕರು ಇದ್ದರು. ಲಾಕ್ಡೌನ್ನಿಂದ ಕೆಲಸವಿಲ್ಲದೆ, ಅತ್ತ ಕೈಯಲ್ಲಿ ಹಣವಿಲ್ಲದೆ ಕಾರ್ಮಿಕರು ಪರದಾಡುತ್ತಿದ್ದರು. ಹಾಗಾಗಿ ಶ್ರಮಿಕ್ ರೈಲಿನಲ್ಲಿ ಅವರಿಗೆ ಮನೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಈ ವಿಚಾರವನ್ನು ತಿಳಿದ ಸೋನು ಸೂದ್ ಅವರಿಗೆ ನೆರವಾಗಿದ್ದಾರೆ.
ಕೊಚ್ಚಿಯಿಂದ ಅವರೆಲ್ಲರಿಗೂ ವಿಮಾನ ವ್ಯವಸ್ಥೆ ಮಾಡುವ ಮೂಲಕ ಮನೆಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಕಾರ್ಮಿಕರ ವೆಚ್ಚವನ್ನು ನಟ ಸೋನು ಸೂದ್ ಭರಿಸಿದ್ದಾರೆ. ಇನ್ನು ಸೋನ್ ಸೂದ್ ಮಾಡಿರುವ ಕೆಲಸಕ್ಕೆ ಕಾರ್ಮಿಕರು ಧನ್ಯವಾದ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಮೆಚ್ಚುಗೆಯ ಕಾಮೆಂಟ್ ಬರೆದಿದ್ದಾರೆ.
ಸೋನು ಸೂದ್ ಈಗಾಗಲೇ ಅನೇಕ ಕಾರ್ಮಿಕರ ಸಂಕಷ್ಟಕ್ಕೆ ನೆರವಾಗಿದ್ದಾರೆ. ಇತ್ತೀಚೆಗೆ ಅವರು ಇದಕ್ಕೆಂದೇ ಸಹಾಯವಾಣಿಯನ್ನು ಶುರು ಮಾಡಿದ್ದಾರೆ. ಕಾರ್ಮಿಕರ ಕರೆಗಳನ್ನು ಪರಿಶೀಲಿಸಿ ಅವರಿಗೆ ನೆರವಾಗುತ್ತಿದ್ದಾರೆ. ಈ ಬಗ್ಗೆ ಸೋನ್ ಸೂದ್ ‘ ನನ್ನ ಪತ್ನಿ ಕಾರ್ಮಿಕರ ವಿವರಗಳನ್ನು ಬರೆದುಕೊಳ್ಳುತ್ತಾಳೆ. ಕಾರ್ಮಿಕರು ಯಾವ ಬಸ್ಸಿನಲ್ಲಿ ತೆರಳಬೇಕು ಎಂದು ನನ್ನ ಮಕ್ಕಳು ಪಟ್ಟಿ ಮಾಡುತ್ತಾರೆ ಎಂದು ಹೇಳಿದ್ದರು.
ಭಾರತದಲ್ಲಿ ಒನ್ಪ್ಲಸ್ 8 ಸಿರೀಸ್ ಸ್ಮಾರ್ಟ್ಫೋನ್ ಮಾರಾಟ ಪ್ರಾರಂಭ: ಬೆಲೆ ಇಲ್ಲಿದೆ
First published:
May 29, 2020, 8:54 PM IST