56ನೇ ವಸಂತಕ್ಕೆ ಕಾಲಿಟ್ಟ ಶಿವಣ್ಣನ ಹುಟ್ಟುಹಬ್ಬದ ಸಂಭ್ರಮ

news18
Updated:July 12, 2018, 4:18 PM IST
56ನೇ ವಸಂತಕ್ಕೆ ಕಾಲಿಟ್ಟ ಶಿವಣ್ಣನ ಹುಟ್ಟುಹಬ್ಬದ ಸಂಭ್ರಮ
news18
Updated: July 12, 2018, 4:18 PM IST
ಓಂ ಸಕಲೇಶಪುರ, ನ್ಯೂಸ್ 18 ಕನ್ನಡ

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ 56ನೇ ಹುಟ್ಟುಹಬ್ಬದ ಸಂಭ್ರಮ. ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಶಿವಣ್ಣ ಅಭಿಮಾನಿಗಳು ಬೆಳಿಗ್ಗೆಯಿಂದಲೇ ನಾಗವಾರದಲ್ಲಿರುವ ಶಿವಣ್ಣನ ಮನೆಯ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆನಂದದಿಂದ ಆಚರಿಸಿ, ಪ್ರೀತಿಯ ಶಿವಣ್ಣನಿಗೆ ಅಭಿನಂದಿಸಿದರು.

'ಟಗರು' ಸಿನಿಮಾ ಗೆಲುವಿನ ಅಲೆಯಲ್ಲಿ ತೇಲುತ್ತಿರೋ ಶಿವಣ್ಣ 56ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಶಿವಣ್ಣ ಅಭಿಮಾನಿಗಳು ಬಗೆಬಗೆಯ ಕೇಕ್, ಹೂವಿನ ಹಾರ ಹಾಗೂ ಹೂವು ಗುಚ್ಚ ನೀಡಿ ಶುಭಾಶಯ ಕೋರಿದರು. ಇದರ ಜತೆಗೆ ಬನಶಂಕರಿಯ ಶಿವು ಅಡ್ಡ ಅಭಿಮಾನಿಗಳು 56 ಅಡಿ ಉದ್ದದ ಕೇಕ್ ಮಾಡಿಸಿದ್ದರು. ಕೇಕ್ ಒಟ್ಟು 360 ಕೆ.ಜಿ ತೂಕವಿದ್ದು, ಇದೇ ಮೊದಲ ಬಾರಿಗೆ ಸ್ಯಾಂಡಲ್​ವುಡ್​ನಲ್ಲಿ ನಟರೊಬ್ಬರ ಹುಟ್ಟುಹಬ್ಬಕ್ಕೆಂದು ಇಟ್ಟು ದೊಡ್ಡ ಕೇಕ್​ ಮಾಡಿಸಿರುವುದು. ಕರುನಾಡ ಸಿಂಹದ ಮರಿ @56 ಶಿವರಾಜ್ ಕುಮಾರ್, ಶಿವು ಅಡ್ಡ ಬನಶಂಕರಿ ಎಂದು ಕೇಕ್​ ಮೇಲೆ ಬರೆಸಲಾಗಿತ್ತು.

ಈ ವರ್ಷ ಶಿವರಾಜ್‍ಕುಮಾರ್ ಜೀವನದ ಯಶೋಗಾಥೆ ಹೇಳುವ 'ಕರುನಾಡ ಚಕ್ರವರ್ತಿ ಡಾ. ಶಿವರಾಜ್‍ಕುಮಾರ್ ಯಶೋಗಾಥೆ' ಅನ್ನೋ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಇನ್ನು ಪ್ರತಿ ಬಾರಿಯಂತೇಯೇ ಶಿವಣ್ಣ ಇವತ್ತೂ ಕೂಡ ಕಂಠೀರವ ಸ್ಟುಡಿಯೋಗೆ ತೆರಳಿ ರಾಜ್ ಮತ್ತು ಪಾರ್ವತಮ್ಮ ಅವರ ಸಮಾಧಿಗೆ ನಮಿಸಿ ಆಶೀರ್ವಾದ ಪಡೆದರು. ಇದೇ ವೇಳೆ ಮಾತನಾಡಿ ಹುಟ್ಟುಹಬ್ಬದ ಖುಷಿಯನ್ನು ಹಂಚಿಕೊಂಡರು.

ಅಂಗವಿಕಲರು, ಪುಟಾಣಿ ಮಕ್ಕಳು, ಮುದುಕರು ಎನ್ನದೇ ಶಿವಣ್ಣರನ್ನು ಇಷ್ಟಪಡುವ ಎಲ್ಲರೂ ಶುಭಕೋರೋಕೆ ಬಂದಿದ್ದರು. ಒಟ್ಟಾರೆ ಕಳೆದ ವರ್ಷ ಅಮ್ಮನ ಅಗಲಿಕೆಯಿಂದ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಹ್ಯಾಟ್ರಿಕ್ ಹೀರೋ ಹುಟ್ಟುಹಬ್ಬ ಈ ವರ್ಷ ಅದ್ದೂರಿಯಾಗೇ ನಡೆಯಿತು.

 
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ