ಸ್ಯಾಂಡಲ್ವುಡ್ನಲ್ಲಿ 'ಯುವರತ್ನ'ನ ದರ್ಬಾರ್ ಶುರುವಾಗಿದೆ. ಹಲವಾರು ದಿನಗಳ ಅಪ್ಪು ಅಭಿಮಾನಿಗಳ ಕಾತುರತೆಗೆ ಕೊನೆಗೂ ನಿನ್ನೆ ಫುಲ್ಸ್ಟಾಪ್ ಬಿದ್ದಿದೆ. ಡಿಫರೆಂಟ್ ಲುಕ್, ಖಡಕ್ ಮೈಕಟ್ಟಿನೊಂದಿಗೆ ಅಪ್ಪುವಿನ ಅಬ್ಬರ ಪವರ್ ಫ್ಯಾನ್ಸ್ ನಿರೀಕ್ಷೆಯನ್ನು ಮೆಟ್ಟಿ ನಿಂತಿದೆ.
ಚಿತ್ರದ ಟೀಸರ್ಗೆ ಈಗಾಗಲೇ ಹಲವು ಸ್ಟಾರ್ ನಟರು ಮೆಚ್ಚುಗೆ ಸೂಚಿಸಿದ್ದಾರೆ. ಅವರೊಂದಿಗೆ ಬಾಲಿವುಡ್ ನಟ ಸಂಜಯ್ ದತ್ ಕೂಡ ಚಿತ್ರಕ್ಕೆ ಬಹುಪರಾಕ್ ಅಂದಿರುವುದು ವಿಶೇಷ. ಕೆಜಿಎಫ್ 2 ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟಿರುವ ಅಧೀರ ದತ್ ಟೀಸರ್ಗೆ ಮನಸೋತಿದ್ದಾರೆ.
ಚಿತ್ರದ ಟೀಸರ್ ಅನ್ನು ಟ್ವೀಟ್ ಮಾಡಿರುವ ಮುನ್ನಾ ಭಾಯ್ ಅಪ್ಪುವಿನ ಚಿತ್ರವನ್ನು ಹಾಡಿಹೊಗಳಿದ್ದಾರೆ. ಬ್ರಿಲಿಯಂಟ್ ಟೀಸರ್, ತಂಡಕ್ಕೆ ಆಲ್ ದಿ ಬೆಸ್ಟ್ ಎಂದು ಸಂಜಯ್ ದತ್ ಮಾಡಿರುವ ಟ್ವೀಟ್ ಈಗ ವೈರಲ್ ಆಗಿದೆ. ಇತ್ತ ಕೆಜಿಎಫ್ 2 ಮೂಲಕ ಸ್ಯಾಂಡಲ್ವುಡ್ನಲ್ಲಿ ಖಾತೆ ಆರಂಭಿಸಲಿರುವ ನಟನ ಟ್ವೀಟ್ ಈಗ ಯುವರತ್ನನನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.
The #Yuvarathnaa teaser is looking brilliant! All the best @VKiragandur, @Karthik1423 & the entire team at @hombalefilms 👍https://t.co/5a94CHbufI
— Sanjay Dutt (@duttsanjay) October 7, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ