Siddharth-Saina Nehwal: ಸೈನಾ ನೆಹ್ವಾಲ್​ಗೆ ಬಹಿರಂಗ ಪತ್ರ ಬರೆದು ಕ್ಷಮೆ ಕೇಳಿದ ನಟ ಸಿದ್ಧಾರ್ಥ್!

ನಟ ಸಿದ್ದಾರ್ಥ್​ ವಿರುದ್ಧ ಭಾರೀ ಆಕ್ರೋಶ ಕೂಡ ವ್ಯಕ್ತವಾಗಿತ್ತು. ತಮ್ಮ ಟ್ವೀಟ್‌ಗೆ ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ಟ್ವಿಟ್ಟರ್‌ನಲ್ಲಿ ಸೈನಾಗೆ ಬಹಿರಂಗ ಪತ್ರವನ್ನು ಬರೆದಿರುವ ನಟ ಸಿದ್ಧಾರ್ಥ್, ಕ್ಷಮೆ ಕೇಳಿದ್ದಾರೆ.

ಸಿದ್ದಾರ್ಥ್​, ಸೈನಾ ನೆಹ್ವಾಲ್​

ಸಿದ್ದಾರ್ಥ್​, ಸೈನಾ ನೆಹ್ವಾಲ್​

  • Share this:
ತಮಿಳು ನಟ ಸಿದ್ಧಾರ್ಥ್ (Actor Siddharth) ಆಗಾಗ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡು ಸುದ್ದಿಯಲ್ಲಿರುತ್ತಾರೆ. ಈ ಬಾರಿ ಕೂಡ ಮಾಜಿ(Badminton Star) ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಗೆ (Saina Nehwal) ಪ್ರತಿಕ್ರಿಯಿಸಿದ ಸಿದ್ದಾರ್ಥ್ ಟ್ವೀಟ್ ಸದ್ಯ ವಿವಾದಕ್ಕೀಡಾಗಿತ್ತು (Controversial). ತಮಿಳು ನಟನ ವಿರುದ್ಧ ಮಹಿಳಾ ಆಯೋಗ (Women's Commission) ಆಕ್ರೋಶ ವ್ಯಕ್ತ ಪಡಿಸಿತ್ತು. ಹಲವು ರಾಜಕಾರಣಿಗಳು, ನಟ ನಟಿಯರು ಸಿದ್ಧಾರ್ಥ್ ಹೇಳಿಕೆ ಬಗ್ಗೆ ಕಿಡಿ ಕಾರಿದ್ದರು. ಬ್ಯಾಡ್‌ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‌ಗೆ ನಟ ಸಿದ್ಧಾರ್ಥ್ ಮಾಡಿದ್ದ ಟ್ವೀಟ್‌ ಕಳೆದೆರಡು ದಿನದಿಂದ ಭಾರೀ ಚರ್ಚೆ ಆಗುತ್ತಿದೆ. ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಅವರ ಸಂಚಾರಕ್ಕೆ ರೈತರು ತಡೆ ಮಾಡಿದ ವಿಚಾರವಾಗಿ ಆಕ್ರೋಶಭರಿತ ಟ್ವೀಟ್ ಮಾಡಿದ್ದ ಸೈನಾ, ಭದ್ರತಾ ವೈಫಲ್ಯವನ್ನು ಟೀಕಿಸಿದ್ದರು. ಬಿಜೆಪಿ ವಿರೋಧಿಯಾಗಿರುವ ನಟ ಸಿದ್ಧಾರ್ಥ್ ಸೈನಾ ನೆಹ್ವಾಲ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿ, ''ಶಟಲ್' 'ಕಾಕ್' ವಿಶ್ವ ಚಾಂಪಿಯನ್'' ಎಂದು ದ್ವಂದ್ವಾರ್ಥ ಬರುವಂತೆ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ ಕಳೆದ ಎರಡು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿತ್ತು. ನಟ ಸಿದ್ದಾರ್ಥ್​ ವಿರುದ್ಧ ಭಾರೀ ಆಕ್ರೋಶ ಕೂಡ ವ್ಯಕ್ತವಾಗಿತ್ತು. ತಮ್ಮ ಟ್ವೀಟ್‌ಗೆ ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ಟ್ವಿಟ್ಟರ್‌ನಲ್ಲಿ ಸೈನಾಗೆ ಬಹಿರಂಗ ಪತ್ರವನ್ನು ಬರೆದಿರುವ ನಟ ಸಿದ್ಧಾರ್ಥ್, ಕ್ಷಮೆ ಕೇಳಿದ್ದಾರೆ.

ಬಹಿರಂಗ ಪತ್ರ ಬರೆದು ಕ್ಷಮೆ ಕೇಳಿದ ನಟ ಸಿದ್ದಾರ್ಥ್​

ಸೈನಾಗೆ ನಟ ಸಿದ್ದಾರ್ಥ್​ ಬಹಿರಂಗ ಪತ್ರ ಬರೆದು ಕ್ಷಮೆ ಕೇಳಿದ್ದಾರೆ. ‘ಡಿಯರ್ ಸೈನಾ, ನನ್ನ ಒರಟು ಜೋಕ್‌ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ’ ಎಂದಿರುವ ನಟ ಸಿದ್ಧಾರ್ಥ್, ‘ನಿನ್ನ ಅಭಿಪ್ರಾಯಕ್ಕೆ ಪ್ರತಿಯಾಗಿ ನಾನು ಮಾಡಿದ ಒರಟು ಜೋಕ್‌ ಬಗ್ಗೆ ಕ್ಷಮೆ ಕೇಳುತ್ತೇನೆ. ನಿಮ್ಮೊಂದಿಗೆ ಅನೇಕ ವಿಷಯಗಳ ಬಗ್ಗೆ ನನಗೆ ಭಿನ್ನಾಭಿಪ್ರಾಯ ಇರಬಹುದು. ಆದರೆ ನಿಮ್ಮ ಟ್ವೀಟ್‌ಗೆ ಪ್ರತಿಯಾಗಿ ನಾನು ಮಾಡಿದ ಟ್ವೀಟ್‌ ಅದಕ್ಕೆ ಬಳಸಿದ ಪದಗಳು ಸೂಕ್ತವಾಗಿರಲಿಲ್ಲ. ಸ್ವತಃ ನಾನು ಅಷ್ಟು ಕೆಳಮಟ್ಟದವನಲ್ಲ ಎಂಬ ನಂಬಿಕೆ ನನಗೆ ಇದೆ’ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.


ಇದನ್ನು ಓದಿ : ನಟ ಸಿದ್ದಾರ್ಥ್- ಸೈನಾ ನೆಹ್ವಾಲ್ 'ಟ್ವೀಟ್' ಗುದ್ದಾಟ, ಆತ ಹೀಗೆ ಎಂದು ಅಂದುಕೊಡಿರ್ಲಿಲ್ಲ ಎನ್ನುತ್ತಿದ್ದಾರೆ ಜನ

ಒರಟು ಜೋಕ್​ ಬಗ್ಗೆ ಕ್ಷಮೆ ಇರಲಿ ಎಂದ ಸಿದ್ದಾರ್ಥ್​!

‘ನಾನು ಮಾಡಿದ ಜೋಕ್‌ನ ವಿಷಯಕ್ಕೆ ಬರುವುದಾದರೆ. ಆ ಒರಟು ಜೋಕ್‌ ಬಗ್ಗೆ ಕ್ಷಮೆ ಇರಲಿ. ಯಾವುದೇ ಜೋಕ್‌ ಅನ್ನು ಹೇಳಿದ ಮೇಲೆ ಅದರ ಅರ್ಥವನ್ನು ವಿವರಿಸುವ ಅವಶ್ಯಕತೆ ಎದುರಾಗುತ್ತದೆಯೆಂದರೆ ಅದು ಖಂಡಿತ ಒಳ್ಳೆಯ ಜೋಕ್ ಅಲ್ಲ. ನಾನು ಹೇಳಿದ ಕೆಟ್ಟ ಜೋಕ್‌ ಬಗ್ಗೆ ಕ್ಷಮೆ ಕೋರುವೆ’ ಎಂದು ಬರೆದುಕೊಂಡು ಸಿದ್ದಾರ್ಥ್​ ಟ್ವೀಟ್​ ಮಾಡಿದ್ದಾರೆ. ಈ ವಿವಾದವನ್ನು ನಾವು ಹಿಂದೆ ಬಿಡೋಣ, ನನ್ನ ಈ ಕ್ಷಮೆಯನ್ನು ನೀವು ಒಪ್ಪಿಕೊಳ್ಳುತ್ತೀರ ಎಂದು ಭಾವಿಸಿದ್ದೇನೆ. ನೀವು ಯಾವಾಗಲೂ ನನ್ನ ಪಾಲಿನ ಚಾಂಪಿಯನ್'' ಎಂದಿದ್ದಾರೆ ನಟ ಸಿದ್ಧಾರ್ಥ್. 

ಇದನ್ನು ಓದಿ: ಅಕ್ಷಯ್ ಕುಮಾರ್​, ಸಮಂತಾ ಮನೆಯೊಳಗೆ ಕಳ್ಳನಂತೆ ನುಗ್ಗಿದ್ದೇಕೆ? ಸಖತ್​ ಮಜಾ ಇದೆ ವಿಡಿಯೋ ನೋಡಿ..

ಸಿದ್ದಾರ್ಥ್​ ಜೋಕ್​ಗೆ ಸೈನಾ ತಂದೆ, ಪತಿ ಕಿಡಿ!

ಸಿದ್ದಾರ್ಥ್​ ಮಾಡಿದ ಅವಹೇಳನಕಾರಿ ಟ್ವೀಟ್ ಕುರಿತಂತೆ ಸೈನಾ ನೆಹ್ವಾಲ್ ತಂದೆ ಹರ್ವೀರ್ ಸಿಂಗ್ ನೆಹ್ವಾಲ್ ಖಾರವಾಗಿ ಪ್ರತಿಕ್ರಿಯಿಸಿದ್ದರು.‘ನನ್ನ ಮಗಳು ಒಲಿಂಪಿಕ್ ಪದಕ ಗೆದ್ದಿದ್ದಾಳೆ, ವಿಶ್ವ ಚಾಂಪಿಯನ್‌ಶಿಪ್ ಗೆದ್ದಿದ್ದಾಳೆ ನೀನು ಏನು ಸಾಧನೆ ಮಾಡಿದ್ದೀಯ?’ ಎಂದು ಪ್ರಶ್ನೆ ಮಾಡಿದ್ದರು. ಸೈನಾ ನೆಹ್ವಾಲ್ ಪತಿ, ಪರುಪಲ್ಲಿ ಕಶ್ಯಪ್ ಸಹ ಸಿದ್ಧಾರ್ಥ್ ಟ್ವೀಟ್‌ಗೆ ವಿರೋಧ ವ್ಯಕ್ತಪಡಿಸಿದ್ದು, ''ವಿರೋಧ ಮಾಡಿ, ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿ ಆದರೆ ಸರಿಯಾದ ಪದಗಳನ್ನು ಆಯ್ಕೆ ಮಾಡಿ'' ಎಂದು ಕಿಡಿಕಾರಿದ್ದರು.
Published by:Vasudeva M
First published: