Sanjjanaa Galrani: ಗುಡ್​ನ್ಯೂಸ್​, ಗಂಡು ಮಗುವಿಗೆ ಜನ್ಮ ನೀಡಿದ ಸಂಜನಾ ಗಲ್ರಾನಿ

ಕೆಲ ದಿನಗಳ ಹಿಂದೆಯಷ್ಟೇ ಸ್ಯಾಂಡಲ್​ವುಡ್​(Sandalwood) ನಟಿ ಸಂಜನಾ ಗಲ್ರಾನಿ(Sanjjanaa Galrani) ತಾಯಿ ಆಗುತ್ತಿರುವುದಾಗಿ ಹೇಳಿಕೊಂಡಿದ್ದರು. ಇದೀಗ ಸಂಜನಾ ಗಲ್ರಾನಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಸಂಜನಾ ಗಲ್ರಾನಿ

ಸಂಜನಾ ಗಲ್ರಾನಿ

  • Share this:
ಈ ವರ್ಷ ಚಿತ್ರರಂಗದ ತಾರೆಯರು ಒಬ್ಬೊಬ್ಬರಾಗಿ ಗುಡ್​ ನ್ಯೂಸ್​(Good News) ಕೊಡುತ್ತಿದ್ದಾರೆ. ಹೌದು, ಕೆಲ ದಿನಗಳ ಹಿಂದೆಯಷ್ಟೇ ಸ್ಯಾಂಡಲ್​ವುಡ್ ​(Sandalwood) ನಟಿ ಸಂಜನಾ ಗಲ್ರಾನಿ (Sanjjanaa Galrani) ತಾಯಿ ಆಗುತ್ತಿರುವುದಾಗಿ ಹೇಳಿಕೊಂಡಿದ್ದರು. ಇದೀಗ ಸಂಜನಾ ಗಲ್ರಾನಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಸಂಜನಾಗೆ ಚಿಕಿತ್ಸೆ ನೀಡಿದ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಅದಲ್ಲದೇ ಸಂಜನಾಗೆ ಚಿಕಿತ್ಸೆ ನೀಡಿದ ವೈದ್ಯರು ಸ್ವತಃ ತಮ್ಮ ಇನ್ಸ್ಟಾಗ್ರಾಂ (Instagram) ಖಾತೆಯಲ್ಲಿ ಸಂಜನಾ ಜೊತೆ ಗಂಡು ಮಗುವಿನ (Baby Boy) ಫೋಟೋವನ್ನು ಹಂಚಿಕೊಳ್ಳುವ ಮೂಲಕ ಮಗುವಿನ ಜನನದ ಸ್ಪಷ್ಟನೆ ನೀಡಿದ್ದಾರೆ. ಅದಲ್ಲದೇ ಇಂದೇ ಸಂಜನಾ ತಂಗಿ ನಿಕ್ಕಿ ಗಲ್ರಾನಿ ವಿವಾಹವೂ ಆಗಿರುವುದು ಗಲ್ರಾನಿ ಕುಟುಂಬಕ್ಕೆ ಎರಡೆರಡೂ ಸಂತಸದ ಸುದ್ದಿ ಬಂದಂತಾಗಿದೆ.

ಇನ್ನು, ಕೆಲ ದಿನಗಳ ಹಿಂದೆ ಸಂಜನಾ ಸೀಮಂತವನ್ನು ನೆರವೇರಿಸಿಕೊಂಡಿದ್ದರು. ಅದಲ್ಲದೇ ಸೀಮಂತದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿಯು ಆಗಿದ್ದ ಸಂಜನಾ 2020ರ ಮೇ ನಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಡಾ. ಅಜೀಜ್ ಪಾಷಾ ಅವರನ್ನು ಸಂಜನಾ ಗಲ್ರಾನಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಹೊಸ ಅತಿಥಿ ಆಗಮನದ ಖುಷಿಯಲ್ಲಿ ಸಂಜನಾ!:

ಸದ್ಯ ಸಂಜನಾ ಹಾಗೂ ಕುಟುಂಬದವರು ಸಂತಸದಲ್ಲಿದ್ದಾರೆ. ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿರುವ ಸಂತಸದಲ್ಲಿ ಸಂಜನಾ ಮತ್ತು ಡಾ. ಅಜೀಜ್ ಪಾಷಾ ಇದ್ದು, ಸೋಶಿಯಲ್ ಮೀಡಿಯಾದಲ್ಲಿಸಂಜನಾ ಅಭಿಮಾನಿಗಳು ಮಗುವಿನ ಆಗಮನಕ್ಕೆ ಶುಭ ಕೋರುತ್ತಿದ್ದಾರೆ. ಇನ್ನು, ಸಂಜನಾ ಈ ಮೊದಲೇ ತಮಗೆ ಗಂಡು ಮಗುವಾಗುವ ನಿರೀಕ್ಷೆಯಿದೆ ಎಂದು ಹೇಳಿಕೊಂಡಿದ್ದರು. ಅವರ ಆಸೆಯಂತೆ ಇದೀಗ ಸಂಜನಾ ದಂಪತಿಗೆ ಮುದ್ದಾದ ಗಂಡು ಹುಟ್ಟಿದೆ.

ಸಂಜನಾಗೆ ಗಂಡು ಮಗು ಜನನ (ಕೃಪೆ- ಇನ್ಸ್ಟಾಗ್ರಾಂ)


ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಕ್ಕಿ ಗಲ್ರಾನಿ:

ಇನ್ನು, ಸಂಜನಾ ಕುಟುಂದವರಿಗೆ ಇಂದು ಡಬಲ್ ಸಂತಸ ಎಂದರೂ ತಪ್ಪಾಗಲಾರದು. ಏಕೆಂದರೆ ಒಂದೆಡೆ ಸಂಜನಾ ್ಲ್ರಾನಿ ಅವರಿಗೆ ಇಂದು ಗಂಡು ಮಗು ಜನಿಸಿದ್ದು, ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಇನ್ನೊಂದೆಡೆ ನಟ ಆದಿ ಪಿಂಚೆಟ್ಟಿ ಮತ್ತು ನಾಯಕಿ ನಿಕಿ ಗರ್ಲಾನಿ ಇತ್ತೀಚೆಗೆ ಪರಸ್ಪರ ಪ್ರೀತಿಸಿ ಇಂದೇ ವಿವಾಹ ಜೀವನಕ್ಕೆ ಕಾಲಿರಿಸುವ ಮೂಲಕ ಗಲ್ರಾನಿ ಕುಟುಂಬಕ್ಕೆ ಒಂದೇ ದಿನ ಎರಡೆರಡೂ ಸಂತಸದ ಸುದ್ದಿ ಎಂಬಂತಾಗಿದೆ.

ಇದನ್ನೂ ಓದಿ: RIP Captain Chalapati Choudhary: ಹಿರಿಯ ಬಹುಭಾಷಾ ನಟ ಕ್ಯಾಪ್ಟನ್ ಚಲಪತಿ ಚೌದ್ರಿ ನಿಧನ

ಇನ್ನು, ನಿಕ್ಕಿ ಮತ್ತು ಆದಿ ಅನೇಕ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದರು. ಆದರೂ ಅದನ್ನು ಸಾಮಜಿಕವಾಗಿ ಒಪ್ಪಿಕೊಂಡಿರಲಿಲ್ಲ. ಆದರೆ ಕಳೆದ ಮಾರ್ಚ್ ತಿಂಗಳಲ್ಲಿ ಇವರಿಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲಾ ಅನುಮಾನಗಳಿಗೆ ತೆರೆಎಳೆದರು. ಅದಲ್ಲದೇ ಇಂದು ವಿವಾಹವಾಗುವ ಮೂಲಕ ನೂತ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

 ಗಂಡ- ಹೆಂಡತಿ ಚಿತ್ರದ ಮೂಲಕ ಎಂಟ್ರಿ:

ನಟಿ ಸಂಜನಾ ಗಲ್ರಾನಿ ಅವರು ಕನ್ನಡದ ಗಂಡ - ಹೆಂಡತಿ ಚಿತ್ರದ ಮೂಲಕ ಸ್ಯಾಂಡಲ್​ ವುಡ್​ಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ ಅನೇಕ ಚಿತ್ರಗಳಲ್ಲಿ ಸಂಜನಾ ಬಣ್ಣ ಹಚ್ಚಿದ್ದಾರೆ. ಚಿತ್ರಗಳಲ್ಲಿ ಅಷ್ಟೇ ಅಲ್ಲದೇ ರಿಯಾಲಿಟಿ ಶೋಗಳಲ್ಲೂ ನಟಿ ಸಂಜನಾ ಗಲ್ರಾನಿ ಅವರು ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಕನ್ನಡ, ಮುಜ್ಞೆ ಶಾದಿ ಕರೋಗೆ? ಎಂಬ ರಿಯಾಲಿಟಿ ಶೋಗಳಲ್ಲೂ ನಟಿ ಸಂಜನಾ ಅವರು ಭಾಗವಹಿಸಿದ್ದರು.

ಇದನ್ನೂ ಓದಿ: Love marriage: ಸಿನಿಮಾ ಸೆಟ್​ನಲ್ಲೇ ಲವ್ ಮಾಡಿ ಮದುವೆಯಾದ ತಾರೆಯರಿವರು, ನಿಮ್ಮ ಫೇವರೆಟ್ ಯಾರು?

ಇದ್ಲಲದೇ ಸ್ವರ್ಣ ಖಡ್ಗಂ ಎಂಬ ಧಾರಾವಾಹಿಗೂ ನಟಿ ಸಂಜನಾ ಗಲ್ರಾನಿ ಅವರು ಬಣ್ಣ ಹಚ್ಚಿದ್ದರು. ಇನ್ನು ಕೆಲ ವೆಬ್ ಸೀರೀಸ್ ನಲ್ಲೂ ನಟಿಸಿರುವ ಸಂಜನಾ ಗಲ್ರಾನಿ ಅವರು ಇತ್ತೀಚೆಗಷ್ಟೇ ಮಲಯಾಳಂ ನ ಚಿತ್ರ ಒಂದರಲ್ಲಿ ನಟಿಸಿದ್ದಾರೆ.
Published by:shrikrishna bhat
First published: