ದೊಡ್ಮನೆಯ ದೊಡ್ಡ ಮಗ ಡಾ. ಶಿವರಾಜ್ ಕುಮಾರ್ (Shiva Rajkumar) ಹಾಗೂ ಪತ್ನಿ ಗೀತಾ ಶಿವರಾಜ್ (Geetha Shivarajkumar) ಕುಮಾರ್ ಅಂದ್ರೆ ಇಡೀ ಸ್ಯಾಂಡಲ್ವುಡ್ಗೆ ಸಿಕ್ಕಾಪಟ್ಟೆ ಇಷ್ಟ. ಶಿವಣ್ಣ ಜೋಡಿ ಬಗ್ಗೆ ಚಿತ್ರರಂಗದಲ್ಲೇ ಅನೇಕರು ಕೊಂಡಾಡಿದ್ದಾರೆ. ಶಿವರಾಜ್ ಕುಮಾರ್ ಅವರ 125 ನೇ ಸಿನಿಮಾ ವೇದ ಚಿತ್ರದ (Vedha Movie) ನಿರ್ಮಾಣದ ಹೊಣೆ ಹೊತ್ತ ಗೀತಾ ಶಿವರಾಜ್ಕುಮಾರ್ ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಇಬ್ಬರ ಅನ್ಯೋನ್ಯ ದಾಂಪತ್ಯ ಬಗ್ಗೆ ಎರಡು ಮಾತಿಲ್ಲ. ಶಿವಣ್ಣ ಅವರ ಅನೇಕ ಸಿನಿಮಾ ಕಾರ್ಯಕ್ರಮಗಳಲ್ಲಿ ಪತ್ನಿ ಗೀತಾ ಇರುತ್ತಾರೆ. ಹ್ಯಾಟ್ರಿಕ್ ಹೀರೋ ಕೂಡ ಅನೇಕ ಸಂದರ್ಶನಗಳಲ್ಲಿ ಪತ್ನಿಯನ್ನು ಕೊಂಡಾಡಿದ್ದಾರೆ. ಇದೀಗ ಪತ್ನಿ ಗೀತಾಗೆ ಶಿವಣ್ಣ ತಲೆಬಾಚಿದ ವಿಡಿಯೋ ವೈರಲ್ (Video Viral) ಆಗಿದೆ.
ಶಿವಮೊಗ್ಗದಲ್ಲಿ ವೇದ ಸಿನಿಮಾ ಟೀಮ್
ವೇದ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಶಿವರಾಜ್ ಕುಮಾರ್, ಸಿನಿಮಾ ತಂಡದ ಜೊತೆ ರಾಜ್ಯದ ನಾನಾ ಕಡೆಗೆ ಭೇಟಿ ನೀಡಿದ್ದಾರೆ. ಶಿವಮೊಗ್ಗದ ಡಿವಿಎಸ್ ಸಿಂಗಾರ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಶಿವಣ್ಣ, ಗೀತಾ ಶಿವರಾಜ್ ಕುಮಾರ್ ಹಾಗೂ ಗೀತಾ ಟೀಮ್ ಕೂಡ ಭಾಗಿಯಾಗಿತ್ತು.
ಶಿವಣ್ಣ ಪತ್ನಿ ಗೀತಾ ತಲೆ ಬಾಚಿದ ವಿಡಿಯೋ ವೈರಲ್
ಗೀತಾ ಶಿವರಾಜ್ ಕುಮಾರ್ ಅವರು ಕೆಲ ದಿನಗಳ ಹಿಂದೆ ಕೈಗೆ ಪೆಟ್ಟು ಮಾಡಿಕೊಂಡಿದ್ರು. ಈ ವೇಳೆ ಶಿವಣ್ಣ ಪತ್ನಿ ಗೀತಾ ತಲೆ ಬಾಚಿದ ವಿಡಿಯೋವನ್ನು ಸಪ್ರೈಸ್ ಆಗಿ ಸ್ಕ್ರೀನ್ ಮೇಲೆ ಪ್ಲೇ ಮಾಡಿದ್ದಾರೆ. ಈ ವಿಡಿಯೋ ನೋಡುತ್ತಿದ್ದಂತೆ ಶಿವಣ್ಣ ದಂಪತಿ ನಾಚಿ ನಕ್ಕಿದ್ದಾರೆ.
ವಿಡಿಯೋ ರಿವಿಲ್ ಮಾಡಿದ ಮಧು ಬಂಗಾರಪ್ಪ
ವಿಡಿಯೋದಲ್ಲಿ ಶಿವರಾಜ್ ಕುಮಾರ್ ತಲೆ ಬಾಚುತ್ತಿದ್ದ ವೇಳೆ ವಿಡಿಯೋ ತೆಗೆಯಬೇಡಿ ಎಂದು ಗೀತಾ ಅವರು ನಾಚಿಕೊಂಡು ಸನ್ನೆ ಮಾಡಿದ್ದನ್ನು ನೋಡಬಹುದಾಗಿದೆ. ಶಿವಣ್ಣ, ಪತ್ನಿ ಗೀತಾ ಅವರ ತಲೆ ಬಾಚಿದ ವಿಡಿಯೋವನ್ನು ಮಧು ಬಂಗಾರಪ್ಪ ಎಲ್ಲರ ಮುಂದೆ ರಿವೀಲ್ ಮಾಡಿದ್ದಾರೆ.
ಪತ್ನಿ ಬಗ್ಗೆ ಕೊಂಡಾಡಿದ್ದ ಶಿವಣ್ಣ
ಈ ಹಿಂದೆ ಸಂದರ್ಶನವೊಂದರಲ್ಲಿ ಮಾತಾಡಿದ್ದ ಶಿವಣ್ಣ, ಪತ್ನಿ ಬಗ್ಗೆ ಕೊಂಡಾಡಿದ್ರು. ನನಗೆ ಆರೋಗ್ಯ ಸರಿ ಇಲ್ಲದಿದ್ದ ವೇಳೆ ಗೀತಾ ತನ್ನ ಕೂದಲು ನೀಡೋದಾಗಿ ದೇವರಿಗೆ ಹರಕೆ ಹೊತ್ತು ಬಳಿಕ ಹರಕೆ ತೀರಿಸಿದ್ರು. ಇದು ನನ್ನನ್ನು ಮತ್ತಷ್ಟು ಭಾವುಕಗೊಳಿಸಿದೆ ಎಂದು ಹೇಳಿದ್ರು. ಜೊತೆ ಗೀತಾ ಹಾಗೂ ನನ್ನ ತಾಯಿ ಇಬ್ಬರು ನನ್ನ ಎರಡು ಕಣ್ಣುಗಳಿದ್ದಂತೆ ಎಂದು ಶಿವರಾಜ್ ಕುಮಾರ್ ಹೇಳಿದ್ದರು.
ಬಾಲಕಿ ಜೊತೆ ಶಿವಣ್ಣ ಸಖತ್ ಡ್ಯಾನ್ಸ್
ವೇದ ಸಿನಿಮಾ ಬಗ್ಗೆ ವಿದ್ಯಾರ್ಥಿಗಳ ಜೊತೆ ಮಾತಾಡಿದ ಶಿವಣ್ಣ, ಇದೇ ವೇಳೆ ಪುಟ್ಟ ಪೋರಿಯೊಂದಿಗೆ ಹೆಜ್ಜೆ ಹಾಕಿದ್ದಾರೆ. ನೋ ಪ್ರಾಬ್ಲಂ ನಿನ್ನ ಹೈಟು ಸ್ವಲ್ಪ ಜಾಸ್ತಿನೇ ಎಂಬ ಹಾಡಿಗೆ ಹೆಜ್ಜೆ ಹಾಕಿ ಶಿವರಾಜ್ ಕುಮಾರ್ ಎಲ್ಲರನ್ನು ರಂಜಿಸಿದ್ದಾರೆ. ಶಿವಣ್ಣ ಡ್ಯಾನ್ಸ್ ಗೆ ಕಾಲೇಜು ಯುವತಿಯರು ಫಿದಾ ಆದ್ರು.
ಇದನ್ನೂ ಓದಿ: Milana Nagaraj: 'ಆರಾಮ್ ಅರವಿಂದ್ ಸ್ವಾಮಿ'ಗೆ ಜೋಡಿಯಾದ ಮಿಲನಾ ನಾಗರಾಜ್! ಅನೀಶ್ ಜೊತೆ ಲವ್ ಮಾಕ್ಟೇಲ್ ಬೆಡಗಿ
ಅದಿತಿ ಸಾಗರ್ ಹಾಡಿಗೆ ವಿದ್ಯಾರ್ಥಿಗಳ ಚಪ್ಪಾಳೆ
ಶಿವರಾಜ್ ಕುಮಾರ್ ಜೊತೆ ಬಂದಿದ್ದ ವೇದ್ ಸಿನಿಮಾ ಟೀಮ್ ಕೂಡ ವಿದ್ಯಾರ್ಥಿಗಳ ಜೊತೆ ಮಾತಾಡಿದ್ದಾರೆ. ಇದೇ ವೇಳೆ ಚಿತ್ರದಲ್ಲಿ ಸಖತ್ ಆ್ಯಕ್ಟಿಂಗ್ ಮಾಡಿ ಮೆಚ್ಚುಗೆಗೆ ಪಾತ್ರವಾಗಿರುವ ಅದಿತಿ ಸಾಗರ್, ಗಿಲ್ಲಕ್ಕೋ ಶಿವ ಗಿಲ್ಲಕ್ಕೋ ಹಾಡು ಹಾಡಿ ರಂಜಿಸಿದ್ರು. 2 ನಿಮಿಷಗಳ ಕಾಲ ಹಾಡು ಹಾಡಿ ಅದಿತಿಗೆ ಕಾಲೇಜು ವಿದ್ಯಾರ್ಥಿನಿಯರು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ