• Home
  • »
  • News
  • »
  • entertainment
  • »
  • Shiva Rajkumar: ನನಗಾಗಿ ತಲೆ ಬೋಳಾಗಿಸಿಕೊಂಡಿದ್ದ ಗೀತಾ, ಹೆಂಡತಿ ಬೆಲೆ ಅಂದು ತಿಳಿಯಿತು ಎಂದ ಶಿವಣ್ಣ!

Shiva Rajkumar: ನನಗಾಗಿ ತಲೆ ಬೋಳಾಗಿಸಿಕೊಂಡಿದ್ದ ಗೀತಾ, ಹೆಂಡತಿ ಬೆಲೆ ಅಂದು ತಿಳಿಯಿತು ಎಂದ ಶಿವಣ್ಣ!

ಶಿವಣ್ಣ-ಗೀತಾ

ಶಿವಣ್ಣ-ಗೀತಾ

ನನಗೆ ಹುಷಾರಿಲ್ಲದ ವೇಳೆ ಹೆಂಡ್ತಿ ಬೆಲೆ ಏನು ಎಂದು ತಿಳಿಯಿತು. 10 ವರ್ಷಗಳ ಹಿಂದೆ ಆಪರೇಷನ್ ಮಾಡಿಸಿಕೊಳ್ಳಲು ಪ್ಯಾರಿಸ್‍ಗೆ ಹೋಗಿದ್ದೆ. ಆಗ ನನಗೆ ಬೇಗ ಹುಷಾರಾದ್ರೆ ಗೀತಾ ದೇವರಿಗೆ ಕೂದಲು ಕೊಡುತ್ತೇನೆ ಎಂದಿದ್ದಳು.

  • News18 Kannada
  • Last Updated :
  • Karnataka, India
  • Share this:

    ಜೀ ಕನ್ನಡ (Zee Kannada) ವಾಹಿನಿಯೂ ಜೀ ಕುಟುಂಬ ಅವಾರ್ಡ್ (Award) ನಲ್ಲಿ ನಟ ಡಾ. ಶಿವರಾಜ್ ಕುಮಾರ್ (Shiva Rajkumar) ಅವರಿಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನೀಡಿದ್ದಾರೆ. ಆ ವೇದಿಕೆಯಲ್ಲಿ ಶಿವಣ್ಣ ಗೀತಾ (Geetha) ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ನನಗೆ ಹುಷಾರಿಲ್ಲದ ವೇಳೆ ಹೆಂಡ್ತಿ ಬೆಲೆ ಏನು ಎಂದು ತಿಳಿಯಿತು. 10 ವರ್ಷಗಳ ಹಿಂದೆ ಆಪರೇಷನ್ ಮಾಡಿಸಿಕೊಳ್ಳಲು ಪ್ಯಾರಿಸ್‍ಗೆ ಹೋಗಿದ್ದೆ. ಆಗ ನನಗೆ ಬೇಗ ಹುಷಾರಾದ್ರೆ ಗೀತಾ ದೇವರಿಗೆ ಕೂದಲು (Hair) ಕೊಡುತ್ತೇನೆ ಎಂದಿದ್ದಳು. ಹೆಣ್ಣು ಮಕ್ಕಳು ಅಷ್ಟು ಸುಲಭವಾಗಿ ಕೂದಲು ಕೊಡಲು ಒಪ್ಪಲ್ಲ. ನನಗೆ ಆಗ ಹೆಂಡ್ತಿ ಬೆಲೆ ತಿಳಿಯಿತು ಎಂದು ಶಿವಣ್ಣ ಹೇಳಿದ್ದಾರೆ. ಗೀತಾ ನನ್ನ ಜೀವನಕ್ಕೆ ಸಿಕ್ಕ ದೊಡ್ಡ ವರ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.


    ಹೆಮ್ಮೆಯ ಕನ್ನಡಿಗ ಅವಾರ್ಡ್


    ನಟ ಶಿವರಾಜ್ ಕುಮಾರ್ ಅವರು ಈ ಸಾರಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಜಡ್ಜ್ ಆಗಿ ಹೋಗಿದ್ದರು. ಶಿವಣ್ಣನನ್ನು ನೋಡಲು ಆ ಕಾರ್ಯಕ್ರಮವನ್ನು ಎಷ್ಟೊಂದು ಜನ ನೋಡ್ತಾ ಇದ್ರು. ಶಿವಣ್ಣನು ಸಹ  ಡ್ಯಾನ್ಸ್ ಮಾಡ್ತಾ ಇದ್ರು. ಜೀ ಕನ್ನಡದಲ್ಲಿ ನಡೆದ ಜೀ ಕುಟುಂಬ ಅವಾಡ್ರ್ಸ್ ನಲ್ಲಿ ಶಿವಣ್ಣನಿಗೆ ಹೆಮ್ಮೆಯ ಕನ್ನಡಿಗ ಅವಾರ್ಡ್ ನೀಡಲಾಗಿದೆ.


    ಶಿವಣ್ಣನಿಗೆ ಪ್ರಶಸಿ ನೀಡಿದ ರವಿಚಂದ್ರನ್
    ಶಿವಣ್ಣನಿಗೆ ಜೀ ಕುಟುಂಬ ಹೆಮ್ಮೆಯ ಅವಾರ್ಡ್ ನೀಡಲು ರವಿಚಂದ್ರನ್ ಅವರು ಬಂದಿದ್ದರು. ಅವರು ಅವಾರ್ಡ್ ನೀಡಿ. ಅವಾರ್ಡ್ ಅವರ ಕೈಯಲ್ಲಿದೆ. ನಾನು ನೀಡಿದ್ದೇನೆ ಅಷ್ಟೇ. ನಾನು ಶಿವಣ್ಣ ಒಳ್ಳೆಯ ಸ್ನೇಹಿತರು ಮೊದಲಿನಿಂದಲು. ಇಬ್ಬರನ್ನು ಮನಸ್ಸೊಳಗೆ ಗೌರವ ಇತ್ತು. ಅದನ್ನು ಈ ವಾಹಿನಿಯವರು ಆಚೆ ತಂದ್ರು ಎಂದಿದ್ದಾರೆ. ಶಿವಣ್ಣ ಸಹ ನಾನು ರವಿ ಒಳ್ಳೆ ಸ್ನೇಹಿತರು ಎಂದಿದ್ದಾರೆ.


    ಇದನ್ನೂ ಓದಿ: Raveena Tandon: KGF ಖಡಕ್ ಪ್ರಧಾನಿ ರಮೀಕಾ ಬರ್ತ್​ಡೇ! ಹುಟ್ಟುಹಬ್ಬದ ಸಂಭ್ರಮದಲ್ಲಿ ರವೀನಾ


    ಅವಾರ್ಡ್ ಪಡೆದ ಶಿವಣ್ಣ ಹೇಳಿದ್ದೇನು?
    ಜೀ ಕುಟುಂಬಕ್ಕೆ ಸೇರಿರುವುದಕ್ಕೆ ನನಗೆ ತುಂಬಾನೇ ಹೆಮ್ಮೆ ಇದೆ. ನಾನು ಬಂದಾಗಲೆಲ್ಲಾ ಅವಸರ ಪಡಿಸುವೆ ಲೇಟ್ ಆಗುತ್ತೆ ಬೈಕೊಳ್ಳುವುದು ಎಲ್ಲಾ ಆಗುತ್ತೆ. ರಕ್ಷಿತಾ, ರಾಘು, ಚಿನ್ನಿ ಪ್ರಕಾಶ್ ಮತ್ತು ಪ್ರತಿಯೊಬ್ಬ ಸ್ಪರ್ಧಿನೂ ನನ್ನ ಜರ್ನಿನ ಬ್ಯೂಟಿಫುಲ್ ಮಾಡಿದ್ದರು. ಡ್ಯಾನ್ಸ್ ನಾನು ತುಂಬಾನೇ ಎಂಜಾಯ್ ಮಾಡಿದ್ದೇನೆ ಎಂದು ಶಿವಣ್ಣ ಹೇಳಿದ್ದಾರೆ.


    actor shiva raj kumar, actor shiva raj kumar wife geetha, actor shiva raj kumar films, actor shiva raj kumar talk about wife, ನಟ ಶಿವರಾಜ್ ಕುಮಾರ್, ನಟ ಶಿವರಾಜ್ ಕುಮಾರ್ ಪತ್ನಿ ಗೀತಾ, ನಟ ಶಿವರಾಜ್ ಕುಮಾರ್ ಚಿತ್ರಗಳು, ನನಗಾಗಿ ಕೂದಲನ್ನೇ ಕೊಟ್ಟಿದ್ಲು ಗೀತಾ, ಹೆಂಡತಿ ಬೆಲೆ ಅಂದು ತಿಳಿಯಿತು ಎಂದ ಶಿವಣ್ಣ, kannada news, karnataka news,
    ಶಿವಣ್ಣ-ಗೀತಾ


    ಶಿವಣ್ಣಗೆ ರವಿಚಂದ್ರನ್ ರ್ಯಾಪಿಡ್ ಫಯರ್


    ರವಿಚಂದ್ರನ್: ಚಿನ್ನ ಹೇಗಿದ್ಯಾ?
    ಶಿವಣ್ಣ: ಫಸ್ಟ್ ಕ್ಲಾಸ್ ಆಗಿದ್ದೀನಿ
    ರವಿಚಂದ್ರನ್: ಆರೋಗ್ಯ ಹೇಗಿದೆ?
    ಶಿವಣ್ಣ: ಚೆನ್ನಾಗಿದೆ.
    ರವಿಚಂದ್ರನ್: ಫ್ಯಾಮಿಲಿ ಹೇಗಿದೆ?
    ಶಿವಣ್ಣ: ಚೆನ್ನಾಗಿದ್ದಾರೆ.
    ರವಿಚಂದ್ರನ್: ಮಗಳು ಹೇಗಿದ್ದಾಳೆ?
    ಶಿವಣ್ಣ: ಇಬ್ಬರೂ ಚೆನ್ನಾಗಿದ್ದಾರೆ. ದೊಡ್ಡ ಮಗಳ MS ಆಗಿದೆ. ಆರೋಗ್ಯ ಸರಿಯಾಗಿರಲಿಲ್ಲ ಅದರೆ ಈಗ ಚೆನ್ನಾಗಾಗಿದ್ದಾಳೆ. ಅಳಿಯ ವೈದೇಹಿ ಆಸ್ಪತ್ರೆಯಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಚಿಕ್ಕ ಮಗಳು ನಿವೇದಿತಾ ವೆಬ್ ಸೀರಿಸ್‍ನ ನಿರ್ಮಾಣ ಮಾಡುತ್ತಿದ್ದಾಳೆ. ಗೀತಾ ಅವರು ಈಗ ಶಕ್ತಿದಾಮ ಪ್ರೆಸಿಡೆಂಟ್, ನನ್ನ ತಾಯಿ ಜಾಗಕ್ಕೆ ಗೀತಾ ಬಂದಿದ್ದಾರೆ. ಏಂಜಲ್ಸ್ ಅಂತ ಒಂಡು ಪ್ರಾಡೆಕ್ಟ್‍ನ ಲಾಂಚ್ ಮಾಡಿದ್ದೀವಿ ಇದರಿಂದ ಬರುವ ಹಣ ಶಕ್ತಿದಾಮ ಮಕ್ಕಳಿಗೆ ಸಹಾಯವಾಗುತ್ತದೆ.
    ರವಿಚಂದ್ರನ್: ಗೀತಾನ ಮದುವೆ ಆಗಿಬೇಕಾದರೆ ಇವಾಗ ಇರುವ ಗೀತಗೂ ಏನೂ ವ್ಯತ್ಯಾಸ?


    actor shiva raj kumar, actor shiva raj kumar wife geetha, actor shiva raj kumar films, actor shiva raj kumar talk about wife, ನಟ ಶಿವರಾಜ್ ಕುಮಾರ್, ನಟ ಶಿವರಾಜ್ ಕುಮಾರ್ ಪತ್ನಿ ಗೀತಾ, ನಟ ಶಿವರಾಜ್ ಕುಮಾರ್ ಚಿತ್ರಗಳು, ನನಗಾಗಿ ಕೂದಲನ್ನೇ ಕೊಟ್ಟಿದ್ಲು ಗೀತಾ, ಹೆಂಡತಿ ಬೆಲೆ ಅಂದು ತಿಳಿಯಿತು ಎಂದ ಶಿವಣ್ಣ, kannada news, karnataka news,
    ಶಿವಣ್ಣ-ಗೀತಾ


    ಶಿವಣ್ಣ: ಆಗ ಎಷ್ಟು ಮೆಚ್ಯೂರ್ ಆಗಿದ್ದರೂ ಈಗ ಅಷ್ಟೇ ಮೆಚ್ಯೂರ್ ಆಗಿದ್ದಾರೆ. ಅವಾಗ ನನ್ನನ್ನು ಎಷ್ಟು ಖಡಕ್ ಆಗಿ ಇಟ್ಕೊಂಡಿದ್ದರು ಇವಾಗಲೂ ಅಷ್ಟೇ ಖಡಕ್ ಆಗಿ ಇಟ್ಕೊಂಡಿದ್ದಾರೆ.
    ರವಿಚಂದ್ರನ್: ಯಾವಾಗಲೂ ಗೀತ ನಿಮ್ಮ ಜೊತೆಗಿದ್ದರು?
    ಶಿವಣ್ಣ: ಈ ರೀತಿ ನಾನು ಯಾಕೆ ಹೇಳುತ್ತಿರುವೆ ಅಂದ್ರೆ ಬ್ರೈನ್‍ನಲ್ಲಿ ನನಗೆ ಸಣ್ಣ ಸಮಸ್ಯೆ ಆಗಿತ್ತು. 10 ವರ್ಷಗಳ ಹಿಂದೆ ಆಪರೇಷನ್ ಮಾಡಿಸಿಕೊಳ್ಳಲು ಪ್ಯಾರಿಸ್‍ಗೆ ಹೋಗಿದೆ. ನನ್ನ ಇಬ್ಬರು ತಮ್ಮಂದಿರಿಗೂ ವೀಸ ಸಿಗಲಿಲ್ಲ. ರಿಸ್ಕ್ ಫ್ಯಾಕ್ಟರ್ ಜಾಸ್ತಿ ಇತ್ತು ನನಗೆ ಆತಂಕ ಹೆಚ್ಚಿತ್ತು. ಆ ಸಮಯದಲ್ಲಿ ಗೀತ ನನ್ನ ಜೊತೆ ನಿಂತಿದ್ದರ. ನನ್ನ ಆರೋಗ್ಯ ಸರಿ ಆದರೆ ಕೂದಲು ಕೊಡುವುದಾಗಿ ಹೇಳಿದ್ದರು. ಹೆಣ್ಣು ಮಕ್ಕಳು ಕೂದಲನ್ನು ತುಂಬಾ ಇಷ್ಟ ಪಡುತ್ತಾರೆ ಈ ರೀತಿ ಕೊಡಲು ಇಷ್ಟ ಪಡುವುದಿಲ್ಲ. ಆ ಕ್ಷಣ ನಾನು ಜೀವನದಲ್ಲಿ ಮರೆಯುವುದಿಲ್ಲ. ಆಗ ಗೊತ್ತಾಗುತ್ತದೆ ಹೆಂಡತಿ ಬೆಲೆ ಏನೂ ಎಂದು.


    ಇದನ್ನೂ ಓದಿ: Kannadathi: ಕೋಮಾಗೆ ಹೋದ ರತ್ನಮಾಲಾ! ಅಮ್ಮಮ್ಮನ ನೆನೆದು ಹರ್ಷ ಕಣ್ಣೀರು!


    ರವಿಚಂದ್ರನ್: ಇದನ್ನು ನೇರವಾಗಿ ಹೇಳುವ ಧೈರ್ಯ ಇರುವುದಿಲ್ಲ ಅಥವಾ ಅವಕಾಶ ಸಿಗುವುದಿಲ್ಲ.ಈ ಮೂಲಕ ಏನು ಹೇಳುವುದಕ್ಕೆ ಇಷ್ಟ ಪಡುತ್ತೀರಿ?
    ಶಿವಣ್ಣ: ಒಮ್ಮೊಮ್ಮೆ ನನ್ನ ನೋಡೆ ಗೀತಾ. ನಿನ್ನ ನಗುವೇ ನನಗೆ ಸಂಗೀತ ಎಂದು ಹಾಡು ಹಾಡಿದರು.

    Published by:Savitha Savitha
    First published: