ಸ್ಯಾಂಡಲ್ವುಡ್ನ (sandalwood) ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್ (Shiva Rajkumar) ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ರಿಯಾಲಿಟಿ ಶೋ, ಸಿನಿಮಾ ಎಂದೆಲ್ಲಾ ಬ್ಯುಸಿ ಇದ್ದಾರೆ. ಆದರೆ ಟ್ರೋಲ್ (troll) ವಿಚಾರದಲ್ಲಿ ಶಿವಣ್ಣ ಸ್ವಲ್ಪ ಬೇಸರ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೌದು, ಎಲ್ಲರನ್ನೂ ಟ್ರೊಲ್ ಮಾಡುವ ಟ್ರೋಲಿಗರು ಶಿವರಾಜ್ ಕುಮಾರ್ ಅವರನ್ನು ಬಿಟ್ಟಿಲ್ಲ. ನಟ ಯಾವುದೇ ಕಾರ್ಯಕ್ರಮ, ಸಭೆ, ಸಮಾರಂಭದಲ್ಲಿ ಭಾಗಿಯಾಗಿದ್ದರೂ ಅಲ್ಲಿನ ವಿಡಿಯೋಗಳು ಫುಲ್ ವೈರಲ್ ಆಗುತ್ತಿದ್ದು, ಟ್ರೋಲ್ ಮಾಡಲಾಗುತ್ತಿದೆ. ಈ ವಿಚಾರಕ್ಕೆ ಶಿವಣ್ಣ ನಾನು ಇನ್ನು ಮುಂದೆ ಮಾಧ್ಯಮಗಳ ಮುಂದೆ ಹೆಚ್ಚು ಹೊತ್ತು ನಿಲ್ಲುವುದಿಲ್ಲ, ಹೆಚ್ಚು ಮಾತನಾಡುವುದಿಲ್ಲ ಎಂದಿದ್ದಾರಂತೆ. ಅಲ್ಲದೇ, ಮಾಧ್ಯಮಗಳ ಕ್ಯಾಮೆರಾ ಮುಂದೆ ಇನ್ನು ಹೆಚ್ಚು ನಿಲ್ಲಲಾರೆ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಕ್ಯಾಮೆರಾ ಮುಂದೆ ಹೆಚ್ಚು ಮಾತನಾಡಲ್ಲ ಎಂದ ನಟ
ಇತ್ತೀಚೆಗಷ್ಟೇ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಮುಹೂರ್ತದ ಸಮಯದಲ್ಲಿ ವೇದಿಕೆಯಲ್ಲಿ ಶಿವಣ್ಣ ಕುಳಿತಿದ್ದರು, ಆಗ ಮುಂದೆ ಕುಳಿತಿದ್ದವರಿಗೆ ವಿಚಿತ್ರ ಭಂಗಿಯಲ್ಲಿ ಶಿವರಾಜ್ ಕುಮಾರ್ ಸನ್ನೆಯನ್ನು ಮಾಡಿದ್ದರು. ಸುಮ್ಮನೆ ಕುಳಿತುಕೊಳ್ಳುವಂತೆ ವಿಚಿತ್ರವಾಗಿ ಹೇಳಿದ್ದರು. ಅವರ ಆ ರಿಯಾಕ್ಷನ್ ಫುಲ್ ವೈರಲ್ ಆಗಿತ್ತು. ಅಲ್ಲದೇ, ತಮ್ಮ ಸಿನಿಮಾದ ಮುಹೂರ್ತವೊಂದರಲ್ಲಿ ಶಿವಣ್ಣ, ಕಿಚ್ಚ ಸುದೀಪ್ ನಟನೆಯ ರಾ ರಾ ರಕ್ಕಮ್ಮ ಹಾಡಿಗೆ ಅವರಿಗೆ ತಿಳಿಯದಂತೆ ಡಾನ್ಸ್ ಮಾಡಿದ್ದರು. ಇವುಗಳನ್ನು ಸಹ ಮಾಧ್ಯಮದ ಕ್ಯಾಮೆರಾಗಳು ಶೂಟ್ ಮಾಡಿದ್ದವು. ಅಲ್ಲದೇ, ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗಿದ್ದವು, ಇದರಿಂದ ಆ ವಿಡಿಯೋ ಫುಲ್ ಟ್ರೋಲ್ ಆಗುತ್ತಿದ್ದು, ಎಲ್ಲೆಡೆ ಹರಿದಾಡುತ್ತಿದೆ.
ತಮ್ಮ ಕೆಲ ವಿಡಿಯೋ ಟ್ರೋಲ್ ಆಗುತ್ತಿರುವುದನ್ನ ಗಮನಿಸಿರುವ ಶಿವಣ್ಣ ಎಚ್ಚೆತ್ತುಕೊಂಡಿದ್ದು, ಇನ್ನು ಮುಂದೆ ಕ್ಯಾಮೆರಾ ಎದುರಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಮಾತನಾಡುತ್ತಾರಂತೆ. ಅಲ್ಲದೇ, ಕ್ಯಾಮೆರಾ ಮುಂದೆ ಯಾವುದೇ ಕಾರಣಕ್ಕೂ ಹೆಚ್ಚು ಸಮಯ ನಿಲ್ಲುವುದಿಲ್ಲ ಎಂಬ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ನಿರ್ಧಾರ ಶಿವರಾಜ್ ಕುಮಾರ್ ಅಭಿಮಾನಿಗಳಲ್ಲಿ ಬೇಸರ ತರಿಸಿರುವುದು ಸುಳ್ಳಲ್ಲ. ಅಲ್ಲದೇ, ಟ್ರೋಲ್ ಮಾಡುವವರ ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಫೋಟೋಶೂಟ್ನಲ್ಲಿ ಶ್ರೀನಿಧಿ ಶೆಟ್ಟಿ ಫುಲ್ ಮಿಂಚಿಂಗ್, ಕೆಜಿಎಫ್ ಬೆಡಗಿ ನೆಕ್ಟ್ಸ್ ಫಿಲ್ಮ್ ಯಾವ್ದು?
ಇನ್ನು ಮೊನ್ನೆಯಷ್ಟೇ ಶಿವಣ್ಣ ಅಭಿನಯದ ಭಯರಾಗಿ ಸಿನಿಮಾ ರಿಲೀಸ್ ಆಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಚಿತ್ರದ ಹಾಡು ಮತ್ತು ಲುಕ್ ಭಾರೀ ಸದ್ದು ಮಾಡುತ್ತಿದ್ದು, ಟಗರು ಚಿತ್ರದ ನಂತರ ಧನಂಜಯ್ ಮತ್ತು ಶಿವಣ್ಣ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಚಿತ್ರ ಇದಾಗಿದೆ. ಟಗರು ಇಬ್ಬರು ಎದುರು ಬದುರಾಗಿ ಜನರಿಗೆ ಮೋಡಿ ಮಾಡಿದ್ದರು, ಈ ಚಿತ್ರದಲ್ಲಿ ಸಹ ಮತ್ತೆ ಮ್ಯಾಜಿಕ್ ಮಾಡಿದ್ದಾರೆ. ಈ ಚಿತ್ರಕ್ಕೆ ವಿಜಯ್ ಮಿಲ್ಟನ್ ಆಕ್ಷನ್ ಕಟ್ ಹೇಳಿದ್ದು, ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ಕೂಡ ನಟಿಸಿದ್ದಾರೆ.
ಒಳ್ಳೆಯ ರೆಸ್ಪಾನ್ಸ್ ಪಡೆದಿದೆ ಭೈರಾಗಿ
ಆ್ಯಕ್ಷನ್ ಡ್ರಾಮಾ ಜಾನರ್ನ ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಮತ್ತು ಧನಂಜಯ ಅವರ ಲುಕ್ಗಳು ವಿಭಿನ್ನವಾಗಿವೆ. ಶಿವರಾಜ್ಕುಮಾರ್ಗೆ ತಮಿಳಿನ ಅಂಜಲಿ ನಾಯಕಿಯಾದರೆ, ಧನಂಜಯ ಅವರಿಗೆ ಯಶಾ ಶಿವಕುಮಾರ್ ಜೋಡಿಯಾಗಿದ್ದಾರೆ.
ಇದನ್ನೂ ಓದಿ: ರಿಯಲ್ ಲೈಫ್ನಲ್ಲಿ ಡಾಕ್ಟರ್ಸ್ ಅಂತೆ ಈ ಆ್ಯಕ್ಟರ್ಸ್, ಇಲ್ಲಿದೆ ನೋಡಿ ಲಿಸ್ಟ್
ಹ್ಯಾಟ್ರಿಕ್ ಹೀರೋ' ಶಿವರಾಜ್ ಕುಮಾರ್ ಅಭಿನಯದ 123ನೇ ಸಿನಿಮಾ ‘ಬೈರಾಗಿ’. ಶಿವಣ್ಣ ಅವರ ಕಳೆದ ಹುಟ್ಟು ಹಬ್ಬದಂದು ಬಿಡುಗಡೆಯಾದ ಟೈಟಲ್ ಟೀಸರ್ ರಿಲೀಸ್ ಆಗಿತ್ತು, ಶಿವಣ್ಣನ ಟೈಟಲ್ ಹಾಗೂ ಲುಕ್ ಕಂಡು ಅಭಿಮಾನಿಗಳು ಬೆರಗಾಗಿದ್ದರು. ಹುಲಿ ವೇಷ, ಹೇರ್ ಸ್ಟೈಲ್ ಹಾಗೂ ಅವರ ಡಿಫರೆಂಟ್ ಕಾಸ್ಟ್ಯೂಮ್'ಗೆ ಫ್ಯಾನ್ಸ್ ಫಿದಾ ಆಗಿದ್ದರು. ಮುಖ್ಯವಾಗಿ ಅನೂಪ್ ಸೀಳಿನ್ ಸಂಗೀತಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ