• Home
  • »
  • News
  • »
  • entertainment
  • »
  • Tribute to Puneeth Rajkumar: ನನ್ನ ಹಾಡು ಕೇಳಬೇಕು ಅಂತ ಹೇಳಿ ಕೇಳದೆ ಹೋದ್ರಲ್ಲ ಅಪ್ಪು? ರವಿಶಂಕರ್ ಗೌಡ ಗೀತ ನಮನ

Tribute to Puneeth Rajkumar: ನನ್ನ ಹಾಡು ಕೇಳಬೇಕು ಅಂತ ಹೇಳಿ ಕೇಳದೆ ಹೋದ್ರಲ್ಲ ಅಪ್ಪು? ರವಿಶಂಕರ್ ಗೌಡ ಗೀತ ನಮನ

ಬಾನದಾರಿಯಲ್ಲಿ ಕವರ್ ಸಾಂಗ್ ಅಪ್ಪುಗೆ ಅರ್ಪಣೆ

ಬಾನದಾರಿಯಲ್ಲಿ ಕವರ್ ಸಾಂಗ್ ಅಪ್ಪುಗೆ ಅರ್ಪಣೆ

ಬಾನದಾರಿಯಲ್ಲಿ ಹಾಡು ವಿಶೇಷವಾಗಿಯೇ ಬಂದಿದೆ. ಅಪ್ಪು ಇದ್ದಿದ್ದರೇ ನಿಜಕ್ಕೂ ತುಂಬಾ ಖುಷಿಪಡುತ್ತಿದ್ದರು. ರವಿಶಂಕರ್ ಗೌಡರ ಹಾಡುಗಳನ್ನ ಕೇಳಬೇಕು ಅಂತಲೇ ಇಷ್ಟಪಡ್ತಿದ್ದ ಅಪ್ಪು ಈಗ ಹಾಡನ್ನ ನೋಡಬೇಕಿತ್ತು ಅನ್ನೋ ಭಾವ ಕೂಡ ಸಹಜವಾಗಿಯೇ ಮೂಡುತ್ತದೆ.

  • News18 Kannada
  • Last Updated :
  • Bangalore [Bangalore], India
  • Share this:

ಪವರ್ ಸ್ಟಾರ್ ಪುನೀತ್ (Puneeth Rajkumar) ರಾಜಕುಮಾರ್ ಕನ್ನಡ ನಾಡಿನ ಅಷ್ಟೂ ಜನರ ಮನದಲ್ಲಿ ಹಾಗೆ ಇದ್ದಾರೆ. ದೈಹಿಕವಾಗಿ ಅವರು ಭೂಮಿ ಮೇಲೆ ಇಲ್ಲ ಅನ್ನೋದನ್ನ ಬಿಟ್ರೆ, ಅವರು ಪ್ರತಿ ವ್ಯಕ್ತಿಯ, ಪ್ರತಿ ಹೃದಯದಲ್ಲೂ ಜೀವಂತವಾಗಿದ್ದಾರೆ. ಅಪ್ಪು ವೀ ಲವ್ ಯು (We Love You Appu) ಅಂತಲೇ ಪ್ರತಿಯೊಬ್ಬರು ಅಪ್ಪು ಮೇಲಿನ ತಮ್ಮ ಪ್ರೀತಿಯನ್ನ ವ್ಯಕ್ತಪಡಿಸುತ್ತಲೇ ಇದ್ದಾರೆ. ಆದರೆ ಅಪ್ಪು ಕೇವಲ ಜನರ ಮನಕ್ಕೆ ಸೀಮಿತವಾಗಿಲ್ಲ. ಕನ್ನಡ ಕಲಾವಿದರ ಮನಸ್ಸಿನಲ್ಲೂ ಅಪ್ಪು ಜೀವಂತವಾಗಿಯೇ ಇದ್ದಾರೆ. ಆ ಪ್ರೀತಿಗೆ, ಆ ಗೌರವಕ್ಕೆ ಗಾಯಕ-ನಟ ರವಿಶಂಕರ್ (Ravi Shankar Gowda) ಗೌಡ ಒಂದು ಅದ್ಭುತ ಗೀತ ನಮನವನ್ನೆ ಸಲ್ಲಿಸಿದ್ದಾರೆ. ಇದು ಅಪ್ಪುಗೆ ಅರ್ಪಿಸಿದ ಬಾನದಾರಿಯಲ್ಲಿ ಹಾಡಿನ (Baanadariyalli Cover Song) ಕವರ್ ಸಾಂಗ್. ಇದರ ಬಗ್ಗೆ ಹೇಳಲಿಕ್ಕೆ ತುಂಬಾ ವಿಷಯಗಳಿವೆ.


ಅವುಗಳ ಬಗ್ಗೆ ಸ್ವತಃ ರವಿಶಂಕರ್ ಗೌಡ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಆ ಡಿಟೈಲ್ಸ್ ಇಲ್ಲಿದೆ.


ನನ್ನ ಹಾಡು ಕೇಳಬೇಕು ಅಂದಿದ್ರಿ ಈಗ ನೀವೇ ಇಲ್ವೇ
ಪುನೀತ್ ರಾಜಕುಮಾರ್ ಸಂಗೀತ ಪ್ರಿಯ ಅಂತ ನಿಮ್ಗೆ ಗೊತ್ತು. ಅಪ್ಪು ಹಾಡಿದ್ರೆ ಅಲ್ಲೇನೋ ಸಂಚಲನ ಸೃಷ್ಟಿ ಆಗುತ್ತಿತ್ತು. ಅದೇ ಅಪ್ಪು ಪ್ರತಿಭಾವಂತ ಗಾಯಕರಿದ್ದರೇ, ಅಷ್ಟೇ ಮನಸಾರೆ ಕೇಳುತ್ತಿದ್ದರು.


ಇದನ್ನೂ ಓದಿ: Punit Rajkumar: 'ನಾನು ಹುಷಾರಾಗಿದ್ದೀನಿ, ಡೋಂಟ್ ವರಿ' ಎಲ್ಲೆಡೆ ಪೋಸ್ಟ್ ವೈರಲ್, ಅಪ್ಪು ಮತ್ತೆ ಹುಟ್ಟಿ ಬನ್ನಿ!


ಹಾಗೇನೆ ನಟ-ಗಾಯಕ ರವಿಶಂಕರ್ ಗೌಡ ಅವರ ಸಂಗೀತಕ್ಕೂ ಅಪ್ಪು ಮನಸೋತ್ತಿದ್ದರು. ಆಗಾಗ ನಿಮ್ಮ ಹಾಡು ಕೇಳಬೇಕು ಅಂತಲೂ ಹೇಳುತ್ತಿದ್ದರು. ನಿಮ್ಮ ಮನೆಯಲ್ಲಿಯೇ ಕುಳಿತು ನಿಮ್ಮ ಹಾಡು ಕೇಳಬೇಕು. ಪಾರ್ಟಿ ಮಾಡಬೇಕು ಅಂತಲೇ ರವಿಶಂಕರ್ ಗೆ ಅಪ್ಪು ಹೇಳುತ್ತಿದ್ದರು.


Actor-Singer Ravishankar Gowda Tribute a Special Song to Puneeth Rajkumar
ಬಾನದಾರಿಯಲ್ಲಿ ಹಾಡಿಗೆ ರವಿಶಂಕರ್ ಡೈರೆಕ್ಷನ್


ಆದರೆ ಆ ಆಸೆ ಪೂರ್ಣವಾಗೋ ಮೊದಲೇ ಅಪ್ಪು ಹೊರಟು ಹೋದ್ರು ಎಂದು ರವಿಶಂಕರ್ ಗೌಡ ಹೇಳಿಕೊಂಡ್ರು. ಹೀಗಂತ ಆ ದಿನವನ್ನ ನೆನಪಿಸಿಕೊಂಡ ರವಿಶಂಕರ್ ಗೌಡ, ಈಗ ಒಂದು ಅದ್ಭುತ ಹಾಡಿಗೆ ಮರು ಜೀವ ತುಂಬಿದ್ದಾರೆ. 1981 ಭಾಗ್ಯವಂತ ಸಿನಿಮಾದ "ಬಾನದಾರಿಯಲ್ಲಿ" ಹಾಡನ್ನೆ ಮತ್ತೆ ಹಾಡಿದ್ದಾರೆ. ಅದು ಅಷ್ಟೇ ಸೊಗಸಾಗಿಯೇ ಬಂದಿದೆ.


ಆದರೆ ಅಪ್ಪು ಇಲ್ಲ ಅನ್ನೋ ನೋವು ಕೂಡ ಈ ಒಂದು ಹಾಡಿನಲ್ಲಿ ರವಿಶಂಕರ್ ಅವರು ವ್ಯಕ್ತಪಡಿಸುತ್ತಲೇ ಹೋಗ್ತಾರೆ. ಮೂಲ ಹಾಡಿನಲ್ಲಿ "ನೀನು" ಅಂತಲೇ ಇದೆ. ಆದರೆ ಇಲ್ಲಿ ಅಪ್ಪುಗಾಗಿಯೇ "ನೀವು" ಅಂತಲೇ ಬದಲಿಸಿಕೊಂಡು ಅಪ್ಪುಗೆ ಇಡೀ ಹಾಡನ್ನ ಅರ್ಪಿಸಿದ್ದಾರೆ.


ಬಾನದಾರಿಯಲ್ಲಿ ಕವರ್ ಸಾಂಗ್ ಅಪ್ಪುಗೆ ಅರ್ಪಣೆ
ಬಾನದಾರಿಯಲ್ಲಿ ಹಾಡು ವಿಶೇಷವಾಗಿಯೇ ಬಂದಿದೆ. ಅಪ್ಪು ಇದ್ದಿದ್ದರೇ ನಿಜಕ್ಕೂ ತುಂಬಾ ಖುಷಿಪಡುತ್ತಿದ್ದರು. ರವಿಶಂಕರ್ ಗೌಡರ ಹಾಡುಗಳನ್ನ ಕೇಳಬೇಕು ಅಂತಲೇ ಇಷ್ಟಪಡ್ತಿದ್ದ ಅಪ್ಪು ಈಗ ಹಾಡನ್ನ ನೋಡಬೇಕಿತ್ತು ಅನ್ನೋ ಭಾವ ಕೂಡ ಸಹಜವಾಗಿಯೇ ಮೂಡುತ್ತದೆ.


Actor-Singer Ravishankar Gowda Tribute a Special Song to Puneeth Rajkumar
ಬಾನದಾರಿಯಲ್ಲಿ ಕವರ್ ಸಾಂಗ್ ಅಪ್ಪುಗೆ ಅರ್ಪಣೆ


ಅಷ್ಟು ಚೆನ್ನಾಗಿಯೇ ಬಂದಿರೋ ಈ ಹಾಡಿನ ಬಗ್ಗೆ ರವಿಶಂಕರ್ ಹೇಳ್ತಾ ಹೋಗ್ತಾರೆ. ಅದು ಪವನ್ ಕುಮಾರ್ ನಿರ್ದೇಶನದ ದ್ವಿತ್ವ ಚಿತ್ರದ ಚಿತ್ರೀಕರಣಕ್ಕೆ ಹೈದ್ರಾಬಾದ್​ಗೆ ಹೋಗುವ ಸಮಯ. ಆಗ ನಾವೆಲ್ಲ ಹೈದ್ರಾಬಾದ್​ಗೆ ಹೋಗುವ ಪ್ಲಾನಿಂಗ್​ ನಲ್ಲಿಯೇ ಇದ್ದೇವು.


ಆಗಲೇ ಅಪ್ಪು ಸರ್ ಹೇಳಿದ್ದರು. ನಿಮ್ಮ ಮನೆಯಲ್ಲಿ ಪಾರ್ಟಿ ಮಾಡೋಣ. ಆ ಪಾರ್ಟಿಯಲ್ಲಿ ನೀವು ಹಾಡಬೇಕು ಅಂತಲೂ ಹೇಳಿದ್ದರು. ಆದರೆ ಅದು ಸಾಧ್ಯವಾಗಲೇ ಇಲ್ಲ. ಅದ್ಭುತ ಆತ್ಮದ ಅಪ್ಪು ಸರ್ ನಮ್ಮೊಂದಿಗೆ ಇಲ್ಲ್ಲವೇ ಇಲ್ಲ. ಈಗ ಅವರ ಬಗ್ಗೆ ಏನು ಹೇಳೋದು. ನೆನಪು ಸಾಕಷ್ಟಿದೆ ಅಂತಲೇ ರವಿಶಂಕರ್ ಹೇಳಿಕೊಂಡ್ರು.


ಬಾನದಾರಿಯಲ್ಲಿ ಹಾಡಿಗೆ ರವಿಶಂಕರ್ ಡೈರೆಕ್ಷನ್
ಬಾನದಾರಿಯಲ್ಲಿ ಹಾಡಿನ ಡೈರೆಕ್ಷನ್ ಅನ್ನ ಸ್ವತಃ ರವಿಶಂಕರ್ ಅವರೇ ಮಾಡಿದ್ದಾರೆ. ಪುನೀತ್ ಅವರಿಗೆ ಅರ್ಪಿಸೋ ಹಾಡು ಇದೇ ರೀತಿ ಇರಬೇಕು ಅಂತಲೇ ಡಾರ್ಕ್ ಲೈಟ್ ಪ್ಲಾನ್ ಮಾಡಿದ್ದಾರೆ. ಕ್ಯಾಂಡಲ್​ ಗಳ ಪ್ಲಾನಿಂಗ್ ಕೂಡ ಮಾಡಿಕೊಂಡಿದ್ದಾರೆ.




ಈ ಒಂದು ಫೀಲ್​ ನಲ್ಲಿಯೇ ಇಡೀ ಹಾಡನ್ನ ಚಿತ್ರೀಕರಿಸಿಕೊಂಡಿದ್ದಾರೆ. ಪಿಯಾನೋದಲ್ಲಿ ಮಂಜುಳಾ ಗುರುರಾಜ್ ಅವರ ಪುತ್ರ ಸಾಗರ್ ಗುರುರಾಜ್ ಇದ್ದಾರೆ. ರವಿಶಂಕರ್ ಗೌಡ, ಬಾನದಾರಿಯಲ್ಲಿ ಹಾಡನ್ನ ಹಾಡ್ತಾ ಹೋಗ್ತಾರೆ. ತುಂಬಾ ಹಾರ್ಟ್​ ಟಚ್ಚಿಂಗ್ ಆಗಿಯೇ ಈ ಒಂದು ಹಾಡು ಮೂಡಿ ಬಂದಿದೆ.


ಇದನ್ನೂ ಓದಿ: Puneeth Smile: ನಗುವಿನ ಒಡೆಯನಿಗೆ ನಗುವಿನ ಬೆಲೆ ಗೊತ್ತಿತ್ತು, ಆ ಒಂದು ಮಾತು ಸ್ವತಃ ಅಪ್ಪು ಹೇಳಿದ್ದರು! ಆ ವೀಡಿಯೋ ಈಗ ವೈರಲ್


ಬಾನದಾರಿಯಲ್ಲಿ ಕವರ್ ಸಾಂಗ್ ಹಿಂದೆ ಕೆಆರ್​ಜಿ ಸಂಸ್ಥೆ ಕೂಡ ಇದೆ. ರವಿಶಂಕರ್ ಗೌಡ ಅವರ ಕಲ್ಪನೆಗೆ ಸಪೋರ್ಟ್ ಮಾಡಿದೆ. ಅಲ್ಲಿಗೆ ಎಲ್ಲರೂ ಸೇರಿ ಅಪ್ಪುಗೆ ಈ ರೀತಿ ತಮ್ಮದೇ ರೀತಿಯಲ್ಲಿ ಗೀತ ನಮನ ಸಲ್ಲಿಸಿದ್ದಾರೆ. ಜನರು ಕೂಡ ಈ ಹಾಡನ್ನ ನೋಡಿ ಒಂದ್ ಅರೆಕ್ಷಣ ಭಾವುಕರಾಗ್ತಾರೆ. ಹಾಗಿದೆ ಈ ಒಂದು ಗೀತೆ. ನೀವೂ ಒಮ್ಮೆ ಕೇಳಿ.

First published: