• Home
  • »
  • News
  • »
  • entertainment
  • »
  • Siddhaanth Vir Surryavanshi Death: ಜಿಮ್ ವರ್ಕೌಟ್ ವೇಳೆ ಕುಸಿದು ಬಿದ್ದು ಯುವನಟ ಸಾವು

Siddhaanth Vir Surryavanshi Death: ಜಿಮ್ ವರ್ಕೌಟ್ ವೇಳೆ ಕುಸಿದು ಬಿದ್ದು ಯುವನಟ ಸಾವು

ಸಿದ್ಧಾಂತ್ ವೀರ್ ಸೂರ್ಯವಂಶಿ

ಸಿದ್ಧಾಂತ್ ವೀರ್ ಸೂರ್ಯವಂಶಿ

ಜಿಮ್​​ನಲ್ಲಿ ವರ್ಕೌಟ್ ಮಾಡುತ್ತಿದ್ದ ಯುವ ನಟ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ನಟನಿಗೆ ಹೃದಯಾಘಾತ ಸಂಭವಿಸಿದರಬಹುದೆಂದು ಸಂಶಯಿಸಲಾಗುತ್ತಿದ್ದು ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ.

  • News18 Kannada
  • Last Updated :
  • Bangalore, India
  • Share this:

ಯುವ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ (Siddhaanth Vir Surryavanshi) ಜಿಮ್​​ನಲ್ಲಿ (Gym) ವರ್ಕೌಟ್ ಮಾಡುವ ವೇಳೆ ಕುಸಿದು (Collapse) ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. 46 ವರ್ಷದ ನಟ ಕುಸುಮ್, ವಾರಿಸ್, ಸೂರ್ಯಪುತ್ರ ಕರ್ಣ ಧಾರಾವಾಹಿಗಳಲ್ಲಿ (Serials) ನಟಿಸಿ ಪ್ರೇಕ್ಷಕರ ಮನಸು ಗೆದ್ದಿದ್ದ ಸಿದ್ಧಾಂತ್ ಅಪಾರ ಅಭಿಮಾನಿಗಳನ್ನು ಗಳಸಿದ್ದರು. ಜಿಮ್​​ನಲ್ಲಿ (Gym) ವರ್ಕೌಟ್ ಮಾಡುತ್ತಿದ್ದ ವೇಳೆ ಸಿದ್ಧಾಂತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ನಟ ಪತ್ನಿ ಅಲೇಷಿಯಾ ರಾವತ್ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ನಟ ಜಯ್ ಭಾನುಶಾಲಿ ಅವರು ಇನ್​​ಸ್ಟಾಗ್ರಾಮ್ ಮೂಲಕ ನಟನ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಸಿದ್ಧಾಂತ್ ಅವರ ಫೋಟೋ ಶೇರ್ ಮಾಡಿದ ಜಯ್ ಭಾನುಶಾಲಿ ಅವರು ಬಹಳ ಬೇಗನೆ ಹೋಗಿಬಿಟ್ಟಿರಿ ಎಂದು ಬರೆದಿದ್ದಾರೆ. ಕಾಮನ್ ಫ್ರೆಂಡ್ಸ್ ಮೂಲಕ ನಟನ ಸಾವಿನ ವಿಚಾರ ತಿಳಿಯಿತು. ಜಿಮ್​ನಲ್ಲಿ ಕುಸಿದು ಬಿದ್ದ ನಂತರ ಸಾವು ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.


ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದ ಸಿದ್ಧಾಂತ್ ವೀರ್ ಸೂರ್ಯವಂಶಿ ಅವರನ್ನು ಆನಂದ್ ಸೂರ್ಯವಂಶಿ ಎಂದೂ ಕರೆಯಲಾಗುತ್ತಿತ್ತು. ಕುಸುಮ್ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಅವರು ನಂತರದಲ್ಲಿ ಹೆಚ್ಚು ಜನಪ್ರಿಯರಾದರು. ಬಹಳಷ್ಟು ಧಾರಾವಾಹಿಗಳಲ್ಲಿ ಅವರು ಲೀಡ್ ರೋಲ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಕಸೂಟಿ ಝಿಂದಗೀ ಕೀ, ಕೃಷ್ಣ ಅರ್ಜುನ, ಕ್ಯಾ ದಿಲ್ ಮೇ ಹೇ ಪ್ರಮುಖ ಧಾರವಾಹಿಗಳು. ಕ್ಯೂ ರಿಶ್ತೋ ಮೇ ಕಟ್ಟಿ ಬಟ್ಟಿ, ಝಿದ್ದಿ ದಿಲ್ ಅವರ ಕೊನೆಯ ಪ್ರಾಜೆಕ್ಟ್.


ಸಿದ್ಧಾಂತ್ ಅವರು ಮೊದಲು ಇರಾ ಅವರನ್ನು ಮದುವೆಯಾಗಿದ್ದರು. ಈ ಜೋಡಿ 2015ರಲ್ಲಿ ವಿಚ್ಛೇದಿತರಾದರು. ನಂತರ ನಟ 2017ರಲ್ಲಿ ಅಲೇಷಿಯಾ ಅವರನ್ನು ಮದುವೆಯಾದರು. ಮೊದಲ ಮದುವೆಯಲ್ಲಿ ನಟ ಒಬ್ಬ ಮಗಳನ್ನು ಹೊಂದಿದ್ದಾರೆ. ಅಲೇಷಿಯಾ ಅವರು ಮೊದಲ ಮದುವೆಯಲ್ಲಿ ಮಗನನ್ನು ಹೊಂದಿದ್ದರು.

Published by:Divya D
First published: