ರಾಜ್ ಕುಮಾರ್ ಫ್ಯಾಮಿಲಿಯಲ್ಲಿ (Rajkumar Family) ಪುನೀತ್ ರಾಜ್ಕುಮಾರ್ (Puneeth Rajkumar) ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು ಪ್ರೀತಿಯ ಅಪ್ಪುವನ್ನು ಕಳೆದುಕೊಂಡ ನೋವು ಇನ್ನೂ ಕಡಿಮೆಯಾಗಿಲ್ಲ. ಶಿವರಾಜ್ ಕುಮಾರ್ (Shiva Rajkumar) ಹಾಗೂ ರಾಘವೇಂದ್ರ ರಾಜ್ಕುಮಾರ್ಗೆ ತಮ್ಮ ನಮ್ಮ ಜೊತೆಯಲ್ಲಿ ಎಂಬ ದುಃಖ ಕಾಡುತ್ತಲೇ ಇದೆ. ಯಾವುದೇ ಕಾರ್ಯಕ್ರಮಕ್ಕೆ ಹೋದಾಗಲು ವೇದಿಕೆ ಮೇಲೆ ಜನ ಅಪ್ಪುವನ್ನು ಕೊಂಡಾಡುತ್ತಾರೆ. ಈ ವೇಳೆ ಪುನೀತ್ ನೆನೆದು ಶಿವರಾಜ್ ಕುಮಾರ್ ಭಾವುಕರಾಗ್ತಾರೆ. ಇಂತಹ ಘಟನೆ ಹಲವು ಬಾರಿ ಮರುಕಳಿಸಿದೆ. ಹೈದ್ರಾಬಾದ್ನಲ್ಲಿ (Hyderabad) ನಡೆದ ವೇದ ಸಿನಿಮಾ (Vedha) ಪ್ರೀ ರಿಲೀಸ್ ಇವೆಂಟ್ನಲ್ಲಿ ಅಪ್ಪು ನೆನೆದು ಕಣ್ಣೀರು ಹಾಕಿದ್ದಾರೆ. ಪಕ್ಕದಲ್ಲೇ ಕುಳಿತಿದ್ದ ತೆಲುಗಿನ ಸೂಪರ್ ಸ್ಟಾರ್ ಬಾಲಕೃಷ್ಣ (Actor Balakrishna), ಶಿವಣ್ಣ ಅವರಿಗೆ ಸಮಾಧಾನ ಹೇಳಿದ್ದಾರೆ.
ಅಣ್ಣನಿಗೆ ಕಾಡ್ತಿದೆ ತಮ್ಮನ ನೆನಪು
ಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿ ವರ್ಷಗಳೇ ಉರುಳಿದ್ರು. ಅಭಿಮಾನಿಗಳ ಮನದಲ್ಲಿ ಅಪ್ಪು ಶಾಶ್ವತವಾಗಿದ್ದಾರೆ. ಹಲವು ರೀತಿಗಳಲ್ಲಿ ಜನ ಅಪ್ಪುವನ್ನು ನೆನೆಯುತ್ತಿದ್ದಾರೆ. ರಾಜ್ಕುಮಾರ್ ಮೂವರು ಗಂಡು ಮಕ್ಕಳು ಅಣ್ಣ-ತಮ್ಮಂದಿರು ಅಂದ್ರೆ ಹೀಗೆ ಇರ್ಬೇಕು ಎನ್ನುವಂತೆ ಇದ್ರು. ಶಿವಣ್ಣ, ರಾಘಣ್ಣ ಇಬ್ಬರಿಗೂ ತಮ್ಮ ಅಪ್ಪು ಅಂದ್ರೆ ತುಂಬಾ ಇಷ್ಟ ಇದೀಗ ತಮ್ಮನನ್ನು ಕಳೆದುಕೊಂಡು ಇಬ್ಬರು ಬಹಳ ದುಃಖದಲ್ಲಿದ್ದಾರೆ.
ಅಪ್ಪು ನೆನೆದು ಶಿವಣ್ಣ ಕಣ್ಣೀರು
ಕುಟುಂಬ ಸದಸ್ಯರು ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಅಲ್ಲಿ ಪುನೀತ್ ಬಗ್ಗೆ ಹೊಗಳಿಕೆ ಮಾತು. ಅಪ್ಪು ಸರಳತೆ, ಸಮಾಜ ಸೇವೆಗಳ ಬಗ್ಗೆ ಗುಣಗಾನ ಮಾಡ್ತಾರೆ. ಇದನ್ನು ಕೇಳಿದ ಬಳಿಕ ಅಪ್ಪು ನೆನೆದು ರಾಘಣ್ಣ, ಶಿವಣ್ಣ, ಹಾಗೂ ಪುನೀತ್ ಪತ್ನಿ ಅಶ್ವಿನಿ ಸಹ ಕಣ್ಣೀರು ಹಾಕಿರುವ ಘಟನೆ ಅನೇಕ ಬಾರಿ ನಡೆದಿದೆ. ಇದೀಗ ಹೈದ್ರಾಬಾದ್ನಲ್ಲಿ ನಡೆದ ವೇದ ಸಿನಿಮಾ ಪ್ರೀ ರಿಲೀಸ್ ಇವೆಂಟ್ನಲ್ಲಿ ಅಪ್ಪು ನೆನೆದು ಕಣ್ಣೀರು ಹಾಕಿದ್ದಾರೆ.
That Brothers Bond ❤️🙏
Balayya Babai : Naa Thammudu ShivarajKumar 👏✨
Shivanna : Jai Balayya ✊🚩
Appu Boss Always With Us Shivanna 😓😭#ShivaRajKumar #NBK #NandamuriBalakrishna pic.twitter.com/afO0fv1pyi
— Madhu Yuva Tarak ✊🚩 (@MadhPRKBOSSCult) February 8, 2023
ವೇದಿಕೆ ಮೇಲೆ ಅಪ್ಪು ವಿಡಿಯೋ ಪ್ರಸಾರ ಮಾಡಿದ್ರು. ಈ ವೇಳೆ ಕೆಳಗೆ ಕುಳಿತಿದ್ದ ಶಿವರಾಜ್ಕುಮಾರ್ ದುಃಖದ ಕಟ್ಟೆ ಒಡೆದಿತ್ತು. ಅಪ್ಪು ನೆನೆದು ಶಿವಣ್ಣ ಜೋರಾಗಿ ಅಳುತ್ತಿದ್ದಾರೆ. ಪಕ್ಕದಲ್ಲೇ ಕುಳಿತಿದ್ದ ತೆಲುಗು ನಟ ಬಾಲಕೃಷ್ಣ ಶಿವರಾಜ್ಕುಮಾರ್ಗೆ ಸಮಾಧಾನ ಹೇಳಿದ್ದಾರೆ. ಇದೇ ವೇಳೆ ಗೀತಾ ಶಿವರಾಜ್ಕುಮಾರ್ ಸಹ ಮೈದನನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ತೆಲುಗಿನಲ್ಲಿ ವೇದ ರಿಲೀಸ್
ಶಿವರಾಜ್ ಅಭಿನಯದ ವೇದ ಸಿನಿಮಾ ಕಳೆದ ವರ್ಷ ಕನ್ನಡದಲ್ಲಿ ರಿಲೀಸ್ ಆಗಿ ಅದ್ಬುತ ಯಶಸ್ಸು ಕಂಡಿತ್ತು. ಇದೀಗ ತೆಲುಗಿನಲ್ಲೂ ತೆರೆಗೆ ಬರುತ್ತಿದೆ. ಫೆಬ್ರವರಿ 9ಕ್ಕೆ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ತೆಲುಗಿನಲ್ಲಿ ಅಬ್ಬರದ ಪ್ರಚಾರ ನೀಡಲಾಗುತ್ತಿದೆ. ವೇದ ತೆಲುಗು ವರ್ಷನ್ನ ಪ್ರೀ ರಿಲೀಸ್ ಇವೆಂಟ್ ಫೆಬ್ರವರಿ 7ರಂದು ಹೈದರಾಬಾದ್ನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಬಾಲಯ್ಯ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಇದು ಶಿವರಾಜ್ಕುಮಾರ್ ಅವರ 125ನೇ ಚಿತ್ರವಾಗಿದ್ದು, ಗೀತಾ ಶಿವರಾಜ್ಕುಮಾರ್ ನಿರ್ಮಾಣದ ಮಾಡಿದ್ದು, ಎ ಹರ್ಷ ವೇದ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ