ಬಿಡುಗಡೆಯಾಯಿತು ಅಧ್ಯಕ್ಷ ಶರಣ್​ ಅಭಿನಯದ ವಿಕ್ಟರಿ 2 ಸಿನಿಮಾದ ಟೀಸರ್​..!

news18
Updated:August 28, 2018, 5:54 PM IST
ಬಿಡುಗಡೆಯಾಯಿತು ಅಧ್ಯಕ್ಷ ಶರಣ್​ ಅಭಿನಯದ ವಿಕ್ಟರಿ 2 ಸಿನಿಮಾದ ಟೀಸರ್​..!
news18
Updated: August 28, 2018, 5:54 PM IST
ನ್ಯೂಸ್​ 18 ಕನ್ನಡ

'ರ‍್ಯಾಂಬೋ 2' ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ಕಾಮಿಡಿ ಅಧ್ಯಕ್ಷ ಶರಣ್​ ವಿಜಯವನ್ನು ಮುಂದುವರೆಸಲು ವಿಕ್ಟರಿ ಗುರುತಿನ ಮೊರೆ ಹೋಗಿದ್ದಾರೆ. ಹೌದು  ಶರಣ್ ಈಗ 'ವಿಕ್ಟರಿ 2' ಸಿನಿಮಾ ಮಾಡುತ್ತಿದ್ದಾರೆ.


ಹರಿ ಸಂತೋಷ್ ನಿರ್ದೇಶನದ ಮೊದಲ ಚಿತ್ರ 'ವಿಕ್ಟರಿ'ಯ ಪಾತ್ರಗಳು ಭಾಗ ಎರಡರಲ್ಲೂ ಹಾಗೆಯೇ ಮುಂದುವರೆದಿದ್ದು, ಸದ್ಯ ಈ ಚಿತ್ರದ  ಟೀಸರ್​​ ಬಿಡುಗಡೆಯಾಗಿದೆ.ಟೀಸರ್​ ಸಾಮಾಜಿಕ ಜಾಲತಾಣದಲ್ಲೂ ಸಖತ್​ ಸದ್ದು ಮಾಡುತ್ತಿದ್ದು, ಇದರಲ್ಲೂ ಡಬ್ಬಲ್​ ಮೀನಿಂಗ್​ ಡೈಲಾಗ್​ ಹೈಲೈಟ್​ ಆಗಿದೆ. ಶರಣ್​ ಜತೆ ಸಾಧು ಕೋಕಿಲ ಹಾಗೂ ರಣವಿಶಂಕರ್​ ವಿಶೇಷ ಗೆಟಪ್​ನಲ್ಲಿ ಮಿಂಚುತ್ತಿದ್ದು, ಅಸ್ಮಿತಾ ಸೂದ್​ ಹಾಗೂ ಅಪೂರ್ವ ನಾಯಕಿಯರಾಗಿದ್ದಾರೆ.

ಹರಿ ಸಂತೋಷ್​ ನಿರ್ದೇಶನದ ಈ ಸಿನಿಮಾಗೆ ತರುಣ್​ ಸುಧೀರ್​ ಅವರ ಕತೆ ಇದೆ. ತರುಣ್​ ಶಿವಪ್ಪ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ಯ ಅವರ ಸಂಗೀತವಿದ್ದು, ತಬಲಾ ನಾಣಿ, ನಾಸೀನ್​, ಅವಿನಾಸ್​, ಮಿತ್ರ. ಕಲ್ಯಾಣಿ, ಅರಸು ಹಾಗೂ ಸಿದ್ದಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...