• Home
  • »
  • News
  • »
  • entertainment
  • »
  • Satish Shah: ಯಾಕಂದ್ರೆ ನಾವು ಇಂಡಿಯನ್ಸ್! ಜನಾಂಗೀಯ ನಿಂದನೆ ಮಾಡಿದ ಸಿಬ್ಬಂದಿಗೆ ನಟನ ಕೂಲ್ ಆನ್ಸರ್

Satish Shah: ಯಾಕಂದ್ರೆ ನಾವು ಇಂಡಿಯನ್ಸ್! ಜನಾಂಗೀಯ ನಿಂದನೆ ಮಾಡಿದ ಸಿಬ್ಬಂದಿಗೆ ನಟನ ಕೂಲ್ ಆನ್ಸರ್

ಸತೀಶ್ ಶಾ

ಸತೀಶ್ ಶಾ

ಜನಾಂಗೀಯ ನಿಂದನೆ ಮಾಡಿದ ಸಿಬ್ಬಂದಿಗೆ ನಟ ಸತೀಶ್ ಅವರು ಕೋಪಗೊಳ್ಳದೇ ತುಂಬಾ ಶಾಂತವಾಗಿ ಪ್ರತಿಕ್ರಿಯಿಸಿದ್ದಾರೆ. ಅವರ ಆನ್ಸರ್ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ಪಡೆದಿದೆ.

  • Trending Desk
  • Last Updated :
  • Bangalore, India
  • Share this:

ನಾವು ಈ ವಿಮಾನ ನಿಲ್ದಾಣಗಳಲ್ಲಿ (Airport) ನಡೆದಿರುವ ಅನೇಕ ಅಹಿತಕರ, ಪ್ರಯಾಣಿಕರಿಗೆ ತುಂಬಾನೇ ಮುಜುಗರ ಅನ್ನಿಸುವ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಟಿವಿಯಲ್ಲಿ (TV) ನೋಡಿರುತ್ತೇವೆ. ಈಗ ಮತ್ತೊಂದು ಇಂತಹದೇ ಘಟನೆ ನಡೆದಿದೆ. ಯುನೈಟೆಡ್ ಕಿಂಗ್ಡಮ್ ನ (United Kingdom) ಹೀಥ್ರೂ ವಿಮಾನ ನಿಲ್ದಾಣದಲ್ಲಿ ನಟ ಸತೀಶ್ ಶಾ (Satish Shah) ಅವರು ಜನಾಂಗೀಯ ಟೀಕೆಗೆ ಗುರಿಯಾಗಿದ್ದು, ಆ ಟೀಕೆಗೆ ಹೇಗೆ ನಟ ಪ್ರತಿಕ್ರಿಯಿಸಿದ ರೀತಿ ಈಗ ವೈರಲ್ ಆಗಿದೆ.


ವಿಮಾನ ನಿಲ್ದಾಣದ ಸಿಬ್ಬಂದಿ ಮಾಡಿದ ಜನಾಂಗೀಯ ನಿಂದನೆ ಏನು?


ಈಗ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 'ಸಾರಾಭಾಯ್ ವರ್ಸಸ್ ಸಾರಾಭಾಯ್' ನಟ ಟ್ವೀಟ್ ಮಾಡಿ ಅವರು ವಿಮಾನ ನಿಲ್ದಾಣದಲ್ಲಿದ್ದಾಗ, ಅವರು ಇನ್ನೇನು ತಮ್ಮ ವಿಮಾನವನ್ನು ಹತ್ತಲು ಹೊರಟಾಗ ಹೀಥ್ರೂ ವಿಮಾನ ನಿಲ್ದಾಣದ ಸಿಬ್ಬಂದಿ “ಇವರು ಹೇಗೆ ಫಸ್ಟ್​ ಕ್ಲಾಸ್ ಟಿಕೆಟ್ ಬುಕ್ ಮಾಡಲು ಸಾಧ್ಯ ಎಂದು ಪ್ರಶ್ನಿಸುತ್ತಿರುವುದು ನಟನ ಕಿವಿಗೆ ಬಿದ್ದಿದೆ. ಇದಕ್ಕೆ, ನಟ ಸತೀಶ್ ಅವರು ಕೋಪಗೊಳ್ಳದೇ ತುಂಬಾ ಶಾಂತವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಿದ್ದಾರೆ.




ಹೀಥ್ರೂ ಸಿಬ್ಬಂದಿ ಪತ್ನಿ ಬಳಿ ನೀವು ಹೇಗೆ ದುಬಾರಿ ವಿಮಾನ ಟಿಕೆಟ್ ವೆಚ್ಚವನ್ನು ಭರಿಸಲು ಸಾಧ್ಯ ಎಂದು ಹೇಳುವುದನ್ನು ಕೇಳಿದ ನಂತರ ನಾನು ಮುಗುಳ್ನಗೆಯೊಂದಿಗೆ 'ಏಕೆಂದರೆ ನಾವು ಭಾರತೀಯರು' ಎಂದು ಉತ್ತರಿಸಿದೆ" ಎಂದು ಶಾ ಬಹಿರಂಗಪಡಿಸಿದರು.


ನೆಟ್ಟಿಗರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ ಶಾ ನೀಡಿದ ಪ್ರತಿಕ್ರಿಯೆ


ಸತೀಶ್ ಶಾ ಅವರ ಟ್ವೀಟ್ 11,000 ಕ್ಕೂ ಹೆಚ್ಚು ಲೈಕ್ ಗಳನ್ನು ಮತ್ತು ಹಲವಾರು ಕಮೆಂಟ್ ಗಳನ್ನು ಗಳಿಸಿದೆ. ಈ ಘಟನೆಯ ಬಗ್ಗೆ ಕ್ಷಮೆಯಾಚಿಸುವ ಮೂಲಕ ಹೀಥ್ರೂ ವಿಮಾನ ನಿಲ್ದಾಣದ ಅಧಿಕಾರಿಗಳು ಕೂಡ ಪ್ರತಿಕ್ರಿಯಿಸಿದ್ದಾರೆ.


ಇದನ್ನೂ ಓದಿ: Varisu Movie Review: ರಶ್ಮಿಕಾ ಎರಡನೇ ತಮಿಳು ಸಿನಿಮಾ ಫುಲ್ ಕಾಮಿಡಿ! ವಾರಿಸು ಮೂವಿ ಹೇಗಿದೆ?


"ಗುಡ್ ಮಾರ್ನಿಂಗ್, ಈ ಘಟನೆಯ ಬಗ್ಗೆ ಕೇಳಲು ನಾವು ತುಂಬಾನೇ ವಿಷಾದಿಸುತ್ತೇವೆ. ನೀವು ನಮಗೆ ನೇರವಾಗಿ ಮೆಸೇಜ್ ಮಾಡಬಹುದೇ?" ಎಂದು ವಿಮಾನ ನಿಲ್ದಾಣವು ಕಾಮೆಂಟ್ ವಿಭಾಗದಲ್ಲಿ ಬರೆದಿದೆ.


ಹಲವಾರು ಇಂಟರ್ನೆಟ್ ಬಳಕೆದಾರರು ಸತೀಶ್ ಶಾ ಅವರನ್ನು ಜನಾಂಗೀಯ ಟೀಕೆಗೆ ಚೆನ್ನಾಗಿ ಪ್ರತಿಕ್ರಿಯೆ ನೀಡುವುದಷ್ಟೇ ಅಲ್ಲದೆ, ಅದರ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ತುಂಬಾನೇ ಶ್ಲಾಘಿಸಿದ್ದಾರೆ. ಕೆಲವರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಯುಕೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.


ಈ ಘಟನೆಗೆ ನೆಟ್ಟಿಗರು ಹೇಗೆ ಕಾಮೆಂಟ್ ಮಾಡಿದ್ದಾರೆ ನೋಡಿ


ಬಳಕೆದಾರರು ಕಮೆಂಟ್ ಮಾಡಿ "ಹೀಥ್ರೂ ವಿಮಾನ ನಿಲ್ದಾಣದ ಅಧಿಕಾರಿಗಳೇ, ದಯವಿಟ್ಟು ನಿಮ್ಮ ಸಿಬ್ಬಂದಿಗೆ ಹೇಗೆ ವರ್ತಿಸಬೇಕು ಎಂದು ಕಲಿಸಿ. ಜಗತ್ತು ಈಗ ತುಂಬಾ ಪ್ರಗತಿಪರವಾಗಿದೆ. ನಮ್ಮ ಗೌರವಾನ್ವಿತ ಹಿರಿಯ ಚಲನಚಿತ್ರೋದ್ಯಮದ ನಟ ಇಲ್ಲಿ ಟ್ವೀಟ್ ಮಾಡಿದಂತೆ, ನೀವು ಅದನ್ನು ಭರಿಸಬಹುದೇ ಎಂದು ನಾವು ನಿಮ್ಮ ನಾಗರಿಕರಿಗೆ ಹೀಗೆ ಟೀಕೆ ಮಾಡುವುದಿಲ್ಲ ಅಲ್ಲವೇ?" ಎಂದು ಕೇಳಿದ್ದಾರೆ. ನಾಲ್ಕನೆಯವರು ವಿಪರ್ಯಾಸ, ಅಲ್ಲವೇ? ಲೂಟಿಕೋರರು ಮೂಲ ಶ್ರೀಮಂತರನ್ನು ಖರ್ಚು ಹೇಗೆ ಭರಿಸುತ್ತಾರೆ ಎಂದು ಕೇಳುತ್ತಾರೆ" ಎಂದು ಕಮೆಂಟ್ ಮಾಡಿದ್ದಾರೆ.


ಹಲವಾರು ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ಸತೀಶ್ ಶಾ, ಜನಪ್ರಿಯ ಟಿವಿ ಧಾರಾವಾಹಿ 'ಸಾರಾಭಾಯ್ ವರ್ಸಸ್ ಸಾರಾಭಾಯ್' ನಲ್ಲಿನ ಪಾತ್ರಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು