Siddhanth Kapoor: ಡ್ರಗ್ಸ್​ ಪ್ರಕರಣದಲ್ಲಿ ಸಿದ್ಧಾಂತ್ ಕಪೂರ್​ಗೆ ಜಾಮೀನು, ವಿಚಾರಣೆಗೆ ಹಾಜರಾಗುವಂತೆ ಸೂಚನೆ

Bengaluru drugs Case: ಸಿದ್ದಾಂತ್ ಕಪೂರ್ ಅವರ ವೈದ್ಯಕೀಯ ಪರೀಕ್ಷೆಯಲ್ಲಿ ಅವರು ಡ್ರಗ್ಸ್ ಸೇವಿಸಿರುವುದು ಸಾಬೀತಾಗಿದೆ. ಹಾಗಾಗಿ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಇದೀಗ ಬೇಲ್ ನೀಡಲಾಗಿದೆ.  

ನಟ ಸಿದ್ಧಾಂತ್ ಕಪೂರ್

ನಟ ಸಿದ್ಧಾಂತ್ ಕಪೂರ್

  • Share this:
ಬೆಂಗಳೂರಿನ (Bengaluru) ದಿ ಪಾರ್ಕ್ ಹೋಟೆಲ್‍ನಲ್ಲಿ ಡ್ರಗ್ಸ್‌ ಪಾರ್ಟಿ ನಡೆಸಲಾಗುತ್ತಿತ್ತು ಎಂದು ದಾಳಿ ಮಾಡಲಾಗಿತ್ತು. ಈ  ಪ್ರಕರಣದಲ್ಲಿ ಬಾಲಿವುಡ್ (Bollywood)  ನಟ ಸಿದ್ಧಾಂತ್ ಕಪೂರ್ (Siddhanth Kapoor) ಸೇರಿ ಐವರನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಇದೀಗ ಈ ಐವರಿಗೆ ಸ್ಟೇಷನ್ ಬೇಲ್ ನೀಡಲಾಗಿದೆ. ಆದರೆ ಇವತ್ತು ಕೂಡ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.  ಸಿದ್ದಾಂತ್ ಕಪೂರ್ ಮತ್ತು ಇತರ ನಾಲ್ವರು ಪೊಲೀಸರು ಕರೆ ಮಾಡಿದಾಗ ವಿಚಾರಣೆಗೆ ಮುಂದೆ ಹಾಜರಾಗಬೇಕಾಗುತ್ತದೆ ಎಂದು ಪೂರ್ವ ಬೆಂಗಳೂರಿನ ಉಪ ಪೊಲೀಸ್ ಆಯುಕ್ತ ಭೀಮಾ ಶಂಕರ್ ಗುಳ್ಳೇದ್ ತಿಳಿಸಿದ್ದಾರೆ. ಅಲ್ಲದೇ, ಸಿದ್ದಾಂತ್ ಕಪೂರ್ ಅವರ ವೈದ್ಯಕೀಯ ಪರೀಕ್ಷೆಯಲ್ಲಿ ಅವರು ಡ್ರಗ್ಸ್ ಸೇವಿಸಿರುವುದು ಸಾಬೀತಾಗಿದೆ. ಹಾಗಾಗಿ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಇದೀಗ ಬೇಲ್ ನೀಡಲಾಗಿದೆ.  

ಡ್ರಗ್ಸ್ ಪಾರ್ಟಿ ಮೇಲೆ ದಾಳಿ

ಮೊನ್ನೆ ತಡರಾತ್ರಿಯಾದರೂ ಪಾರ್ಟಿ ನಡೆಸುತ್ತಿದ್ದ ಫೈವ್ ಸ್ಟಾರ್ ಹೋಟೆಲ್ (Five Star Hotel) ಮೇಲೆ ಹಲಸೂರು ಪೊಲೀಸರು ದಾಳಿ (Police Raide) ನಡೆಸಿದ್ದರು. ರಾಜಕೀಯ ನಾಯಕರ ಮಕ್ಕಳು ಸಹ ಪಾರ್ಟಿಯಲ್ಲಿ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿತ್ತು. ಜಿಟಿ ಮಾಲ್ ಮುಂಭಾಗದಲ್ಲಿರುವ "THE PARK" 5 ಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆದಿದ್ದು, ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಪಾರ್ಟಿ (Drugs Party) ನಡೆಸುತ್ತಿದ್ದ ಅನುಮಾನ ಹಿನ್ನೆಲೆ ದಾಳಿ ಮಾಡಲಾಗಿತ್ತು. ಪೊಲೀಸರು ಪರಿಶೀಲನೆ ನಡೆಸುತ್ತಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇನ್ನು ವಶಕ್ಕೆ ಪಡೆದಿದ್ದ 35 ಜನರಿಗೆ ಮೆಡಿಕಲ್ ಟೆಸ್ಟ್​ ಮಾಡಿಸಲಾಗಿದ್ದು,  ಅದ್ರಲ್ಲಿ 5 ಜನ ಡ್ರಗ್ಸ್ ತೆಗೆದುಕೊಂಡಿರುವುದು ಪತ್ತೆಯಾಗಿತ್ತು.  ಈ ಪಾರ್ಟಿಯಲ್ಲಿ ಬಾಲಿವುಡ್​ ನಟ ಶಕ್ತಿ ಕಪೂರ್ ಅವರ ಮಗ ಹಾಗೂ ನಟಿ ಶ್ರದ್ಧಾ ಕಪೂರ್ ಅವರ ಸಹೋದರ ಸಿದ್ಧಾಂತ್ ಕಪೂರ್ ಸಹ ಸಿಕ್ಕಿ ಬಿದ್ದಿದ್ದರು.

ಇನ್ನು ಪಾರ್ಟಿ ನಡೆಯುತ್ತಿದ್ದ ಹೋಟೆಲ್‌ಗೆ ನೋಟಿಸ್ ನೀಡಲಾಗಿದೆ, ನಾವು ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಿದ್ದೇವೆ, ಅವರು ಉತ್ತರಿಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ನಗರ ಪೊಲೀಸರು ಡ್ರಗ್ಸ್ ವಿರುದ್ಧ ಸಮರ ಸಾರಿದ್ದಾರೆ ಮತ್ತು ಇದು ಅದರ ಭಾಗವಾಗಿದೆ. ತಿಂಗಳ ಹಿಂದೆ ನಾವು ದಾಳಿ ನಡೆಸಿದ್ದೇವೆ, ಅಲ್ಲಿ 34 ಜನರು ಡ್ರಗ್ಸ್​ ತೆಗೆದುಕೊಂಡಿರುವುದು ಪತ್ತೆಯಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಸುಶಾಂತ್ ಇಲ್ಲದೇ ಇಂದಿಗೆ 2 ವರ್ಷ, ಜನಮಾನಸದಲ್ಲಿ ಮಾನವ್ ನೆನಪು ಎಂದಿಗೂ ಅಜರಾಮರ

ಮಗ ಡ್ರಗ್ಸ್ ಸೇವಿಸಲು ಸಾಧ್ಯವೇ ಇಲ್ಲ ಎಂದ ಶಕ್ತಿ ಕಪೂರ್

ಮಗನ ಪ್ರಕರಣದ ಬಗ್ಗೆ ಶಕ್ತಿ ಕಪೂರ್ ಅವರನ್ನು ಪ್ರಶ್ನಿಸಿದಾಗ, ನಾನು ಒಂದೇ ಒಂದು ವಿಷಯವನ್ನು ಹೇಳಬಲ್ಲೆ, ಇದು ಸುಳ್ಳು. ನನ್ನ ಮಗ ಡ್ರಗ್ಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.  ಈ ಹಿಂದೆ ಸಿದ್ದಾಂತ್ ಕಪೂರ್ ಸೋದರಿ, ನಟಿ ಶ್ರದ್ಧಾ ಕಪೂರ್ ಹೆಸರು ಸಹ ಡ್ರಗ್ಸ್ ಜಾಲದಲ್ಲಿ ಕೇಳಿ ಬಂದಿತ್ತು. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ವೇಳೆ ಶ್ರದ್ಧಾ ಕಪೂರ್, ರಿಯಾ ಚಕ್ರವರ್ತಿ, ಸಾರಾ ಅಲಿ ಖಾನ್, ದೀಪಿಕಾ ಪಡುಕೋಣೆ ಅವರಿಗೆ ನೋಟಿಸ್ ನೀಡಲಾಗಿತ್ತು.

ಎನ್ ಸಿಬಿ ನೋಟಿಸ್ ಹಿನ್ನೆಲೆ ಶ್ರದ್ಧಾ ಕಪೂರ್, ರಿಯಾ ಚಕ್ರವರ್ತಿ, ಸಾರಾ ಅಲಿ ಖಾನ್, ದೀಪಿಕಾ ಪಡುಕೋಣೆ ವಿಚಾರಣೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು. ಇನ್ನು ರಿಯಾ ಚಕ್ರವರ್ತಿ ಜೈಲು ವಾಸ ಅನುಭವಿಸಿ, ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

ಇದನ್ನೂ ಓದಿ: ಫೋಟೋ ಹಾಕಿ ನಿಮಗೆ ಯಾವ್ದ್ ಇಷ್ಟ ಅಂತ ಕೇಳಿದ ರಶ್ಮಿಕಾ, ಏನ್ ಬ್ಯೂಟಿ ಗುರು ಅಂದ್ರು ನೆಟ್ಟಿಗರು!

ಇನ್ನು ಹಾಸ್ಯ ಕಲಾವಿದೆ ಭಾರತಿ ಸಿಂಗ್, ಪತಿ ಹರ್ಷ ಲಿಂಬಾಚಿಯಾ, ನಟ ಅರ್ಜುನ್ ಕಪೂರ್ ಗೆಳತಿ ಸೋದರ ಸಹ ಬಂಧನಕ್ಕೆ ಒಳಗಾಗಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಇತ್ತೀಚೆಗಷ್ಟೇ ಕ್ಲಿನ್ ಚಿಟ್ ಸಿಕ್ಕಿದೆ.
Published by:Sandhya M
First published: