Siddharth: ಚೀಟರ್ಸ್ ಟ್ವೀಟ್ ಬಗ್ಗೆ ನಟ ಸಿದ್ಧಾರ್ಥ್ ಸ್ಪಷ್ಟನೆ: ನಾನು ಜವಾಬ್ದಾರನಲ್ಲ ಅಂದಿದ್ದು ಯಾರಿಗೆ?

Clarification About Tweet: ಈ ಟ್ವೀಟ್ ಮಾಡಿದ್ದು ಬೇರೆ ಯಾರು ಅಲ್ಲ, ಸಮಂತಾ ಅವರ ಮಾಜಿ ಪ್ರೇಮಿ ನಟ ಸಿದ್ಧಾರ್ಥ್. ಸಮಂತಾ ಹಾಗೂ ನಾಗಚೈತನ್ಯ ಬೇರೆ ಆಗುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಇದಾದ ಕೆಲವೇ ಹೊತ್ತಲ್ಲಿ ನಟ ಸಿದ್ಧಾರ್ಥ್ "ಶಾಲೆಯಲ್ಲಿ ಶಿಕ್ಷಕರು ನನಗೆ ಮೊದಲು ಕಲಿಸಿದ ಪಾಠ ಮೋಸಗಾರರು ಎಂದಿಗೂ ಏಳಿಗೆ ಕಾಣಲ್ಲ" ಎಂದು ಟ್ವೀಟ್ ಮಾಡಿದ್ದರು.

ನಟ ಸಿದ್ಧಾರ್ಥ

ನಟ ಸಿದ್ಧಾರ್ಥ

 • Share this:
  ಟಾಲಿವುಡ್ (Tollywood)ಚಿತ್ರರಂಗದಲ್ಲಿ ಸಮಂತಾ(Samatha) ಹಾಗೂ ನಾಗಚೈತನ್ಯ (Nagachitanya)ಅವರ ವಿಚ್ಛೇದನ ವಿಚಾರ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಮಾಡಿದೆ. ಇಷ್ಟು ದಿನ ಚೆನ್ನಾಗಿದ್ದ ದಂಪತಿ, ಇದ್ದಕ್ಕಿದ್ದ ಹಾಗೆ ಬೇರೆ ವಿಚಾರ ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಪ್ರತಿಯೊಬ್ಬರೂ ಅವರಿಗೆ ಬೇಕಿರುವ ಹಾಗೆಯೇ ಕಾರಣಗಳನ್ನ ಹುಡುಕಿಕೊಳ್ಳುತ್ತಿದ್ದಾರೆ. ಇವರಿಬ್ಬರ ನಡುವೆ ಹಾಗಾಯಿತಂತೆ, ಹೀಗಾಯಿತಂತೆ ಎಂಬ ಅಂತೆಕಂತೆಗಳ ಸದ್ದು ಜೋರಾಗಿದೆ. ಅಧಿಕೃತವಾಗಿ ಸಮಂತಾ ಹಾಗೂ ನಾಗಚೈತನ್ಯ ಬೇರೆಯಾಗಿದ್ದನ್ನ ಸ್ವತಃ ತಾವೇ ಹೇಳಿಕೊಂಡಿದ್ದರು.

  ಇದಾದ ಕೆಲ ಗಂಟೆಗಳ ಬಳಿಕ  ಸ್ಟಾರ್ ನಟನೊಬ್ಬನ ಟ್ವೀಟ್ ಸಖತ್ ವೈರಲ್ ಆಗ್ತಿತ್ತು. ಚೀಟರ್ಸ್ ಎಂಬ ಕಂಟೆಂಟ್ ನಲ್ಲಿ ಆ ಸ್ಟಾರ್ ನಟ ಟ್ವೀಟ್ ಮಾಡಿದ್ದರು. ಅಷ್ಟರಲ್ಲಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ನಟನ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿತ್ತು. ಇಷ್ಟು ದಿನ ಸಮಂತಾ ಹಾಗೂ ನಾಗಚೈತನ್ಯ ವಿಚಾರಕ್ಕೆ ತಲೆ ಹಾಕದ ಈ ನಟ, ವಿಚ್ಛೇದನ ಬಳಿಕ ಯಾಕೆ ಬಂದರು ಎಂಬ ಪ್ರಶ್ನೆ ಎಲ್ಲರನ್ನ ಕಾಡಿತ್ತು

  ಈ ಟ್ವೀಟ್ ಮಾಡಿದ್ದು ಬೇರೆ ಯಾರು ಅಲ್ಲ, ಸಮಂತಾ ಅವರ ಮಾಜಿ ಪ್ರೇಮಿ ನಟ ಸಿದ್ಧಾರ್ಥ್. ಸಮಂತಾ ಹಾಗೂ ನಾಗಚೈತನ್ಯ ಬೇರೆ ಆಗುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಇದಾದ ಕೆಲವೇ ಹೊತ್ತಲ್ಲಿ ನಟ ಸಿದ್ಧಾರ್ಥ್ "ಶಾಲೆಯಲ್ಲಿ ಶಿಕ್ಷಕರು ನನಗೆ ಮೊದಲು ಕಲಿಸಿದ ಪಾಠ ಮೋಸಗಾರರು ಎಂದಿಗೂ ಏಳಿಗೆ ಕಾಣಲ್ಲ" ಎಂದು ಟ್ವೀಟ್ ಮಾಡಿದ್ದರು.

  ಇದನ್ನೂ ಓದಿ:Rider ಚಿತ್ರದ ಡವ್ವ ಡವ್ವ... ಮೊದಲ ಹಾಡಿನ ರಿಲೀಸ್​ ದಿನಾಂಕ ಫಿಕ್ಸ್​

  ಈ ಟ್ವೀಟ್ ಸಮಂತಾ ಅವರನ್ನು ಉದ್ದೇಶಿಸಿಯೇ ಮಾಡಲಾಗಿತ್ತು ಎಂದು ಹೇಳಲಾಗುತ್ತಿತ್ತು. ಯಾಕೆಂದರೆ ಈ ಹಿಂದೆ ಸಮಂತಾ ಹಾಗೂ ಸಿದ್ದಾರ್ಥ್ ಪ್ರೀತಿಸುತ್ತಿದ್ದರು. ಈ ಜೋಡಿ ಮದುವೆಯಾಗುವುದಕ್ಕೂ ನಿರ್ಧಾರ ಮಾಡಿದ್ದರು. ಆದರೆ ಕೆಲವು ಕಾರಣಾಂತರಗಳಿಂದ ಇಬ್ಬರು ಬೇರೆ ಬೇರೆಯಾಗಿದ್ದರು. ಈ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದಾದ ಬಳಿಕ ಸಮಂತಾ ನಾಗಚೈತನ್ಯ ಅವರನ್ನ ಪ್ರೀತಿಸಿ, ಮದುವೆಯಾದರು. ಈಗ ನಾಲ್ಕು ವರ್ಷಗಳ ದಾಂಪತ್ಯವನ್ನು ಮುರಿದು ಬೇರೆಯಾಗಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ನಟ ಸಿದ್ದಾರ್ಥ್ ಹೀಗೆ ಟ್ವೀಟ್ ಮಾಡಿದ್ದು ಎಲ್ಲೆಡೆ ವೈರಲ್ ಆಗಿತ್ತು.

  ನೆಟ್ಟಿಗರು ನಟ ಸಿದ್ದಾರ್ಥ್ ಮಾಡಿದ್ದ ಟ್ವೀಟ್ ಅನ್ನು ತಮ್ಮದೇ ಶೈಲಿಯಲ್ಲಿ ವಿವರಣೆ ನೀಡಿದ್ದರು. ಇಂತಹ ಸಮಯದಲ್ಲಿ ಹೀಗೆ ಮಾತನಾಡಲು ಹೇಗೆ ಮನಸ್ಸು ಬರುತ್ತೆ ಎಂದು ಪ್ರಶ್ನೆ ಕೇಳಿದರು. ನಟ ಸಿದ್ಧಾರ್ಥ್ ಗೆ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಂಡಿದ್ದರು. ದಂಪತಿಗಳು ಬೇರೆಯಾಗಿದ್ದಾಗ ಸಮಾಧಾನ ಮಾಡುವುದನ್ನು ಬಿಟ್ಟು, ಹಳೆಯ ವಿಚಾರವನ್ನು ಮತ್ತೆ ತೆಗೆದು ನೋವುಂಟು ಮಾಡುತ್ತಿದ್ದೀರಾ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ನೆಟ್ಟಿಗರ ಪ್ರಶ್ನೆಗೆ ಇದೀಗ ನಟ ಸಿದ್ದಾರ್ಥ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

  ನನ್ನ ಈ ಹಿಂದಿನ ಟ್ವೀಟ್ ಯಾವುದೇ ಕೆಟ್ಟ ಉದ್ದೇಶದಿಂದ ಮಾಡಿರಲಿಲ್ಲ. "ನಿತ್ಯವೂ ನನ್ನ ಮನಸ್ಸಿಗೆ ಏನು ಬರೆಯಬೇಕೆಂದು ತೋಚುತ್ತೋ, ಅದನ್ನು ನಾನು ಟ್ವೀಟ್ ಮಾಡುತ್ತೇನೆ. ಬೀದಿನಾಯಿಗಳ ಬಗ್ಗೆ ಟ್ವೀಟ್ ಮಾಡಿದಾಗ, ಅದು ತನಗೆ ಹೇಳಿದ್ದು ಎಂದು ಕೆಲವರು ಭಾವಿಸಿದರೆ ಅದಕ್ಕೆ ನಾನು ಜವಾಬ್ದಾರನಲ್ಲ" ಎಂದು ನಟ ಸಿದ್ಧಾರ್ಥ್ ಹೇಳಿದ್ದಾರೆ. ತನ್ನ ವಿರುದ್ಧ ಸುಖಾಸುಮ್ಮನೆ ಮಾತನಾಡುತ್ತಿದ್ದವರು ಬಾಯಿ ಮುಚ್ಚಿಸಿದ್ದಾರೆ ನಟ ಸಿದ್ಧಾರ್ಥ್. ಇಷ್ಟಕ್ಕೆ ಸಮಾನವಾದ ನೆಟ್ಟಿಗರು ಸಿದ್ದಾರ್ಥ್ ಅವರ ಈ ಟ್ವೀಟ್ ಅನ್ನು ಕೂಡ ಟ್ರೋಲ್ ಮಾಡುತ್ತಿದ್ದಾರೆ.

  ಇದನ್ನೂ ಓದಿ:ದಂಪತಿಯಾಗಲಿರುವ ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್

  ಯಾವ ಟೈಮ್ ನಲ್ಲಿ ಹೇಗೆ ಮಾತನಾಡಬೇಕು ಎಂಬುದನ್ನು ಮೊದಲು ಕಲಿಯಿರಿ ಎಂದು ನೆಟ್ಟಿಗರು ಮರುಪ್ರಶ್ನೆ ಹಾಕಿದ್ದಾರೆ.

  (ವರದಿ - ವಾಸುದೇವ್.ಎಂ)
  Published by:Sandhya M
  First published: