ನನ್ನ ಜೀವನದಲ್ಲಿ ಇಂತಹ ನೋವು ಅನುಭವಿಸಿರಲಿಲ್ಲ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಶರಣ್ ಮಾತು
ನಾನು ಆಸ್ಪತ್ರೆಯಲ್ಲಿದ್ದರೂ ಮನಸ್ಸಿರುವುದು ಸಿನಿಮಾ ಕಡೆ. ನಿನ್ನೆ ತಡೆಯೋಕೆ ಆಗದಷ್ಟು ನೋವು ಕಾಣಿಸಿಕೊಂಡಿತ್ತು. ನನ್ನ ಜೀವನದಲ್ಲಿ ಇಂತಹ ನೋವು ಅನುಭವಿಸಿರಲಿಲ್ಲ.
news18-kannada Updated:September 27, 2020, 5:21 PM IST

Actor Sharan
- News18 Kannada
- Last Updated: September 27, 2020, 5:21 PM IST
ಸ್ಯಾಂಡಲ್ವುಡ್ ನಟ ಶರಣ್ ಅವರನ್ನು ನಿನ್ನೆಯಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. 'ಅವತಾರ ಪುರುಷ' ಚಿತ್ರದ ಶೂಟಿಂಗ್ ಸಮಯದಲ್ಲೇ ಹೊಟ್ಟೆನೋವು ಕಾಣಿಸಿಕೊಂಡ ಕಾರಣ, ತಕ್ಷಣ ಚಿತ್ರತಂಡದವರೇ ಅವರನ್ನು ಹತ್ತಿರದ ಮಲ್ಲಿಗೆ ಆಸ್ಪತ್ರೆಗೆ ಕರೆತಂದಿದ್ದರು. ಹಠಾತ್ ಅನಾರೋಗ್ಯ ಅವರ ಕುಟುಂಬದವರಲ್ಲಿ ಮಾತ್ರವಲ್ಲ ಸ್ಯಾಂಡಲ್ವುಡ್ ಹಾಗೂ ಅಭಿಮಾನಿಗಳಲ್ಲೂ ಆತಂಕ್ಕೆ ಕಾರಣವಾಗಿತ್ತು. ಶರಣ್ ಅವರನ್ನು ಚೆಕಪ್ ಮಾಡಿದ ಆಸ್ಪತ್ರೆ ವೈದ್ಯರು, ಎಕ್ಸ್ರೇ ತೆಗೆಸಲು ತಿಳಿಸಿದ್ದರು. ಆಗ ಅವರಿಗೆ ಕಿಡ್ನಿ ಸ್ಟೋನ್ ಇರುವುದು ತಿಳಿಯಿತು. ಒಂದು ದಿನದ ಮಟ್ಟಿಗೆ ಅಡ್ಮಿಟ್ ಆಗಿದ್ದ ಅಧ್ಯಕ್ಷ ಶರಣ್, ಇವತ್ತು ಡಿಸ್ಚಾರ್ಜ್ ಆಗಿದ್ದಾರೆ.
ನಾನು ಆಸ್ಪತ್ರೆಯಲ್ಲಿದ್ದರೂ ಮನಸ್ಸಿರುವುದು ಸಿನಿಮಾ ಕಡೆ. ನಿನ್ನೆ ತಡೆಯೋಕೆ ಆಗದಷ್ಟು ನೋವು ಕಾಣಿಸಿಕೊಂಡಿತ್ತು. ನನ್ನ ಜೀವನದಲ್ಲಿ ಇಂತಹ ನೋವು ಅನುಭವಿಸಿರಲಿಲ್ಲ. ಶೂಟಿಂಗ್ಗೆ ಹೋಗಿದ್ದ ಸಮಯದಲ್ಲಿ ನೋವು ಕಾಣಿಸಿಕೊಂಡಿತ್ತು. ಹಿಂದಿನ ಎರಡು ದಿನಗಳ ಕಾಲ ನೋವು ಕಾಣಿಸಿಕೊಂಡಿದ್ದರೂ, ನನಗೆ ಗೊತ್ತಾಗಿರಲಿಲ್ಲ. ಮಸಲ್ ಕ್ಯಾಚ್ ಆಗಿರಬೇಕು ಅಂದುಕೊಂಡಿದ್ದೆ. ಆದರೆ ನಿನ್ನೆ ಸೆಟ್ನಲ್ಲಿಯೇ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಪರಿಣಾಮ ಅವತಾರ ಪುರುಷ ಚಿತ್ರತಂಡದವರೇ ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದ್ದರು, ಎಂದು ಇವತ್ತು ಡಿಸ್ಚಾರ್ಜ್ ಆದ ಬಳಿಕ ನಟ ಶರಣ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ವೈದ್ಯರು ಪರೀಕ್ಷೆ ನಡೆಸಿ ಮೂತ್ರಪಿಂಡದಲ್ಲಿ ಸಣ್ಣ ಪ್ರಮಾಣದ ಕಲ್ಲುಗಳಿವೆ ಎಂದಿದ್ದಾರೆ. ಎರಡು ದಿನ ರೆಸ್ಟ್ ಮಾಡಿ, ಏನೂ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ. ಹಾಗೇನಾದರೂ ಮೂರು ದಿನಗಳ ಬಳಿಕ ನೋವು ಕಡಿಮೆ ಆಗದಿದ್ದರೆ ಸರ್ಜರಿ ಮಾಡುವುದಾಗಿ ತಿಳಿಸಿದ್ದಾರೆ ಎಂದು ಶರಣ್ ತಿಳಿಸಿದ್ದು, ಸದ್ಯ ಶೂಟಿಂಗ್ನಿಂದ ಕೆಅಲ ದಿನಗಳ ಕಾಲ ಬ್ರೇಕ್ ಪಡೆದು, ರೆಸ್ಟ್ನಲ್ಲಿದ್ದಾರೆ.
Also Read: KL Rahul: ಸಚಿನ್ ದಾಖಲೆ ಅಳಿಸಿ ಹೊಸ ಇತಿಹಾಸ ಬರೆದ ಕೆಎಲ್ ರಾಹುಲ್
ನಾನು ಆಸ್ಪತ್ರೆಯಲ್ಲಿದ್ದರೂ ಮನಸ್ಸಿರುವುದು ಸಿನಿಮಾ ಕಡೆ. ನಿನ್ನೆ ತಡೆಯೋಕೆ ಆಗದಷ್ಟು ನೋವು ಕಾಣಿಸಿಕೊಂಡಿತ್ತು. ನನ್ನ ಜೀವನದಲ್ಲಿ ಇಂತಹ ನೋವು ಅನುಭವಿಸಿರಲಿಲ್ಲ. ಶೂಟಿಂಗ್ಗೆ ಹೋಗಿದ್ದ ಸಮಯದಲ್ಲಿ ನೋವು ಕಾಣಿಸಿಕೊಂಡಿತ್ತು. ಹಿಂದಿನ ಎರಡು ದಿನಗಳ ಕಾಲ ನೋವು ಕಾಣಿಸಿಕೊಂಡಿದ್ದರೂ, ನನಗೆ ಗೊತ್ತಾಗಿರಲಿಲ್ಲ. ಮಸಲ್ ಕ್ಯಾಚ್ ಆಗಿರಬೇಕು ಅಂದುಕೊಂಡಿದ್ದೆ.