Sathish Ninasam: ಮಾಜಿ ಸಿಎಂ ಸಿದ್ಧರಾಮಯ್ಯ ಭೇಟಿ ಮಾಡಿದ ಸತೀಶ್​ ನೀನಾಸಂ, ಡಿಯರ್ ವಿಕ್ರಮ್ ಸಿನಿಮಾ ನೋಡಲು ಆಹ್ವಾನ

Siddaramaiah: ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ನಟ ಸತೀಶ್​ ನೀನಾಸಂ ಅವರ ಜೊತೆ ಕುಳಿತು ಬಹಳಷ್ಟು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಆದರೆ ಸತೀಶ್​ ಅವರನ್ನು ಭೇಟಿ ಮಾಡಿದ ಉದ್ದೇಶ ಸಿನಿಮಾ.

ಸತೀಶ್​ ನೀನಾಸಂ

ಸತೀಶ್​ ನೀನಾಸಂ

  • Share this:
ನಟ ಸತೀಶ್ ನೀನಾಸಂ (Sathish Ninasam) ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಬ್ಯುಸಿ ಇರುವ ನಟರಲ್ಲಿ ಒಬ್ಬರು. ಸಾಲು ಸಾಲು ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿ ಇರುವ ಸತೀಶ್​ ಅವರ 4 ರಿಂದ 5 ಸಿನಿಮಾಗಳು ತೆರೆ ಮೇಲೆ ಬರಲು ಸಜ್ಜಾಗಿದ್ದು, ಇನ್ನೂ ಹಲವಾರು ಸಿನಿಮಾಗಳಲ್ಲಿ ಒಪ್ಪಿಕೊಂಡಿದ್ದು, ಯಾರಾ ಕೈಗೂ ಸಿಗದಷ್ಟು ಬ್ಯುಸಿ ಅವರಿದ್ದಾರೆ. ಆದರೆ ಸದ್ಯ ಅವರು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿದ್ದು, ಕುತೂಹಲ ಮೂಡಿಸಿದೆ.  

ಸಿನಿಮಾ ನೋಡಲು ಮಾಜಿ ಸಿಎಂಗೆ ಆಹ್ವಾನ

ಹೌದು, ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ನಟ ಸತೀಶ್​ ನೀನಾಸಂ ಅವರ ಜೊತೆ ಕುಳಿತು ಬಹಳಷ್ಟು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಆದರೆ ಸತೀಶ್​ ಅವರನ್ನು ಭೇಟಿ ಮಾಡಿದ ಉದ್ದೇಶ ಸಿನಿಮಾ. ನಟ ಸತೀಶ್ ಅಭಿನಯದ ಡಿಯರ್ ವಿಕ್ರಮ್​ ಸಿನಿಮಾ ಬಿಡುಗಡೆಯಾಗುತ್ತಿದೆ, ಹಾಗಾಗಿ ಅದರ ಕೆಲಸದಲ್ಲಿ ಬ್ಯುಸಿ ಇರುವ ನಟ, ಮಾಜಿ ಸಿಎಂ ಅವರನ್ನು ಭೇಟಿ ಮಾಡಿ ಸಿನಿಮಾ ವೀಕ್ಷಿಸುವಂತೆ ಮನವಿ ಮಾಡಿದ್ದು, ಆಹ್ವಾನ ನೀಡಿದ್ದಾರಂತೆ.

ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ಟ್ವೀಟ್ ಮಾಡಿ ವಿಚಾರವನ್ನು ತಿಳಿಸಿದ್ದು, ಚಿತ್ರನಟ ಸತೀಶ್ ನೀನಾಸಂ ಅವರು ಇಂದು ನನ್ನನ್ನು ಭೇಟಿ ಮಾಡಿದ್ದಾರೆ.  ಜೂನ್ 30ರಂದು ಅವರು ನಟಿಸಿರುವ ಡಿಯರ್ ವಿಕ್ರಮ್ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅದನ್ನು ವೀಕ್ಷಿಸಲು ಆಹ್ವಾನ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಡಿಯರ್ ವಿಕ್ರಮ ಸಿನಿಮಾದ ಮೊದಲ ಹೆಸರು ಗೋದ್ರಾ ಎಂದಿತ್ತು. ಆದರೆ ನಂತರ ಡಿಯರ್ ವಿಕ್ರಮ್​ ಎಂದು ಬದಲಾಯಿಸಲಾಗಿತ್ತು. ಅಲ್ಲದೇ ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಲಭಿಸಿತ್ತು. ಬಿಡುಗಡೆ ಆಗಿರುವ 'ಡಿಯರ್ ವಿಕ್ರಮ್' ಚಿತ್ರದ ಟ್ರೈಲರ್ ಅದ್ಧೂರಿಯಾಗಿದೆ. ನೈಜ ಕಥೆಯನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಕೆ ಎಸ್ ನಂದೀಶ್ ಈ ಸಿನಿಮಾವನ್ನು ಹೆಣೆದಿದ್ದಾರೆ. ಓರ್ವ ಸಾಮಾನ್ಯ ವ್ಯಕ್ತಿ ಸಮಾಜದಲ್ಲಿನ ಕೆಟ್ಟ ಶಕ್ತಿಗಳ ವಿರುದ್ಧ ಹೇಗೆ ಎದುರು ನಿಲ್ಲುತ್ತಾನೆ ಎಂದು ಹೇಳುವ ಈ ಟ್ರೈಲರ್ ನಲ್ಲಿ ಒಂದು ಸುಂದರ ಪ್ರೇಮ ಕಥೆಯನ್ನೂ ಸಹ ಇಡಲಾಗಿದೆ.

ಇದನ್ನೂ ಓದಿ: ಅಪಘಾತದ ಸಮಯದಲ್ಲಿ ದಿಗಂತ್ ಫ್ಯಾಮಿಲಿಗೆ ಸಹಾಯ ಮಾಡಿದ್ದು ಇವರೇ, ದೇವರೇ ನಿಮ್ಮನ್ನ ಕಳುಹಿಸಿದ್ದು ಅಂದ್ರು ಐಂದ್ರಿತಾ

ಓಟಿಟಿಯಲ್ಲಿ ಡಿಯರ್ ವಿಕ್ರಮ್

ಡಿಯರ್ ವಿಕ್ರಮ್ ಚಿತ್ರವು ನೇರವಾಗಿ ಜೂನ್ 30ರಂದು ಓಟಿಟಿ ಅಲ್ಲಿ ಬಿಡುಗಡೆ ಆಗಲಿದೆ. ಈ ನಿರ್ಧಾರದ ಕುರಿತು ನಟ ಸತೀಶ್ ಮಾತನಾಡಿದ್ದು, ‘ನನ್ನ ಕೆಲ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಹೀಗಾಗಿ ಎಲ್ಲಾ ಚಿತ್ರಗಳನ್ನೂ ಥಿಯೆಟರ್​ನಲ್ಲಿ ರಿಲೀಸ್ ಮಾಡಲು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ ಇದನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ.

ಅಲ್ಲದೇ ನಿರ್ಮಾಪಕ ಮತ್ತು ನಿರ್ದೇಶಕ ನಂದೀಶ್ ಅವರಿಗೆ ಅನುಕೂಲವಾಗುವುದು ಇಲ್ಲಿ ಬಹಳ ಮುಖ್ಯ‘ ಎಂದು ಹೇಳಿದ್ದಾರೆ. ಜೂನ್ 30ರಂದು ಓಟಿಟಿಯಲ್ಲಿ 'ಡಿಯರ್ ವಿಕ್ರಮ್‌' ಬಿಡುಗಡೆಯಾಗುತ್ತಿದ್ದರೆ, ಜುಲೈ 15ರಂದು ಅವರ ಮತ್ತೊಂದು ಸಿನಿಮಾ 'ಪೆಟ್ರೋಮ್ಯಾಕ್ಸ್' ಚಿತ್ರಮಂದಿರದಲ್ಲಿ ರಿಲೀಸ್‌ ಆಗಲಿದೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ ರಕ್ಷಿತ್ ಶೆಟ್ಟಿ, ಕಿರಿಕ್ ಪಾರ್ಟಿ 2 ಮಾಡೇ ಮಾಡ್ತಾರಂತೆ!

ಈ ನಂತರ ಒಂದರ ಹಿಂದೆ ಒಂದರಂತೆ 'ದಸರಾ', 'ಮ್ಯಾಟ್ನಿ' ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ. ಅಲ್ಲದೇ ಅವರ ಬಹು ನಿರೀಕ್ಷಿತ ಸಿನಿಮಾ 'ಅಶೋಕ ಬ್ಲೇಡ್' ದೊಡ್ಡ ಬಜೆಟ್‌ನಲ್ಲಿ ಸಿದ್ಧವಾಗುತ್ತಿದ್ದು, ಈ ನಡುವೆ ಅವರ ಮೊದಲ ತಮಿಳು ಸಿನಿಮಾ'ಪಗೈವನುಕು ಅರುಲ್ವೈ' ಸಿನಿಮಾ ಕೂಡ ರಿಲೀಸ್‌ ಆಗಲು ಸಾಲಿನಲ್ಲಿದೆ.
Published by:Sandhya M
First published: