ಟಾಲಿವುಡ್, ಕಾಲಿವುಡ್ನಲ್ಲೂ ನಟ ಶಿವರಾಜ್ ಕುಮಾರ್ (Actor Shiva Rajkumar) ಬ್ಯುಸಿ ಆಗಿದ್ದಾರೆ. 60 ವರ್ಷವಾದ್ರೂ ಶಿವಣ್ಣನ ಎನರ್ಜಿ ಮಾತ್ರ ಕಡಿಮೆ ಆಗಿಲ್ಲ. ಯಂಗ್ ಸ್ಟಾರ್ಗಳನ್ನು ಸಹ ಹಿಂದಿಕ್ಕುವಂತೆ ನಟಿಸುತ್ತಿದೆ. ಕನ್ನಡದಲ್ಲೂ (Kannada Movie) ಸಾಲು ಸಿನಿಮಾಗೆ ಸಹಿ ಹಾಕಿದ್ದಾರೆ. ಶಿವಣ್ಣ 125ನೇ ಸಿನಿಮಾ ವೇದ್ ಸೂಪರ್ ಹಿಟ್ ಆಗ್ತಿದ್ದಂತೆ ಕಾಲಿವುಡ್, ಟಾಲಿವುಡ್ ಸಿನಿಮಾಗಳ ಶೂಟಿಂಗ್ನಲ್ಲಿ ಬ್ಯುಸಿ ಆದ್ರು. ರಜನಿಕಾಂತ್ ಜೈಲರ್ ಸಿನಿಮಾದಲ್ಲಿ (Rajinikanth Jailer Movie) ನಟ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ. ಮಂಗಳೂರಿನಲ್ಲಿ ನಡೆದ ಶೂಟಿಂಗ್ ವೇಳೆ ಚಿತ್ರತಂಡ ಸೇರಿದ್ದ ಶಿವಣ್ಣ, ಟಾಲಿವುಡ್ನಲ್ಲೂ (Tollywood) ಸಿನಿಮಾ ಮಾಡುತ್ತಿರುವ ಬಗ್ಗೆ ಅನೌನ್ಸ್ ಮಾಡಿದ್ದಾರೆ. ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದಲ್ಲಿ (Kabza Movie) ಉಪ್ಪಿ ಹಾಗೂ ಕಿಚ್ಚ ಜೊತೆಗೆ ನಟ ಶಿವಣ್ಣ ಕೂಡ ಕಾಣಿಸಿಕೊಳ್ತಿದ್ದು, ಮೂವರನ್ನು ಒಟ್ಟಿಗೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಈ ನಡುವೆ ಹ್ಯಾಟ್ರಿಕ್ ಹೀರೋ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ.
ಕನ್ನಡದಲ್ಲಿ ಹೆಚ್ಚಾಗಿದೆ ಮಲ್ಟಿಸ್ಟಾರ್ ಸಿನಿಮಾ
ಬಾಲಿವುಡ್ನಲ್ಲೇ ಹೆಚ್ಚಾಗಿ ಮಲ್ಟಿಸ್ಟಾರ್ ಸಿನಿಮಾ (Multistar Movie) ನೋಡ್ತಿದ್ವಿ. ಸ್ಯಾಂಡಲ್ವುಡ್ನಲ್ಲಿ ಮಲ್ಟಿಸ್ಟಾರ್ ಸಿನಿಮಾಗಳ ಸಂಖ್ಯೆ ತೀರ ಕಡಿಮೆ ಇತ್ತು. ಇದೀಗ ಕನ್ನಡದಲ್ಲಿ ಮಲ್ಟಿಸ್ಟಾರ್ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಅನೇಕ ಸಿನಿಮಾಗಳು ನಾಯಕ ನಟರ ಜೊತೆ ಸ್ಟಾರ್ ಹೀರೋಗಳು ಕಾಣಿಸಿಕೊಳ್ಳೋದು ಕಾಮನ್ ಆಗಿದೆ. ಹಾಗೇ ಇಬ್ಬರು ಮೂವರು ಸ್ಟಾರ್ ಹೀರೋಗಳು ಒಂದೇ ಸಿನಿಮಾದಲ್ಲಿ ಮಿಂಚುವ ಕಾಲವೂ ಬಂದಿದೆ.
ಮತ್ತೊಂದು ಮಲ್ಟಿಸ್ಟಾರ್ ಮೂವಿಯಲ್ಲಿ ಶಿವಣ್ಣ
ನಟ ಉಪೇಂದ್ರ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕಬ್ಜದಲ್ಲಿ ಕಿಚ್ಚ ಸುದೀಪ್ ಹಾಗೂ ಶಿವರಾಜ್ಕುಮಾರ್ ಕಾಣಿಸಿಕೊಳ್ತಿರುವ ವಿಚಾರ ಗೊತ್ತೇ ಇದೆ. ಕಬ್ಜ ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ರು. ಇದೀಗ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾಗೆ ಹ್ಯಾಟ್ರಿಕ್ ಹೀರೋ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಯಾವುದು ಆ ಸಿನಿಮಾ ಎನ್ನುವ ಚರ್ಚೆ ಇದೀಗ ಸ್ಯಾಂಡಲ್ವುಡ್ನಲ್ಲಿ ಆಗ್ತಿದೆ.
ಗಣಿ ಜೊತೆ ಹ್ಯಾಟ್ರಿಕ್ ಹೀರೋ ಶಿವಣ್ಣ
ಉಪ್ಪಿ ,ಕಿಚ್ಚನ ಜೊತೆ ಆಯ್ತು ಈಗ ಮತ್ತೊಬ್ಬ ಸ್ಟಾರ್ ಜೊತೆ ಶಿವಣ್ಣ ತೆರೆ ಮೇಲೆ ಕಾಣಿಸಿಕೊಳ್ತಿದ್ದಾರೆ. ಅದು ಯಾರು ಅಲ್ಲ, ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh), ಹೌದು ಗಣೇಶ್ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ನಲ್ಲಿ ಸಿನಿಮಾವೊಂದು ತಯಾರಾಗಲಿದೆ ಎನ್ನುವ ಸುದ್ದಿ ಹೊರಬಿದ್ದಿದೆ.
ಆ್ಯಕ್ಷನ್ ಕಟ್ ಹೇಳ್ತಿದ್ದಾರೆ ಕಾಲಿವುಡ್ ಡೈರೆಕ್ಟರ್
ಕಾಲಿವುಡ್ ಸ್ಟಾರ್ ಡೈರೆಕ್ಟರ್ ಕೆ ಎಸ್ ರವಿಕುಮಾರ್ ಅವರು ಗಣೇಶ್ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಶಿವಣ್ಣನ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ಕಾಣಿಸಿಕೊಳ್ತಿದ್ದಾರೆ.
ಈ ಚಿತ್ರವನ್ನು ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿದ್ದು, ಇದು ದೊಡ್ಡ ಬಜೆಟ್ ಸಿನಿಮಾ ಆಗಿದೆ. ಜೂನ್ ,ಜುಲೈನಲ್ಲಿನಲ್ಲಿ ಸಿನಿಮಾ ಸೆಟ್ಟೇರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ