ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ (Karnataka Assembly Election) ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚುನಾವಣೆಯ (Election 2023) ಕಾವು ಜೋರಾಗಿದ್ದು, ಕನ್ನಡ ಚಿತ್ರರಂಗದ (Kannada Cinema Industry) ಘಟಾನುಘಟಿ ನಾಯಕರು ಈ ಬಾರಿ ಎಲೆಕ್ಷನ್ ಅಖಾಡಕ್ಕಿಳಿದು ನೆಚ್ಚಿನ ನಾಯಕರ ಪರ ಅಬ್ಬರದ ಪ್ರಚಾರಕ ಮಾಡುತ್ತಿದ್ದಾರೆ. ಬಿಜೆಪಿ ನಾಯಕ ಪರ ಸ್ಟಾರ್ ಪ್ರಚಾರಕರಾಗಿ ನಟ ಕಿಚ್ಚ ಸುದೀಪ್ (Actor Sudeep) ಎಲ್ಲೆಡೆ ಅಬ್ಬರಿಸುತ್ತಿದ್ದಾರೆ. ರಾಜ್ಯ ರಾಜಕೀಯದಿಂದಲೇ ದೂರ ಉಳಿದಿದ್ದ ದೊಡ್ಮನೆ ದೊಡ್ಡ ಮಗ ಶಿವಣ್ಣ (Shivaraj Kumar) ಕೂಡ ಪಾಲಿಟಿಕ್ಸ್ಗೆ ಎಂಟ್ರಿ ಕೊಡ್ತಿದ್ದಾರೆ. ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.
ಪತ್ನಿ ಗೀತಾ ಜೊತೆ ಫೀಲ್ಡ್ಗೆ ಇಳಿದ ಶಿವಣ್ಣ
ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಬ್ಬರ ಪ್ರಚಾರಕ್ಕೆ ಶಿವಣ್ಣ ನಾಂದಿ ಹಾಡಿದ್ದಾರೆ. ಸಿದ್ದರಾಮಯ್ಯ ಕ್ಷೇತ್ರ ವರುಣಾ ಸೇರಿದಂತೆ ಅನೇಕ ನಾಯಕ ಪರವಾಗಿ ಶಿವರಾಜ್ ಕುಮಾರ್ ಮತಬೇಟೆಗಿಳಿದ್ದಾರೆ. ಪತ್ನಿ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಿದ್ದಂತೆ ಶಿವಣ್ಣ ಫೀಲ್ಡ್ಗೆ ಇಳಿದಿದ್ದಾರೆ. ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಶಿವಮೊಗ್ಗದ ಮೂರು ಕ್ಷೇತ್ರದಲ್ಲಿ ರೋಡ್ ಶೋ ನಡೆಸಲಿದ್ದಾರೆ.
ರಾಹುಲ್ ಗಾಂಧಿ ಜೊತೆ ಶಿವಣ್ಣ
ಹುಬ್ಬಳ್ಳಿ ,ವರುಣಾ, ಶಿರಸಿ ಸೇರಿದಂತೆ ಹಲವು ಕಡೆಗಳಲ್ಲಿ ಶಿವಣ್ಣ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಸಾಗರ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಪರ ಅಬ್ಬರದ ಪ್ರಚಾರ ನಡೆಸಿದ್ರು. ಇಂದು ಶಿವಣ್ಣ ರಾಹುಲ್ ಗಾಂಧಿ ಜೊತೆ ಪ್ರಚಾರದ ವೇದಿಕೆ ಹಂಚಿಕೊಳ್ಳಲಿದ್ದಾರೆ. ಜೊತೆಗೆ
ತೀರ್ಥಹಳ್ಳಿಯಲ್ಲಿ ಕಿಮ್ಮನೆ ಪರ ಮತಯಾಚನೆ ಮಾಡಲಿದ್ದಾರೆ.
ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವಣ್ಣ
ಶಿವರಾಜ್ಕುಮಾರ್ ಪತ್ನಿ ಗೀತಾ ಶಿವರಾಜ್ಕುಮಾರ್ (Geetha Shivarajkumar) ಕಾಂಗ್ರೆಸ್ ಸೇರ್ಪಡೆ ಆಗಿದ್ದು, ಶಿವಣ್ಣ (Shivanna) ಕೂಡ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಮಾತುಗಳು ಕೂಡ ಕೇಳಿ ಬರ್ತಿದೆ. ಈ ಬಗ್ಗೆ ಅವರು ಮಾತನಾಡಿದ ಶಿವಣ್ಣ. ‘ಒಳ್ಳೆಯ ಕೆಲಸ ಮಾಡುವವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ ಅಷ್ಟೇ. ಭೀಮಣ್ಣ ನಮಗೆ ಸಂಬಂಧಿಕರು. ಜಗದೀಶ್ ಶೆಟ್ಟರ್ ಜೊತೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಆದರೆ, ರಾಜಕೀಯ ಸೇರುವ ಆಲೋಚನೆ ಇಲ್ಲ ಎಂದು ಶಿವರಾಜ್ ಕುಮಾರ್, ಗೀತಾ ಅವರೇ ಇಲ್ಲಿ ಸ್ಟಾರ ಪ್ರಚಾರಕ್ಕೂ ಎಂದು ಹೇಳಿದ್ದಾರೆ.
ಇದನ್ನೂ ಓದಿ:Shivaraj Kumar: ಬಿಜೆಪಿ ಪರ ನಿಂತ ಕಿಚ್ಚ, ಕಾಂಗ್ರೆಸ್ 'ಕೈ' ಹಿಡಿದ ಶಿವಣ್ಣ! ಪ್ರಚಾರದ ಅಖಾಡಕ್ಕೆ 'ಟಗರು' ಎಂಟ್ರಿ!
ಶಿವಣ್ಣ ಈ ಕ್ಷೇತ್ರಕ್ಕೆ ಶಕ್ತಿ ತುಂಬಿದ್ದಾರೆ
ಸಾಗರ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಅವರು ಶಿವಣ್ಣ ಬಗ್ಗೆ ಮಾತಾಡಿದ್ರು. ನನ್ನ ಪರ ಪ್ರಚಾರಕ್ಕೆ ಶಿವರಾಜಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ , ಮಧು ಬಂಗಾರಪ್ಪ ಮೂವರು ಬಂದಿದ್ದಾರೆ. ಅವರು ಬಂದಿರುವುದು ಬಹಳ ಖುಷಿಯಾಗಿದೆ. ನಿಜಕ್ಕೂ ಈ ಕ್ಷೇತ್ರಕ್ಕೆ ಶಕ್ತಿ ತುಂಬಿದಂತೆ ಆಗಿದೆ. ಒಂದು ಅಲೆ ಆರಂಭವಾಗಿದೆ ಈ ತನಕ ಯಾರು ಕೂಡ ಈ ಕ್ಷೇತ್ರಕ್ಕೆ ಸ್ಟಾರ್ ಪ್ರಚಾರಕರು ಬಂದಿರಲಿಲ್ಲ. ಈಗ ಪ್ರಚಾರಕ್ಕೆ ವೇಗ ಬಂದಿದೆ ಎಂದ್ರು.
ನಿರೀಕ್ಷೆಗೂ ಮೀರಿ ಜನರ ಆಗಮನ
ಶಿವರಾಜ್ ಕುಮಾರ್ ನೋಡಲು ನಿರೀಕ್ಷೆಗೂ ಮೀರಿ ಜನ ಬಂದಿದ್ದಾರೆ. ಈ ಚುನಾವಣೆ ನಿರೀಕ್ಷೆ ಹೆಚ್ಚು ಕಾಣುತ್ತಿದೆ. ನನ್ನ ಪರ ಜನರ ತಕ್ತಿ ತುಂಬಾ ಚೆನ್ನಾಗಿದೆ. ಇಂಥಾ ಚುನಾವಣೆಯನ್ನು ನಾನು 2004ರಲ್ಲಿ ಸಾಗರದಲ್ಲಿ ನೋಡಿದೆ. ಪ್ರಿಯಾಂಕಾ ಗಾಂಧಿ ಕೂಡ ಸಾಗರಕ್ಕೆ ಬರಲಿದ್ದಾರೆ ಎಂದು ಗೋಪಾಲಕೃಷ್ಣ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ