ಶಿವಣ್ಣನ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಆರಂಭ: ಸಿದ್ಧಗೊಳ್ಳುತ್ತಿದೆ ಗುಲಾಬಿ ಬಣ್ಣದ 20 ಅಡಿ ಕೇಕ್​!

news18
Updated:July 11, 2018, 4:02 PM IST
ಶಿವಣ್ಣನ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಆರಂಭ: ಸಿದ್ಧಗೊಳ್ಳುತ್ತಿದೆ ಗುಲಾಬಿ ಬಣ್ಣದ  20 ಅಡಿ ಕೇಕ್​!
news18
Updated: July 11, 2018, 4:02 PM IST
ನ್ಯೂಸ್​ 18 ಕನ್ನಡ 

ಹ್ಯಾಟ್ರಿಕ್ ಹೀರೊ ಶಿವ ರಾಜ್​ಮಾರ್ ಅವರ ಹುಟ್ಟುಹಬ್ಬಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಅಭಿಮಾನಿಗಳಂತು ಅಂದು ಹಬ್ಬವನ್ನೆ ಆಚರಿಸಲು ತಯಾರಿ ಮಾಡಿಕೊಂಡಿದ್ದು, ಏನೇನೋ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಅಷ್ಟೆ ಯಾಕೆ ಇಡೀ ಶಿವಣ್ಣ ಅಭಿಮಾನಿ ಬಳಗ ಹುಟ್ಟುಹಬ್ಬದ ದಿನದಂದು ಉತ್ತಮ ಕೆಲಸಗಳಿಗೆ ರೂಪುರೇಷೆ ಹಾಕಿಕೊಂಡಿದೆ.

ಇನ್ನೇನು ಶಿವಣ್ಣನ ಹುಟ್ಟುಹಬ್ಬಕ್ಕೆ ಒಂದೇ ಒಂದು ದಿನ ಬಾಕಿ ಇದೆ. ಇದೇ ತಿಂಗಳ 12ರಂದು ಅಂದರೆ ನಾಳೆ. ಪ್ರತಿ ವರ್ಷದಂತೆ ಈ ಬಾರಿಯೂ ಶಿವಣ್ಣ ಅಭಿಮಾನಿಗಳು ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ತಯಾರಿ ಮಾಡಿಕೊಂಡಿದ್ದಾರೆ.

ನಗರದ ಒಂದಷ್ಟು ಆಟೊ ಚಾಲಕರಿಗೆ ಬಟ್ಟೆ ನೀಡಲು ತಯಾರಿ ನಡೆಸಿರೋ ಅಭಿಮಾನಿಗಳು, ಶಾಲಾ ಮಕ್ಕಳಿಗೆ ಬುಕ್ ಹಾಗೂ ಬ್ಯಾಗ್ ಕೂಡ ನೀಡಲಿದ್ದಾರೆ. ಹಾಗೆ ರಕ್ತದಾನ, ನೇತ್ರ ತಪಾಸಣಾ ಶಿಬಿರ ಕೂಡ ಈ ಬಾರಿಯ ಶಿವಣ್ಣ ಹುಟ್ಟುಹಬ್ಬದ ಹೈಲೈಟ್ಸ್ ಆಗಿರಲಿದೆ.

ಹಾಗೇ ವಿಶೇಷವಾಗಿ ಕೇಕ್ ಒಂದನ್ನ ತಯಾರಿಸಲು ಆರ್ಡರ್ ಕೂಡ ನೀಡಲಾಗಿದ್ದು, 7 ಹಂತದಲ್ಲಿ 127 ಕೆ.ಜಿಯ 20 ಅಡಿ ಎತ್ತರದ ಕೇಕ್ ತಯಾರಾಗಿ ನಿಲ್ಲಲಿದೆ. ಶಿವಣ್ಣ ಫೋಟೋಗಳನ್ನ ಬಳಸಿ, ಗುಲಾಬಿ ಬಣ್ಣದಲ್ಲಿ ಕೇಕ್ ಸಿದ್ದವಾಗಲಿದೆ.

 

 
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...