ಅಭಿಮಾನಿಯ ಮೇಲಿನ ಪ್ರೀತಿಯಿಂದ ಶಿವಣ್ಣ ಮಾಡಿದ ಡಬ್​ಸ್ಮ್ಯಾಶ್​ ಹೇಗಿದೆ ಗೊತ್ತಾ..?

ಡಬ್​ಸ್ಮ್ಯಾಶ್, ಟಿಕ್​ಟಾಕ್​ ವಿಡಿಯೋಗಳು ಬಂದ ಮೇಲಂತೂ ಸಾಕಷ್ಟು ಜನರು ಸೆಲೆಬ್ರಿಟಿಗಳಾಗಿ ಬಿಟ್ಟಿದ್ದಾರೆ. ಆದರೆ ಈಗ ಸೆಲಟೆಬ್ರಿಟಿಗಳೂ ಈ ವಿಡಿಯೋಗಳನ್ನು ಮಾಡಲಾರಂಭಿಸಿದ್ದಾರೆ. ಶಿವಣ್ಣ ಸಹ ಈಗ ಅಭಿಮಾನಿಗಾಗಿ ಇಂತಹದ್ದೇ ಒಂದು ಡಬ್​ಸ್ಮ್ಯಾಶ್​ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

Anitha E | news18
Updated:January 8, 2019, 5:51 PM IST
ಅಭಿಮಾನಿಯ ಮೇಲಿನ ಪ್ರೀತಿಯಿಂದ ಶಿವಣ್ಣ ಮಾಡಿದ ಡಬ್​ಸ್ಮ್ಯಾಶ್​ ಹೇಗಿದೆ ಗೊತ್ತಾ..?
ಅಭಿಮಾನಿಯೊಂದಿಗೆ ಶಿವಣ್ಣನ ಡಬ್​ಸ್ಮ್ಯಾಶ್​
Anitha E | news18
Updated: January 8, 2019, 5:51 PM IST
- ಅನಿತಾ ಈ, 

ಈಗ ಎಲ್ಲಿ ನೋಡಿದರೂ ಕೇವಲ ಡಬ್​ಸ್ಮ್ಯಾಶ್, ಟಿಕ್​ಟಾಕ್​ ಸೇರಿದಂತೆ ಕೇವಲ ಹಾಡುಗಳನ್ನು ನಕಲು ಮಾಡುವ ವಿಡಿಯೋಗಳದ್ದೇ ಹವಾ... ಇದಕ್ಕೆ ಸೆಲೆಬ್ರಿಟಿಗಳೇನೂ ಹೊರತಾಗಿಲ್ಲ.

ಇದನ್ನೂ ಓದಿ: ಯಶ್​ ಹುಟ್ಟುಹಬ್ಬ: ನೆಚ್ಚಿನ ನಟನ ಮನೆ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ ಸ್ಥಿತಿ ಚಿಂತಾಜನಕ

ಸಾಮಾಜಿಕ ಜಾಲತಾಣದಲ್ಲಿ ಸುಮ್ಮನೆ ಹುಡುಕಿದರೆ ಸಾಕು, ಕಿರುತೆರೆ ಹಾಗೂ ಬೆಳ್ಳಿ ತೆರೆಯ ಸೆಲೆಬ್ರಿಟಿಗಳ ವಿಡಿಯೋಗಳು ಲೆಕ್ಕವಿಲ್ಲದಷ್ಟು ಸಿಗುತ್ತವೆ. ಆದರೆ ಈಗ ದೊಡ್ಮನೆ ದೊಡ್ಡ ಮಗ ಶಿವಣ್ಣನ ಡಬ್​ಸ್ಮ್ಯಾಶ್​ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೌದು, ಅಭಿಮಾನಿಯೊಂದಿಗೆ ಶಿವಣ್ಣ 'ದಿ ವಿಲನ್'​ ಸಿನಿಮಾದ 'ಯಾವ್​ ಊರ ಚೆಲುವಾ ಶಿವಾ ...' ಹಾಡಿಗೆ ಡಬ್​ಸ್ಮ್ಯಾಶ್​ ಮಾಡಿದ್ದಾರೆ. ಅದೂ ಸಹ ಆ ಅಭಿಮಾನಿ ಪ್ರೀತಿಯಿಂದ ಕೇಳಿದ್ದಕ್ಕೆ ಶಿವಣ್ಣ ಮಾಡಿರುವ ಈ ವಿಡಿಯೋ ತುಂಬಾ ಕ್ಯೂಟ್​ ಆಗಿದೆ.ಮಾಗಡಿಯ ತೇಜು ಎಂಬುವರು ಶಿವಣ್ಣನ ಅಭಿಮಾನಿ. ಚಾಮರಾಜಪೇಟೆಯಲ್ಲಿ 'ದ್ರೋಣ' ಸಿನಿಮಾದ ಚಿತ್ರೀಕರಣ ನಡೆಯುತ್ತಿರುವಾಗ ಅಲ್ಲಿಗೆ ಹೋಗಿದ್ದ ತೇಜು, ಶಿವಣ್ಣನೊಂದಿಗೆ ಡಬ್​ಸ್ಮ್ಯಾಶ್​ ಮಾಡಲು ಮನವಿ ಮಾಡಿದ್ದರಂತೆ. ಅಭಿಮಾನಿಗೆ ಇಲ್ಲ ಎಂದು ಹೇಳಿ ಮನಸ್ಸು ನೋಯಿಸಲು ಇಷ್ಟಪಡದ ಶಿವಣ್ಣ ಮೊದಲ ಬಾರಿಗೆ ಮೊಬೈಲ್​ ಸ್ಕ್ರೀನ್​ಗಾಗಿ ಈ ವಿಡಿಯೋದಲ್ಲಿ ಅಭಿನಯಿಸಿದ್ದಾರಂತೆ.
Loading...

First published:January 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ