ಸ್ಯಾಂಡಲ್ವುಡ್ ನ ಹ್ಯಾಟ್ರಿಕ್ ಹೀರೋ, ಅಭಿಮಾನಿಗಳ ಪಾಲಿನ ಮೆಚ್ಚಿನ ಶಿವಣ್ಣ, ಡಾ. ಶಿವರಾಜ್‌ಕುಮಾರ್ (Shivarajkumar) ಅವರು ಇದೇ ಜುಲೈ 12ರಂದು 60ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ದಿನವನ್ನು ಶಿವಣ್ಣನ ಅಭಿಮಾನಿಗಳು ವಿಶೇಷವಾಗಿ ಆಚರಿಸಲು ನೂರಾರು ಯೋಜನೆಗಳನ್ನು ಹಾಕಿಕೊಂಡಿದ್ದರು. ಆದರೆ ಈ ಬಾರಿ ಶಿವರಾಜ್‌ಕುಮಾರ್ ಅವರು ತಮ್ಮ ಬರ್ತ್ ಡೇ (Birthday) ಅನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರಂತೆ. ಹೌದು, ಕರುನಾಡ ಮುತ್ತು ಪುನೀತ್ ರಾಜ್ಕುಮಾರ್ (Puneeth Rajkumar) ಅವರು ನಮ್ಮನ್ನು ಅಗಲಿ ಅನೇಕ ದಿನಗಳೇ ಕಳೆದಿದೆ. ಆದರೆ ಇದರ ನೋವಿನಿಂದ ಅವರ ಅಭಿಮಾನಿಗಳಾಗಲಿ ಅಥವಾ ರಾಜ್ ಕುಟುಂಬವಾಗಲಿ ಇನ್ನೂ ಸಂಪೂರ್ಣವಾಗಿ ಹೊರಬಂದಿಲ್ಲ. ಹೀಗಾಗಿ ಅಪ್ಪು (Appu) ಅಗಲಿಕೆ ಕಾರಣದಿಂದ ಶಿವಣ್ಣ ಈ ಬಾರಿ ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧರಿಸಿರುವ ಶಿವಣ್ಣ:
ಜುಲೈ 12 ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟಿದ ದಿನ. ಅಂದು ಅವರು ತಮ್ಮ 60ನೇ ವಸಂತಕ್ಕೆ ಕಾಲಿಡಲಿದ್ದಾರೆ. ಆದರೆ ಈ ಬಾರಿ ಶಿವಣ್ಣ ತಮ್ಮ ಹುಟ್ಟುಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದಾರಂತೆ. ಹೌದು, ತಮ್ಮ ಪ್ರೀತಿಯ ತಮ್ಮ ಪುನೀತ್ ರಾಜ್ಕುಮಾರ್ ಅವರು ನಿಧರಾದ ನೋವಿನಿಂದ ಶಿವಣ್ಣ ಇನ್ನೂ ಹೊರಬಂದಿಲ್ಲ. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಪ್ಪುವಿನ ಬಗ್ಗೆ ಮನಸಾರೆ ಮಾತನಾಡುತ್ತಿರುತ್ತಾರೆ. ಹೀಗಾಗಿ ಅವರು ಈ ಬಾರಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಇದು ಅಭಿಮಾನಿಗಳಿಗೆ ಕೊಂಚ ಬೇಸರವನ್ನು ಉಂಟು ಮಾಡಿದದೆ. ಆದರೆ ಶಿವಣ್ಣ ಫ್ಯಾನ್ಸ್ ಗಳಿಗಾಗಿ ಭರ್ಜರಿ ಗಿಫ್ಟ್ ನೀಡುವ ಸಾಧ್ಯತೆ ಇದೆ.
ಟಗರು ಶಿವನ ಸರ್ಪ್ರೈಸ್ ಗಿಫ್ಟ್:
ಹೌದು, ಈ ಬಾರಿ ಶಿವಣ್ಣ 60ನೇ ವಸಂತಕ್ಕೆ ಕಾಲಿಡಲಿದ್ದಾರೆ. ಆದರೆ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದಾರೆ. ಆದರೆ ಎಂದಿಗೂ ಅಭಿಮಾನಿಗಳನ್ನು ಬೇಸರಗೊಳಿಸದ ಶಿವಣ್ಣ ಫ್ಯಾನ್ಸ್ಗೆ ಸರ್ಪ್ರೈಸ್ ಗಿಫ್ಟ್ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ನಿಮಿತ್ತ ಶಿವಣ್ಣನ ಮುಂದಿನ ಹೊಸ ಸಿನಿಮಾದ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶಿವರಾಜ್‌ಕುಮಾರ್ ಅವರ ಹೊಸ ಚಿತ್ರಕ್ಕೆ ಕೊಟ್ರೇಶ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತುಗಳು ಸ್ಯಾಂಡಲ್ವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಅಲ್ಲದೇ ಎ. ಆರ್. ಕೆ ಪ್ರೊಡಕ್ಷನ್ ಮತ್ತು ರುಬಿನ್ ರಾಜ್ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಚರಣ್ ರಾಜ್ ಸಂಗೀತ ನೀಡಲಿದ್ದಾರೆ.
ಇದನ್ನೂ ಓದಿ: Bairagi Review: ಬೆಂಗಳೂರಲ್ಲಿ ಕ್ಷಣಕ್ಕೆ ಚೇಂಜ್ ಆಗುತ್ತೆ ವೆದರ್, ಆದ್ರೆ ಯಾವತ್ತೂ ಬದಲಾಗಲ್ಲ ಶಿವಣ್ಣನ ಖದರ್!
ಬೈರಾಗಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ
ನಿಜಕ್ಕೂ ಇದು ವಿಭಿನ್ನ ಪ್ರಯತ್ನವಾಗಿದ್ದು, ಶಿವಣ್ಣ ಅಭಿಮಾನಿಗಳ ಸಂತೋಕ್ಷಕ್ಕೆ ಕಾರಣವಾಗಿದೆ. ಇತ್ತೀಚೆಗೆ ಶಿವಣ್ಣ ಅಭಿನಯದ ಬೈರಾಗಿ ಸಿನಿಮಾ ಬಿಡುಗಡೆಯಾಗಿ, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಆ್ಯಕ್ಷನ್ ಡ್ರಾಮಾ ಜಾನರ್‌ನ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಮತ್ತು ಧನಂಜಯ ಅವರ ಲುಕ್‌ಗಳು ವಿಭಿನ್ನವಾಗಿವೆ. ಶಿವರಾಜ್‌ಕುಮಾರ್‌ಗೆ ತಮಿಳಿನ ಅಂಜಲಿ ನಾಯಕಿಯಾದರೆ, ಧನಂಜಯ ಅವರಿಗೆ ಯಶಾ ಶಿವಕುಮಾರ್ ಜೋಡಿಯಾಗಿದ್ದಾರೆ.
ಇದನ್ನೂ ಓದಿ: Shiva Rajkumar: ಶಿವಣ್ಣನ ಅಸಲಿ ಹೆಸರು ಶಿವರಾಜ್‌ಕುಮಾರ್ ಅಲ್ವಂತೆ! ನಿಜವಾದ ಹೆಸರು ರಿವೀಲ್ ಮಾಡಿದ ಹ್ಯಾಟ್ರಿಕ್ ಹೀರೋ
ಹ್ಯಾಟ್ರಿಕ್ ಹೀರೋ' ಶಿವರಾಜ್ ಕುಮಾರ್ ಅಭಿನಯದ 123ನೇ ಸಿನಿಮಾ ‘ಬೈರಾಗಿ’. ಶಿವಣ್ಣ ಅವರ ಕಳೆದ ಹುಟ್ಟು ಹಬ್ಬದಂದು ಬಿಡುಗಡೆಯಾದ ಟೈಟಲ್ ಟೀಸರ್ ರಿಲೀಸ್ ಆಗಿತ್ತು, ಶಿವಣ್ಣನ ಟೈಟಲ್ ಹಾಗೂ ಲುಕ್ ಕಂಡು ಅಭಿಮಾನಿಗಳು ಬೆರಗಾಗಿದ್ದರು. ಹುಲಿ ವೇಷ, ಹೇರ್ ಸ್ಟೈಲ್ ಹಾಗೂ ಅವರ ಡಿಫರೆಂಟ್ ಕಾಸ್ಟ್ಯೂಮ್'ಗೆ ಫ್ಯಾನ್ಸ್ ಫಿದಾ ಆಗಿದ್ದರು. ಮುಖ್ಯವಾಗಿ ಅನೂಪ್ ಸೀಳಿನ್ ಸಂಗೀತಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ