ಒಂದು ಕಾಲದಲ್ಲಿ ಸದಾಶಿವ ನಗರದ ಡಾ. ರಾಜ್‌ಕುಮಾರ್ ಮನೆ ಚಿತ್ರರಂಗದ ಪವರ್ ಹೌಸ್ ಆಗಿತ್ತು. ಚಿತ್ರರಂಗದ ಏನೇ ಸಮಸ್ಯೆ ಇರಲಿ, ದೊಡ್ಮನೆ ಕುಟುಂದ ಕದ ತಟ್ಟಲಾಗ್ತಿತ್ತು. ಅಣ್ಣಾವ್ರು ಹಾಗೂ ಪಾರ್ವತಮ್ಮ ನಿಧನದ ನಂತರ ಅಂಬರೀಶ್ ಮನೆಯತ್ತ ಚಿತ್ರರಂಗ ಹೆಜ್ಜೆ ಇಡುತ್ತಿತ್ತು. ಈಗ ಸ್ಯಾಂಡಲ್ವುಡ್ನ ರೆಬೆಲ್ ಸ್ಟಾರ್ ಕೂಡ ನಮ್ಮ ಜೊತೆ ಇಲ್ಲ.
ಹೀಗಾಗಿ ಚಿತ್ರರಂಗಕ್ಕೆ ಮತ್ಯಾರು ಅನ್ನುವಾಗಲೇ ನಾಗವಾರದ ಶಿವಣ್ಣನ ಮನೆ ಸ್ಯಾಂಡಲ್ ವುಡ್ ಪಾಲಿನ ಪವರ್ ಹೌಸ್ ಆಗಿ ಗೋಚರಿಸಿದೆ. ಅದಕ್ಕೆ ಸಾಕ್ಷಿಯಾಗಲಿದೆ ಶುಕ್ರವಾರ ನಡೆಯಲಿರೋ ಚಿತ್ರರಂಗದ ಮೀಟಿಂಗ್.
ಹೌದು. ಚಿತ್ರರಂಗದ ಸಮಸ್ಯೆಗಳ ಕುರಿತು ಚರ್ಚಿಸಲು ಶಿವ ರಾಜ್‌ಕುಮಾರ್ ಮನೆಯಲ್ಲಿ ಸಭೆ ಕರೆಯಲಾಗಿದೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಅದರ ಸಂಸ್ಥೆಗಳು ಸಭೆಯಲ್ಲಿ ಭಾಗಿಯಾಗಲಿವೆ.
Viral Video: 30 ರೂ ಲಂಚ ಕೇಳಿದ ವಾರ್ಡ್ಬಾಯ್; ಇಲ್ಲದ್ದಕ್ಕೆ ತಾಯಿ ಜೊತೆಗೆ ಸ್ಟ್ರೆಚ್ಚರ್ ದೂಡಿದ 6ರ ಬಾಲಕ
Netflix: ಅತಿ ಕಡಿಮೆ ಬೆಲೆಯ ನೆಟ್ಫ್ಲಿಕ್ಸ್ ಮೊಬೈಲ್ ಚಂದಾದಾರಿಕೆ; ಬೆಲೆ ಎಷ್ಟು ಗೊತ್ತಾ?
ಕೊರೋನಾ ಸಮಯದಲ್ಲಿ ಸಾಕಷ್ಟು ಸಮಸ್ಯೆ ಚಿತ್ರರಂಗ ಎದುರಿಸುತ್ತಿದೆ. ಎಲ್ಲಾ ರಂಗಕ್ಕೂ ಪ್ಯಾಕೆಜ್ ಘೋಷಿಸಿರೋ ಸರ್ಕಾರ, ಚಿತ್ರರಂಗದ ಬಗ್ಗೆ ನಿರ್ಲಕ್ಷ ವಹಿಸಿದೆ. ಹೀಗಾಗಿ ಸರ್ಕಾರದ ಮುಂದೆ ತಮ್ಮ ಬೇಡಿಕೆಯನ್ನಿಡಲು ಶಿವ ರಾಜ್‌ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆ ನಂತರ ಶಿವ ರಾಜ್‌ಕುಮಾರ್ ನೇತೃತ್ವದಲ್ಲಿ ಸ್ಯಾಂಡಲ್ವುಡ್ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಚಿತ್ರರಂಗದ ಅಹವಾಲನ್ನು ಸಲ್ಲಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ