Anitha EAnitha E
|
news18-kannada Updated:August 31, 2020, 10:58 AM IST
ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ನಿನ್ನೆ ಸುದೀಪ್ ಅವರು ತಮ್ಮ ಎಂದಿನಂತೆ ಈ ಸಲ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದ್ದರಿಂದ ಫ್ಯಾನ್ಸ್ಗೆ ಕೊಂಚ ನಿರಾಸೆಯಾಗಿತ್ತು.
ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಜೋರಾಗಿಯೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ನಟನ ಹುಟ್ಟುಹಬ್ಬದಂದು ಸಾಮಾಜಿಕ ಜಾಲತಾಣ ಸೇರಿದಂತೆ ವಾಟ್ಸ್ಆ್ಯಪ್ನಲ್ಲಿ ಡಿಪಿ ಹಾಕಿಕೊಳ್ಳಲು ಒಂದು ಕಾಮನ್ ಡಿಪಿ ಸಿದ್ಧಪಡಿಸಿದ್ದಾರೆ. ಈ ಕಾಮನ್ ಡಿಪಿಯನ್ನು ನಿನ್ನೆಯಷ್ಟೆ ರಿಲೀಸ್ ಮಾಡಲಾಗಿದೆ.
ನೆಚ್ಚಿನ ನಟ-ನಟಿಯರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕಾಮನ್ ಡಿಪಿ ರೆಡಿ ಮಾಡಿ, ಬೇರೆ ಸ್ಟಾರ್ಗಳ ಕೈಯಲ್ಲಿ ರಿಲೀಸ್ ಮಾಡಿಸುವುದು ಇತ್ತೀಚೆಗೆ ಕಾಮನ್ ಆಗಿ ಹೋಗಿದೆ. ಈಗ ಕಿಚ್ಚ ಸುದೀಪ್ ಹುಟ್ಟುಹಬ್ಬದ ಕಾಮನ್ ಡಿಪಿಯನ್ನು ಅಭಿಮಾನಿಗಳು ಶಿವರಾಜ್ಕುಮಾರ್ ಅವರಿಂದ ರಿಲೀಸ್ ಮಾಡಿಸಿದ್ದಾರೆ.
ಶಿವಣ್ಣ ಡಿಪಿ ರಿಲೀಸ್ ಮಾಡಿದ್ದು, ಅದಕ್ಕೆ ಸುದೀಪ್ ಧನ್ಯವಾದ ತಿಳಿಸಿ, ಟ್ವೀಟ್ ಮಾಡಿದ್ದಾರೆ.
ಟ್ವಟಿರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಶಿವಣ್ಣ ಈ ಕಾಮನ್ ಡಿಪಿ ರಿಲೀಸ್ ಮಾಡಿದ್ದಾರೆ. ಈ ಡಿಪಿ ರಿಲೀಸ್ ಅನ್ನು ಕಿಚ್ಚನ ಅಭಿಮಾನಿಗಳು ಆ.29ಕ್ಕೆ ಇಟ್ಟುಕೊಂಡಿದ್ದರು. ಆದರೆ ಅದನ್ನು ಆ.30ಕ್ಕೆ ಮಾಡುವಂತೆ ಸುದೀಪ್ ಮನವಿ ಮಾಡಿದ್ದರು. ಕಾರಣ, ಆ.30ಕ್ಕೆ ಸುದೀಪ್ ಅವರ ಅಮ್ಮನ ಹುಟ್ಟುಹಬ್ಬವಿತ್ತು. ಇದರಿಂದಾಗಿ ಅಂದು ಕಾಮನ್ ಡಿಪಿ ರಿಲೀಸ್ ಮಾಡಿಸುವ ಮೂಲಕ ಅಮ್ಮನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ಪ್ಲಾನ್ನಲ್ಲಿದ್ದರು ಕಿಚ್ಚ.
ಸುದೀಪ್ ಅವರ ಮನವಿಯಂತೆ, ಕಿಚ್ಚನ ಅಮ್ಮನ ಹುಟ್ಟುಹಬ್ಬದಂದೇ ಕಾಮನ್ ಡಿಪಿ ಬಿಡುಗಡೆ ಮಾಡಲಾಗಿದೆ. ಇನ್ನು ಸುದೀಪ್ ಸಹ ಅಮ್ಮನ ಹುಟ್ಟುಹಬ್ಬಕ್ಕೆ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.
ಶಾಲೆಯಲ್ಲಿ ನಡೆಯುತ್ತಿದ್ದ ಸ್ಪರ್ಧೆಗಳಲ್ಲಿ ನಾನು ಗೆದ್ದು, ಪ್ರಶಸ್ತಿ ತಂದಾಗ ನಿನ್ನ ಮುಖದಲ್ಲಿರುತ್ತಿದ್ದ ಖುಷಿ ಇನ್ನೂ ನನಗೆ ನೆನಪಿದೆ. ಈಗಲೂ ಅದೇ ಖುಷಿಯನ್ನು ನಿನ್ನ ಮೊಗದಲ್ಲಿ ಕಾಣುತ್ತೇನೆ ಎಂದು ಅಮ್ಮನಿಗೆ ಲವ್ ಯೂ ಅಮ್ಮ ಅಂತ ಹುಟ್ಟುಹಬ್ಬದ ಶುಭ ಕೋರಿದ್ದಾರೆ ಕಿಚ್ಚ ಸುದೀಪ್.
Published by:
Anitha E
First published:
August 31, 2020, 10:58 AM IST