Sonu Sood-Warrior Aaji: ಹೊಟ್ಟೆಪಾಡಿಗಾಗಿ ರಸ್ತೆಗಿಳಿದ ವಾರಿಯರ್​ ಅಜ್ಜಿ: ನೆರವಿಗೆ ಮುಂದಾದ ಸೋನು ಸೂದ್-ರಿತೇಶ್​​..!

ಕೈಯಲ್ಲಿ ಬಿದಿರಿನ ಕಡ್ಡಿ ಹಿಡಿದು ಕರಗತ ಮಾಡಿಕೊಂಡಿರುವ ಕಲೆಯನ್ನು ಪ್ರದರ್ಶಿಸುತ್ತಿರುವ ಈಕೆ, ಈಗ ವಾರಿಯರ್ ಅಜ್ಜಿ ಎಂದೇ ಖ್ಯಾತರಾಗಿದ್ದಾರೆ. ಹೊಟ್ಟೆಪಾಡಿಗಾಗಿ ಈ ವಿದ್ಯೆಯನ್ನು ಪ್ರದರ್ಶಿಸುತ್ತಾ ಬೀದಿ ಬೀದಿ ಸುತ್ತುತ್ತಿದ್ದಾರೆ.

Anitha E | news18-kannada
Updated:July 24, 2020, 7:14 PM IST
Sonu Sood-Warrior Aaji: ಹೊಟ್ಟೆಪಾಡಿಗಾಗಿ ರಸ್ತೆಗಿಳಿದ ವಾರಿಯರ್​ ಅಜ್ಜಿ: ನೆರವಿಗೆ ಮುಂದಾದ ಸೋನು ಸೂದ್-ರಿತೇಶ್​​..!
ವಾರಿಯ್​ ಅಜ್ಜಿ ನೆರವಿಗೆ ಬಂದ ಸೋನು ಸೂದ್​
  • Share this:
ಕೊರೋನಾ ಲಾಕ್​ಡೌನ್​ನಿಂದಾಗಿ ಸಾಕಷ್ಟು ಮಂದಿ ಸಂಕಷ್ಟದಲ್ಲಿದ್ದಾರೆ. ಲಾಕ್​ಡೌನ್​ನಿಂದಾಗಿ ಕೆಲಸ ಸಿಗದೆ ಒಂದೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ. ಇದಕ್ಕೆ ಚಿಕ್ಕ-ಪುಟ್ಟ ವ್ಯಾಪಾರಿಗಳೂ ಹೊರತಾಗಿಲ್ಲ. ಹೀಗಿರುವಾಗ ದಿನಗೂಲಿ ಕಾರ್ಮಿಕರ ಪರಿಸ್ಥಿತಿ ಹೇಗಿರಬೇಡ.

ಹೊಟ್ಟೆಪಾಡಿಗಾಗಿ 75 ವರ್ಷದ ವೃದ್ಧೆಯೊಬ್ಬರು ತಾವು ಕಲಿತಿರುವ ಮಾರ್ಷಿಯಲ್​ ಆರ್ಟ್ಸ್​ ಅನ್ನು ರಸ್ತೆ ಮೇಲೆ ಪ್ರದರ್ಶಿಸುತ್ತಾ ಹಣ ಸಂಪಾದಿಸುತ್ತಿದ್ದಾರೆ. ಈ ವಿಡಿಯೋ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.




ಕೈಯಲ್ಲಿ ಬಿದಿರಿನ ಕಡ್ಡಿ ಹಿಡಿದು ಕರಗತ ಮಾಡಿಕೊಂಡಿರುವ ಕಲೆಯನ್ನು ಪ್ರದರ್ಶಿಸುತ್ತಿರುವ ಈಕೆ, ಈಗ ವಾರಿಯರ್ ಅಜ್ಜಿ ಎಂದೇ ಖ್ಯಾತರಾಗಿದ್ದಾರೆ. ಪೂಣೆಯವರಾದ ಇವರ ಪ್ರತಿಭೆ ಕಂಡು ನಟ ರಿತೇಶ್​ ದೇಶ್​ಮುಖ್​ ಸಹ ಫಿದಾ ಆಗಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅವರ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಹಾಗೂ ಅವರ ವಿವರಗಳಿದ್ದರೆ ನೀಡಿ ಎಂದು ಕೋರಿದ್ದಾರೆ.


ಇನ್ನು ರಿಯಲ್​ ಹೀರೋ ಸೋನು ಸೂದ್​ ಸಹ ಈ ಅಜ್ಜಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಅವರಿಗಾಗಿ ಒಂದು ತರಬೇತಿ ಕೇಂದ್ರವನ್ನು ಸ್ಥಾಪಿಸಿಕೊಡುವ ಮಾತಾಡಿದ್ದಾರೆ. ಅಲ್ಲಿ ಈ ಅಜ್ಜಿ ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆಗಾಗಿ ತಮಗೆ ಬರುವ ವಿದ್ಯೆಯನ್ನು ಕಲಿಸಬಹುದು ಎಂದಿದ್ದಾರೆ.



ಇನ್ನು ಈ ಅಜ್ಜಿ, ಪೂನಾದವರಾಗಿದ್ದು, ಅವರ ವಿವರಗಳನ್ನು ನೆಟ್ಟಿಗರು ಇಬ್ಬರೂ ನಟರಿಗೆ ನೀಡುತ್ತಿದ್ದಾರೆ. ಇನ್ನು ಅಜ್ಜಿ ಕುರಿತಾದ ಮಾಹಿತಿ ತನಗೆ ಸಿಕ್ಕಿದೆ ಎಂದು ರಿತೇಶ್​ ಹೇಳಿದ್ದಾರೆ. ಬಾಲಿವುಡ್​ನಿಂದ ಅಜ್ಜಿಗೆ ಸಿಗುತ್ತಿರುವ ಬೆಂಬಲ ನೋಡಿದರೆ, ಇನ್ನು ಅವರ ಜೀವನಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲವೆನಿಸುತ್ತದೆ.

ಇದನ್ನೂ ಓದಿ: ರಾಜಕುಮಾರನ ಪಾತ್ರದಲ್ಲಿ ಧನಂಜಯ: ಡಾಲಿ ಹಂಚಿಕೊಂಡ ಫೋಟೋ ಇಲ್ಲಿದೆ..!
Published by: Anitha E
First published: July 24, 2020, 7:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading